Breaking News

Yearly Archives: 2022

ಮೊಸಳೆ ಕಂಡು ಶಾಕ್ ಆದ ಜನ

ಬೃಹತ್ ಮೊಸಳೆಯೊಂದು ಪಟ್ಟಣದಲ್ಲಿ ಕಾಣಿಸಿಕೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ನಾಲತವಾಡ ಪಟ್ಟಣದ ಎದುರಿನ ಚಿನಿವಾಲರ ಖಾಲಿ ಜಾಗದಲ್ಲಿರುವ ಬಾವಿಯಲ್ಲಿ ಪತ್ತೆ ಆಗಿದೆ. ಬಾವಿ ಒಂದರಲ್ಲಿ ಬೃಹತ್ ಆಕಾರದ ಮೊಸಳೆ ಹಲವಾರು ದಿನಗಳಿಂದ ವಾಸಿಸುತ್ತಿದೆ‌ ಅಲ್ಲದೇ, ಹಲವು ಬಾರಿ ಅರಣ್ಯ ಇಲಾಖೆಯವರಿಗೆ ಹೇಳಿದರು ಪ್ರಯೋಜನ ಆಗಲಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರಿಗೆ ಸಮಸ್ಯೆ ಆಗುವ ಮುನ್ನವೇ ಮೊಸಳೆ ಬೇರೆಡೆಗೆ ಸ್ಥಳಾಂತರ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Read More »

ಬಿಜೆಪಿಗೆ ಅಡ್ಡಿಯಾಗುವುದೇ ಅಂತಿಮ ಕ್ಷಣದ ಮಿನಿ ಬಂಡಾಯ..?

ಬೆಂಗಳೂರು: ಗುಜರಾತ್ ಹಾಗೂ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಎರಡು ರಾಜ್ಯಗಳಲ್ಲಿ ಚುನಾವಣೆಗೆ ಮುಂಚಿತವಾಗಿ ಬಿಜೆಪಿ ಸಾಕಷ್ಟು ಪ್ರಯೋಗಗಳನ್ನು ನಡೆಸಿತ್ತು. ಆ ಬದಲಾವಣೆಯ ಅಸ್ತ್ರ ಗುಜರಾತ್ ನಲ್ಲಿ ಫಲ ನೀಡಿದರೆ, ಹಿಮಾಚಲದಲ್ಲಿ ತಿರುಗು ಬಾಣವಾಗಿದೆ.   ಹೀಗಾಗಿ ಒಂದು ರಾಜ್ಯಕ್ಕೆ ಅನ್ವಯವಾಗುವ ಬಿಜೆಪಿಯ ಚುನಾವಣಾ ʼಮಾಡೆಲ್ʼ ಇನ್ನೊಂದು ರಾಜ್ಯಕ್ಕೆ ವ್ಯತಿರಿಕ್ತವಾಗುತ್ತದೆ ಎಂಬುದಕ್ಕೆ ಈ ಫಲಿತಾಂಶವೇ ಉದಾಹರಣೆಯಾಗಿದೆ. ಈ ಬಗ್ಗೆ ಚರ್ಚೆ ನಡೆಯುತ್ತಿರುವ ಹಂತದಲ್ಲೇ ಕರ್ನಾಟಕ ವಿಧಾನಸಭಾ ಚುನಾವಣೆಗೆ …

Read More »

ರಾಜ್ಯದ ಹಲವು ಸಕ್ಕರೆ ಕಾರ್ಖಾನೆಗಳಿಗೆ ಶಾಕ್: ಸಕ್ಕರೆ ಇಲಾಖೆ ಇತಿಹಾಸದಲ್ಲಿ ಪ್ರಥಮ ಬಾರಿಗೆ ನಡೆದ ದಾಳಿ

ಬೆಂಗಳೂರು: ತೂಕ‌ ಮತ್ತು ಅಳತೆಯ ವ್ಯತ್ಯಾಸ ಪತ್ತೆ ಹಚ್ಚಲು ಸಕ್ಕರೆ ಇಲಾಖೆಯ ಆಯುಕ್ತರ ನೇತೃತ್ವದಲ್ಲಿ ಸಕ್ಕರೆ ಕಾರ್ಖಾನೆಗಳ‌ ಮೇಲೆ ದಾಳಿ ನಡೆದಿದೆ. ಸಕ್ಕರೆ ಇಲಾಖೆಯ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ.   21 ಕಾರ್ಖಾನೆ ಪೈಕಿ ಕೆಲವೊಂದು ಸಕ್ಕರೆ ಕಾರ್ಖಾನೆಗಳಲ್ಲಿ ತೂಕದ ವ್ಯತ್ಯಾಸ ಕಂಡುಬಂದಿದ್ದು ಅಧಿಕಾರಿಗಳಿಂದ ಪರಿಶೀಲನೆ ಮುಂದುವರಿಯುತ್ತಿದೆ. ಪ್ರಥಮ ಹಂತದಲ್ಲಿ 21 ಸಕ್ಕರೆ ಕಾರ್ಖಾನೆಗಳ ಮೇಲೆ ದಾಳಿ‌ ಮಾಡಿದ್ದು, ಈ ಸಾಲಿನ ಕಬ್ಬು ಕಟಾವು ಹಂಗಾಮು …

