ಗಜೇಂದ್ರಗಡ: ಡಿನೋಟಿಫಿಕೇಷನ್ ವಿಚಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಚುನಾವಣೆಗೂ ಮುನ್ನವೇ ಜೈಲು ಸೇರಲಿದ್ದಾರೆ. ಆಗ ಕಾಂಗ್ರೆಸ್ ಎರಡು ಹೋಳಾಗುತ್ತದೆ. ಒಂದು ಸಿದ್ದರಾಮಯ್ಯ ಪಾರ್ಟಿ, ಮತ್ತೊಂದು ಡಿ.ಕೆ.ಶಿವಕುಮಾರ್ ಪಾರ್ಟಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ ಕುಮಾರ್ ಕಟೀಲ್ ಭವಿಷ್ಯ ನುಡಿದರು. ಪಟ್ಟಣದ ಶಾಸಕರ ನಿವಾಸದ ಆವರಣದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಂಕಲ್ಪ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಈಗಾಗಲೇ ಸರ್ಕಾರಿ ಸ್ವತ್ತನ್ನು ಡಿನೋಟಿಫಿಕೇಶನ್ ಮಾಡಿ ಪ್ರಭಾವಿ ಬಿಲ್ಡರ್‌ಗಳಿಗೆ ಅನುಕೂಲ ಮಾಡಿಕೊಡಲು ಅಧಿಕಾರ …
Read More »Yearly Archives: 2022
ಶ್ಮಶಾನ ಕಾರ್ಮಿಕರ ಮಕ್ಕಳಿಗೆ ಪ್ರತಿಷ್ಠಿತ ಶಾಲೆಗಳಲ್ಲಿ ಪ್ರವೇಶಕ್ಕೆ ಕ್ರಮ: ಕೋಟ
ಬೆಂಗಳೂರು: ದುರ್ಬಲ ವರ್ಗದ ಮಕ್ಕಳನ್ನು ಪ್ರತಿಷ್ಠಿತ ಶಾಲೆಗೆ ಸೇರಿಸುವ ಇಲಾಖೆಯ ಯೋಜನೆಯ ವ್ಯಾಪ್ತಿಗೆ ಶ್ಮಶಾನ ಕಾರ್ಮಿಕರ ಮಕ್ಕಳನ್ನು ತರಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಶ್ಮಶಾನ ಕಾರ್ಮಿಕರಿಗೆ ಸೌಲಭ್ಯ ಒದಗಿಸುವ ಸಂಬಂಧ ಬುಧವಾರ ವಿಧಾನಸೌಧದಲ್ಲಿ ಸಭೆ ನಡೆಸಿದ ಸಚಿವರು, ಸಮಾಜ ಕಲ್ಯಾಣ ಇಲಾಖೆ ಯೋಜನೆಯಾಗಿರುವ ದುರ್ಬಲರ ಮಕ್ಕಳನ್ನು ಪ್ರತಿಷ್ಠಿತ ಶಾಲೆಗೆ ಸೇರಿಸುವ ಯೋಜನೆ ವ್ಯಾಪ್ತಿಗೆ ಶ್ಮಶಾನ ಕಾರ್ಮಿಕರ ಮಕ್ಕಳಿಗೆ ಆದ್ಯತೆ ಮೇಲೆ ಪ್ರವೇಶ ಕಲ್ಪಿಸಲಾಗುವುದು ಎಂದರು. …
Read More »ಯಶಸ್ವಿನಿ ಯೋಜನೆ ಮರು ಜಾರಿ: ನವೆಂಬರ್ 1ರಿಂದ ನೋಂದಣಿ ಪ್ರಾರಂಭ, ಮಾರ್ಗಸೂಚಿ ನಿಗದಿ
