Breaking News

Yearly Archives: 2022

ರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಬೆದರಿಸಿ ದರೋಡೆಗೈಯ್ಯುತ್ತಿದ್ದ ಏಳು ಜನರ ಬಂಧನ

ವಿಜಯಪುರ: ವಿಜಯಪುರ ನಗರ ಹಾಗೂ ಹೆದ್ದಾರಿಗಳಲ್ಲಿ ಸಂಚರಿಸುತ್ತಿದ್ದ ಜನರನ್ನು ಮಾರಕಾಸ್ತ್ರಗಳಿಂದ ಬೆದರಿಸಿ ದರೋಡೆ ಮಾಡುತ್ತಿದ್ದ ಮಹಾರಾಷ್ಟ್ರ ಮೂಲದ ಮೂವರು ಸೇರಿದಂತೆ ಒಟ್ಟು ಏಳು ಜನರ ತಂಡವನ್ನು ಪೊಲೀಸರು ಬಂಧಿಸಿದ್ದಾರೆ.   ಇಟ್ಟಂಗಿಹಾಳ ದೊಡ್ಡಿಯ ನಿವಾಸಿ ವಿಜಯ ಭೀರಪ್ಪ ಕರಾಡೆ (23), ಆನಂದ ಮಾಯಪ್ಪ ಡೇರೆ, ಹಣಮಂತ ಜಯಪ್ಪ ಖರಾತ (20), ಬಬಲಾದಿ ಗ್ರಾಮದ ನಿವಾಸಿ ಸಚಿನ್ ಮಧು ಗೋಪಣೆ (20), ಮಹಾರಾಷ್ಟ್ರದ ತಿಕ್ಕುಂಡಿ ಕರೆವಾಡಿ ಮೂಲದ ನಿವಾಸಿ ನವನಾಥ ಅಮಗೊಂಡ ಕರಾಡೆ …

Read More »

ನಾವು ಶಶಿಕಲಾ‌ ಜೊಲ್ಲೆಗೆ ಹುಟ್ಟಿದವರಲ್ಲ: ನಲಪಾಡ್ ವಿವಾದಾತ್ಮಕ ಹೇಳಿಕೆ

ಬೆಂಗಳೂರು : ”ನಾವು ಶಶಿಕಲಾ‌ ಜೊಲ್ಲೆಗೆ ಹುಟ್ಟಿದವರಲ್ಲ, ನಾವು ಕಾಂಗ್ರೆಸ್ ಪಕ್ಷದವರು, ಗಾಂಧೀಜಿ ತತ್ವ ಅನುಸರಿಸುತ್ತಿರುವವರು” ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಹ್ಯಾರಿಸ್ ನಲಪಾಡ್ ನೀಡಿರುವ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ.   ಫೇಸ್ ಬುಕ್ ಲೈವ್ ನಲ್ಲಿಸಿದ್ದರಾಮಯ್ಯ ಅವರತ್ತ ಕೊಡಗಿನಲ್ಲಿ ಬಿಜೆಪಿ ಕಾರ್ಯಕರ್ತರು ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ನಲಪಾಡ್, ಬಿಜೆಪಿಯವರು ಊರುಬಿಟ್ಟು ಓಡಿಹೋಗುವಂತೆ ಮಾಡುತ್ತೇವೆ. ರಾಜ್ಯದ ಎಲ್ಲೆಡೆ ಪ್ರತಿಭಟನೆ ಮಾಡುತ್ತೇವಾ. ಎಲ್ಲಾ ಸಚಿವರಿಗೂ ಮೊಟ್ಟೆ ಕಳುಹಿಸಿ …

Read More »