Read More »

ಬೆಂಗಳೂರು ನಗರದ ಬಾರ್, ರೆಸ್ಟೋರೆಂಟ್, ಪಬ್ ಗಳನ್ನು ಬೆಳಗಿನ ಜಾವ 3.30ರವರೆಗೆ ತೆರೆಯಲು ಅವಕಾಶ

ಬೆಂಗಳೂರು: ನಗರದಲ್ಲಿನ ಬಾರ್, ರೆಸ್ಟೋರೆಂಟ್ ಹಾಗೂ ಪಬ್ ಗಳ ಅವಧಿಯನ್ನು ಬೆಳಗಿನ ಜಾವ 3.30ರವರೆಗೆ ತೆರೆಯಲು ಅವಕಾಶ ನೀಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಆದೇಶಿಸಿದ್ದಾರೆ.   ಡಿಸೆಂಬರ್ 14ರ ನಾಳೆ ಮತ್ತು ಡಿಸೆಂಬರ್ 15ರ ನಾಡಿದ್ದು ಮಾತ್ರವೇ ಫೀಪಾ ವಿಶ್ವಕಪ್ ಸೆಮಿ ಫೈನಲ್ ಪಂದ್ಯಾವಳಿಯ ಹಿನ್ನಲೆಯಲ್ಲಿ ಬಾರ್, ರೆಸ್ಟೋರೆಂಟ್ ಹಾಗೂ ಪಬ್ ಗಳನ್ನು ಬೆಳಗಿನ ಜಾವ 3.30ರವರೆಗೆ ತೆರೆಯಲು ಅನುಮತಿಸಿ ಆದೇಶಿಸಿದ್ದಾರೆ.   ಅಂದಹಾಗೇ ಫೀಪಾ …

Read More »

ಹಿರಿಯ ಐಪಿಎಸ್ ಅಧಿಕಾರಿ ‘ಭಾಸ್ಕರ್ ರಾವ್’ ರಾಜೀನಾಮೆ ಅಂಗೀಕಾರಿಸಿದ ‘ರಾಜ್ಯ ಸರ್ಕಾರ’, ‘ಸೇವೆ’ಯಿಂದ ಬಿಡುಗಡೆ

ಬೆಂಗಳೂರು : ಹಿರಿಯ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವ್ರ ರಾಜೀನಾಮೆಯನ್ನ ರಾಜ್ಯ ಸರ್ಕಾರ ಅಂಗೀಕರಿಸಿದ್ದು, ಈ ಮೂಲಕ ಅವ್ರನ್ನ ಅಧಿಕೃತವಾಗಿ ಸೇವೆಯಿಂದ ಬಿಡುಗಡೆಗೊಳಿಸಿದೆ.   ಅಂದ್ಹಾಗೆ, ಈ ಹಿರಿಯ ಅಧಿಕಾರಿ ಸ್ವಯಂ ನಿವೃತ್ತಿ ಬಯಸಿ ರಾಜೀನಾಮೆ ನೀಡಿದ್ದರು. ಆದ್ರೆ, ಅವ್ರ ರಾಜೀನಾಮೆಯನ್ನ ಸರ್ಕಾರ ಅಂಗೀಕರಿಸಿರಲಿಲ್ಲ. ಸಧ್ಯ ರಾಜ್ಯ ಸರ್ಕಾರ ರಾವ್ ಅವ್ರನ್ನ ರಾಜೀನಾಮೆಯನ್ನ ಅಂಗೀಕರಿಸಿದ್ದು, ಸೇವೆಯಿಂದ ಅಧಿಕೃತವಾಗಿ ಬಿಡುಗಡೆಗೊಳಿಸಿದೆ.

