Breaking News

Yearly Archives: 2022

ಪ್ರತಿ ಶನಿವಾರ ದಂತೆ ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ

ಗೋಕಾಕ : ಸದ್ದಿಲ್ಲದೆ, ಯಾವುದೇ ರೀತಿಯ ಪ್ರಚಾರ ಬಯಸದೆ ನಿಸ್ವಾರ್ಥ ಸೇವೆಯಿಂದ ಜನತೆಯ ಮನದಲ್ಲಿ ಮನೆ ಮಾಡಿದ್ದಾರೆ ಸಾಹುಕಾರ್ ಮನೆತನದ ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಚೇರಮನ್ ರಾದ ಸಂತೋಷ ಜಾರಕಿಹೊಳಿ. ಹೌದು ಸಂತೋಷ ಜಾರಕಿಹೊಳಿ ಅವರು ಸಾಕಷ್ಟು ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು ಅನೇಕ ಸಾಮಾಜಿಕ ಕಾರ್ಯಗಳನ್ನು ಸದ್ದಿಲ್ಲದೆ ಮಾಡಿದ್ದಾರೆ. ಇಂದು ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ …

Read More »

ಗೃಹ, ವಾಹನ ಸಾಲ ಬಡ್ಡಿದರ ಮತ್ತಷ್ಟು ಹೆಚ್ಚಳ: ರೆಪೋ ದರ ಮತ್ತೆ ಶೇ.0.50ರಷ್ಟು ಹೆಚ್ಚಳ

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಶುಕ್ರವಾರ (ಸೆಪ್ಟೆಂಬರ್ 30) ಸತತ ನಾಲ್ಕನೇ ಬಾರಿಗೆ ಶೇ.05ರಷ್ಟು ರೆಪೋ ದರವನ್ನು ತಕ್ಷಣವೇ ಜಾರಿಗೆ ಬರುವಂತೆ ಹೆಚ್ಚಳ ಮಾಡಿದ್ದು, ಇದರೊಂದಿಗೆ ರೆಪೋ ದರ ಶೇ.5.9ಕ್ಕೆ ಏರಿಕೆಯಾದಂತಾಗಿದೆ.   ಪ್ರಸಕ್ತ ಸಾಲಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ನಾಲ್ಕನೇ ಬಾರಿಗೆ ರೆಪೋ ದರ ಹೆಚ್ಚಳ ಮಾಡಿದಂತಾಗಿದೆ. ರೆಪೋ ದರ ಹೆಚ್ಚಳದಿಂದ ಗೃಹ, ವಾಹನ ಸಾಲದ ಬಡ್ಡಿದರ ಮತ್ತಷ್ಟು ಏರಿಕೆಯಾಗಿದೆ. ಕೋವಿಡ್ ಬಳಿಕ ಆರ್ ಬಿಐ ಮೇ ತಿಂಗಳಿನಲ್ಲಿ ರೆಪೋ …

Read More »

ನಾನು ಆಪ್‌ ಬೆಂಬಲಿಗ ಅಲ್ಲ; ಕಟ್ಟಾ ಬಿಜೆಪಿಗ: ಅಟೋ ಚಾಲಕ ವಿಕ್ರಂ

ಅಹಮದಾಬಾದ್‌: ಆಮ್‌ ಆದ್ಮಿ ಪಕ್ಷದ ಸಂಚಾಲಕ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಮತ್ತು ಇತರ ಮುಖಂಡರಿಗೆ ಭೋಜನ ಕೂಟ ಏರ್ಪಡಿಸಿದ್ದ ಗುಜರಾತ್‌ನ ಅಟೋ ಚಾಲಕ ವಿಕ್ರಂ ದಂತಾನಿ ಈಗ ತಾವು ಬಿಜೆಪಿಯ ಬೆಂಬಲಿಗ ಎಂದು ಹೇಳಿಕೊಂಡಿದ್ದಾರೆ.   “ನನಗೆ ಮತ ಹಾಕಲು ಅವಕಾಶ ಸಿಕ್ಕಿದ ಮೊದಲ ದಿನದಿಂದಲೂ ಬಿಜೆಪಿಯ ಬೆಂಬಲಿಗನೇ ಆಗಿದ್ದೇನೆ’ ಎಂದು ಅವರು ಹೇಳಿಕೊಂಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಆಟೋ ರಿಕ್ಷಾ ಒಕ್ಕೂಟದ ಸೂಚನೆಯ …

