Breaking News

Yearly Archives: 2022

ಆಪರೇಶನ್ ಚೀತಾಗೆ ಬರೋಬ್ಬರಿ 50 ಲಕ್ಷಕ್ಕೂ ಅಧಿಕ ಹಣ ಖರ್ಚಾಗಿದ್ದು ಕಾರ್ಯಾಚರಣೆ ಮಾತ್ರ ವಿಫಲ ,ಸಾರ್ವಜನಿಕರ ಆಕ್ರೋಶ

ಕಳೆದ 1 ತಿಂಗಳಿನಿಂದ ಬೆಳಗಾವಿಯಲ್ಲಿ ನಡೆಯುತ್ತಿದ್ದ ಆಪರೇಷನ್ ಚೀತಾ ಕೊನೆಗೂ ಫೇಲ್ ಆಗಿದೆ. ಇಂದು 30ನೇ ದಿನದ ಕಾರ್ಯಾಚರಣೆ ನಡೆದಿದ್ದು. ಕೊನೆಯ ದಿನ ಕಾರ್ಯಾಚರಣೆ ಎಂಬ ನಿಟ್ಟಿನಲ್ಲಿ ಅರಣ್ಯ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿಯಿಂದ ಭರ್ಜರಿ ಕೋಂಬಿಂಗ್ ನಡೆದರೂ ಚಿರತೆ ಮಾತ್ರ ಪತ್ತೆಯಾಗಿಲ್ಲ. ಹೌದು ಕುಂದಾನಗರಿ ಬೆಳಗಾವಿಯಲ್ಲಿ ಚಾಲಾಕಿ ಚಿರತೆಯ ಕಣ್ಣಾಮುಚ್ಚಾಲೆ ಮುಂದುವರೆದಿದೆ. ಕಳೆದ ಅಗಷ್ಟ 5ರಂದು ಪ್ರತ್ಯಕ್ಷವಾಗಿದ್ದ ಚಿರತೆ ಇಡೀ ಬೆಳಗಾವಿ ಜನತೆಯ ನಿದ್ದೆಗೆಡಿಸಿದೆ.   30 ದಿನಗಳಿಂದ …

Read More »

ಮಹಿಳೆಯ ಜೊತೆ ದುರ್ನಡತೆ: ಶಾಸಕ ಲಿಂಬಾವಳಿ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ

ಬೆಂಗಳೂರು: ಬಿಜೆಪಿ ಶಾಸಕ ಅರವಿಂದ್ ಲಿಂಬಾವಳಿ ಮಹಿಳೆಯ ವಿರುದ್ಧ ಬಳಸಿರುವ ಪದ ಹಾಗೂ ಅವರ ದುರ್ನಡತೆ ಬಿಜೆಪಿಯ ಹೀನಾಯ ಸಂಸ್ಕೃತಿಯನ್ನು ಎತ್ತಿ ತೋರುತ್ತದೆ. ಮಹಿಳೆಯ ಮೇಲೆ ದೌರ್ಜನ್ಯ ಹಾಗೂ ಅತ್ಯಂತ ಕೆಟ್ಟ ಪದ ಬಳಸಿರುವ ಅರವಿಂದ್ ಲಿಂಬಾವಳಿ ಕೂಡಲೇ ಮಹಿಳೆಯ ಬಳಿ ಕ್ಷಮೆ ಕೇಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಭಾನುವಾರ ಕಾಂಗ್ರೆಸ್ ಕಚೇರಿಯಲ್ಲಿ ನಗರ ಪ್ರಚಾರ ಸಮಿತಿಯಿಂದ ಪ್ರತಿಭಟನೆ ನಡೆಸಿ ಹಾಗೂ ಪ್ರತಿಕೃತಿ ದಹಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ …

Read More »