Read More »

ರೈತರಿಗೆ ಶಾಕಿಂಗ್ ನ್ಯೂಸ್: ರಸಗೊಬ್ಬರ ದರ ಭಾರಿ ಏರಿಕೆ

ಬೆಂಗಳೂರು: ಪ್ರತಿ ವರ್ಷ ಕಾರ್ಮಿಕರ ಕೂಲಿ, ಬೀಜ, ಗೊಬ್ಬರ, ಕೀಟನಾಶಕ, ಯಂತ್ರೋಪಕರಣ ದರ ಏರಿಕೆಯಿಂದ ಕಂಗಾಲಾಗಿರುವ ರೈತರಿಗೆ ಗಾಯದ ಮೇಲೆ ಬರೆ ಎಳೆದಂತೆ ಈ ಬಾರಿ ರಸಗೊಬ್ಬರ ದರ ಇನ್ನಿಲ್ಲದಂತೆ ಏರಿಕೆ ಕಂಡಿದೆ. ಕಷ್ಟಪಟ್ಟು ಬೆಳೆ ಬೆಳೆದರೂ ರೈತರಿಗೆ ಸಮರ್ಪಕವಾದ ಬೆಲೆ ಸಿಗುತ್ತಿಲ್ಲ. ಇದೇ ಹೊತ್ತಲ್ಲಿ ಡಿಎಪಿ, ಯೂರಿಯಾ, ಪೊಟ್ಯಾಶಿಯಂ, ಎನ್.ಪಿ.ಕೆ. ಸೇರಿದಂತೆ ವಿವಿಧ ರೀತಿಯ ರಸಗೊಬ್ಬರಗಳ ದರ ಭಾರಿ ಏರಿಕೆ ಕಂಡಿದೆ. 50 ಕೆಜಿ ಚೀಲಕ್ಕೆ 50 ರಿಂದ 100 …

Read More »

ಚಿತ್ರದುರ್ಗ ಬೃಹನ್ಮಠಕ್ಕೆ ಆಡಳಿತಾಧಿಕಾರಿಯಾಗಿ ವಸ್ತ್ರದ್ ನೇಮಕ

ಚಿತ್ರದುರ್ಗ: ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಆಡಳಿತಾಧಿಕಾರಿಯನ್ನಾಗಿ ನಿವೃತ್ತ ಐಎಎಸ್ ಅಧಿಕಾರಿ ಪಿ.ಎಸ್. ವಸ್ತ್ರದ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಪೀಠಾಧಿಪತಿ ಮತ್ತು ಎಸ್.ಜೆ.ಎಂ. ವಿದ್ಯಾಪೀಠದ ಅಧ್ಯಕ್ಷರೂ ಆಗಿರುವ ಶಿವಮೂರ್ತಿ ಮುರುಘಾ ಶರಣರು ಸೆ. 1ರಿಂದ ನ್ಯಾಯಾಂಗ ಬಂಧನದಲ್ಲಿ ಇರುವುದರಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ. ಸಂಸ್ಥೆಯ ನಿರ್ವಹಣೆಯಲ್ಲಿ ಮತ್ತು ದಿನನಿತ್ಯದ ಕಾರ್ಯಚಟುವಟಿಕೆಗೆ ಹಾಗೂ ಮೇಲುಸ್ತುವಾರಿ ನಡೆಸಲು ಈ ನೇಮಕ ಮಾಡಲಾಗಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಮಠದ ಚರ ಸ್ಥಿರ …

Read More »

ಎಂ.ಬಿ. ಪಾಟೀಲ್ ಸಿಎಂ ಆಗಲಿ ಅಂತ ಶಬರಿಮಲೆವರೆಗೆ ಪಾದಯಾತ್ರೆ ಹೊರಟ ‘ರಾಜಕುಮಾರ’.!

