Breaking News

Yearly Archives: 2022

KSRTC: ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ ₹50 ಲಕ್ಷ ಪ್ರೀಮಿಯಂ ರಹಿತ ಅಪಘಾತ ವಿಮೆ

ಬೆಂಗಳೂರು: ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ ₹50 ಲಕ್ಷದ ತನಕ ಅಪಘಾತ ವಿಮಾ ಸೌಲಭ್ಯ ದೊರಕಿಸುವ ಯೋಜನೆಯನ್ನು ನಿಗಮ ಜಾರಿಗೆ ತಂದಿದೆ. ಈ ಸಂಬಂಧ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ) ಜತೆ ಒಡಂಬಡಿಕೆಯನ್ನು ಕೆಎಸ್‌ಆರ್‌ಟಿಸಿ ಬುಧವಾರ ಮಾಡಿಕೊಂಡಿದೆ. ನಿಗಮದ ಅಧ್ಯಕ್ಷ ಚಂದ್ರಪ್ಪ ಸಮ್ಮುಖದಲ್ಲಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಮತ್ತು ಎಸ್‌ಬಿಐ ಉಪ ಪ್ರಧಾನ ವ್ಯವಸ್ಥಾಪಕ ಪಂಕಜ್ ತಪ್ಲಿಯಾಲ್ ಒಪ್ಪಂದಕ್ಕೆ ಸಹಿ ಹಾಕಿದರು. ಅಪಘಾತದಲ್ಲಿ ಸಿಬ್ಬಂದಿ ಮೃತಪಟ್ಟರೆ ಅವಲಂಬಿತರಿಗೆ ಈವರೆಗೆ ಪರಿಹಾರ ಸಿಗುತ್ತಿರಲಿಲ್ಲ. ಹೊಸ …

Read More »

K.P.T.C.L. ಪರೀಕ್ಷೆ ಅಕ್ರಮ ಮತ್ತೊರ್ವ ಆರೋಪಿಯನ್ನು ಬಂಧಿಸುವಲ್ಲಿ ಗೋಕಾಕ್ ನಗರ ಪೊಲೀಸರು ಯಶಸ್ವಿ

ಕೆಪಿಟಿಸಿಎಲ್ ಪರೀಕ್ಷೆ ಅಕ್ರಮ ಪ್ರಕರಣದಲ್ಲಿ ಮತ್ತೊರ್ವ ಆರೋಪಿಯನ್ನು ಬಂಧಿಸುವಲ್ಲಿ ಗೋಕಾಕ್ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಭೀಮಶಿ(ಭೀಮಪ್ಪ) ಸಿದ್ದಪ್ಪ ಗುದಿಗೊಪ್ಪ ಬಂಧಿತ ಆರೋಪಿ. ಈತ ಇಲೆಕ್ಟ್ರಾನಿಕ್ ಡಿವೈಸ್‍ಗಳನ್ನೂ ವಿದ್ಯಾರ್ಥಿಗಳಿಗೆ ಕೊಟ್ಟವನು ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಲು ಮತ್ತು ಇಲೆಕ್ಟ್ರಾನಿಕ್ ಡಿವೈಸ್ ಖರೀದಿ ಮಾಡಲು ಹಣ ಕೊಟ್ಟವನು. ಈತನಿಂದ 6 ಮೊಬೈಲ್ ಮತ್ತು ಒಂದು ಲ್ಯಾಪಟಾಪ್ ಮತ್ತು 3 ಇಲೆಕ್ಟ್ರಾನಿಕ್ ಡಿವೈಸ್ ಮತ್ತು ಒಂದು ಕಾರನ್ನು ಜಪ್ತಿ ಮಾಡಲಾಗಿದೆ. ಬಂಧಿತ ಆರೋಪಿಯನ್ನು …

Read More »

ನನ್ನ ಆಯ್ಕೆ ಮಾಡಿದ ಎಲ್ಲರಿಗೂ ಧನ್ಯವಾದ: A.I.C.C.ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ನನ್ನನ್ನು ಆಯ್ಕೆ ಮಾಡಿದ ಎಲ್ಲರಿಗೂ ಧನ್ಯವಾದ. ಜೊತೆಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೂ ಧನ್ಯವಾದ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಎಐಸಿಸಿ ಅಧ್ಯಕ್ಷರಾಗಿ ಕನ್ನಡಿಗ, ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗಿದ್ದಾರೆ. ತಮ್ಮ ಆಯ್ಕೆ ಘೋಷಣೆ ಆಗುತ್ತಿದ್ದಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು ನನ್ನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ದೇಶಾದ್ಯಂತ ಪಕ್ಷವನ್ನು ಸಂಘಟಿಸಲು ಮತ್ತಷ್ಟು ಪ್ರಯತ್ನಿಸುವೆ. ಬೂತ್ ಮಟ್ಟದಲ್ಲಿ …

