ವಿಜಯಪುರ: ಶಿವಮೊಗ್ಗದಲ್ಲಿ ವೀರ ಸಾವರ್ಕರ್ ಪೋಸ್ಟರ್ ಹರಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ, ಕೆಲವು ಜನರಿಗೆ ಇತಿಹಾಸದ ಬಗ್ಗೆ ಮಾಹಿತಿ ಇರುವುದಿಲ್ಲ. ಎರಡು ಸಲ ಕಾಳಾ ಪಾನಿ ಶಿಕ್ಷೆಯನ್ನು ವೀರ ಸಾವರ್ಕರ್ ಅನುಭವಿಸಿದ್ದರು. ಅಂಡಮಾನ್ ನಿಕೋಬಾರ್ ಜೈಲಿಗೆ ಹೋದರೆ ಸಾವರ್ಕರ್ ಬಗ್ಗೆ ತಿಳಿಯುತ್ತದೆ ಎಂದು ಹೇಳುವ ಮೂಲಕ ಸಾವರ್ಕರ್ ವಿರೋಧಿಗಳಿಗೆ ಮಾತಿನಲ್ಲೇ ತಿವಿದರು. ಕೆಲ ವರು ಅಪ್ರಬುದ್ಧರಿರುತ್ತಾರೆ. ಅವರಿಗೆ ಇದರ ಬಗ್ಗೆ ಗೊತ್ತಿರುವುದಿಲ್ಲ. ಇತಿಹಾಸ ನೆನಪಿಸಿಕೊಡಲು ಪ್ರಧಾನಮಂತ್ರಿ …
Read More »Yearly Archives: 2022
ಬೆಳಗಾವಿ ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿ ಆಗಿತ್ತು. ಮಹಾತ್ಮ ಗಾಂಧಿ ಅಧ್ಯಕ್ಷರಾಗಿದ್ದ ಕಾಂಗ್ರೆಸ್ ಮಹಾ ಅಧಿವೇಶನದಲ್ಲಿ ಗಾಂಧಿ ಅವರು ಸ್ವಾತಂತ್ರ್ಯ ಕಹಳೆ ಮೊಳಗಿಸಿದ್ದರು.
ಬೆಳಗಾವಿ: ಭಾರತವು ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂಭ್ರಮದಲ್ಲಿದೆ. ದೇಶದ ಮನೆ ಮನೆಗಳ ಮೇಲೂ ತಿರಂಗಾ ಧ್ವಜ ಹಾರಾಡುತ್ತಿದೆ. ಸ್ವಾತಂತ್ರ್ಯ ಸಂಗ್ರಾಮ, ಹೋರಾಟಗಾರರ ಸ್ಮರಣೆ ಆಗುತ್ತಿದೆ. ಈ ಹೊತ್ತಿನಲ್ಲಿ ಬೆಳಗಾವಿಯನ್ನು ಮರೆಯುವಂತಿಲ್ಲ. ಖಾದಿ ಗ್ರಾಮೋದ್ಯೋಗ ಸಂಸ್ಥೆ: ಜಿಲ್ಲೆಯ ಗೋಕಾಕ್ ತಾಲೂಕಿನ ಹುದಲಿ ಗ್ರಾಮ ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿ ಆಗಿತ್ತು. ಮಹಾತ್ಮ ಗಾಂಧಿ ಅವರ ಸ್ಫೂರ್ತಿಯೊಂದಿಗೆ ಇಲ್ಲಿ ಆರಂಭವಾದ ಖಾದಿ ಗ್ರಾಮೋದ್ಯೋಗ ಸಂಸ್ಥೆ ಇಂದಿಗೂ ಕಾರ್ಯನಿರ್ವಹಿಸುತ್ತಿದೆ. ದೇಶದ ವಿವಿಧ ನಗರಗಳಿಗೆ ಇಲ್ಲಿಂದ ಖಾದಿ ಬಟ್ಟೆ …
Read More »ಶಾಸಕ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ಬೃಹತ್ ಟ್ರ್ಯಾಕ್ಟರ್ ರ್ಯಾಲಿ. ಲೋಳಸೂರ, ಅರಭಾವಿ, ದುರದುಂಡಿ, ಬಡಿಗವಾಡ ಮಾರ್ಗವಾಗಿ ನಾಗನೂರುವರೆಗೆ ರ್ಯಾಲಿ.
