Breaking News

Yearly Archives: 2022

ಊಟ ಸಿಗದೆ ಪರದಾಟ; ತಟ್ಟೆ ಎಸೆದು ಆಕ್ರೋಶ

ಕಲಬುರಗಿ: ಇಲ್ಲಿನ ನೂತನ ವಿದ್ಯಾಲಯ ಮೈದಾನದಲ್ಲಿ ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವದ ಪ್ರಯುಕ್ತ ಕೆಕೆಆರ್‌ಡಿಬಿ ಮತ್ತು ಜಿಲ್ಲಾಡಳಿತದಿಂದ ಶನಿವಾರ ನಡೆ ಕಾರ್ಯಕ್ರಮಕ್ಕೆ ಜಿಲ್ಲೆಯ ವಿವಿಧೆಡೆಯಿಂದ ಬಂದ ಸಾವಿರಾರು ಜನರು ತಿಂಡಿ, ಊಟ ಸಿಗದೆ ಪರದಾಡಿದರು. ನಗರ ಸೇರಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಂದ ಸುಮಾರು 40 ಸಾವಿರ ಜನರು ಬಂದಿದ್ದರು. ಉಚಿತ ಬಸ್ ವ್ಯವಸ್ಥೆಯಿದ್ದ ಕಾರಣ ವಿದ್ಯಾರ್ಥಿಗಳು ಸೇರಿ ಬಿಜೆಪಿ ಕಾರ್ಯಕರ್ತರು, ವೃದ್ಧರು ಮಹಿಳೆಯರು ತಮ್ಮ ಮಕ್ಕಳೊಂದಿಗೆ ಬಂದಿದ್ದರು. ಕಾರ್ಯಕ್ರಮದಲ್ಲಿನ ಊಟದ …

Read More »

ಪತಿ ಜತೆ ಆಟೋದಲ್ಲಿ ಬಂದವಳು, ಗಂಡ ಬಾಡಿಗೆ ಕೊಡಲು ಚಿಲ್ಲರೆ ತರುವಷ್ಟರಲ್ಲಿ ಮಗನೊಂದಿಗೆ ನಾಪತ್ತೆ!; ಆಗಿದ್ದೇನು?

ಬೆಳಗಾವಿ: ಆಟೋದಲ್ಲಿ ಪತಿ ಜತೆಗೇ ಬಂದಿದ್ದ ಪತ್ನಿ, ಬಳಿಕ ಬಾಡಿಗೆ ಹಣ ಕೊಡಲು ಗಂಡ ಚಿಲ್ಲರೆ ತರಲು ಹೋಗಿ ಬರುವಷ್ಟರಲ್ಲಿ ಆಕೆ ಮಗನೊಂದಿಗೆ ಕಣ್ಮರೆಯಾಗಿದ್ದಾಳೆ. ಇಂಥದ್ದೊಂದು ಪ್ರಕರಣ ಬೆಳಗಾವಿ ಜಿಲ್ಲೆಯಲ್ಲಿ ಸಂಭವಿಸಿದೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ ಈ ಪ್ರಕರಣ ನಡೆದಿದ್ದು, ರುದ್ರವ್ವ ಬಸವರಾಜ್ ಬನ್ನೂರು (30) ಮತ್ತು ಆಕೆಯ ಪುತ್ರ ಶಿವಲಿಂಗಪ್ಪ ಬನ್ನೂರ (2) ನಾಪತ್ತೆಯಾದವರು. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ರುದ್ರವ್ವ ತನ್ನ ಎರಡು ವರ್ಷದ ಪುತ್ರನ ಜೊತೆಗೆ ಇಡಗುಂಡಿಯಲ್ಲಿನ …

Read More »

ಸ್ಪಂದನ ಸೂಪರ್ ಹಾಸ್ಪಿಟಲ್ ವತಿಯಿಂದ ಉಚಿತ ಆರೋಗ್ಯ ತಪಾಸಣೆ

ಇಂದು ದಿನಾಂಕ 17/09/2022 ರಂದು ಜ್ಯೋತಿ ನಗರ, ಗಣೇಶಪೂರ ಬೆಳಗಾವಿ, ಇಲ್ಲಿ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಳ ಹಾಗೂ ಸ್ಪಂದನ ಸುಪರ ಸ್ಪೆಶಾಲಿಸ್ಟ ಹಾಸ್ಪಿಟಲ್ ವತಿಯಿಂದ್ ಉಚಿತ್ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳಗಾವಿಯ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ. ಗೋವಿಂದ ಕಾರ್ಜೋಳ ಇವರ ಅಮೃತ ಹಸ್ತದಿಂದ ನೆರೆವೆರಿತು. ಕಾರ್ಯಕ್ರಮದಲ್ಲಿ ಬೆಳಗಾವಿಯ ಸಂಸದರಾದ ಶ್ರೀಮತಿ. …

