ಬೆಂಗಳೂರು: ಈ ಬಾರಿ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಉದ್ಘಾಟಿಸಲಿದ್ದಾರೆ. ದಸರಾ ಉದ್ಘಾಟನೆಗೆ ಯಾರನ್ನು ಕರೆಯಬೇಕೆಂದು ಚರ್ಚೆ ಮಾಡಿದ್ದೆವು. ಪ್ರಸಕ್ತ ವರ್ಷದ ಮೈಸೂರು ದಸರಾ ಮಹೋತ್ಸವವನ್ನು ರಾಷ್ಟ್ರಪತಿಗಳು ಉದ್ಘಾಟಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಮೈಸೂರು ದಸರಾ ಉದ್ಘಾಟನೆಗೆ ಈ ಬಾರಿ ಯಾರನ್ನು ಕರೆಯಬೇಕೆಂದು ಚರ್ಚೆ ಮಾಡಿದ್ದೆವು. ಅಂತಿಮವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಕರೆಯಲು ತೀರ್ಮಾನಿಸಿದೆವು. ದಸರಾ ಉದ್ಘಾಟನೆಗೆ ಬರುವಂತೆ ರಾಷ್ಟ್ರಪತಿಗಳನ್ನು ಆಹ್ವಾನಿಸಿದ್ದು …
Read More »Yearly Archives: 2022
ಜನರ ಕಷ್ಟಕ್ಕೆ ಸ್ಪಂದಿಸುವುದು ಜನಸ್ಪಂದನ, ಕಾರ್ಯಕ್ರಮ ಮಾಡುವುದಲ್ಲ: ಸಿದ್ದರಾಮಯ್ಯ ಟೀಕೆ
ಬಾಗಲಕೋಟೆ, ಸೆಪ್ಟೆಂಬರ್ 10: ಜನಸ್ಪಂದನ ಅಂದರೆ ಜನರ ಕಷ್ಟ ಸುಖಗಳಿಗೆ ಸ್ಪಂದಿಸಬೇಕು, ರಾಜ್ಯ ಸರಕಾರ ಜನರ ಕಷ್ಟ ಸುಖಗಳಿಗೆ ನೆರವಾಗುತ್ತಿದ್ದಾರಾ? ಮಳೆ ಬಂದು ಹಲವು ಕಡೆ ಪ್ರವಾಹ ಉಂಟಾಗಿದೆ. ಬೆಂಗಳೂರು ಸೇರಿ ಹಲವು ಜಿಲ್ಲೆಗಳು ಹಾಳಾಗಿವೆ, ಮನೆಗಳು ಕುಸಿದಿವೆ, ರೈತರ ಜಮೀನು ಹಾಳಾಗಿವೆ ಅವರಿಗೆ ಪರಿಹಾರ ಕೊಡದೇ ಯಾವ ಕಾರ್ಯಕ್ರಮ ಮಾಡುತ್ತಿದ್ದಾರೆ ಎಂದು ಬಿಜೆಪಿ ಸರಕಾರವನ್ನು ತರಾಟೆಗೆ ತೆಗೆದುಕೊಂಡರು. ಜಿಲ್ಲೆಯಲ್ಲಿ ಪ್ರವಾಹದ ಸಮೀಕ್ಷೆಗೆ ಆಗಮಿಸಿದ್ದ ಮಾಜಿ ಸಿಎಂ ಮಾಧ್ಯಮದವರೊಂದಿಗೆ …
Read More »ಮಾಲಿನ್ಯ ಪ್ರಮಾಣಪತ್ರ ಇಲ್ಲವೆಂದು ಎಲೆಕ್ಟ್ರಿಕ್ ಸ್ಕೂಟರ್‌ಗೆ ದಂಡ ಹಾಕಿದ ಪೊಲೀಸ್!
