ನವದೆಹಲಿ: ಹೊಸ ಸೋವಾ ಆಂಡ್ರಾಯ್ಡ್ ಟ್ರೋಜನ್ ಮೂಲಕ ಬ್ಯಾಂಕ್ ಗ್ರಾಹಕರನ್ನು ಗುರಿಯಾಗಿಸಲಾಗುತ್ತಿದೆ ಅಂತ ಸಿಇಆರ್ಟಿ-ಇನ್ ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್) ಅಂತ ಹೇಳಿದೆ. ಗ್ರಾಹಕರನ್ನು ಗುರಿಯಾಗಿಸಿಕೊಂಡಿರುವ ಈ ಮೊಬೈಲ್ ಬ್ಯಾಂಕಿಂಗ್ ಟ್ರೋಜನ್ ವೈರಸ್ ಸೋವಾ ಒಂದು ರಾನ್ಸಮ್ವೇರ್ ಆಗಿದೆ ಎನ್ನಲಾಗಿದೆ. ಇದು ಆಂಡ್ರಾಯ್ಡ್ ಫೋನ್ ಫೈಲ್ಗಳನ್ನು ಹಾನಿಗೊಳಿಸುತ್ತದೆ ಮತ್ತು ಅಂತಿಮವಾಗಿ ಸಂಬಂಧಿಸಿದ ವ್ಯಕ್ತಿಯು ಆರ್ಥಿಕ ವಂಚನೆಗೆ ಬಲಿಯಾಗಬಹುದು ಎನ್ನಲಾಗಿದೆ ಈ ವೈರಸ್ ಒಮ್ಮೆ ಮೊಬೈಲ್ ಗೆ ಬಂದಾಗ, ಅದನ್ನು …
Read More »Yearly Archives: 2022
ರಾಜ್ಯದಲ್ಲಿ ‘ಬುಲ್ಡೋಜರ್’ ಕಾರ್ಯಾಚರಣೆ ಇಲ್ಲ: ಅರಗ ಜ್ಞಾನೇಂದ್ರ
ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಕೇಳಿ ಬರುತ್ತಿದ್ದ ಬುಲ್ಡೋಜರ್ ಕಾರ್ಯಾಚರಣೆ ಕುರಿತು ಗೃಹ ಸಚಿವ ಅರಗ ಜ್ಞಾನೇಂದ್ರ ಸ್ಪಷ್ಟನೆ ನೀಡಿದ್ದಾರೆ. ಕೋಮು ಗಲಭೆಗಳಲ್ಲಿ ಪಾಲ್ಗೊಂಡವರ ಅಕ್ರಮ ಆಸ್ತಿ ನೆಲಸಮಗೊಳಿಸುವ ಯಾವುದೇ ಪ್ರಸ್ತಾವನೆ ಇಲ್ಲ ಎಂದಿದ್ದಾರೆ. ವಿಧಾನ ಪರಿಷತ್ ನಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ರಾಜ್ಯದಲ್ಲಿ ಕೋಮು ಗಲಭೆಗಳ ತಡೆಗೆ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿ ಟಿವಿ ಅಳವಡಿಕೆ, ಗಲಭೆಕೋರರ ಗಡಿಪಾರು ಜೊತೆಗೆ ವಿವಿಧ …
Read More »ಬಿಎಸ್ ವೈ ವಿರುದ್ಧ ಸೂಕ್ತ ತನಿಖೆಯಾಗಲಿ;- ಸಂತೋಷ್ ಹೆಗ್ಡೆ
ದಾವಣಗೆರೆ: ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ವಿರುದ್ಧ ಬಿಡಿಎ ವಸತಿ ಯೋಜನೆ ಗುತ್ತಿಗೆ ನೀಡುವ ಸಲುವಾಗಿ ಕೋಟ್ಯಂತರ ರೂಪಾಯಿ ಲಂಚ ಪಡೆದಿದ್ದಾರೆ ಎಂಬ ಆರೋಪಿಸಿ ತನಿಖೆ ನಡೆಸಲು ನ್ಯಾಯಾಲಯವು ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿದೆ ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಆದೇಶಿಸಿದು ಒಳ್ಳೆಯ ವಿಚಾರ. ಹೊಸ ವಿಚಾರಣೆ ನಡೆಯಬೇಕು, ಸತ್ಯಾಂಶ ಹೊರ ಬರಬೇಕು. ಎಲ್ಲರೂ ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಇಂತಹ ಸಂದರ್ಭ ಬರುವುದಿಲ್ಲ. ತಪ್ಪು …
Read More »ಗೌತಮ್ ಅದಾನಿ ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿ: ವರದಿ
Gautam Adani ಫೋರ್ಬ್ಸ್ ರಿಯಲ್ ಟೈಮ್ ಬಿಲಿಯನೇರ್‌ಗಳ ಪಟ್ಟಿಯ ಪ್ರಕಾರ, ಅದಾನಿ ಅವರ ನಿವ್ವಳ ಮೌಲ್ಯವು ಸೆಪ್ಟೆಂಬರ್ 16, 2022 ರ ಹೊತ್ತಿಗೆ 155.7 ಬಿಲಿಯನ್ ಡಾಲರ್ ಆಗಿದೆಬಿಲಿಯನೇರ್ ಉದ್ಯಮಿ ಗೌತಮ್ ಅದಾನಿ (Gautam Adani) ಈಗ ವಿಶ್ವದ ಎರಡನೇ ಅತಿ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಫೋರ್ಬ್ಸ್ ರಿಯಲ್ ಟೈಮ್ ಬಿಲಿಯನೇರ್‌ಗಳ ಪಟ್ಟಿಯ ಪ್ರಕಾರ, ಅದಾನಿ ಅವರ ನಿವ್ವಳ ಮೌಲ್ಯವು ಸೆಪ್ಟೆಂಬರ್ 16, 2022 ರ ಹೊತ್ತಿಗೆ 155.7 ಬಿಲಿಯನ್ ಡಾಲರ್ ಆಗಿದೆ, …
Read More »ಆರ್ಥಿಕವಾಗಿ ಸಬಲರಾದ ದಲಿತ ಸಮುದಾಯದವರಿಗೆ ಮೀಸಲಾತಿ ನೀಡಬಾರದು: ಕೆ.ಎಸ್.ಈಶ್ವರಪ್ಪ
ಮೈಸೂರು, ಸೆ.16: ಶಿಕ್ಷಣ, ಉದ್ಯೋಗ ಮತ್ತು ರಾಜಕೀಯದಲ್ಲಿ ಕಡುಬಡವರಿಗೆ ಸಿಗಬೇಕಿದ್ದ ಮೀಸಲಾತಿ ಉಳ್ಳವರ ಪಾಲಾಗುತ್ತಿದ್ದು ಕೇಂದ್ರ ಸರಕಾರ ಕೂಡಲೇ ಶ್ರೀಮಂತರ ಮೀಸಲಾತಿಯನ್ನು ರದ್ದುಪಡಿಸಬೇಕು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದ್ದಾರೆ. ನಗರದ ಹೋಟೆಲ್ ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತ ಸಮುದಾಯದಲ್ಲಿ ಪ್ರಬಲರೇ ಮೀಸಲಾತಿ ಪ್ರಯೋಜನ ಪಡೆಯುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ನಂತರ ಅವರ ಮಗ ಪ್ರಿಯಾಂಕ್ ಖರ್ಗೆ ಮೀಸಲಾತಿ ಪ್ರಯೋಜನ ಪಡೆಯುತ್ತಿದ್ದಾರೆ. ಹಾಗಾಗಿ ಇಂಥವರಿಗೆ ಮೀಸಲಾತಿಯನ್ನು ನಿಲ್ಲಿಸಬೇಕು ಎಂದು …