ವಿಜಯಪುರ: ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ, ಶಾಸಕ ಎಂ.ಬಿ. ಪಾಟೀಲ ಮುಖ್ಯಮಂತ್ರಿಯಾಗಲಿ ಎಂದು ಅಯ್ಯಪ್ಪ ಸ್ವಾಮಿಗೆ ಹರಕೆ ಹೊತ್ತ ರೈತನೋರ್ವ ಶಬರಿಮಲೆಗೆ ಏಕಾಂಗಿಯಾಗಿ ಪಾದಾಯಾತ್ರೆ ಬೆಳೆಸಿದ್ದಾರೆ. ತಿಕೋಟಾ ತಾಲೂಕಿನ ಬಾಬಾನಗರದ ರೈತ ರಾಜಕುಮಾರ ರವೀಂದ್ರ ಹೊನವಾಡ ಪಾದಯಾತ್ರೆ ಕೈಗೊಂಡಿದ್ದಾರೆ. ಕೊರಳಲ್ಲಿ ಎಂ.ಬಿ. ಪಾಟೀಲರ ಭಾವಚಿತ್ರ ಕಟ್ಟಿಕೊಂಡು ತಲೆ ಮೇಲೆ ಇರುಮುಡಿ ಹೊತ್ತು ರಾಜಕುಮಾರ ಪಾದಯಾತ್ರೆ ಕೈಗೊಂಡಿದ್ದಾರೆ. ಒಟ್ಟು 5.5 ಎಕರೆ ಹೊಲ ಹೊಂದಿರುವ ಈ ರೈತ ದ್ರಾಕ್ಷಿ ಬೆಳೆಗಾರರಾಗಿದ್ದಾರೆ. ತಮ್ಮ ಭಾಗ …

Read More »

ಕನ್ನಡ ಮಾಧ್ಯಮದವರಿಗೆ ಉದ್ಯೋಗ ಆದ್ಯತೆ ನೀಡಿ: ಆಶಾ ಕಡಪಟ್ಟಿ

ತೋಂಟದಾರ್ಯ ಮಹಾಸ್ವಾಮಿಗಳವರ ವೇದಿಕೆ (ಹಿರೇಬಾಗೇವಾಡಿ): ‘ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದವರಿಗೇ ರಾಜ್ಯ ಸರ್ಕಾರದಲ್ಲಿ ಉದ್ಯೋಗ ಆದ್ಯತೆ ನೀಡಬೇಕು’ ಎಂದು ಬೆಳಗಾವಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಆಶಾ ಕಡಪಟ್ಟಿ ಆಗ್ರಹಿಸಿದರು.   ಸಮೀಪದ ಅರಳಿಕಟ್ಟಿ ಗ್ರಾಮದಲ್ಲಿ ಸೋಮವಾರ ನಡೆದ ಬೆಳಗಾವಿ ತಾಲ್ಲೂಕು ಮಟ್ಟದ 8ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಆಶಯ ವ್ಯಕ್ತಪಡಿಸಿದ ಅವರು, ‘ಕನ್ನಡ ಭಾಷೆ, ಸಂಸ್ಕೃತಿ ಉಳಿಯಬೇಕು ಹಾಗೂ ಕನ್ನಡಿಗರು ಬದುಕಬೇಕು ಎನ್ನುವುದಾದರೆ ಅವಕಾಶಗಳು …

Read More »

ಮೂಡಲಗಿ: ಪಟ್ಟಣದಲ್ಲಿ ಅಯ್ಯಪ್ಪಸ್ವಾಮಿ ಭವ್ಯ ಮೆರವಣಿಗೆ

ಮೂಡಲಗಿ: ಪಟ್ಟಣದಲ್ಲಿ ಅಯ್ಯಪ್ಪಸ್ವಾಮಿ ಸನ್ನಿಧಾನದ 29ನೇ ವರ್ಷದ ಮಹಾಪೂಜೆ ಉತ್ಸವ ಅಂಗವಾಗಿ ಸೋಮವಾರ ಸ್ಥಳೀಯ ಯಲ್ಲಮ್ಮದೇವಿ ದೇವಸ್ಥಾನದಿಂದ ಭವ್ಯ ಮೆರವಣಿಗೆ ನಡೆಯಿತು. ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ ಸೋನವಾಲಕರ, ರವಿ ಗುರುಸ್ವಾಮಿ, ಬೈಂದೂರ ರಾಜುಶೆಟ್ಟಿ, ಹುಬ್ಬಳ್ಳಿಯ ಮೋಹನ, ಬೆಳಗಾವಿಯ ಮಾರುತಿ ಗುರುಸ್ವಾಮಿಗಳು ಮೆರವಣಿಗೆಗೆ ಚಾಲನೆ ನೀಡಿದರು.   ಅಯ್ಯಪ್ಪಸ್ವಾಮಿಯ ಮೂರ್ತಿಯನ್ನು ಹೊತ್ತ ಜಂಬೂ ಸವಾರಿಯೊಂದಿಗೆ ವಿವಿಧ ಕಲಾ ತಂಡಗಳು, ಸಾರವಾಡ ಗೊಂಬೆ ಕುಣಿತ, ಒಂಟೆ, ಕುದರೆಗಳು, ವಿವಿಧ ವಾದ್ಯಗಳು …

Read More »