ತಿರುವನಂತಪುರ: ಎಲೆಕ್ಟ್ರಿಕ್ ವಾಹನ ಒಂದಕ್ಕೆ ವಾಯು ಮಾಲಿನ್ಯ ಪ್ರಮಾಣಪತ್ರ (ಪಿಯುಸಿ) ಕೊಟ್ಟಿಲ್ಲ ಎಂದು ಟ್ರಾಫಿಕ್ ಪೊಲೀಸರು ದಂಡ ಹಾಕಿರುವ ವಿಲಕ್ಷಣ ಘಟನೆ ಕೇರಳದಲ್ಲಿ ನಡೆದಿದೆ. ಅಸಲಿಗೆ ಎಲೆಕ್ಟ್ರಿಕ್ ವಾಹನಗಳಿಗೆ ಪಿಯುಸಿ ಪ್ರಮಾಣಪತ್ರ ಅಗತ್ಯ ಇಲ್ಲ. ಆದರೆ, ಕೇರಳದ ಮಣಪ್ಪುರಂ ಜಿಲ್ಲೆಯ ನೀಲಾಂಚರಿಯಲ್ಲಿ ಯುವಕನೊಬ್ಬ ‘ಏಥರ್’ ಕಂಪನಿಯ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ತೆಗೆದುಕೊಂಡು ಹೋಗುತ್ತಿದ್ದಾಗ ಸ್ಥಳೀಯ ಟ್ರಾಫಿಕ್ ಪೊಲೀಸರು ತಡೆದು ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ನಡೆಸಿದ ಬಳಿಕ ₹250 …
Read More »ಪುರುಷರ ಲೈಂಗಿಕ ಸಾಮರ್ಥ್ಯ ಮ್ಯಾಗಿ ಥರಾ: ನಟಿ ರೆಜಿನಾ ಹೇಳಿಕೆ
ಮುಂಬೈ: ಪುರುಷರ ಲೈಂಗಿಕ ಸಾಮರ್ಥ್ಯ ಮ್ಯಾಗಿ ನೂಡಲ್ಸ್ ಥರಾ, ಎರಡೇ ನಿಮಿಷ ಎಂದು ಜೋಕ್ ಮಾಡಿರುವ ನಟಿ ರೆಜಿನಾ ಈಗ ಟ್ರೋಲ್ ಗೊಳಗಾಗಿದ್ದಾರೆ. ಡಾಕಿನಿ ಸಿನಿಮಾ ಖ್ಯಾತಿಯ ನಟಿ ರೆಜಿನಾ ಈ ಸಿನಿಮಾದ ಪ್ರಚಾರದ ವೇಳೆ ಇಂತಹದ್ದೊಂದು ಹೇಳಿಕೆ ನೀಡಿದ್ದು, ಪಡ್ಡೆ ಹುಡುಗರು ಆಕೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಇನ್ನಿಲ್ಲದಂತೆ ಟ್ರೋಲ್ ಮಾಡುತ್ತಿದ್ದಾರೆ. ರೆಜಿನಾ ಈ ಮೊದಲು ಕನ್ನಡದ ಸೂರ್ಯಕಾಂತಿ ಸಿನಿಮಾದಲ್ಲಿ ನಟಿಸಿದ್ದರು. ಇದೀಗ ಇಂತಹದ್ದೊಂದು ವಿವಾದದ ಮೂಲಕ ಭಾರೀ ಸುದ್ದಿ …
Read More »ಸ್ಮೃತಿ ಇರಾನಿ ಗೋವಾ ರೆಸ್ಟೋರೆಂಟ್ ವಿವಾದಕ್ಕೆ ಮತ್ತೊಂದು ಟ್ವಿಸ್ಟ್; RTI ನಲ್ಲಿ ಸ್ಪೋಟಕ ಮಾಹಿತಿ ಬಹಿರಂಗ
ಗೋವಾದ ಅಸ್ಸಾಗಾವೊದಲ್ಲಿರುವ ಸಿಲ್ಲಿ ಸೋಲ್ಸ್ ಕೆಫೆ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಸಿಲ್ಲಿ ಸೋಲ್ಸ್ ಕೆಫೆ ಮತ್ತು ಬಾರ್‌ನ ಪರವಾನಗಿಯನ್ನು ಮೋಸದಿಂದ ನವೀಕರಿಸಲಾಗಿದೆ ಎಂದು ಗೋವಾದ ಅಬಕಾರಿ ಆಯುಕ್ತರು ಜುಲೈನಲ್ಲಿ ನೋಟಿಸ್ ಸಲ್ಲಿಸಿದ್ದರು. ಈ ಕೆಫೆಯಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಪುತ್ರಿಯ ಪಾಲಿದೆ ಎಂಬ ಆರೋಪ ಕೇಳಿ ಬಂದಿತ್ತು. ಆದ್ರೆ ಕೆಫೆಗೂ ತಮ್ಮ ಕುಟುಂಬದವರಿಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಮೃತಿ ಇರಾನಿ ಕುಟುಂಬ …