Read More »

ಅ.3ರಿಂದ ರಾಜ್ಯ ಹೈಕೋರ್ಟ್ ಗೆ 5 ದಿನಗಳ ದಸರಾ ರಜೆ

ಬೆಂಗಳೂರು: ರಾಜ್ಯ ಹೈಕೋರ್ಟ್‌ಗೆ ಅ.3ರಿಂದ 7ರವರೆಗೆ ದಸರಾ ರಜೆ ಘೋಷಿಸಲಾಗಿದೆ. ಅ.1 ಮತ್ತು 2 ಶನಿವಾರ ಹಾಗೂ ಭಾನುವಾರ ಅದೇ ರೀತಿ ಅ.8 ಮತ್ತು 9 ಕ್ರಮವಾಗಿ ಶನಿವಾರ ಹಾಗೂ ಭಾನುವಾರ ರಜೆ ಇರುವುದರಿಂದ ಒಟ್ಟು 9 ದಿನಗಳ ಕಾಲ ಹೈಕೋರ್ಟ್‌ನ ಬೆಂಗಳೂರು ಪ್ರಧಾನಪೀಠ, ಧಾರವಾಡ ಮತ್ತು ಕಲಬುರಗಿ ಪೀಠಗಳಿಗೆ ರಜೆ ಇರಲಿದೆ.   ತುರ್ತು ಪ್ರಕರಣಗಳ ವಿಚಾರಣೆಗೆ ಅ.6ರಂದು ಬೆಂಗಳೂರು ಪ್ರಧಾನ ಪೀಠದಲ್ಲಿ ರಜಾ ಕಾಲದ ವಿಶೇಷ ಪೀಠಗಳ ಕಲಾಪ …

Read More »

ರಿವರ್ಸ್ ಬ್ಯಾಂಕ್ ಆಫ್ ಇಂಡಿಯಾ !:ಸೂರತ್‌ನಲ್ಲಿ 25 ಕೋಟಿ ರೂ. ನಕಲಿ ನೋಟುಗಳ ವಶ

ಸೂರತ್: ಗುಜರಾತ್‌ನ ಸೂರತ್ ಜಿಲ್ಲೆಯಲ್ಲಿ ಆಂಬ್ಯುಲೆನ್ಸ್‌ನಿಂದ 25.80 ಕೋಟಿ ರೂಪಾಯಿ ಮುಖಬೆಲೆಯ ನಕಲಿ ನೋಟುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ. ಚಲನಚಿತ್ರವೊಂದರಲ್ಲಿ ಬಳಸಲು ಮುಂಬೈಗೆ ನಕಲಿ ನೋಟುಗಳನ್ನು ಸಾಗಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.   ಕಮ್ರೇಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೊಡ್ಡ ಪ್ರಮಾಣದ ನಕಲಿ ನೋಟುಗಳನ್ನು (ಎಫ್‌ಐಸಿಎನ್) ಸಾಗಿಸುವ ಆಂಬ್ಯುಲೆನ್ಸ್ ಸಾಗಲಿದೆ ಎಂಬ ಸುಳಿವಿನ ಮೇರೆಗೆ ಸ್ಥಳೀಯ ಪೊಲೀಸರು ಚೆಕ್‌ಪೋಸ್ಟ್‌ನಲ್ಲಿ ವಾಹನವನ್ನು ತಡೆದರು ಮತ್ತು ಗುರುವಾರ ಆರು ಬ್ಯಾಗ್‌ಗಳಲ್ಲಿ …