ಬೆಂಗಳೂರಲ್ಲಿ ಬಸ್ ಚಾಲಕನ ಮೇಲೆ ಟ್ರಾಫಿಕ್ ಸಿಬ್ಬಂದಿ ಹಲ್ಲೆ: ದೂರು ದಾಖಲು

ಬೆಂಗಳೂರು: ಕೆಎಸ್​ಆರ್​ಟಿಸಿ ಬಸ್ ಚಾಲಕನ ಮೇಲೆ ಟ್ರಾಫಿಕ್ ಪೊಲೀಸ್ ಹಲ್ಲೆ ನಡೆಸಿರುವ ಪ್ರಕರಣ ಶನಿವಾರ ತಡರಾತ್ರಿ ನಗರದ ಕಾರ್ಪೊರೇಷನ್ ಬಸ್ ನಿಲ್ದಾಣದ ಬಳಿ ಘಟನೆ ಸಂಭವಿಸಿದೆ. ರಾತ್ರಿ 11 ಗಂಟೆ ಸುಮಾರಿಗೆ ಕಾರ್ಪೊರೇಷನ್ ಬಳಿ ಸಾಗರದಿಂದ ತಿರುವಣ್ಣಾಮಲೈಗೆ ಹೋಗುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಡ್ರೈವರ್ ಪ್ರಕಾಶ್, ಟಿಕೆಟ್ ಕಾಯ್ದಿರಿಸಿದ್ದ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಕಾರ್ಪೋರೇಷನ್ ಬಳಿ ಬಸ್ ನಿಲ್ಲಿಸಿದ್ದರು. ಈ ವೇಳೆ ಹಿಂದೆ ಎರಡು ಮೂರು ಬಸ್​​ಗಳು ಬಂದು ನಿಂತಿವೆ. …

Read More »

ಸಿಇಟಿ ಗೊಂದಲಕ್ಕೆ ತೆರೆ; ಪುನರಾವರ್ತಿತ ವಿದ್ಯಾರ್ಥಿಗಳಿಗೆ ಹೈಕೋರ್ಟ್‌ ಸಿಹಿ

ಬೆಂಗಳೂರು: ಪ್ರಸಕ್ತ ಸಾಲಿನ ಸಿಇಟಿ ಗೊಂದಲಕ್ಕೆ ತೆರೆ ಎಳೆದಿರುವ ಹೈಕೋರ್ಟ್‌, 2022ನೇ ಸಾಲಿನ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ದಿಂದ ಅವಕಾಶ ವಂಚಿತರಾಗುವ ಆತಂಕದಲ್ಲಿದ್ದ 2020-21ನೇ ಸಾಲಿನ ದ್ವಿತೀಯ ಪಿಯು ಪುನರಾವರ್ತಿತ ವಿದ್ಯಾರ್ಥಿಗಳ ಪರ ತೀರ್ಪು ನೀಡಿದೆ.   2020-21ನೇ ಸಾಲಿನ ಪಿಯು ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ವೃತ್ತಿಪರ ಕೋರ್ಸ್‌ಗಳ ಕೋರ್ಸ್‌ಗಳ ಪ್ರವೇಶಕ್ಕೆ ಪರಿಗಣಿಸಲಾಗದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) 2022 ಜು. 30ರಂದು ಹೊರ ಡಿಸಿದ್ದ ಟಿಪ್ಪಣಿಯನ್ನು ಹೈಕೋರ್ಟ್‌ ರದ್ದು …

Read More »

ರಾಯಬಾಗದಲ್ಲಿ ಚಲಿಸುತ್ತಿದ್ದ ರೈಲಿಗೆ ಸಿಲುಕಿದ ಹದಿನೈದು ಕುರಿಗಳು ಸ್ಥಳದಲ್ಲೇ ಸಾವು…!

ಚಿಕ್ಕೋಡಿ: ರೈಲು ಹಳಿಯಲ್ಲಿ ಹೋಗುತ್ತಿದ್ದ ಕುರಿಗಳ ಮೇಲೆ ರೈಲು ಹರಿದ ಪರಿಣಾಮ 15 ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದ ಹೊರವಲಯದಲ್ಲಿ ನಡೆದಿದೆ. ಬೆಳಗಾವಿಯ ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದ ರೈಲು ನಿಲ್ದಾಣದ ಹೊರವಲಯದಲ್ಲಿರುವ ರೈಲ್ವೆ ಗೇಟ್ ಬಳಿ ಅವಘಡ ಸಂಭವಿಸಿದೆ. ಚಿಂಚಲಿ ಪಟ್ಟಣದ ವಸಂತ ಜಾವೇದಾರ್ ಎಂಬುವವರಿಗೆ ಸೇರಿದ 15 ಕುರಿಗಳು ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಕುರಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದೆ ಎಂದು ತಿಳಿದು ಬಂದಿದೆ. ಘಟನೆಯಿಂದ …

Read More »

