ಬೆಳಗಾವಿ: ಚನ್ನಮ್ಮನ ಕಿತ್ತೂರಿನಲ್ಲಿ ಮಂಗಳವಾರ ರಾತ್ರಿ ಕಿತ್ತೂರು ಉತ್ಸವದ ಕಾರ್ಯಕ್ರಮ ನೋಡಿಕೊಂಡು ಮರಳುತ್ತಿದ್ದ ಇಬ್ಬರು ಪಾದಚಾರಿಗಳ ಮೇಲೆ ಕಾರ್ ಹರಿದು, ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಖಾನಾಪುರ ತಾಲ್ಲೂಕಿನ ಕೊರವಿಕೊಪ್ಪ ಗ್ರಾಮದ ಬಾಳಪ್ಪ ತಳವಾರ (33) ಹಾಗೂ ಕರೆಪ್ಪ ತಳವಾರ (36) ಮೃತಪಟ್ಟವರು. ಮಂಗಳವಾರ ರಾತ್ರಿ ಗಾಯಕ ರಘು ದೀಕ್ಷಿತ್ ಅವರ ತಂಡದ ಸಾಂಸ್ಕೃತಿಕ ಕಾರ್ಯಕ್ರಮ ನೋಡಲು ಬಂದಿದ್ದ ಇಬ್ಬರೂ ಊರಿಗೆ ಮರಳಲು ವಾಹನಕ್ಕೆ ಕಾಯುತ್ತಿದ್ದರು. ಪಟ್ಟಣ ಹೊರವಲಯದ ರಾಷ್ಟ್ರೀಯ ಹೆದ್ದಾರಿ …
Read More »Yearly Archives: 2022
‘ಕಿತ್ತೂರು ಕೇಸರಿ’ ಪಟ್ಟಕ್ಕಾಗಿ ಪಟ್ಟುಬಿಡದ ಜಟ್ಟಿಗಳು
ಕಿತ್ತೂರು (ಬೆಳಗಾವಿ ಜಿಲ್ಲೆ): ಇಲ್ಲಿ ಕಿತ್ತೂರು ಉತ್ಸವ ಅಂಗವಾಗಿ ಎರಡನೇ ದಿನವಾದ ಮಂಗಳವಾರ ನಡೆದ ರಾಷ್ಟ್ರಮಟ್ಟದ ಮತ್ತು ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ ನೋಡಲು ಅಪಾರ ಸಂಖ್ಯೆಯ ಕ್ರೀಡಾಭಿಮಾನಿಗಳು ಸೇರಿದರು. ಮಹಿಳಾ ಹಾಗೂ ಪುರುಷ ವಿಭಾಗ ಸೇರಿ ಒಟ್ಟು 234 ಪೈಲ್ವಾನರು ಇಲ್ಲಿ ಮುಖಾಮುಖಿಯಾಗಿದ್ದಾರೆ. ಪ್ರತಿವರ್ಷ ಜಂಗಿ ನಿಕಾಲಿ ಕುಸ್ತಿ ನಡೆಯುತ್ತಿದ್ದವು. ಇದೇ ಮೊದಲ ಬಾರಿ ಪಾಯಿಂಟ್ ಆಧರಿತ ಕುಸ್ತಿ ಆಯೋಜಿಸಲಾಗಿತ್ತು. ಎರಡು ದಿನಗಳ ಟೂರ್ನಿಯಲ್ಲಿ ನಡೆದ ಬಹುತೇಕ ಪಂದ್ಯಗಳು ಪೈಪೋಟಿಯಿಂದ …
Read More »ಚಿಣ್ಣರಿಗೂ ಬಂತು ಉತ್ಸವದ ಹಿಗ್ಗು
ಕಿತ್ತೂರು: ಐತಿಹಾಸಿಕ ಉತ್ಸವದಲ್ಲಿ ಒಂದೆಡೆ ವರ್ಣರಂಜಿತ ವೇದಿಕೆಗಳಲ್ಲಿ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದ್ದರೆ, ಮತ್ತೊಂದೆಡೆ ಮಕ್ಕಳು ವಿವಿಧ ಆಟಗಳನ್ನಾಡಿ ಸಂಭ್ರಮದಲ್ಲಿ ಮಿಂದೆದ್ದರು. ಇಲ್ಲಿನ ಕೋಟೆ ಆವರಣದ ಮುಂಭಾಗದಲ್ಲಿ ಮಕ್ಕಳು ಹಾಗೂ ಯುವಕರಿಗಾಗಿ ವಿವಿಧ ಆಟಿಕೆಗಳನ್ನು ಅಳವಡಿಸಲಾಗಿದೆ. ಎಲ್ಲವೂ ವಿದ್ಯುತ್ ಚಾಲಿತ ಆಟಿಕೆಗಳೇ ಇರುವುದು ಈ ಬಾರಿಯ ವಿಶೇಷ. ಚಿಣ್ಣರು ಬಾತುಕೋಳಿ, ಬೈಕ್‌ಗಳ ತಿರುಗುಂಡಿ ಮೇಲೆ ಕುಳಿತು ಸಂಭ್ರಮಿಸಿದರು. ಮತ್ತೆ ಕೆಲವರು ಜಾರುಬಂಡೆಯಿಂದ ಜಾರಿ ನಲಿದರು. ರಬ್ಬರ್‌ನಿಂದ ಮಾಡಿದ ಡಾನ್ಸಿಂಗ್ ರೋಪ್ …
Read More »198ನೇ ಕಿತ್ತೂರು ಉತ್ಸವಕ್ಕೆ ವೈಭವದ ತೆರೆ, ರಾತ್ರಿಯವರೆಗೂ ಸಾಂಸ್ಕೃತಿಕ ವೈಭವ