Read More »

ಸರ್ಕಾರಿ ನೌಕರರಿಗೆ ಬಿಗ್ ಶಾಕ್

ಬೆಂಗಳೂರು: ರಾಜ್ಯ ಸರ್ಕಾರದ ಅನೇಕ ಇಲಾಖೆಗಳ ನೌಕರರ ಅಂತರ್ ಜಿಲ್ಲಾ ವರ್ಗಾವಣೆಗೆ ಇದ್ದ ಅವಕಾಶಕ್ಕೆ ಕತ್ತರಿ ಬಿದ್ದಿದೆ. ಕೆಲವು ಇಲಾಖೆಗಳ ಸಿ ಮತ್ತು ಡಿ ದರ್ಜೆಯ ನೌಕರರಿಗೆ ಕರ್ನಾಟಕ ನಾಗರೀಕ ಸೇವಾ ನಿಯಮಗಳ 16(ಎ) ರದ್ದುಗೊಳಿಸಲಾಗಿದ್ದು, ಇದರಿಂದಾಗಿ ನಿವೃತ್ತಿಯೊಳಗೆ ಬಯಸಿದ ಜಿಲ್ಲೆಗೆ ಅಥವಾ ಸ್ವಂತ ಜಿಲ್ಲೆಗೆ ವರ್ಗಾವಣೆ ಪಡೆಯುವ ಅವಕಾಶದಿಂದ ವಂಚಿತರಾಗುವಂತಾಗಿದೆ.   ಅಬಕಾರಿ, ಪೊಲೀಸ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಕಂದಾಯ ಇಲಾಖೆಗಳಲ್ಲಿನ ಸಿಬ್ಬಂದಿಗೆ ಅಂತರ ಜಿಲ್ಲಾ ವರ್ಗಾವಣೆಗೆ ಇದ್ದ …

Read More »

2A ಮೀಸಲಾತಿ ವಿಳಂಬ 5 ಸಾವಿರಕ್ಕೂ ಹೆಚ್ಚು ಜನ ಬೊಮ್ಮಾಯಿನಿವಾಸಕ್ಕೆ ಮುತ್ತಿಗೆ ಹಾಕುತ್ತೇವೆ: ರಮೇಶ್ ಗೌಡ ಪಾಟೀಲ್

  ಅಥಣಿ  :ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿ ನೀಡುವಂತೆ ಹಲವು ದಶಕಗಳ ಹೋರಾಟ ಇದಾಗಿದೆ, ಆದರೆ ಸರ್ಕಾರಗಳು ಭರವಸೆ ನೀಡುತ್ತಾ ಬಂದಿದೆ, ಇದನ್ನು ಖಂಡಿಸಿ ನಾವು ಬರುವ ದಿನಾಂಕ ಇಪ್ಪತ್ತರಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ನಿವಾಸಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಅಥಣಿ ತಾಲೂಕು ಪಂಚಮಸಾಲಿ ಸಂಘಟನೆಯ ಅಧ್ಯಕ್ಷರಾದ ರಮೇಶ್ ಗೌಡ ಪಾಟೀಲ್ ಅವರು ಹೇಳಿದರು. ಅವರು ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಾ, ಪಂಚಮಸಾಲಿ ಸಮಾಜ …

Read More »

ಮಹಿಳೆಗೆ ಮಂಕುಬೂದಿ ಎರಚಿ ಚಿನ್ನಾಭರಣ ಎಗರಿಸಿ ಪರಾರಿಯಾದ ಕಿರಾತಕರು..!!