ಗಣೇಶ್ ಚತುರ್ಥಿ ನಿಮಿತ್ತ ಅನ್ನ ಸಂತರ್ಪಣೆ ಮಾಡಿದ ಸಾಯನ್ನವರ ದಂಪತಿಗಳು

  ಗೋಕಾಕ:ನಾಡಿನೆಲ್ಲೆಡೆ ಗಣೇಶನ ಅಬ್ಬರ ಜೋರಾಗಿದೆ ಸುಮಾರು ಎರಡು ವರ್ಷ ಕೊವಿಡ ಮಹಾಮಾರಿಯ ಕಾರಣ ಎಲ್ಲೆಡೆ ಗಣೇಶ್ ಉತ್ಸವ ಅಷ್ಟೊಂದು ಅದ್ದೂರಿಯಾಗಿ ನಡೆದಿರಲಿಲ್ಲ ಇನ್ನು ಇತ್ತಿಚ್ಚ್ಚಿಗೆ ಎಲ್ಲೆಡೆ ಸಂಭ್ರಮಕ್ಕೆ ಪರವಾನಿಗೆ ಸಿಕ್ಕಿದ್ದಕ್ಕೆ ಎಲ್ಲರೂ ಗಣೇಶ್ ನ ಆಗಮನ ವನ್ನಾ ಜೋರಾಗಿ ಅದ್ದುರಿಯಾಗಿ ಮಾಡಿಕೊಂಡಿದ್ದಾರೆ   ಅದೇರೀತಿ ಗೋಕಾಕ ನಗರದ ಎಪಿಎಂಸಿ ಮಾಜಿ ನಿರ್ದೇಶಕರು ಶ್ರೀ ಬಸವರಾಜ ಸಾಯನ್ನವರ ದಂಪತಿಗಳು ಮಹಾಲಿಂಗೇಶ್ವರ ನಗರದಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮ ವನ್ನಾ ಹಮ್ಮಿ ಕೊಂಡಿದ್ದಾರೆ …

Read More »

ಒಂದೇ ಕುಟುಂಬದ ಮೂವರ ಸಾವು: ಪತ್ನಿ, ಮಗನ ಕುತ್ತಿಗೆ ಹಿಸುಕಿ ಕೊಂದು ಆತ್ಮಹತ್ಯೆ

ಬೆಂಗಳೂರು: ಕೋಣನಕುಂಟೆ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಪೊಲೀಸರು ಸಾವು ಹೇಗಾಯಿತೆಂಬ ಪ್ರಾಥಮಿಕ ಮಾಹಿತಿಯನ್ನು ಕಲೆಹಾಕಿದ್ದಾರೆ. ‘ಚುಂಚನಕಟ್ಟೆ ಎಸ್‌ಬಿಐ ಲೇಔಟ್ ನಿವಾಸಿ ಮಹೇಶ್ ಕುಮಾರ್ (44), ಪತ್ನಿ ಜ್ಯೋತಿ (29) ಹಾಗೂ ಮಗ ನಂದೀಶ್ ಗೌಡ (9) ಅವರ ಮೃತದೇಹಗಳು ಆಗಸ್ಟ್ 18ರಂದು ಮನೆಯಲ್ಲಿ ಪತ್ತೆಯಾಗಿದ್ದವು. ಮೂವರ ಸಾವು ನಿಗೂಢವಾಗಿತ್ತು. ತನಿಖೆ ಕೈಗೊಂಡಾಗ ಕೊಲೆ ನಡೆದಿರುವುದು ಗೊತ್ತಾಗಿದೆ’ ಎಂದು ಪೊಲೀಸ್ ಮೂಲಗಳು …

Read More »