ಗೋಕಾಕ: ನಾಳೆ ನಡೆಯಲಿರುವ ಸ್ವಾತಂತ್ರ್ಯ ಅಮೃತ ಮಹೋತ್ಸವದ ನಿಮಿತ್ಯ ಅರಭಾವಿ ಬಿಜೆಪಿ ಮಂಡಲದಿಂದ ಬೃಹತ್ ಟ್ರ್ಯಾಕ್ಟರ್ ರ್ಯಾಲಿಯನ್ನು ರವಿವಾರದಂದು ಇಲ್ಲಿಯ ಎನ್‍ಎಸ್‍ಎಫ್‍ದಲ್ಲಿ ಚಾಲನೆ ನೀಡಲಾಯಿತು. ಯುವ ಧುರೀಣ ಸರ್ವೋತ್ತಮ ಜಾರಕಿಹೊಳಿ ಅವರು ಈ ರ್ಯಾಲಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಶಾಸಕ ಹಾಗೂ ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವದಲ್ಲಿ ಆಯೋಜನೆಗೊಂಡಿದ್ದ ಈ ಟ್ರ್ಯಾಕ್ಟರ್ ರ್ಯಾಲಿಯಲ್ಲಿ ನೂರಾರು ರೈತರು …
Read More »ಮಾಜಿ ಶಾಸಕ ಡಾ.ವಿಶ್ವನಾಥ್ ಪಾಟೀಲ್ ಅವರ ನೇತೃತ್ವದಲ್ಲಿ ಬೃಹತ್ ತಿರಂಗಾ ಬೈಕ್ ರ್ಯಾಲಿ
ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ಯ ಕಾಡಾ ಅಧ್ಯಕ್ಷ, ಮಾಜಿ ಶಾಸಕ ಡಾ.ವಿಶ್ವನಾಥ್ ಪಾಟೀಲ್ ಅವರ ನೇತೃತ್ವದಲ್ಲಿ ಬೃಹತ್ ತಿರಂಗಾ ಬೈಕ್ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು. ಬೈಲಹೊಂಗಲ ತಾಲೂಕಿನ ಬೆಳವಡಿಯಲ್ಲಿ ಭಾರತ ಮಾತೆಯ ಭಾವಚಿತ್ರ ಹಾಗೂ ವೀರರಾಣಿ ಮಲ್ಲಮ್ಮಾಜಿ ಪುತ್ಥಳಿಗೆ ಗೌರವ ಸಲ್ಲಿಸುವುದರೊಂದಿಗೆ ಈ ಬೃಹತ್ ಬೈಕ್ ರ್ಯಾಲಿಗೆ ಡಾ.ವಿಶ್ವನಾಥ್ ಪಾಟೀಲ್ ಅವರು ಚಾಲನೆ ನೀಡಿದರು. ಬೆಳವಡಿಯಿಂದ ಕೆಂಗಾನೂರ, ಅರವಳ್ಳಿ, ಜಾಲಿಕೊಪ್ಪ, ನಯಾನಗರ, ಆನಿಗೋಳ ಮಾರ್ಗವಾಗಿ ಬೈಲಹೊಂಗಲ ಪಟ್ಟಣದ ವೀರರಾಣಿ ಚನ್ನಮ್ಮಾಜಿ ವೃತ್ತದವರೆಗೂ …
Read More »ಕೇಂದ್ರ ಕಾರಾಗೃಹದಿಂದ ನಾಳೆ 10 ಖೈದಿಗಳು ಬಿಡುಗಡೆ
ವಿಜಯಪುರ: 75ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಸನ್ನಡತೆ ತೋರಿದ 10 ಜೈಲು ಹಕ್ಕಿಗಳ ಬಿಡುಗಡೆಗೆ ನಿರ್ಧರಿಸಲಾಗಿದೆ. ನಗರದ ಕೇಂದ್ರ ಕಾರಾಗೃಹದಿಂದ ನಾಳೆ 10 ಖೈದಿಗಳು ಬಿಡುಗಡೆಯಾಗಲಿದ್ದಾರೆವಿವಿಧ ತಪ್ಪುಗಳಿಂದ ಶಿಕ್ಷೆಗೆ ಒಳಗಾಗಿ ಹಲವು ವರ್ಷಗಳಿಂದ ಜೈಲಿನಲ್ಲಿ ದ್ದರೂ ತಮ್ಮ ಸನ್ನಡತೆಯಿಂದ. ಉತ್ತಮ ಜೀವ ರೂಪಿಸಿಕೊಳ್ಳುವ ಭರವಸೆ ಮೂಡಿಸಿರುವ ಖೈದಿಗಳಲ್ಲಿ ಮೂವರು ಸಹೋದರರು ಹಾಗೂ ಅವರ ತಂದೆ ಸೇರಿ ಒಂದೇ ಕುಟುಂಬದ ನಾಲ್ವರು ಇದ್ದಾರೆ. ಬಸಪ್ಪ ಮಲಕಾರಿ ಜಟಗೊಂಡ, ಗೌಡಪ್ಪ ಜಟಗೊಂಡ, …