ಬೆಂಗಳೂರು : ಮುಖ್ಯಮಂತ್ರಿಗಳು 2022-23ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದಂತೆ ಯಶಸ್ವಿನಿ ಯೋಜನೆಯನ್ನು ಪರಿಷ್ಕರಿಸಿ ಮರು ಜಾರಿ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ನವೆಂಬರ್ 1 ರಿಂದ ಸದಸ್ಯರ ನೋಂದಣಿ ಪ್ರಾರಂಭವಾಗಲಿದೆ. ಈ ಕುರಿತು ಇಂದು ಸರ್ಕಾರಿ ಆದೇಶ ಹೊರಡಿಸಲಾಗಿದೆ. ಗ್ರಾಮೀಣ ಪ್ರದೇಶದ ಸಹಕಾರಿ ಸಂಘಗಳ ಸದಸ್ಯರಿಗೆ ನಾಲ್ಕು ಜನರ ಕುಟುಂಬಕ್ಕೆ ತಲಾ 500 ರೂ. ಹಾಗೂ ನಗರ ಪ್ರದೇಶದ ಸಹಕಾರಿಗಳಿಗೆ 1000 ರೂ. ವಂತಿಗೆ ನಿಗದಿ ಪಡಿಸಲಾಗಿದೆ. ನಾಲ್ಕು ಮಂದಿಗಿಂತ …
Read More »ಮುಂದುವರಿದ ಅಹೋರಾತ್ರಿ ಧರಣಿ; 5500 ರೂ. ದರ ನಿಗದಿಗೆ ಒತ್ತಾಯ
ಮುಂದುವರಿದ ಅಹೋರಾತ್ರಿ ಧರಣಿ; 5500 ರೂ. ದರ ನಿಗದಿಗೆ ಒತ್ತಾಯ ಬೆಳಗಾವಿ: ಪ್ರತಿ ಟನ್ ಕಬ್ಬಿಗೆ 5500 ರೂ. ದರ ನಿಗದಿ ಮಾಡುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಅಹೋರಾತ್ರಿ ಧರಣಿ ಮಂಗಳವಾರ ಎರಡನೇ ದಿನವೂ ಮುಂದುವರಿದಿದ್ದು, ಪೊಲೀಸರ ಮನವೊಲಿಕೆಗೂ ಬಗ್ಗದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿಯೇ ಠಿಕಾಣಿ ಹೂಡಿದ್ದಾರೆ. ಬೆಂಗಳೂರಿನಲ್ಲಿ ಸಕ್ಕರೆ ಸಚಿವರು ಸಭೆ ನಡೆಸಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಅಲ್ಲಿಯವರೆಗೆ ಪ್ರತಿಭಟನೆ ಹಿಂಪಡೆಯುವಂತೆ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ರವೀಂದ್ರ …
Read More »ಹಿರಣ್ಯಕೇಶಿ ಹಂಗಾಮಿಗೆ ಚಾಲನೆ; 14 ಲಕ್ಷ ಮೆ.ಟನ್ ಕಬ್ಬು ನುರಿಸುವ ಗುರಿ
ಹುಕ್ಕೇರಿ: ಸುಮಾರು 7 ದಶಕಗಳ ಹಿಂದೆ ರೈತರ ಬದುಕು ಕಟ್ಟಿಕೊಡುವ ನಿಟ್ಟಿನಲ್ಲಿ ದೇಶದಲ್ಲಿ ಪ್ರಥಮವಾಗಿ ಕಾರ್ಖಾನೆಗಳ ಪ್ರಾರಂಭದ ಹಂತದಲ್ಲಿ ದಿ| ಅಪ್ಪಣಗೌಡ ಪಾಟೀಲರ ನೇತೃತ್ವದಲ್ಲಿ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆಯು ಸ್ಥಾಪನೆಯಾಗಿ ರೈತರ ಬಾಳಿಗೆ ವರದಾನವಾಗಿರುವುದು ನಮ್ಮೆಲ್ಲರ ಭಾಗ್ಯ ಎಂದು ನಿಡಸೋಸಿ ಸಿದ್ದ ಸಂಸ್ಥಾನಮಠದ ಪಂಚಮಶಿವಲಿಂಗೇಶ್ವರ ಸ್ವಾಮಿಗಳು ಹೇಳಿದರು. ಮಂಗಳವಾರ ಸಂಕೇಶ್ವರದ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆಯ 62ನೇ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ನಮ್ಮೆಲ್ಲರ ಆರ್ಥಿಕ …
