ಬೆಂಗಳೂರು: ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆಯಲ್ಲಿ (ನೀಟ್) ರಾಜ್ಯದ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮೆರೆದಿದ್ದಾರೆ. ಅಖಿಲ ಭಾರತ ಮಟ್ಟದ ಟಾಪ್ 20ರಲ್ಲಿ 6 ಹಾಗೂ 50ರ ಪಟ್ಟಿಯಲ್ಲಿ ಒಟ್ಟು 9 ಅಭ್ಯರ್ಥಿಗಳು ಸ್ಥಾನ ಪಡೆೆದಿದ್ದಾರೆ. ಇದಲ್ಲದೆ, ವಿವಿಧ ವಿಭಾಗಗಳಲ್ಲಿನ ಟಾಪರ್ಗಳನ್ನು ಸೇರಿಸಿದಲ್ಲಿ ಸಂಖ್ಯೆ 14ಕ್ಕೆ ಏರಿಕೆಯಾಗುತ್ತದೆ. ಈ ಮೂಲಕ ಹಿಂದಿನ ಎಲ್ಲ ದಾಖಲೆಗಳನ್ನು ಮೀರಿದಂತಾಗಿದೆ. ಅರ್ಹತೆಯಲ್ಲೂ ರೆಕಾರ್ಡ್: ಈ ಬಾರಿ ರಾಜ್ಯದ 1,22,423 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಒಟ್ಟಾರೆ 72,262 ಜನರು …
Read More »Yearly Archives: 2022
ಅತ್ತ ಸಚಿವರ ಅಂತ್ಯಕ್ರಿಯೆ, ಇತ್ತ ಉತ್ಸವದಲ್ಲಿ ಶಾಸಕರು!
ಕಲಬುರಗಿ: ಆಹಾರ ಮತ್ತು ನಾಗರಿಕ ಪೂರೈಕೆ ಮತ್ತು ಅರಣ್ಯ ಸಚಿವ ಉಮೇಶ ಕತ್ತಿ ಅವರ ನಿಧನದ ಪ್ರಯುಕ್ತ ಬುಧವಾರ ರಾಜ್ಯದಾದ್ಯಂತ ಸರ್ಕಾರ ಅಧಿಕೃತ ಶೋಕಾಚರಣೆ ಘೋಷಿಸಿದ್ದು, ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ ಮಾಡದಂತೆ ಸೂಚನೆ ನೀಡಿತ್ತು. ಆದರೂ, ಶಹಾಬಾದ್‌ನಲ್ಲಿ ಆಯೋಜಿಸಿದ್ದ ಗಾಯನ ಕಾರ್ಯಕ್ರಮದಲ್ಲಿ ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ ವೇದಿಕೆ ಹಂಚಿಕೊಂಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
Read More »ಗಣೇಶ ವಿಸರ್ಜನೆ ವೇಳೆ ಚಾಕು ಇರಿತ
ಗದಗ: ಗಣೇಶ ವಿಸರ್ಜನೆ ವೇಳೆ ಚಾಕು ಇರಿತದಲ್ಲಿ ಯುವಕ ಸಾವನ್ನಪ್ಪಿದ ಘಟನೆ ಗದಗದ ತೋಂಟದಾರ್ಯ ಮಠದ ಬಳಿ ತಡರಾತ್ರಿ ನಡೆದಿದೆ. ಚಾಕು ಇರಿತಕ್ಕೆ ಒಳಗಾದ ಸುದೀಪ್ ಮುಂಡೆವಾಡಿ(22) ಮೃತಪಟ್ಟ ಯುವಕ ಎಂದು ಹೇಳಲಾಗಿದೆ. ಸ್ನೇಹಿತರೇ ಹಲ್ಲೆ ಮಾಡಿ ಚಾಕು ಇರಿದು ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ. ತೀವ್ರ ರಕ್ತಸ್ರಾವದಿಂದ ಸುದೀಪ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಗದಗ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಗದಗದಲ್ಲಿ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ …
Read More »ರಾಣಿ ಎಲಿಝಬೆತ್ ನಿಧನ
ಲಂಡನ್: ಬ್ರಿಟನ್ ರಾಣಿ ಎಲಿಝಬೆತ್ || ಗುರುವಾರ ನಿಧರಾಗಿದ್ದಾರೆ. 96 ವರ್ಷದ ಎಲಿಝಬೆತ್ ಅವರ ಆರೋಗ್ಯದಲ್ಲಿ ಏರುಪೇರಾದ ಬಳಿಕ ವೈದ್ಯರ ನಿಗಾದಲ್ಲಿ ಅವರನ್ನು ಇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಇಂದು ಕೊನೆಯುಸಿರೆಳದಿದ್ದಾರೆ ಎಂದು ಬಂಕಿಂಗ್‌ಹ್ಯಾಮ್ ಅರಮನೆ ಹೇಳಿಕೆ ಬಿಡುಗಡೆ ಮಾಡಿದೆ. “ಇಂದು ಬೆಳಗ್ಗೆ ಹೆಚ್ಚಿನ ಪರೀಕ್ಷೆಯ ಬಳಿಕ, ರಾಣಿಯ ವೈದ್ಯರು ಅವರ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು ಮತ್ತು ಅವರು ವೈದ್ಯಕೀಯ ನಿಗಾದಲ್ಲಿ ಉಳಿಯಲು ಶಿಫಾರಸು ಮಾಡಿದ್ದರು. ನಂತರ …
Read More »ಮುರುಘಾ ಮಠದ ಶಿವಮೂರ್ತಿ ಶ್ರಿಗಳಿಗೆ ಆಂಜಿಯೋಪ್ಲಾಸ್ಟಿ: ವರದಿ ಕೇಳಿದ ನ್ಯಾಯಾಧೀಶರು!
ಚಿತ್ರದುರ್ಗ: ಮುರುಘಾ ಮಠದ ಪೀಠಾಧಿಪತಿ ಡಾ.ಶಿವಮೂರ್ತಿ ಮುರುಘಾ ಶರಣರಿಗೆ ಹೃದಯ ಚಿಕಿತ್ಸೆ ಅಗತ್ಯವಿದೆ ಎಂಬ ಅರ್ಜಿಗೆ ಸ್ಪಂದಿಸಿರುವ ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶೆ ಬಿ.ಕೆ.ಕೋಮಲಾ, ಶ್ರೀಗಳನ್ನು ಅತ್ಯುತ್ತಮ ಆಸ್ಪತ್ರೆಗೆ ಸ್ಥಳಾಂತರಿಸುವ ಮುನ್ನ ಸಮೀಪದ ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಉತ್ತಮ ಚಿಕಿತ್ಸೆ ಕುರಿತು ವರದಿ ಪಡೆಯುವಂತೆ ಜೈಲು ಅಧೀಕ್ಷಕರಿಗೆ ಬುಧವಾರ ಸೂಚಿಸಿದರು. ಶ್ರೀಗಳ ಪರ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಾಧೀಶರು, ರೋಗಿಯ ಪ್ರಾಥಮಿಕ ತಪಾಸಣೆಯನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ …
Read More »ಪಡಿತರ ಚೀಟಿದಾರರಿಗೆ ಸಿಹಿ ಸುದ್ದಿ: ಸೆಪ್ಟೆಂಬರ್‌ನಲ್ಲಿ ಗೋಧಿ-ಅಕ್ಕಿ ಉಚಿತ?