Read More »ಗೋಕಾಕ್‌ನಲ್ಲಿ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದಶಾಸಕ ಸತೀಶ್ ಜಾರಕಿಹೊಳಿ
ದೇಶಕ್ಕೆ ಸ್ವಾತಂತ್ರೋತ್ಸವನ್ನು ತಂದುಕೊಡುವಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರ ದೊಡ್ಡದಿದೆ. ಆದರೆ ಬಿಜೆಪಿಯವರು ಈಗ ಬಂದು ಜಂಡಾ ಹಾರಿಸಿ ಎಂದು ಕುಳಿತಲ್ಲೇ ಕುಳಿತು ಸಂಭ್ರಮಾಚರಣೆ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವ್ಯಂಗ್ಯವಾಡಿದ್ದಾರೆ. ಗೋಕಾಕ್‌ನಲ್ಲಿ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಶಾಸಕ ಸತೀಶ್ ಜಾರಕಿಹೊಳಿ ಮಾಧ್ಯಮಗಳೊಂದಿಗೆ ಮಾತನಾಡಿ ಬಿಜೆಪಿ ಸರಕಾರದ ಹರ್ ಘರ್ ತಿರಂಗಾ ಕಾರ್ಯಕ್ರಮ ಕುರಿತಂತೆ ವ್ಯಂಗ್ಯವಡಿದ್ದಾರೆ. ದೇಶಕ್ಕೆ ಸ್ವಾತಂತ್ರö್ಯವನ್ನು ತಂದುಕೊಡುವಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರ ತುಂಬಾ …
Read More »ಕೇಂದ್ರ ಲೋಕಸೇವಾ ಆಯೋದಿಂದ ವಿವಿಧ ಹುದ್ದೆಗೆ ಅರ್ಜಿ ಆಹ್ವಾನ
ಕೇಂದ್ರ ಲೋಕ ಸೇವಾ ಆಯೋಗದಿಂದ (Union Public Service Commission) ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸಹಾಯ ನಿರ್ದೇಶಕರು, ಹಿರಿಯ ಶ್ರೇಣಿಗಳ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 37 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಪದವೀಧರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಸೆಪ್ಟೆಂಬರ್ 1 ಆಗಿದೆ. ಈ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ …
Read More »ದೇಶದ ಜನತೆಗೆ `ಕರೆಂಟ್ ಶಾಕ್’ : ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ!