Read More »

ಖರ್ಗೆ ಅಧ್ಯಕ್ಷರಾದರೂ ರಿಮೋಟ್‌ ಕಂಟ್ರೋಲ್‌ನಲ್ಲೇ ಇರಬೇಕು: ಜೋಶಿ

ವಿಜಯಪುರ: ಎಐಸಿಸಿ ಅಧ್ಯಕ್ಷರು ಯಾರೇ ಆದರೂ ರಿಮೋಟ್‌ ಕಂಟ್ರೋಲ್‌ನಲ್ಲೇ ಕೆಲಸ ಮಾಡಬೇಕು. ಹೀಗಾಗಿ ರಾಜ್ಯದವರಾದ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದರೂ ಆ ಸ್ಥಾನಕ್ಕೆ ಅರ್ಥ, ಘನೆತೆಯೇ ಬರುವುದಿಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಹೇಳಿದರು.   ನಗರದ ಸೈನಿಕ ಶಾಲಾ ಆವರಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಕಾಂಗ್ರೆಸ್‌ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧೆ ಮಾಡಿದರೂ ಯಾವುದೇ …

Read More »

ರಾಜ್ಯದ 9 ಚೆಕ್‌ಪೋಸ್ಟ್‌ಗಳ ಮೇಲೆ ಲೋಕಾಯುಕ್ತ ದಾಳಿ

ಬೆಂಗಳೂರು: ಭ್ರಷ್ಟಾಚಾರದ ವಿರುದ್ಧ ಸಮರ ಸಾರಲು ಸಿದ್ಧತೆ ಮಾಡಿಕೊಂಡಿದ್ದ ಲೋಕಾಯುಕ್ತ ಪೊಲೀಸರು ರಾಜ್ಯದ 9 ಸಾರಿಗೆ ಇಲಾಖೆಯ ಚೆಕ್‌ಪೋಸ್ಟ್‌ಗಳ ಮೇಲೆ ಶುಕ್ರವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿ ಶಾಕ್‌ ಕೊಟ್ಟಿದ್ದಾರೆ.   ರಾಜ್ಯದ 9 ಚೆಕ್‌ಪೋಸ್ಟ್‌ಗಳ ಮೇಲೆ ಶುಕ್ರವಾರ ಮುಂಜಾನೆ 4.30ಕ್ಕೆ ಏಕಕಾಲದಲ್ಲಿ ನೂರಾರು ಲೋಕಾಯಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಈ ಪೈಕಿ 7 ಚೆಕ್‌ಪೋಸ್ಟ್‌ಗಳಲ್ಲಿ ಅಕ್ರಮವಾಗಿ ಸಾರಿಗೆ ಇಲಾಖೆ ಸಿಬ್ಬಂದಿ ಸಂಗ್ರಹಿಸಿಟ್ಟಿದ್ದ ಕಂತೆ-ಕಂತೆ ನೋಟುಗಳನ್ನು ಕಂಡು ಲೋಕಾ ಪೊಲೀಸರೇ ದಂಗಾಗಿದ್ದಾರೆ. ಇನ್ನು …

Read More »