Read More »‘ರಾಜ್ಯೋತ್ಸವ’ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲು ಇಲ್ಲಿದೆ ಮಾಹಿತಿ
ಪ್ರತಿ ವರ್ಷದಂತೆ ಈ ವರ್ಷವೂ ಸಹ ನವೆಂಬರ್ 1ರಂದು ನಡೆಯಲಿರುವ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿನ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಗುತ್ತದೆ. ಈ ಪ್ರಶಸ್ತಿಗೆ ಸಾರ್ವಜನಿಕರು, ಸಾಧಕರ ಹೆಸರುಗಳನ್ನು ನಾಮನಿರ್ದೇಶನ ಮಾಡಬಹುದಾಗಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದರ ಮಾಹಿತಿಯನ್ನು ನೀಡಿದೆ. ‘ಸೇವಾ ಸಿಂಧು’ ಪೋರ್ಟಲ್ ಮೂಲಕ ಸಾರ್ವಜನಿಕರು, ಸಾಧಕರ ಹೆಸರುಗಳನ್ನು ನಾಮ ನಿರ್ದೇಶನ ಮಾಡಬಹುದಾಗಿದ್ದು, ಈ ಪ್ರಕ್ರಿಯೆ ಸೆಪ್ಟೆಂಬರ್ 10 ರಿಂದ ಆರಂಭಗೊಳ್ಳಲಿದೆ. ಹೆಚ್ಚಿನ ವಿವರಗಳಿಗೆ …
Read More »ಹಾನಿ ಪರಿಶೀಲನೆ: ಕೇಂದ್ರ ತಂಡಕ್ಕೆ ಹಾನಿ ಮನವರಿಕೆ: ಡಿಸಿ ನಿತೇಶ್ ಪಾಟೀಲ್
ಬೆಳಗಾವಿ ಜಿಲ್ಲೆಯಲ್ಲಿ ಇತ್ತೀಚೆಗೆ ಅತಿವೃಷ್ಟಿಯಿಂದ ಉಂಟಾಗಿರುವ ಹಾನಿಯನ್ನು ಕೇಂದ್ರ ನೆರೆ ಅಧ್ಯಯನ ತಂಡವು ಶನಿವಾರ(ಸೆ.10) ಪರಿಶೀಲನೆ ನಡೆಸಿತು. ಕೇಂದ್ರ ಜಲ ಆಯೋಗದ ಜಲಶಕ್ತಿ ಸಚಿವಾಲಯದ ನಿರ್ದೇಶಕರಾದ ಅಶೋಕ ಕುಮಾರ್ ವಿ. ಅವರ ನೇತೃತ್ವದ ಕೇಂದ್ರ ಅಧ್ಯಯನ ತಂಡದಲ್ಲಿ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ಧಾರಿ ಇಲಾಖೆಯ ಅಧೀಕ್ಷಕ ಎಂಜಿನಿಯರ್ ವಿ.ವಿ.ಶಾಸ್ತ್ರಿ ಹಾಗೂ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಹಿರಿಯ ಸಲಹೆಗಾರರಾದ ಡಾ.ಜಿ.ಎಸ್.ಶ್ರೀನಿವಾಸ್ ರೆಡ್ಡಿ ಅವರು ಜತೆಗಿದ್ದರು. ಬೆಳಗಾವಿಯಿಂದ ಪ್ರವಾಸ …
Read More »ಬೆಳಗಾವಿಯಲ್ಲಿ ಅದ್ಧೂರಿಯಾಗಿ ಗಣೇಶೋತ್ಸವಕ್ಕೆ ತೆರೆ,