ನವದೆಹಲಿ : ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ತೈಲ ಬೆಲೆಗಳ ಅಸ್ಥಿರತೆಗೆ ಅನುಗುಣವಾಗಿ ಪೆಟ್ರೋಲ್, ಡೀಸೆಲ್ ಮತ್ತು ಅನಿಲ ಬೆಲೆಗಳನ್ನು ಹೆಚ್ಚಿಸಲಾಗಿದೆ. ಅದ್ರಂಎ, ಇನ್ಮುಂದೆ ಪ್ರತಿ ತಿಂಗಳು ವಿದ್ಯುತ್ ಶುಲ್ಕವನ್ನು ಹೆಚ್ಚಿಸಲಾಗುವುದು. ಹೌದು, ವಿದ್ಯುತ್ ಖರೀದಿ ಬೆಲೆಗಳು, ಕಲ್ಲಿದ್ದಲು ಮತ್ತು ಇಂಧನ ಬೆಲೆಗಳಲ್ಲಿನ ಏರಿಳಿತಗಳ ಪರಿಣಾಮವನ್ನ ಕಾಲಕಾಲಕ್ಕೆ ವಿದ್ಯುತ್ ದರದಲ್ಲಿ ಸ್ವಯಂಚಾಲಿತವಾಗಿ ಸರಿಹೊಂದಿಸಬಹುದು ಎಂದು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರವು ಹೊಸ ನಿಯಮಗಳನ್ನ ತರುತ್ತಿದೆ. ಆ ತಿಂಗಳ ಹೊರೆಯನ್ನ ಯಾವುದೇ ತಿಂಗಳ ಕಾಲ ಗ್ರಾಹಕರ …
Read More »ಮೂರು ಪ್ರತ್ಯೇಕ ವಿದ್ಯುತ್ ಅವಘಡ | ಕೆಪಿಟಿಸಿಎಲ್‌ಗೆ ₹ 1.28 ಕೋಟಿ ದಂಡ
ಬೆಂಗಳೂರು: ಹಾಸನ ಮತ್ತು ಬೆಂಗಳೂರು ನಗರಗಳಲ್ಲಿ 2017-18ರ ಅವಧಿಯಲ್ಲಿ ನಡೆದ ಮೂರು ಪ್ರತ್ಯೇಕ ವಿದ್ಯುತ್ ಅವಘಡಗಳಲ್ಲಿ ಮೃತಪಟ್ಟ ವ್ಯಕ್ತಿಯೊಬ್ಬರ ಪತ್ನಿ ಸೇರಿದಂತೆ ಗಾಯಾಳು ಸಂತ್ರಸ್ತರಿಗೆ ಒಟ್ಟು ₹ 1.28 ಕೋಟಿ ಮೊತ್ತದ ಪರಿಹಾರ ಪಾವತಿಸಲು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ಮತ್ತು ಬೆಂಗಳೂರು ವಿದ್ಯುತ್ ಪೂರೈಕೆ ಕಂಪನಿಗೆ (ಬೆಸ್ಕಾಂ) ಹೈಕೋರ್ಟ್ ಆದೇಶಿಸಿದೆ. ಈ ಸಂಬಂಧ ಸಲ್ಲಿಸಲಾಗಿದ್ದ ಮೂರು ಪ್ರತ್ಯೇಕ ರಿಟ್ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ …
Read More »ಅನ್ನ ಭಾಗ್ಯಕ್ಕೆ ಕನ್ನ: ಅನರ್ಹರಿಂದ ₹11.91 ಕೋಟಿ ವಸೂಲಿ
ಬೆಂಗಳೂರು: ಅಂತ್ಯೋದಯ ಅನ್ನ ಯೋಜನೆ (ಎಎವೈ) ಮತ್ತು ಬಿಪಿಎಲ್ ಪಡಿತರ ಚೀಟಿಯನ್ನು ಅಕ್ರಮವಾಗಿ ಪಡೆದು ಬಡವರ ‘ಅನ್ನ ಭಾಗ್ಯ’ಕ್ಕೆ ಕನ್ನ ಹಾಕಿದವರನ್ನು ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕುಗೊಳಿಸಿರುವ ಆಹಾರ ಇಲಾಖೆ, ಅಂಥವರಿಂದ ₹11.91 ಕೋಟಿ ದಂಡ ವಸೂಲಿ ಮಾಡಿದೆ. 2021ರ ಜ.30ರಿಂದ ಇದೇ ಜೂನ್ 30ರವರೆಗೆ ಈ ಕಾರ್ಯಾಚರಣೆ ನಡೆಸಿರುವ ಇಲಾಖೆ, ತಹಶೀಲ್ದಾರ್‌ಗಳ ಮೂಲಕ ನೋಟಿಸ್ ಜಾರಿ ಮಾಡಿ ಕ್ರಮ ತೆಗೆದುಕೊಂಡಿದೆ. ಅನರ್ಹರು ಹೊಂದಿದ್ದ ಒಟ್ಟು 3.17 ಲಕ್ಷ …
Read More »