Read More »

ಇದು ಸ್ಮಶಾನವೋ..? ಗಾಡಿ ಪಾರ್ಕಿಂಗ್ ಜಾಗವೋ..? ಮಾಜಿ ಮೇಯರ್ ವಿಜಯ್ ಮೋರೆ

ಈ ಸ್ಮಶಾನ ಭೂಮಿಯನ್ನು ವಿವಿಧ ಸಂಘಟನೆಗಳು ಕೂಡಿಕೊಂಡು ನಂದನವನವಾಗಿ ಅಭಿವೃದ್ಧಿ ಮಾಡಿದ್ದರು. ಆದರೆ ಮಹಾನಗರ ಪಾಲಿಕೆ ಅಧಿಕಾರಿಗಳ ನಿರ್ವಹಣೆ ಕೊರತೆಯಿಂದ ಈ ಸ್ಮಶಾನ ಭೂಮಿ ಹಲವು ಸಮಸ್ಯೆಗಳ ತಾಣವಾಗಿ ಮಾರ್ಪಟ್ಟಿದೆ. ಅಲ್ಲದೇ ಇದು ಸ್ಮಶಾನವೋ..? ಗಾಡಿ ಪಾರ್ಕಿಂಗ್ ಜಾಗವೋ..? ಎಂದು ಜನ ಪ್ರಶ್ನಿಸುತ್ತಿದ್ದಾರೆ.   ಎಲ್ಲಿ ಬೇಕಾದಲ್ಲಿ ನಿಲ್ಲಿಸಿರುವ ಹಳೆಯ ವಾಹನಗಳು, ಕಸ ವಿಲೇವಾರಿ ವಾಹನಗಳು, ಹದಗೆಟ್ಟ ರಸ್ತೆ. ಹೌದು ನೀವು ನೋಡುತ್ತಿರುವ ಈ ದೃಶ್ಯ ಬೆಳಗಾವಿಯ ಪ್ರಸಿದ್ಧ ಸದಾಶಿವ ನಗರ …

Read More »

ಖರ್ಗೆಗೆ ಭರ್ಜರಿ ಗೆಲುವು – 24 ವರ್ಷಗಳ ಬಳಿಕ ಗಾಂಧೀಯೇತರ ವ್ಯಕ್ತಿಗೆ ಕಾಂಗ್ರೆಸ್‌ ಪಟ್ಟ

ನವದೆಹಲಿ: 24 ವರ್ಷದ ಬಳಿಕ ಗಾಂಧಿಯೇತರ ವ್ಯಕ್ತಿ ಶತಮಾನದ ಇತಿಹಾಸ ಹೊಂದಿರುವ ಕಾಂಗ್ರೆಸ್‌ (Congress) ಪಕ್ಷದ ಸಾರಥಿಯಾಗಿದ್ದಾರೆ. ರಾಜ್ಯಸಭೆಯ ಪ್ರತಿಪಕ್ಷದ ನಾಯಕನಾಗಿದ್ದ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಎಐಸಿಸಿ (AICC) ಅಧ್ಯಕ್ಷರಾಗಿದ್ದಾರೆ. ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್‌ ಹೊಸ ಅಧ್ಯಕ್ಷರ ಆಯ್ಕೆಗೆ ನಡೆದಿದ್ದ ಚುನಾವಣೆಯ ಮತ ಎಣಿಕೆಯ ಫಲಿತಾಂಶ ಇಂದು ಹೊರಬಿದ್ದಿದ್ದು, ಮಲ್ಲಿಕಾರ್ಜುನ ಖರ್ಗೆ ನೂತನ ಸಾರಥಿಯಾಗಿದ್ದಾರೆ. ಎಐಸಿಸಿ (AICC) ಅಧ್ಯಕೀಯ ಚುನಾವಣೆಯಲ್ಲಿ ಒಟ್ಟು 9,385 ಮತಗಳು ಚಲಾವಣೆಗೊಂಡಿದ್ದವು. ಇದರಲ್ಲಿ …

Read More »

ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ತೊಡೆತಟ್ಟುವುದು ಫಿಕ್ಸ್..?