ದಾರಿಯಲ್ಲಿ ಹೋಗುತ್ತಿದ್ದ ಮಹಿಳೆಯೊಬ್ಬಳಿಗೆ ಮಂಕುಬೂದಿ ಎರಚಿದ ಕಿರಾತಕರು ಮಹಿಳೆಯಿಂದ ಬಂಗಾರದ ಮಾಗಲ್ಯದ ಸರ ಸೇರಿದಂತೆ ಬಂಗಾರದ ಆಭರಣಗಳನ್ನು ಎಗರಿಸಿ ಪರಾರಿಯಾದ ಘಟನೆ ಬೆಳಗಾವಿಯ ಆಜಾದ್‍ಗಲ್ಲಿಯಲ್ಲಿ ನಡೆದಿದೆ. ಇಂದು ಶನಿವಾರ ಮಧ್ಯಾಹ್ನದ ವೇಳೆ ಆಜಾದ್‍ಗಲ್ಲಿಯಲ್ಲಿ ಮಹಿಳೆಯೊಬ್ಬಳು ಹೋಗುತ್ತಿದ್ದಳು ಈ ವೇಳೆ ಮಹಿಳೆಯನ್ನು ಹಸಿವೆಯಾಗಿದೆ ತಿನ್ನಲು ನಹಣ ಕೊಡುವಂತೆ ಕೇಳಿದ್ದಾರೆ. ಈ ವೇಳೆ ಹಣ ನೀಡಿದ ಮಹಿಳೆಗೆ ಮೈ ಮೇಲೆ ಬಂಗಾರದ ಆಭರಣಗಳನ್ನು ಹಾಕಿಕೊಳ್ಳಬೇಡ. ಕಳ್ಳರು ಕದ್ದುಕೊಂಡು ಹೋಗಬಹುದು. ಹಾಗಾಗಿ ಅವುಗಳನ್ನು ತದುಕೊಡು …

Read More »

ಕೆಎಂಎಫ್ ಕೇಂದ್ರ ಕಛೇರಿಗೆ ಭೇಟಿ ನೀಡಿದ ಆಂಧ್ರಪ್ರದೇಶದ ಸಚಿವೆ ಉಷಾ ಶ್ರೀಚರಣ

  *ಬೆಂಗಳೂರು*: ಆಂಧ್ರ ಪ್ರದೇಶದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಷಾ ಶ್ರೀಚರಣ ಅವರು ಶನಿವಾರದಂದು ಇಲ್ಲಿಯ ಕೆಎಮ್‍ಎಫ್ ಕೇಂದ್ರ ಕಚೇರಿಗೆ ಭೇಟಿ ನೀಡಿ ಚರ್ಚೆ ನಡೆಸಿದರು. ಕೆಎಮ್‍ಎಫ್‍ನ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ ಅವರು ಸಚಿವರನ್ನು ಸ್ವಾಗತಿಸಿದರು. ಆಂಧ್ರಪ್ರದೇಶ ಸರ್ಕಾರದ ಪ್ರತಿಷ್ಠಿತ ಯೋಜನೆಯಾದ ವಾಯ್‍ಎಸ್‍ಆರ್ ಸಂಪೂರ್ಣ ಪೋಷಣ ಯೋಜನೆಯು ನವೆಂಬರ್-2016 ರಲ್ಲಿ 13 ಲಕ್ಷ ಲೀಟರ್ ಹಾಲಿನೊಂದಿಗೆ ಆರಂಭಗೊಂಡು ಹಂತ-ಹಂತವಾಗಿ 13 ಜಿಲ್ಲೆಗಳನ್ನು ಒಳಗೊಂಡ 55,600 ಅಂಗನವಾಡಿ ಕೇಂದ್ರಗಳಿಂದ …

Read More »

ಪ್ರಕೃತಿ ಪ್ರಲಾಪ: ಶೈಕ್ಷಣಿಕ ವ್ಯವಸ್ಥೆಗೆ ಸಂಕಷ್ಟ

ಬೆಳಗಾವಿ: ಈ ವರ್ಷದ ಅತಿಯಾದ ಮಳೆ ಮತ್ತು ನದಿಗಳ ಪ್ರವಾಹ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಸಾಕಷ್ಟು ಹಾನಿ ಉಂಟುಮಾಡಿದೆ. ಕೃಷಿ ಕ್ಷೇತ್ರದ ಜೊತೆಗೆ ಮೂಲಭೂತ ಸೌಕರ್ಯಗಳಿಗೂ ಇದರ ಪರಿಣಾಮ ಬೀರಿದೆ. ಶೈಕ್ಷಣಿಕ ಕ್ಷೇತ್ರ ಸಹ ಇದರಿಂದ ಹೊರತಾಗಿಲ್ಲ.   ಕಳೆದ ಮೂರು ತಿಂಗಳಿಂದ ಜಿಲ್ಲೆಯಲ್ಲಿ ಸುರಿದ ಮಳೆ ಹಾಗೂ ನದಿಗಳ ಪ್ರವಾಹದಿಂದ ಶಾಲೆಗಳ ಸ್ಥಿತಿ ಶೋಚನೀಯವಾಗಿದೆ. ಮೊದಲೇ ಅನುದಾನದ ಕೊರತೆಯಿಂದ ಬಳಲುತ್ತಿರುವ ಶಾಲೆಗಳು ಈಗ ಕೊಠಡಿಗಳ ದುರಸ್ತಿ ವಿಷಯದಲ್ಲಿ ಮತ್ತಷ್ಟು ಸಮಸ್ಯೆಗೆ …