ಕಾರ್ ಹೊಂದಿದವರ 12584 ಸೇರಿ 3.30 ಲಕ್ಷ ಬಿಪಿಎಲ್, ಅಂತ್ಯೋದಯ ರೇಷನ್ ಕಾರ್ಡ್ ರದ್ದು

ಬೆಂಗಳೂರು: ಐಷಾರಾಮಿ ಕಾರ್ ಹೊಂದಿದವರು ಕೂಡ ಬಿಪಿಎಲ್ ಕಾರ್ಡ್ ಪಡೆದುಕೊಂಡಿರುವುದು ಪತ್ತೆಯಾಗಿದ್ದು 12,584 ಕಾರ್ ಮಾಲೀಕರ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ. 21,679 ಅಂತ್ಯೋದಯ, 3,08,345 ಬಿಪಿಎಲ್ ಪಡಿತರ ಚೀಟಿ ಸೇರಿದಂತೆ ಸುಮಾರು 3.30 ಲಕ್ಷ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದ್ದು, ಕೆಲವು ಪಡಿತರ ಚೀಟಿಗಳನ್ನು ಎಪಿಎಲ್ ಕಾರ್ಡ್ ಗೆ ಬದಲಾಯಿಸಿ ಕೊಡಲಾಗಿದೆ. ರಾಜ್ಯದಲ್ಲಿ ಕಾರ್ ಹೊಂದಿದವರು ಕೂಡ ಪಡಿತರ ಚೀಟಿ ಪಡೆದುಕೊಂಡಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಅಧಿಕಾರಿಗಳು ಸಾರಿಗೆ ಇಲಾಖೆಯ ಸಹಕಾರ …

Read More »

ಮುಸ್ಲಿಂ ಮನೆಯಲ್ಲಿ ಸ್ವರೂಪನಂದ ಭಾರತಿ ಸ್ವಾಮೀಜಿಗೆ ಪಾದಪೂಜೆ: ಎಲ್ಲರಿಂದಲೂ ಮೆಚ್ಚುಗೆ

ಗದಗ: ಜಿಲ್ಲೆಯಲ್ಲಿ ಹುಡ್ಕೋ ಕಾಲೋನಿಯ ಸಿಕಂದರ್‌ ಬಡೆಖಾನ್‌ ಕುಟುಂಬಸ್ಥರಿಂದ ಸ್ವರೂಪನಂದ ಭಾರತಿ ಸ್ವಾಮೀಜಿ ಪೂಜೆ ನೆರೆವೇರಿಸಿದೆ. ಈ ವೇಳೆ ಸ್ವರೂಪಾನಂದ ಭಾರತಿ ಸ್ವಾಮೀಜಿಗೆ ಪಾದಪೂಜೆ ಮಾಡಿದ್ದಾರೆ.   ಧಾರವಾಡ ಜಿಲ್ಲೆಯ ಕ್ಯಾರಕೊಪ್ಪದ ಓಂಕಾರ ಆಶ್ರಮದ ಸ್ವರೂಪನಂದ ಸ್ವಾಮೀಜಿಯವರ ಪಾದಪೂಜೆ ಮಾಡಿ ಎಲ್ಲರ ಗಮನ ಸೆಳೆದಿದೆ. ನಿವೃತ್ತ ಪ್ರಾಧ್ಯಾಪಕರಾದ ಸಿಕಂದರ್‌ ಅವರು ಸ್ವರೂಪನಂದ ಶ್ರೀಗಳ ಭಕ್ತರಾಗಿದ್ದಾರೆ. ಪಾದಪೂಜೆಯ ಮೂಲಕ ಸ್ವಾಮೀಜಿಯವರು ಬಡೆಖಾನ್‌ ಮನೆಯಲ್ಲಿಯೇ ಪ್ರಸಾದ ಸ್ವೀಕರಿಸಿದ್ದಾರೆ.ಹಿಂದೂ ಮುಸ್ಲಿಂ ಬಾಂಧವ್ಯಕ್ಕೆ ಪ್ರೇರಕವಾದ ಈ …

Read More »

ಸಿದ್ದರಾಮಯ್ಯ ಏಲ್ಲಿ ಬೇಕಾದ್ರು ಹೋಗಲಿ, ಮೊಟ್ಟೆ ಎಸೆಯಬೇಡಿ: ಪ್ರಲ್ಹಾದ್ ಜೋಶಿ

ಹುಬ್ಬಳ್ಳಿ, ಆಗಸ್ಟ್‌ 19: ಸಾವರ್ಕರ್ ಭಾವಚಿತ್ರ ಮುಸ್ಲಿಂ ಏರಿಯಾದಲ್ಲಿ ಏಕೆ ಹಾಕಬೇಕಿತ್ತು ಎಂಬ ಸಿದ್ದರಾಮಯ್ಯ ಹೇಳಿಕೆ ಖಂಡಿಸಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು, ಸಿದ್ದರಾಮಯ್ಯ ಅವರ ಮೇಲೆ ಮೊಟ್ಟೆ ಎಸೆದಿದ್ದೂ ಕೂಡ ಸರಿಯಲ್ಲ ಎಂದು ಹೇಳಿದ್ದಾರೆ.   ಹುಬ್ಬಳ್ಳಿಯಲ್ಲಿ ಮಾತನಾಡಿದ ಜೋಶಿ ಅವರು, ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದಿದ್ದು ತಪ್ಪು. ಸಿದ್ದರಾಮಯ್ಯ ವಿಪಕ್ಷ ನಾಯಕರು. ಅವರು ಏಲ್ಲಿ ಬೇಕಾದರೂ ಹೋಗಬಹುದು. ಅವರ ಮೇಲೆ ಮೊಟ್ಟೆ ಎಸೆಯುವ ಕ್ರಮ …