Read More »ಸರ್ಕಾರಿ ಬಸ್ ನಲ್ಲಿ ಕೇರಳಕ್ಕೆ ಸಾಗಿಸುತ್ತಿದ್ದ 30 ಲಕ್ಷ ರೂ. ಕಾಳಧನ ವಶ: ಓರ್ವನ ಬಂಧನ
ಕಾಸರಗೋಡು:ಸರಕಾರಿ ಬಸ್ ನಲ್ಲಿ ಮಂಗಳೂರು ಭಾಗದಿಂದ ಕೇರಳಕ್ಕೆ ಸಾಗಿಸುತ್ತಿದ್ದ ದಾಖಲೆಗಳಿಲ್ಲದ 30 ಲಕ್ಷ ರೂ. ಗಳನ್ನು ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಮಹಾರಾಷ್ಟ್ರ ನಿವಾಸಿ ಯಶಾದೀಪ್ ಶಾರಾದ್ ಡಬೋಟೆ (21) ಎಂಬಾತನನ್ನು ಬಂಧಿಸಲಾಗಿದೆ. ಚಿನ್ನ ವ್ಯವಹಾರಕ್ಕೆ ಸಂಬಂಧಿಸಿದಂತೆ ಮಂಜೇರಿಗೆ ಕೊಂಡೊಯ್ಯುವ ಹಣ ಇದೆಂದು ಆರೋಪಿಯು ತಪ್ಪೊಪ್ಪಿಕೊಂಡಿದ್ದಾನೆ. ಶುಕ್ರವಾರ ಬೆಳಗ್ಗೆ ಮಂಜೇಶ್ವರ ಅಬಕಾರಿ ಚೆಕ್ ಪೋಸ್ಟ್ ನಲ್ಲಿ ಈ ಕಾರ್ಯಾಚರಣೆ ನಡೆದಿದೆ. ಅಬಕಾರಿ ಅಧಿಕಾರಿ ಸಜಿತ್ ಕೆ.ಎಸ್., ಪ್ರಿವೆಂಟಿವ್ ಆಫೀಸರ್ …
Read More »ಅಕ್ರಮ- ಸಕ್ರಮ ಅವಧಿ ಒಂದು ವರ್ಷ ವಿಸ್ತರಣೆ ಮಾಡಿದ ಸರ್ಕಾರ
ಬೆಂಗಳೂರು: ಸರಕಾರಿ ಭೂಮಿ ಸಾಗುವಳಿಯ ಅಕ್ರಮ- ಸಕ್ರಮ ಅರ್ಜಿ ಸಲ್ಲಿಕೆ ಅವಧಿಯನ್ನು ಮತ್ತೆ ಒಂದು ವರ್ಷಗಳ ಕಾಲ ವಿಸ್ತರಣೆ ಮಾಡುವ ಮಹತ್ವದ ತೀರ್ಮಾನವನ್ನು ರಾಜ್ಯ ಸರಕಾರ ತೆಗೆದುಕೊಂಡಿದೆ. ಇದಕ್ಕೆ ಸಂಬಂಧಪಟ್ಟಂತೆ ಕಂದಾಯ ಇಲಾಖೆ ತಿದ್ದುಪಡಿ ವಿಧೇಯಕವನ್ನು ಶುಕ್ರವಾರ ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ. 94 ಎ ತಿದ್ದುಪಡಿ ಮೂಲಕ ನಮೂನೆ 57ರಲ್ಲಿ ಅರ್ಜಿ ಸಲ್ಲಿಸಿ ಸರಕಾರಿ ಭೂಮಿಯಲ್ಲಿ ನಡೆಸುತ್ತಿದ್ದ ಅಕ್ರಮ ಸಾಗುವಾಳಿಯನ್ನು ಸಕ್ರಮಗೊಳಿಸಿಕೊಳ್ಳುವುದಕ್ಕೆ ಅವಕಾಶವಿತ್ತು. ಆದರೆ ಈ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ …
Read More »ಗಡಿ ವಿವಾದ ಕೆದಕಿದ ಮರಾಠಿ ಚಿತ್ರ “ಬಾಯ್ಸ್ 03” ಬಿಡುಗಡೆಗೆ ಬೆಳಗಾವಿಯಲ್ಲಿ ಬ್ರೇಕ್..