ವಿಶ್ವ ಹಿರಿಯ ನಾಗರಿಕರ ದಿನಾಚರಣೆ,6 ಸಾಧಕರು, ಒಂದು ಸಂಸ್ಥೆಗೆ ಪ್ರಶಸ್ತಿ

ಬೆಂಗಳೂರು: ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ತೋರಿದ 6 ಮಂದಿ ಹಿರಿಯ ನಾಗರಿಕರಿಗೆ ಮತ್ತು ಒಂದು ಸಂಸ್ಥೆಗೆ ಶನಿವಾರ (ಅ.1) ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನ ಹಾಗೂ ಹಿರಿಯ ನಾಗರಿಕ ಸಬಲೀಕರಣ ಸಚಿವ ಹಾಲಪ್ಪ ಆಚಾರ್‌ ಅವರು, ಶಿಕ್ಷಣ, ಸಾಹಿತ್ಯ, ಕಲೆ, ಸಮಾಜಸೇವೆ, ಕ್ರೀಡೆ ಮತ್ತು ಕಾನೂನು ಸಹಿತ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಕೊಡುಗೆ ನೀಡುತ್ತಾ ಬಂದಿರುವ …

Read More »

ದೇಶಕ್ಕೆ 5ಜಿ ಪ್ರವೇಶ; 4ಜಿ ಗಿಂತ 10 ಪಟ್ಟು ವೇಗ.

ಅ.1ರಿಂದ ಭಾರತದಲ್ಲಿ 5ಜಿ ಸೇವೆ ಆರಂಭವಾಗುತ್ತಿದೆ. ದೇಶದಲ್ಲಿ ಡಿಜಿಟಲ್‌ ರೂಪಾಂತರ ಮತ್ತು ಸಂಪರ್ಕವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ 5ಜಿ ಸೇವೆ ಸಹಕಾರಿಯಾಗಿದೆ. ಈಗಾಗಲೇ 5ಜಿ ಸ್ಮಾರ್ಟ್‌ ಮೊಬೈಲ್‌ ಪೋನ್‌ ಹೊಂದಿರುವ ದೇಶದ 100 ಮಿಲಿಯನ್‌ ಜನರು 5ಜಿ ಸೇವೆಯ ಲಭ್ಯತೆಗಾಗಿ ಕಾಯುತ್ತಿದ್ದಾರೆ. 5ಜಿ ಸೇವೆಯಿಂದ ಇಂಟರ್ನೆಟ್‌ ವೇಗ ಹೆಚ್ಚುವ ಜತೆಗೆ ಹಲವಾರು ಉಪಯೋಗಗಳ ಬಗ್ಗೆ ವಿಸ್ತೃತ ಮಾಹಿತಿ ಇಲ್ಲಿದೆ. 4ಜಿ ಗಿಂತ 10 ಪಟ್ಟು ವೇಗ: ಪ್ರಸ್ತುತ 4ಜಿ …

Read More »

ಕೋವಿಡ್ ನಂತರ ಬಲಿಷ್ಠ ಭಾರತ ನಿರ್ಮಾಣವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ವಿಜಯಪುರ : ಕೋವಿಡ್ ನಂತರದ ಭಾರತಕ್ಕೆ ವಿಶ್ವದಲ್ಲೇ ವಿಶೇಷ ಸ್ಥಾನ, ವಿಶೇಷ ಗುರುತಿಸುವಿಕೆ ಆರಂಭಗೊಂಡಿದೆ. 21ನೇ ಶತಮಾನದಲ್ಲಿ ಬಲಿಷ್ಠ ಭಾರತ ಕಟ್ಟುವ ಕನಸು ಪ್ರಧಾನಿ ನರೇಂದ್ರ ಮೋದಿ ಅವರಿಂದ ನನಸಾಗಿದೆ. ಯುಎನ್ ಸಾಮಾನ್ಯ ಸಭೆಯಲ್ಲಿ ಭಾರತದ ಪ್ರಾತಿನಿಧ್ಯವಿಲ್ಲದೇ ಯಾವ ಸಭೆಗಳೂ ನಡೆಯುವುದಿಲ್ಲ. ಅಷ್ಟರ ಮಟ್ಟಿಗೆ ಭಾರತ ವಿಶ್ವಕ್ಕೆ ಅನಿವಾರ್ಯ ಎನಿಸಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ಶುಕ್ರವಾರ ನಗರದ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಲೋಕಾರ್ಪಣೆ …

Read More »