ಬೆಂಗಳೂರು,ಅ.19- ಎಲ್ಲ ರಾಜಕೀಯ ವದಂತಿಗಳಿಗೆ ತೆರೆ ಎಳೆದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ವಕ್ಷೇತ್ರ ವರುಣಾದಿಂದಲೇ ಸ್ರ್ಪಸಿದರೆ ಬಿ.ಎಸ್.ಯಡಿಯೂರಪ್ಪ ಪುತ್ರ ವಿಜಯೇಂದ್ರ ಕೂಡ ಇಲ್ಲಿಂದಲೇ ಕಣಕ್ಕಿಳಿಯಲು ಮುಂದಾಗಿದ್ದಾರೆ. ಶತಾಯಗತಾಯ 2023ರ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು ತವರು ನೆಲದಲ್ಲೇ ಹಿಮ್ಮೆಟ್ಟಿಸಬೇಕೆಂದು ರಣತಂತ್ರ ರೂಪಿಸಿರುವ ಬಿಜೆಪಿ ಮಾಜಿ ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರನ್ನು ವರುಣಾದಿಂದಲೇ ಸ್ರ್ಪಸಲು ಮನವೊಲಿಸಿದೆ.   ಈಗಾಗಲೇ ಯಡಿಯೂರಪ್ಪ ಅವರು ತಾವು 2023ರ ವಿಧಾನಸಭೆ ಚುನಾವಣೆಯಲ್ಲಿ ಸ್ರ್ಪಸದೆ …

Read More »

ರಾಜ್ಯದಲ್ಲಿ ಹಳ್ಳ ಹಿಡಿದ ಫಸಲ್‌ ವಿಮೆ ಯೋಜನೆ:ರೈತರಿಗೆ ಸಿಗುತ್ತಿಲ್ಲ ಪರಿಹಾರ

ಬೆಂಗಳೂರು : ಕಷ್ಟ ಕಾಲದಲ್ಲಿ ರೈತರ ನೆರವಿಗೆ ಬರಬೇಕಿದ್ದ ಬೆಳೆ ವಿಮೆ ಯೋಜನೆಯು ರಾಜ್ಯದಲ್ಲಿ ಅನ್ನದಾತರ ವಿಶ್ವಾಸವನ್ನು ಕಳೆದುಕೊಂಡು ವರ್ಷಗಳೆ ಕಳೆದಿವೆ. ಈಗ ಆಡಳಿತಾರೂಢ ಚುನಾಯಿತ ಪ್ರತಿನಿಧಿಗಳು ಕೂಡ ವಿಮೆ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅತಿವೃಷ್ಟಿ ಮತ್ತು ಅನಾವೃಷ್ಟಿಯಂತಹ ಪ್ರಕೃತಿ ವಿಕೋಪಗಳ ಸಂದರ್ಭಗಳಲ್ಲಿ ಕೃಷಿಕರ ಕೈಹಿಡಿಯಬೇಕಾದ ‘ಪ್ರಧಾನಮಂತ್ರಿ ಫಸಲ್‌ ವಿಮೆ ಯೋಜನೆ’ ಸಂಪೂರ್ಣ ಫೇಲ್‌ ಆಗಿದೆ. ಕಳೆದ ನಾಲ್ಕು ವರ್ಷಗಳಿಂದ ರಾಜ್ಯದಲ್ಲಿ ಅತಿವೃಷ್ಟಿ, ನೆರೆ ಹಾವಳಿಯಿಂದ ವ್ಯಾಪಕ ಬೆಳೆ ನಷ್ಟವಾಗಿದ್ದು, 2019-20ನೇ …

Read More »

‘ಕಾಂತಾರ’ ಭರ್ಜರಿ ಯಶಸ್ಸು; ಕುತೂಹಲ ಕೆರಳಿಸಿದೆ ಇವರಿಬ್ಬರ ಮೌನ!

ಬೆಂಗಳೂರು: ಹೊಂಬಾಳೆ ಫಿಲ್ಮ್ಸ್​ ನಿರ್ಮಾಣ ಮತ್ತು ರಿಷಬ್ ಶೆಟ್ಟಿ ರಚನೆ-ನಿರ್ದೇಶನದಲ್ಲಿ ಮೂಡಿಬಂದು ಜಗತ್ತಿನಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿರುವ ಕಾಂತಾರಕ್ಕೆ ಈಗಾಗಲೇ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ದಿನೇದಿನೆ ಚಿತ್ರದ ಕುರಿತು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅದಾಗ್ಯೂ ಇಬ್ಬರು ಸ್ಟಾರ್ ಕಲಾವಿದರು ಮೌನವಹಿಸಿರುವುದು ಸಿನಿಪ್ರಿಯರಲ್ಲಿ ಕುತೂಹಲ ಕೆರಳಿಸಿದೆ. ಕಾಂತಾರ ಚಿತ್ರದ ಕುರಿತು ಸ್ಯಾಂಡಲ್​ವುಡ್ ಜತೆಗೆ ದಕ್ಷಿಣ ಭಾರತದ ಇತರ ಚಿತ್ರರಂಗಗಳಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಲ್ಲದೆ ಬಾಲಿವುಡ್​ನಲ್ಲಿ ಇದುವರೆಗೂ ಯಾವುದೇ ಕನ್ನಡ ಸಿನಿಮಾ ಮಾಡದ …