ಪಡಿತರ ಚೀಟಿದಾರರಿಗೆ ಒಂದು ದೊಡ್ಡ ಸುದ್ದಿ. ಫಲಾನುಭವಿಗಳಿಗೆ ಸರಕಾರ ಸೆ.30ರವರೆಗೆ ಉಚಿತ ಪಡಿತರ ಸೌಲಭ್ಯ ಒದಗಿಸಲಿದೆ. ಗೋಧಿ, ಅಕ್ಕಿ, ಬೇಳೆ ಎಲ್ಲವನ್ನೂ ಪಡಿತರ ಚೀಟಿದಾರರಿಗೆ ಈ ಪಡಿತರ ವಿತರಣೆ ಆಗಲಿದೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯ ಮೂಲಕ ಬಡವರಿಗೆ ಪ್ರತಿ ತಿಂಗಳು ಉಚಿತ ಪಡಿತರವನ್ನು ನೀಡಲಾಗುತ್ತದೆ. ಕೋವಿಡ್ ಅವಧಿಯಲ್ಲಿ ಮೋದಿ ಸರ್ಕಾರ ಬಡವರ ಸಹಾಯಕ್ಕಾಗಿ ಉಚಿತ ಪಡಿತರವನ್ನು ವಿತರಿಸಿತು. ಇನ್ನು ಯಾವುದೇ ಬಡವರು ಹಸಿವಿನಿಂದ ಇರಬಾರದು, ಆದ್ದರಿಂದ ಅವರಿಗೆ …
Read More »ನೀಟ್: ರಾಜ್ಯದ 72,262 ವಿದ್ಯಾರ್ಥಿಗಳು ಅರ್ಹ
ಬೆಂಗಳೂರು: ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ನಡೆದಿದ್ದ ನೀಟ್ ಪರೀಕ್ಷೆಯಲ್ಲಿ ರಾಜ್ಯದ 72,262 ವಿದ್ಯಾರ್ಥಿ ಗಳು ಅರ್ಹತೆ ಪಡೆದಿದ್ದಾರೆ. ರಾಜ್ಯದಿಂದ 1,22,423 ವಿದ್ಯಾರ್ಥಿಗಳು ಹಾಜರಾಗಿ ದ್ದರು. ಅಖಿಲಭಾರತ ಮಟ್ಟದ ಮೊದಲ ಐದು ಸ್ಥಾನಗಳಲ್ಲಿ ರಾಜ್ಯದ ಇಬ್ಬರು, ಅಗ್ರ 10 ಸ್ಥಾನಗಳಲ್ಲಿ ಮೂವರು ವಿದ್ಯಾರ್ಥಿಗಳು ಇದ್ದಾರೆ. ಅಖಿಲ ಭಾರತ ಮಟ್ಟದಲ್ಲಿ ಮೂರನೇ ರ್‍ಯಾಂಕ್ ಪಡೆದ ಬೆಂಗಳೂರಿನ ನ್ಯಾಷನಲ್ ಸೆಂಟರ್ ಫಾರ್ ಎಕ್ಸ್‌ಲೆನ್ಸ್‌ನ ಹೃಷಿಕೇಶ್ ನಾಗ ಭೂಷಣ ಗಂಗುಲೆ ರಾಜ್ಯಕ್ಕೆ ಮೊದಲಿಗ. ರಾಜ್ಯ ಸಿಇಟಿಯಲ್ಲಿ ಪ್ರಕೃತಿ …
Read More »ಜಂಗಲ್ ರೆಸಾರ್ಟ್ ಉದ್ಘಾಟನೆಗೆ ಬರ್ತೀನಿ ಅಂದಿದ್ರು!