Read More »

ರೈಲ್ವೆ ಪೊಲೀಸರಿಗೆ ಶೋಲ್ಡರ್ ಲೈಟ್: ರಾಜ್ಯದಲ್ಲಿ ಪ್ರಥಮ ಬಾರಿಗೆ ಜಾರಿ

ಬೆಂಗಳೂರು: ರಾತ್ರಿ ವೇಳೆ ರೈಲು ಗಸ್ತು, ರೈಲು ಹಳಿ ಗಸ್ತು ಹಾಗೂ ಅಪರಾಧಗಳ ಘಟನಾ ಸ್ಥಳಗಳಲ್ಲಿ ರೈಲ್ವೆ ಪೊಲೀಸರ ಇರುವಿಕೆ ಗುರುತಿಸಲು ಅನುವಾಗುವಂತೆ ರಾಜ್ಯದಲ್ಲಿ ಪ್ರಥಮ ಬಾರಿಗೆ ರೈಲ್ವೆ ಪೊಲೀಸರಿಗೆ ‘ಶೋಲ್ಡರ್ ಲೈಟ್’ ಪರಿಚಯಿಸಲಾಗಿದೆ.   ರಾತ್ರಿ ವೇಳೆ ರೈಲ್ವೆ ಪೊಲೀಸರು ರೈಲು ಗಸ್ತು, ರೈಲು ಹಳಿಗಳ ಗಸ್ತು ಮಾಡುತ್ತಾರೆ. ನಿಗದಿತ ಮಾರ್ಗದಲ್ಲಿ ರೈಲು ಹಳಿಗಳ ಮೇಲೆ ನಡೆದು ಹೋಗುವ ಸಂದರ್ಭದಲ್ಲಿ ಕತ್ತಲೆ ಇರುತ್ತದೆ. ಕೆಲವು ಬಾರಿ ರೈಲ್ವೆ ಹಳಿಗಳ ಮೇಲೆ …

Read More »

ಪುನೀತ್ ರಾಜ್‍ಕುಮಾರ್ ಗಣಪನ ಮೂಲಕ ನಟನಿಗೆ ಗೌರವ ಶ್ರದ್ಧಾಂಜಲಿ

ವರನಟ, ಅಪ್ಪಾಜಿ‌ ಹಾಗೂ ಕನ್ನಡದ ಕಣ್ಮನಿ ಎಂದು ಕರುನಾಡ ಇತಿಹಾಸ ಪ್ರಸಿದ್ಧವಾಗಿರುವ ಮೂರನೇ ಪುತ್ರ ಪವರ್ ಸ್ಟಾರ್ ಎಂದು ಜನಮನ್ನಣೆ ಪಡೆದಿದ್ದ ಪುನೀತ್ ರಾಜ್‍ಕುಮಾರ್. ಪುನೀತ್ ರಾಜ್‍ಕುಮಾರ್ ನಮ್ಮನ್ನೆಲ್ಲ ಅಗಲಿ 10 ತಿಂಗಳು ಕಳೆಯುತ್ತ ಬಂದರು ಅವರ ನೆನಪುಗಳು ಮಾತ್ರ ಕನ್ನಡಿಗರಿಂದ ಹಾಗೂ ಅಭಿಮಾನಿಗಳಿಂದ ಮಾಸುತ್ತಿಲ್ಲ. ಹೌದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ನೆನಪು ಸದಾ ಒಂದಿಲ್ಲೊಂದು ಕಾರಣದಿಂದ ಮತ್ತೆ ಮತ್ತೆ ನೆನಪುಸುತ್ತಿದೆ. ಅವರ ಮನೋಜ್ಞ ಅಭಿನಯದಿಂದ ಕರುನಾಡ …

Read More »

ತಮ್ಮ ಪುಟ್ಟ ಮಗುವಿಗೆ ಶ್ರೀ ಕೃಷ್ಣನ ವೇಶ ಹಾಕಿ ಭಾವೈಕ್ಯತೆ ಮೆರೆದ ಮುಸ್ಲಿಂ ಕುಟುಂಬ..!!