ಕುಂದಾನಗರಿ ಬೆಳಗಾವಿಯಲ್ಲಿ ಅದ್ಧೂರಿಯಾಗಿ ಗಣೇಶೋತ್ಸವಕ್ಕೆ ತೆರೆ ಬಿದ್ದಿದ್ದು. ನಿರಂತರವಾಗಿ 25 ಗಂಟೆಗೂ ಹೆಚ್ಚು ಕಾಲ ಭವ್ಯ ಮೆರವಣಿಗೆ ಮೂಲಕ ಸಾರ್ವಜನಿಕ ಗಣೇಶ ಮಂಡಳಿಗಳ ಗಣೇಶ ಮೂರ್ತಿಗಳ ವಿಸರ್ಜನೆಯನ್ನು ನೆರವೇರಿಸಲಾಯಿತು. ಈ ವೇಳೆ ಲಕ್ಷಾಂತರ ಜನರು ಈ ಅದ್ಭುತ ಕ್ಷಣಕ್ಕೆ ಸಾಕ್ಷಿಯಾದರು. ಹೌದು ಬೆಳಗಾವಿಯ ಗಣೇಶೋತ್ಸವಕ್ಕೆ ತನ್ನದೇಯಾದ ಐತಿಹಾಸಿಕ ಹಿನ್ನೆಲೆಯಿದೆ. ಪ್ರತಿ ವರ್ಷವೂ ಅತ್ಯಂತ ವಿಜೃಂಭಣೆಯಿಂದ ಇಲ್ಲಿ ಗಣೇಶೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ಕೊರೊನಾ ಎರಡು ವರ್ಷದ ಬಳಿಕ ಈ ವರ್ಷ ಹೆಚ್ಚಿನ …
Read More »ಬರೋಬ್ಬರಿ 47 ಸಾವಿರ ರೂ.ಗೆ ಮಾರಾಟವಾದ ಕುಂಬಳಕಾಯಿ.. ಅದೃಷ್ಟ ಎಂದರೆ ಇದೇನಾ?
ಸಾಮಾನ್ಯವಾಗಿ ಇಲ್ಲಿ ನಡೆಯುವ ಹರಾಜಿನಲ್ಲಿ ಟಗರು, ಹುಂಜ ಮುಂತಾದುವು 10 ಸಾವಿರಕ್ಕೂ ಅಧಿಕ ಬೆಲೆಗೆ ಮಾರಾಟವಾಗುತ್ತವೆ. ಆದರೆ ಇದಕ್ಕಿಂತಲೂ ದೊಡ್ಡ ಬೆಲೆಗೆ ಕುಂಬಳಕಾಯಿ ಮಾರಾಟವಾಗಿದ್ದು ಒಂದು ದಾಖಲೆಯಾಗಿದೆ. ಇಡುಕ್ಕಿ(ಕೇರಳ): ಒಂದು ಕುಂಬಳಕಾಯಿಯ ಬೆಲೆ 47 ಸಾವಿರ ರೂಪಾಯಿ ಅಂದರೆ ಯಾರೂ ನಂಬುವುದಿಲ್ಲ. ಆದರೂ ಇದು ಸತ್ಯ. ಕುಂಬಳಕಾಯಿಯೊಂದು ಬರೋಬ್ಬರಿ 47 ಸಾವಿರ ರೂಪಾಯಿಗೆ ಮಾರಾಟವಾಗಿದ್ದು ನಿಜ. ಇಡುಕ್ಕಿಯ ಗುಡ್ಡ ಪ್ರದೇಶದಲ್ಲಿರುವ ಚೆಮ್ಮನ್ನಾರ್ ಎಂಬಲ್ಲಿ ನಡೆದ ಓಣಂ ಹಬ್ಬದ ಹರಾಜಿನಲ್ಲಿ 5 …
Read More »ಜನಸ್ಪಂದನ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದೇನು? ಇಲ್ಲಿದೆ ಭಾಷಣದ ಹೈಲೈಟ್ಸ್
ಬೆಂಗಳೂರು ಗ್ರಾಮಾಂತರ: ಸರ್ಕಾರದ ಮೂರು ವರ್ಷಗಳ ಸಾಧನೆಯನ್ನು ಮುಂದಿಟ್ಟುಕೊಂಡು ಇಂದು ರಾಜ್ಯ ಸರ್ಕಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಜನಸ್ಪಂದನ ಸಮಾವೇಶವನ್ನು ಮಾಡುತ್ತಿದೆ. ಈ ನಡುವೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾತನಾಡುತ್ತ ಹಿಂದಿನ ಕಾಂಗ್ರೆಸ್ ಸರ್ಕಾರದ ವಿರುದ್ದ ಕಿಡಿಕಾರಿದರು. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ, ನಾವೇ ಮತ್ತೆ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಧಮ್ ಇದ್ರೆ ತಡೆಯಿರಿ ಅಂತ ಕಾಂಗ್ರೆಸ್‌ಗೆ ಸವಾಲ್ ಹಾಕಿದರು. …
Read More »