ಚಿಂಚೋಳಿ: ರಾಜ್ಯದ ಅರಣ್ಯ ಮತ್ತು ಆಹಾರ ಸಚಿವ ಉಮೇಶ ಕತ್ತಿ ಅವರು ತಾಲೂಕಿಗೆ ಕಳೆದ ಜೂನ್ 27ರಂದು ಭೇಟಿ ನೀಡಿ, ಪೋಲಕಪಳ್ಳಿ ಗ್ರಾಮದ ಹತ್ತಿರ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಮ ಉದ್ಘಾಟಿಸಿದ್ದ ಕ್ಷಣಗಳು ಸ್ಮರಣೀಯವಾಗೇ ಉಳಿದವು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ಬಳಿಕ ತಾಲೂಕಿಗೆ ಪ್ರಥಮ ಬಾರಿ ಭೇಟಿ ನೀಡಿದ್ದ ಸಚಿವ ಉಮೇಶ ಕತ್ತಿ ಅವರು “ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಮ’ ಉದ್ಘಾಟಿಸಿದ ಸಂದರ್ಭದಲ್ಲಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಅರಣ್ಯಪ್ರದೇಶ ಹೊಂದಿರುವ ಕುಂಚಾವರಂ …
Read More »KPSC ಹಗರಣ: ಮೂವರು ಸೇವೆಯಿಂದ ವಜಾ
ಬೆಂಗಳೂರು, ಸೆ.7: ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‍ಸಿ) ನಡೆಸಿದ ಸಹಾಯಕರ ಹುದ್ದೆಗಳ ಪರೀಕ್ಷೆಯಲ್ಲಿ ಅಕ್ರಮ ಎಸಗಿದ ಆರೋಪಕ್ಕೆ ಸಂಬಂಧಿಸಿ ಕೆಪಿಎಸ್‍ಸಿ ಸಿಬ್ಬಂದಿ ಬಸವರಾಜ ಎಲ್.ಕುಂಬಾರ್, ಸನಾ ಬೀಡಿ, ರಾಮಪ್ಪ ಎ. ಹೆರಕಲ್ ಅವರನ್ನು ಸೇವೆಯಿಂದ ವಜಾ ಮಾಡಲಾಗಿದೆ ಎಂದು ಆಯೋಗದ ಕಾರ್ಯದರ್ಶಿ ಸುರಳ್ಕರ್ ವಿಕಾಸ್ ಕಿಶೋರ್ ಪ್ರಕಟನೆ ಹೊರಡಿಸಿದ್ದಾರೆ. 2020ರ ಜ.31ರಂದು ರಾಜ್ಯದ ವಿವಿಧ ಇಲಾಖೆಗಳಲ್ಲಿನ ಮತ್ತು ದೆಹಲಿಯ ಕರ್ನಾಟಕ ಭವನದ ಖಾಲಿ ಹುದ್ದೆಗಳಲ್ಲಿ ಅಧಿಸೂಚನೆಯನ್ನು ಹೊರಡಿಸಲಾಗಿತ್ತು. 2021ರ ಜ.24ರಂದು …
Read More »ಬೆಳಗಾವಿ: ಉಮೇಶ ಕತ್ತಿ ನಿವಾಸಕ್ಕೆ ಗಣ್ಯರ ದಂಡು, ಕುಟುಂಬಸ್ಥರಿಗೆ ಸಾಂತ್ವನ
ಬೆಲ್ಲದ ಬಾಗೇವಾಡಿ (ಬೆಳಗಾವಿ ಜಿಲ್ಲೆ): ಉಮೇಶ ಕತ್ತಿ ಅವರ ಇಲ್ಲಿನ ನಿವಾಸಕ್ಕೆ ಗುರುವಾರ ಕೂಡ ಹಲವು ಗಣ್ಯರು, ಸಚಿವರು, ಶಾಸಕರು, ಅಪಾರ ಸಂಖ್ಯೆಯ ಅಭಿಮಾನಿಗಳು ಭೇಟಿ ನೀಡಿದರು. ತೋಟದ ಆವರಣದಲ್ಲಿನ ಉಮೇಶ ಕತ್ತಿ ಅವರ ಸಮಾಧಿಗೂ ಭೇಟಿ ನೀಡಿ ನಮನ ಸಲ್ಲಿಸಿದರು. ಉಮೇಶ ಕತ್ತಿಯವರ ಪತ್ನಿ ಶೀಲಾ, ಪುತ್ರ ನಿಖಿಲ್, ಪುತ್ರಿ ಸ್ನೇಹಾ, ಸಹೋದರ ರಮೇಶ, ಅವರ ಪುತ್ರರಾದ ಪವನ್, ಪೃಥ್ವಿ ಸೇರಿ ಕುಟುಂಬದವರನ್ನು ಭೇಟಿ ಮಾಡಿದ ಗಣ್ಯರು ಸಾಂತ್ವನ …
Read More »