Read More »ಹತ್ತು ವರ್ಷ ಪೂರೈಸಿದ ಆಧಾರ್ ನವೀಕರಣಕ್ಕೆ ಸೂಚನೆ
ಹೊಸದಿಲ್ಲಿ: ನೀವು ಆಧಾರ್ ಕಾರ್ಡ್ ಅನ್ನು ಪಡೆದು ಹತ್ತು ವರ್ಷಗಳಾಗಿದೆಯೇ? ಹಾಗಿದ್ದರೆ ಅದರಲ್ಲಿನ ಮಾಹಿತಿಯನ್ನು ಅಪ್‌ಡೇಟ್ ಮಾಡಬೇಕು. ಈ ಬಗ್ಗೆ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಬುಧವಾರ ಮನವಿ ಮಾಡಿದೆ. ಅದಕ್ಕೆ ಪೂರಕವಾದ ದಾಖಲೆಗಳನ್ನು ನೀಡಬೇಕು ಎಂದು ಸೂಚಿಸಿದೆ, ಆನ್‌ಲೈನ್ ಮೂಲಕ ಅಥವಾ ಆಧಾರ್ ಕೇಂದ್ರಗಳಲ್ಲಿ ಮಾಹಿತಿಯನ್ನು ನವೀಕರಿಸಲು ಅವಕಾಶ ಕಲ್ಪಿಸಲಾಗಿದೆ. ಆಧಾರ್ ಕೇಂದ್ರಕ್ಕೆ ತೆರಳಿ ಮಾಹಿತಿ ಅಪ್‌ಡೇಟ್ ಮಾಡುವುದಿದ್ದರೆ ಸರಕಾರ ನಿಗದಿಪಡಿಸಿದ ಶುಲ್ಕ ಪಾವತಿ ಮಾಡಬೇಕಾಗುತ್ತದೆ. “ಕಳೆದ …
Read More »ದೀಪಾವಳಿಯಿಂದ ಲಕ್ಷ ದೀಪೋತ್ಸವಕ್ಕೆ ಎರಡು ಗ್ರಹಣಗಳು!
ಈ ವರ್ಷ ದೀಪಾವಳಿ ಅಮಾವಾಸ್ಯೆಯಂದು (ಅಕ್ಟೋಬರ್ 25 ) ಪಾರ್ಶ್ವ ಸೂರ್ಯ ಗ್ರಹಣ, ಕಾರ್ತೀಕದ ಹುಣ್ಣಿಮೆ ಯಂದು (ನವೆಂಬರ್ 8 ) ಪಾರ್ಶ್ವ ಚಂದ್ರ ಗ್ರಹಣ. ಈ ಗ್ರಹಣಗಳು ಭಾರತಕ್ಕೆ ಪಾರ್ಶ್ವ ಗ್ರಹಣಗಳಾದರೂ ಈ ಎರಡೂ ಗ್ರಹಣ ಗಳು ಬಲು ಅಪರೂಪ. ಏಕೆಂದರೆ ಸೂರ್ಯಗ್ರಹಣ ಸೂರ್ಯಾಸ್ತಕ್ಕೆ, ಚಂದ್ರ ಗ್ರಹಣ ಚಂದ್ರ ಉದಯಕ್ಕೆ. ಇದೇ ಈ ಗ್ರಹಣಗಳ ವಿಶೇಷ. ಅಕ್ಟೋಬರ್ 25, ಪಾರ್ಶ್ವ ಸೂರ್ಯ ಗ್ರಹಣ ಸಂಜೆ ಗಂಟೆ 5.08ಕ್ಕೆ ಪ್ರಾರಂಭವಾಗಿ 6.29ಕ್ಕೆ ಅಂತ್ಯ. 5.50ಕ್ಕೆ ಅತ್ಯಂತ …
Read More »ಕಾಂಗ್ರೆಸ್ ಮಾಜಿ ಶಾಸಕ ಎನ್‌ಟಿ ಬೊಮ್ಮಣ್ಣ ನಿಧನ; ಗಣ್ಯರ ಸಂತಾಪ
ಬಳ್ಳಾರಿ: ಜಿಲ್ಲೆಯ ಕೂಡ್ಲಿಗಿ ಕ್ಷೇತ್ರದ ಮಾಜಿ ಕಾಂಗ್ರೆಸ್ ಶಾಸಕ ಎನ್ ಟಿ ಬೊಮ್ಮಣ್ಣ ನಿಧನರಾಗಿದ್ದಾರೆ. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಎನ್ ಟಿ ಬೊಮ್ಮಣ್ಣ ಒಂದು ತಿಂಗಳ ಹಿಂದೆ ತುಮಕೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಎನ್‌ಟಿ ಬೊಮ್ಮಣ್ಣ ಕೂಡ್ಲಿಗಿ ಕ್ಷೇತ್ರದಿಂದ ಸ್ಪರ್ಧಿಸಿ ಎರಡು ಬಾರಿ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿದ್ದರು. ಎನ್.