ಪವರ್ ಟಿವಿ ವ್ಯವಸ್ಥಾಪಕ ನಿರ್ದೇಶಕ ಸೇರಿ ಹಲವರ ವಿರುದ್ಧ FIR ದಾಖಲಿಸಲು ಸೂಚಿಸಿದ ನ್ಯಾಯಾಲಯ

ಬೆಂಗಳೂರು, ಸೆ.3:ವೇತನ ನೀಡದೆ ವಂಚನೆ ಸೇರಿದಂತೆ ಇನ್ನಿತರೆ ಆರೋಪಗಳ ಸಂಬಂಧ ಪವರ್ ಸುದ್ದಿ ವಾಹಿನಿಯ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಶೆಟ್ಟಿ ಸೇರಿ ಹಲವರ ವಿರುದ್ಧ ಎಫ್‍ಐಆರ್ ದಾಖಲಿಸಲು ನ್ಯಾಯಾಲಯ ಸೂಚಿಸಿದೆ ಎಂದು ವರದಿಯಾಗಿದೆ. ದೂರುದಾರ ಶಶಿಧರ್ ಎಂಬುವರ ಅರ್ಜಿ ವಿಚಾರಣೆ ನಡೆಸಿದ ನಗರದ 3ನೆ ಎಸಿಎಂಎಂ ವಿಶೇಷ ನ್ಯಾಯಾಲಯ ಇಲ್ಲಿನ ಯಶವಂತಪುರ ಠಾಣಾಧಿಕಾರಿಗೆ ಎಫ್‍ಐಆರ್ ದಾಖಲಿಸಲು ಸೂಚಿಸಿದೆ ಎಂದು ತಿಳಿದುಬಂದಿದೆ.   ಪವರ್ ಸುದ್ದಿ ವಾಹಿನಿ ಸಂಸ್ಥೆ, ವ್ಯವಸ್ಥಾಕ ನಿರ್ದೇಶಕ …

Read More »

ವಿಜಯಪುರ: ಭಕ್ತರ ಭಾರ ತಾಳಲಾರದೇ ನೆಲಕ್ಕುರುಳಿದ ಗಣೇಶ ಮಂಟಪ: ಹಲವರಿಗೆ ಗಾಯ

ವಿಜಯಪುರ: ಗಣಪತಿ ದರ್ಶನಕ್ಕೆಂದು ಹರಿದುಬಂದ ಭಕ್ತರ ಭಾರ ತಾಳಲಾರದೇ ಸಾರ್ವಜನಿಕ ಗಣೇಶ ಮಂಟಪವೊಂದು ಕುಸಿದು ಬಿದ್ದಿದ್ದು, ಹಲವು ಮಂದಿ ಗಾಯಗೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಶನಿವಾರ ನಡೆದಿದೆ. ಇಲ್ಲಿನ ವಿವೇಕಾನಂದ ವೃತ್ತದಲ್ಲಿ ಗೋಪುರ ಆಕಾರ ಹಾಗೂ ಸ್ವರ್ಣ ವರ್ಣದ ದೇವಾಲಯದ ಮಾದರಿಯಲ್ಲಿ ಈ ಗಣೇಶ ಮಂಟಪವನ್ನು ನಿರ್ಮಿಸಲಾಗಿತ್ತು. ಇಲ್ಲಿಗೆ ಜನ ಸಾಗರವೇ ಹರಿದುಬಂದ ಪರಿಣಾಮ ಭಾರ ತಾಳದೇ ನೆಲಕ್ಕುರುಳಿದೆ. ಪರಿಣಾಮ ಮಕ್ಕಳು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ. ಘಟನೆ …

Read More »

10 ಪ್ರಭಾವಿಗಳ ಸೆಳೆಯಲು ಬಿಜೆಪಿ ತಂತ್ರ; 150 ಟಾರ್ಗೆಟ್‌ ಗುರಿ ಮುಟ್ಟಲು ಕಾರ್ಯತಂತ್ರ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡಿ ಹೋದ ಬೆನ್ನಲ್ಲೇ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಿಂದ ಹತ್ತು ಮಂದಿ ಶಾಸಕರ ಸೆಳೆಯಲು ಕಾರ್ಯತಂತ್ರ ರೂಪಿಸಲಾಗಿದೆ.   ಇತ್ತೀಚೆಗೆ ದಿಲ್ಲಿಗೆ ಭೇಟಿ ನೀಡಿದ್ದ ಯಡಿಯೂರಪ್ಪ ಅವರು ಬಿಜೆಪಿಗೆ ಬರಲು ಉತ್ಸುಕರಾಗಿರುವವರ ಬಗ್ಗೆ ಮಾಹಿತಿ ನೀಡಿದ್ದರು. ಮಂಗಳೂರಿನಲ್ಲಿ ಮೋದಿ ಅವರು ಭಾಗವಹಿಸಿದ್ದ ಕೋರ್‌ ಕಮಿಟಿಯಲ್ಲೂ ವಿಷಯ ಪ್ರಸ್ತಾವವಾಗಿದ್ದು, ಬಿಜೆಪಿ ಶಾಸಕರು ಇಲ್ಲದ ಕ್ಷೇತ್ರಗಳಲ್ಲಿ ಸ್ವಸಾಮರ್ಥ್ಯ ಹಾಗೂ ವರ್ಚಸ್ಸು ಹೊಂದಿದ್ದರೆ ಸೇರಿಸಿಕೊಳ್ಳಬಹುದು ಎಂಬ ಅಭಿ ಪ್ರಾಯ …

Read More »