Read More »

ಉತ್ತರ ಕರ್ನಾಟಕಕ್ಕೂ ಬಂದ ಕರಾವಳಿಯ ಕೊರಗಜ್ಜ; ಹಾವೇರಿಯಲ್ಲಿ ಪ್ರತಿಷ್ಠಾಪನೆ

ಹಾವೇರಿ: ದೇಶದಾದ್ಯಂತ ಸದ್ದು ಮಾಡುತ್ತಿರುವ ಕಾಂತಾರ ಸಿನಿಮಾ ಮೂಲಕ ಕರಾವಳಿಯ ದೈವಗಳ ಶಕ್ತಿ ಹಾಗೂ ಜನರ ನಂಬಿಕೆಗಳ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ವಿವಿಧ ಭಾಗಗಳ ಜನರು ಇದೀಗ ಕರಾವಳಿಯ ದೈವಗಳ ಬಗ್ಗೆ ತಿಳಿದುಕೊಳ್ಳಲು ಉತ್ಸುಕರಾಗಿದ್ದಾರೆ.   ಕರಾವಳಿ ಭಾಗದ ಜನರಿಗೆ ದೈವಗಳ ಮೇಲೆ ಹೆಚ್ಚಿನ ನಂಬಿಕೆ. ಇದೀಗ ಉತ್ತರ ಕರ್ನಾಟಕ ಭಾಗದಲ್ಲೂ ದೈವಗಳನ್ನು ನಂಬುತ್ತಿದ್ದಾರೆ. ಹೌದು, ಹಾವೇರಿ ಜಿಲ್ಲೆಯ ಕೇರಿಮತ್ತಿ ಹಳ್ಳಿಯ ಫಕ್ಕಿರೇಶ ಮರಿಯಣ್ಣ ಎಂಬುವವರ ಹೊಲದಲ್ಲಿ ಕೊರಗಜ್ಜನ ಪುಟ್ಟ ದೈವಸ್ಥಾನ …

Read More »

ಸತೀಶ ಜಾರಕಿಹೊಳಿ ಅವರ ಸೂಚನೆ ಮೇರೆಗೆ ರೈಲ್ವೇ ಗೇಟ್ ಕಳಪೆ ಕಾಮಗಾರಿ ಖಂಡಿಸಿ ಪ್ರತಿಭಟನೆ

ಬೆಳಗಾವಿಯ ಟಿಳಕವಾಡಿ 3ನೇ ರೈಲ್ವೇ ಗೇಟ್‍ನ ಮೇಲ್ಸೇತುವೆಯ ಕಳಪೆ ಕಾಮಗಾರಿ ಖಂಡಿಸಿ ಕಾಂಗ್ರೆಸ್ ಪಕ್ಷದಿಂದ ವಿನೂತನ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಹೌದು ಬೆಳಗಾವಿ-ಖಾನಾಪುರ ರಸ್ತೆ ಟಿಳಕವಾಡಿಯಲ್ಲಿ ನಿರ್ಮಿಸಲಾಗಿರುವ 3ನೇ ರೈಲ್ವೇ ಗೇಟ್‍ನ ಮೇಲ್ಸೇತುವೆಯನ್ನು ಕಳೆದ ವಾರವಷ್ಟೇ ಸಂಸದೆ ಮಂಗಲಾ ಅಂಗಡಿ ಅವರು ನಗರ ಶಾಸಕರು, ರೈಲ್ವೇ ಅಧಿಕಾರಿಗಳ ಸಮ್ಮುಖದಲ್ಲಿ ಲೋಕಾರ್ಪಣೆಗೊಳಿಸಿದ್ದರು. ಈ ಮೇಲ್ಸೇತುವೆ ಉದ್ಘಾಟನೆಗೊಂಡ ಕೇವಲ 24 ಗಂಟೆಯಲ್ಲಿಯೇ ರಸ್ತೆಯಲ್ಲಿ ತೆಗ್ಗು ಬಿದ್ದಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಕಳಪೆ ಕಾಮಗಾರಿ …

Read More »