ಟಿ ಬೊಮ್ಮಣ್ಣ 1985 ರಿಂದ 1994 ರವರೆಗೆ ಕೂಡ್ಲಿಗಿ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದರು. 2018 ರ …
Read More »“ಮನೆ ತೆರವು ಮಾಡಿದರೆ ಪೆಟ್ರೋಲ್ ಸುರಿದು ಆತ್ಮಹತ್ಯೆ”: ಅಧಿಕಾರಿಗಳಿಗೆ ಶಾಕ್ ಕೊಟ್ಟ ದಂಪತಿ!
ಕೆ.ಆರ್. ಪುರ: ಕೆಆರ್ ಪುರದಲ್ಲಿ ಮೂರನೇ ದಿನವೂ ತೆರವು ಕಾರ್ಯ ಮುಂದುವರೆದಿದೆ. ಮೂರನೇ ದಿನಕ್ಕೆ ತೆರವಿಗೆ ಬಂದ ಬಿಬಿಎಂಪಿ ಅಧಿಕಾರಿಗಳಿಗೆ ಮನೆ ತೆರವು ಮಾಡಿದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ದಂಪತಿಗಳು ಬೆದರಿಸಿರುವ ಘಟನೆ ಬಸವನಪುರ ಮುಖ್ಯರಸ್ತೆಯ ಎಸ್.ಆರ್.ಲೇಔಟ್ ನಲ್ಲಿ ನಡೆದಿದೆ. ಸೋನಾ ಸೇನ್ ಮತ್ತು ಸುನಿಲ್ ಸಿಂಗ್ ಎಂಬ ದಂಪತಿಗಳು ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ತಮ್ಮ ಮನೆಯನ್ನು ತೆರವು ಮಾಡಲು ಬಂದ ಅಧಿಕಾರಿಗಳ ಮುಂದೆ ಪೆಟ್ರೋಲ್ ಕ್ಯಾನ್ ಹಿಡಿದು, …
Read More »2023ರ ಚುನಾವಣೆ; ಕಾಂಗ್ರೆಸ್ ಟಿಕೆಟ್ ಕೇಳಿದ ಕನ್ನಡ ನಟಿ!
ಬೆಂಗಳೂರು, ಅಕ್ಟೋಬರ್ 12; ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗೆ ಕೆಲವು ತಿಂಗಳು ಬಾಕಿ ಇದೆ. ರಾಜಕೀಯ ಪಕ್ಷಗಳ ತಯಾರಿ ಚುನಾವಣೆಗೆ ಜೋರಾಗಿದೆ. ಈ ನಡುವೆ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಸಹ ಹೆಚ್ಚಾಗುತ್ತಿದೆ. ಮುಂದಿನ ಚುನಾವಣೆಗೆಕಾಂಗ್ರೆಸ್ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ತುಸು ಹೆಚ್ಚಿದೆ. ಈಗ ಕನ್ನಡದ ನಟಿಯೊಬ್ಬರು ನಾನು ಸಹ ಪಕ್ಷದ ಟಿಕೆಟ್ ಆಕಾಂಕ್ಷಿ ಎಂದು ಹೇಳುವ ಮೂಲಕ ಚುನಾವಣಾ ಕಣಕ್ಕಿಳಿಯುವ ಸೂಚನೆ ನೀಡಿದ್ದಾರೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ …
Read More »