ದೇವನೊಬ್ಬ ನಾಮ ಹಲವು ಎಂದು ಸಾರುತ್ತ ಮುಸ್ಲಿಂ ಕುಟುಂಬವೊಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ತಮ್ಮ ಮನೆಯ ಮಗುವಿಗೆ ಶ್ರೀಕೃಷ್ಣನ ವೇಶವನ್ನು ಹಾಕಿ ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂದೇಶವನ್ನು ಸಾರಿದ ಅರ್ಥಪೂರ್ಣ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಹೌದು ಭಾರತದಂಥ ವಿವಿಧತೆಯಲ್ಲಿ ಏಕತೆಯನ್ನು ಸಾರುವ ದೇಶದಲ್ಲಿ ಕಂಡುಬಂದ ಅದ್ಭು ದೃಶ್ಯವಿದು. ದೇವನೊಬ್ಬ ನಾಮ ಹಲವು ಎಂದು ಸಾರುತ್ತ ಮುಸ್ಲಿಂ ಕುಟುಂಬವೊಂದು ತಮ್ಮ ಮನೆಯ ಚಿಕ್ಕ ಮಗುವಿಗೆ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ …

Read More »

ಬೆಳಗಾವಿಯ ಐಟಿಬಿಪಿ ಶಿಬಿರದಲ್ಲಿ 2 ಎಕೆ-47 ರೈಫಲ್‍ಗಳು ನಾಪತ್ತೆ:

ಚೀನಾ ಗಡಿ ಕಾವಲು ಜವಾಬ್ದಾರಿ ಹೊತ್ತಿರುವ ಐಟಿಬಿಪಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಯೋಧರಿಗೆ ಸೇರಿದ ಎರಡು ಎಕೆ-47 ರೈಫಲ್‍ಗಳು ಕಳುವಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿ ತಾಲೂಕಿನ ಹಾಲಬಾವಿಯಲ್ಲಿರುವ ಐಟಿಬಿಪಿ ಶಿಬಿರದಲ್ಲಿ ನಕ್ಸಲ್ ನಿಗ್ರಹ ತರಬೇತಿ ನಡೆಯುತ್ತಿದೆ. ತರಬೇತಿಗೆಂದು ಮಧುರೈನಿಂದ ಬಂದಿರುವ ಐಟಿಬಿಪಿ 45ನೇ ಬಟಾಲಿಯನ್ ಯೋಧರಾದ ರಾಜೇಶ್‍ಕುಮಾರ್, ಸಂದೀಪ್ ಮೀನಾ ಅವರಿಗೆ ಸೇರಿದ ಎಕೆ-47 ರೈಫಲ್‍ಗಳು ಕಳುವಾಗಿವೆ. ಆಗಸ್ಟ್ 17ರಂದು ರಾತ್ರಿ ಮಲಗುವಾಗ ರೈಫಲ್‍ಗಳನ್ನು ವಾಡಿಕೆಯಂತೆ ಭದ್ರತೆಯಲ್ಲಿಯೇ ಇರಿಸಲಾಗಿತ್ತು. …

Read More »

ಗೋಡ್ಸೆ ಹಾಗೂ ಸಾವರ್‌ಕರ್‌ರ ವಿಚಾರಗಳನ್ನು ಮುಂದಿಟ್ಟುಕೊಂಡು B.J.P.ಅವರು ತಮ್ಮ ಅಜೆಂಡಾವನ್ನು ಮಾಡುತ್ತಿದ್ದಾರೆ.

ಮಡಿಕೇರಿಯಲ್ಲಿ ಸಿದ್ದರಾಮಯ್ಯನವರ ಮೇಲಿನ ಮೊಟ್ಟೆ ಎಸೆದ ಘಟನೆ ಪೂರ್ವನಿಯೋಜಿತ. ಇದರಲ್ಲಿ ಸ್ಥಳೀಯ ಪ್ರಭಾವೀ ನಾಯಕರು ಇದ್ದಾರೆ. ಈ ಕುರಿತಂತೆ ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಮಡಿಕೇರಿಯಲ್ಲಿ ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು. ಇದರ ಹಿಂದೆ ಜಿಲ್ಲೆಯ ಬಿಜೆಪಿ ನಾಯಕರ ಪ್ರಚೋದನೆ ಇದ್ದೇ ಇರುತ್ತದೆ. ಪ್ರಭಾವೀ ನಾಯಕರು ಹಾಗೂ …

Read More »