ಗಡಿ ವಿವಾದ ಕೆದಕಿದ ಮರಾಠಿ ಚಿತ್ರ ಬಾಯ್ಸ್ 03 ಬಿಡುಗಡೆಗೆ ಕನ್ನಡ ಸಂಘಟನೆಗಳ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಈ ಮರಾಠಿ ಚಲನಚಿತ್ರ ಬಿಡುಗಡೆಗೆ ಬೆಳಗಾವಿಯಲ್ಲಿ ಬ್ರೇಕ್ ಹಾಕಲಾಗಿದೆ. ಹೌದು ಮಹಾರಾಷ್ಟ್ರದಲ್ಲಿ ಮರಾಠಿ ಚಲನಚಿತ್ರ “ಬಾಯ್ಸ್ 03” ಚಿತ್ರ ಇವತ್ತು ಬಿಡುಗಡೆಯಾಗಿದೆ. ಈ ಚಿತ್ರವನ್ನು ಬೆಳಗಾವಿ ಮತ್ತು ಕರ್ನಾಟಕ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಬಿಡುಗಡೆ ಮಾಡಬಾರದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿತ್ತು. ಅಲ್ಲದೇ ನಗರ ಪೆÇಲೀಸ್ ಆಯುಕ್ತರಿಗೆ ಮನವಿ …
Read More »ಲಕ್ಷ್ಮೀ ಹೆಬ್ಬಾಳ್ಕರ್ ಅವರು ಬರೀ ಆಶ್ವಾಸನೆ ಕೊಟ್ಟುಕೊಂಡು ಹೋಗುತ್ತಿದ್ದಾರೆ., ಯಾವುದೇ ರೀತಿ ಕೆಲಸ ಆಗಿಲ್ಲ.: ಧನಂಜಯ್ ಜಾಧವ
ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಬರೀ ಆಶ್ವಾಸನೆ ಕೊಟ್ಟುಕೊಂಡು ಹೋಗುತ್ತಿದ್ದಾರೆ. ಎಲ್ಲಿ ಅನುದಾನ ಹಾಕುತ್ತೇನೆ ಎಂದು ಹೇಳಿದ್ದಾರೆ ಅಲ್ಲಿ ಯಾವುದೇ ರೀತಿ ಕೆಲಸ ಆಗಿಲ್ಲ. ಹೀಗಾಗಿ ಇದರಿಂದ ಜನರಿಗೆ ಬೇಜಾರಾಗಿದೆ. ಆದ್ದರಿಂದ ನೂರಕ್ಕೆ ನೂರರಷ್ಟು ಶಾಸಕರು ಬದಲಾವಣೆ ಆಗುವುದು ನಿಶ್ಚಿತ ಎಂದು ಗ್ರಾಮೀಣ ಮಂಡಳ ಅಧ್ಯಕ್ಷ ಧನಂಜಯ್ ಜಾಧವ ವಿಶ್ವಾಸ ವ್ಯಕ್ತಪಡಿಸಿದರು. ಶುಕ್ರವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಗ್ರಾಮೀಣ ಮಂಡಳ ಅಧ್ಯಕ್ಷ ಧನಂಜಯ್ ಜಾಧವ1200 ಕೋಟಿ …
Read More »ರಸ್ತೆ ದಾಟುವಾಗಲೇ 130 ಕಿ.ಮೀ ವೇಗದಲ್ಲಿ ಬಂದ ಕಾರು ಡಿಕ್ಕಿ: ಇಬ್ಬರು ಮಹಿಳಾ ಟೆಕ್ಕಿಗಳು ದುರ್ಮರಣ
ಚೆನ್ನೈ: ಇಬ್ಬರು ಮಹಿಳಾ ಟೆಕ್ಕಿಗಳು ರಸ್ತೆ ದಾಟುವಾಗ ತುಂಬಾ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ದುರಂತ ಸಾವಿಗೀಡಾಗಿರುವ ಹೃದಯವಿದ್ರಾವಕ ಘಟನೆ ಚೆನ್ನೈನ ಐಟಿ ಕಾರಿಡಾರ್ನಲ್ಲಿ ನಡೆದಿದೆ. ಎಸ್. ಲಾವಣ್ಯ ಮತ್ತು ಆರ್. ಲಕ್ಷ್ಮೀ ಮೃತ ದುರ್ದೈವಿಗಳು. ಇಬ್ಬರಿಗೂ 23 ವರ್ಷ ವಯಸ್ಸಾಗಿತ್ತು. ಚೆನ್ನೈ ಎಚ್ಸಿಎಲ್ ಸ್ಟೇಟ್ ಸ್ಟ್ರೀಟ್ ಸರ್ವೀಸ್ ಸಂಸ್ಥೆಯಲ್ಲಿ ವಿಶ್ಲೇಷಕರಾಗಿ ಕೆಲಸ ಮಾಡುತ್ತಿದ್ದರು. ಇಬ್ಬರು ಕೆಲಸ ಮುಗಿಸಿ ಬುಧವಾರ ರಾತ್ರಿ 11.30ಕ್ಕೆ ಮನೆಗೆ ಹಿಂದಿರುತ್ತಿದ್ದರು. ಈ …
Read More »