Read More »

ಈಗಲೇ ಹೊಸದಾಗಿ ಕರ್ನಾಟಕ ಪಬ್ಲಿಕ್‌ ಶಾಲೆಗಳನ್ನು ಆರಂಭಿಸುವುದಿಲ್ಲ: ಬಿ.ಸಿ.ನಾಗೇಶ್ ಸ್ಪಷ್ಟನೆ

ಬೆಳಗಾವಿ: ರಾಜ್ಯದಲ್ಲಿರುವ ಕರ್ನಾಟಕ ಪಬ್ಲಿಕ್‌ ಶಾಲೆ (ಕೆಪಿಎಸ್‌)ಗಳಿಗೆ ಆಂಗ್ಲ ಮಾಧ್ಯಮ ಶಿಕ್ಷಕರನ್ನು ನೇಮಿಸುವವರೆಗೆ ಹೊಸದಾಗಿ ಕೆಪಿಎಸ್‌ ಹಾಗೂ ಸರ್ಕಾರಿ ಇಂಗ್ಲಿಷ್‌ ಮಾಧ್ಯಮ ಶಾಲೆ ಆರಂಭಿಸುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ ಸ್ಪಷ್ಟಪಡಿಸಿದರು.   ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸಧ್ಯ 276 ಕೆಪಿಎಸ್‌ಗಳಿವೆ. ಮತ್ತೆ ತ್ವರಿತವಾಗಿ ಕೆ‍ಪಿಎಸ್‌ ಹಾಗೂ ಆಂಗ್ಲ ಮಾಧ್ಯಮ ಶಾಲೆ ಆರಂಭಿಸಿದರೆ, ಭಾಷಾ ಶಿಕ್ಷಕರ ಕೊರತೆ ಎದುರಾಗುತ್ತದೆ. ಅಂತಹ ಪ್ರಯತ್ನಕ್ಕೆ ಮಂದಾಗುವುದಿಲ್ಲ. …

Read More »

58 R.T.O.ಸೇವೆಗಳು ಆನ್‌ಲೈನ್‌; ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಆದೇಶ

ನವದೆಹಲಿ: ಡ್ರೈವಿಂಗ್‌ ಲೈಸೆನ್ಸ್‌, ವಾಹನ ನೋಂದಣಿ ಸೇರಿದಂತೆ ಸಾರಿಗೆ ಇಲಾಖೆಯ 58 ಸೇವೆಗಳು ಇನ್ನು ಆನ್‌ಲೈನ್‌ನಲ್ಲಿ ಲಭ್ಯವಾಗಲಿವೆ. ಇಂಥ ಸೇವೆಗಳನ್ನು ಪಡೆಯಲು ಆಧಾರ್‌ ಸಂಖ್ಯೆಯನ್ನು ನೀಡುವ ಮೂಲಕ ಪಡೆಯಬಹುದು. ಆದರೆ, ಆಧಾರ್‌ ಸಂಖ್ಯೆಯನ್ನು ನೀಡುವುದು ಕೇವಲ ಆಯ್ಕೆಯ ವಿಚಾರವಾಗಲಿದೆ.   ಈ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಶನಿವಾರ ಘೋಷಣೆ ಮಾಡಿದೆ. ಇಂಥ ಕ್ರಮದಿಂದ ದೇಶದ ನಾಗರಿಕರಿಗೆ ಕ್ಷಿಪ್ರವಾಗಿ ವಾಹನ ನೋಂದಣಿ, ಮಾಲೀಕತ್ವ ವರ್ಗಾವಣೆ, ಡ್ರೈವಿಂಗ್‌ ಲೈಸೆನ್ಸ್‌, …

Read More »