ಚನ್ನಮ್ಮನ ಕಿತ್ತೂರು (ರಾಣಿ ಚನ್ನಮ್ಮ ವೇದಿಕೆ): ‘ರಾಣಿ ಚನ್ನಮ್ಮ ದೇಶದ ಸ್ವಾತಂತ್ರ್ಯದ ಹೆಗ್ಗುರುತು ಮಾತ್ರವಲ್ಲ; ವಿಶ್ವದ ಹೆಣ್ಣುಮಕ್ಕಳ ಸಮಾನತೆಯ ಪ್ರತೀಕ’ ಎಂದು ಬೈಲೂರು ನಿಷ್ಕಲ ಮಂಟಪದ ನಿಜಗುಣಪ್ರಭು ಸ್ವಾಮೀಜಿ ಹೇಳಿದರು. ಇಲ್ಲಿ ಮಂಗಳವಾರ ನಡೆದ 198ನೇ ಕಿತ್ತೂರು ಉತ್ಸವದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ‘ಹೆಣ್ಣುಮಗಳು ಸಮಾಜದಿಂದ ಹೊರ, ಧರ್ಮದಿಂದ ಹೊರ ಎಂಬ ಸಂಪ್ರದಾಯಗಳು ಇದ್ದ ಕಾಲದಲ್ಲಿ ಚನ್ನಮ್ಮ ಖಡ್ಗ ಹಿಡಿದಳು. ಪ್ರಪಂಚದ ಬಹಳಷ್ಟು ರಾಜರು ಮಂತ್ರಿಗಳ ಮಾರ್ಗದರ್ಶನದಲ್ಲಿ …
Read More »SC&ST ಮೀಸಲಾತಿ ಹೆಚ್ಚಳ; ಮೊದಲು ಧ್ವನಿ ಎತ್ತಿದ್ದೆ ನಾವು : ಶ್ರೀರಾಮುಲು
ಕುರುಗೋಡು : ಸಮೀಪದ ಸೋಮಲಾಪುರ ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಅವರ ಪೂರ್ತಿ ಪ್ರತಿಷ್ಠಾಪನೆ ಯನ್ನು ಸಚಿವ ಬಿ. ಶ್ರೀರಾಮುಲು ಹಾಗೂ ಶಾಸಕ ಜೆ. ಎನ್. ಗಣೇಶ್ ನೆರೆವೇರಿಸಿದರು. ನಂತರ ಸಚಿವ ಶ್ರೀರಾಮುಲು ಮಾತನಾಡಿ, ಮಹರ್ಷಿ ವಾಲ್ಮೀಕಿ ಜ್ಞಾನದ ಆಗರವಾಗಿದ್ದಾರೆ. ರಾಮಾಯಣ ಮಹಾಕಾವ್ಯದ ಮೂಲಕ ತಮ್ಮಲ್ಲಿನ ಜ್ಞಾನ ಭಂಡಾರವನ್ನು ಜಗತ್ತಿಗೆ ಪರಿಚಯಿಸಿದ್ದಾರೆ’ ಎಂದು ಹೇಳಿದರು. ಜನಸಮುದಾಯದ ಎಲ್ಲ ಸಮಸ್ಯೆಗಳು, ಸಂಕಟಗಳು ಹಾಗೂ ಸವಾಲುಗಳಿಗೆ ವಾಲ್ಮೀಕಿ ರಾಮಾಯಣದಲ್ಲಿ ಉತ್ತರ ಮತ್ತು ಪರಿಹಾರವಿದೆ. ಮಾನವೀಯ …
Read More »ವಾಹನ ಪಲ್ಟಿಯಾಗಿ ಹಲವರಿಗೆ ಗಾಯ: ಮಾನವೀಯತೆ ಮೆರೆದ ಶಾಸಕ ನಡಹಳ್ಳಿ
ಮುದ್ದೇಬಿಹಾಳ: ಗೂಡ್ಸ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಹಳ್ಳಕ್ಕೆ ಉರುಳಿ ಬಿದ್ದು15 ಜನರು ಗಾಯಗೊಂಡ ಘಟನೆ ಬುಧವಾರ ಸಂಜೆ ಸಂಭವಿಸಿದೆ. ತಾಲೂಕಿನ ಅಡವಿ ಹುಲಗಬಾಳ ಗ್ರಾಮದ ಬೀರಪ್ಪನ ಬೆಟ್ಟದಲ್ಲಿ ದೀಪಾವಳಿ ಪಾಡ್ಯದಂದು ನಡೆದ ಜಾತ್ರೆ, ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಮುಗಿಸಿಕೊಂಡು ಸ್ವಗ್ರಾಮದತ್ತ ಹೊರಟಿದ್ದ ಗೂಡ್ಸ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಹಳ್ಳಕ್ಕೆ ಉರುಳಿ ಬಿದ್ದು ಅದರಲ್ಲಿ ಇದ್ದ ಇಬ್ಬರು ಮಕ್ಕಳು, ಮೂವರು ವೃದ್ಧರು ಸೇರಿ …
Read More »ಅಕ್ರಮ ಸಂಬಂಧಕ್ಕೆ ಅಡ್ಡಿ ಅಂತ ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಮುಗಿಸಿದ್ಳು!
ಬೆಂಗಳೂರು: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಾನೆ ಎಂದು ಪತ್ನಿಯೇ ಪತಿಯನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಸಿಲಿಕಾನ್ ಸಿಟಿಯ ಯಲಹಂಕದಲ್ಲಿ ನಡೆದಿದೆ. ಮೃತನನ್ನು ಚಂದ್ರಶೇಖರ್ ಎಂದು ಗುರುತಿಸಲಾಗಿದೆ. ಪ್ರಕರಣ ಸಂಬಂಧ ಚಂದ್ರಶೇಖರ್ ಪತ್ನಿ ಶ್ವೇತಾ ಹಾಗೂ ಆಕೆಯ ಪ್ರಿಯಕರ ಹಿಂದೂಪುರ (Hindupura) ದ ಸುರೇಶ್‍ನನ್ನು ಪೊಲೀಸರು ಬಂಧಿಸಿದ್ದಾರೆ. ಚಂದ್ರಶೇಖರ್ (Chandrashekhar) ಮತ್ತು ಶ್ವೇತಾ (Shwetha) ಕಳೆದ ನಾಲ್ಕು ವರ್ಷಗಳ ಹಿಂದೆ ಮದುವೆ (Marriage) ಯಾಗಿದ್ದರು. ಇಬ್ಬರ ನಡುವೆ ಹದಿನಾರು ವರ್ಷದ ಅಂತರ ಇತ್ತು. …
Read More »ನ. 1ಕ್ಕೆ JDS ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್ : H.D.K
ಬೆಂಗಳೂರು: 2023ರ ಚುನಾವಣೆಗೆ ಬಿಜೆಪಿ, ಕಾಂಗ್ರೆಸ್‌ಗಿಂತ ಮೊದಲೇ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗೋದು ಬಹುತೇಕ ಖಚಿತವಾಗಿದೆ. ನ. 1ರಂದು ಮುಳಬಾಗಿಲಿನಲ್ಲಿ ನಡೆಯಲಿರುವ ಪಂಚರತ್ನ ರಥಯಾತ್ರೆ ಸಮಾವೇಶದಲ್ಲಿ ಜೆಡಿಎಸ್‌ನ ಮೊದಲ ಪಟ್ಟಿ ರಿಲೀಸ್ ಮಾಡಲಾಗುತ್ತದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ತಿಳಿಸಿದರು. ಜೆಪಿ ಭವನದಲ್ಲಿ ಮಾತನಾಡಿದ ಅವರು, ಈಗಾಗಲೇ 123 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಫೈನಲ್ ಆಗಿದೆ. ಕಳೆದ ವಾರ ತಾಯಿ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ಅಭ್ಯರ್ಥಿಗಳ ಪಟ್ಟಿಗೆ ಪೂಜೆ ಸಲ್ಲಿಸಲಾಗಿದೆ. …
Read More »ಬಸವಲಿಂಗ ಶ್ರೀ ವೀಡಿಯೋ ಕಾಲ್ ವೈರಲ್- ಮೂವರು ಮಹಿಳೆಯರ ಪ್ರತ್ಯೇಕ ವಿಚಾರಣೆ
ರಾಮನಗರ: ಮಾಗಡಿಯ (Magadi) ಬಂಡೆ ಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಮಹಿಳೆಯೊಬ್ಬರ ಜೊತೆ ಸ್ವಾಮೀಜಿ ವೀಡಿಯೋ ಕಾಲ್ (Video Call) ಮಾಡಿ ಮಾತನಾಡಿದ್ದಾರೆ ಎನ್ನಲಾದ ವೀಡಿಯೋ ಈಗಾಗಲೇ ವೈರಲ್ (Video Viral) ಆಗಿದ್ದು, ಈ ವೀಡಿಯೋ ಆಧರಿಸಿ ಅನುಮಾನಿತ ಮೂವರು ಮಹಿಳೆಯರನ್ನು (Woman) ಪೊಲೀಸರು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ. ಬಂಡೆಮಠದ (Bande Mutt) ಬಸವಲಿಂಗ ಶ್ರೀಗಳ (Basavalinga Swamiji) ಆತ್ಮಹತ್ಯೆ ಪ್ರಕರಣ ಇದೀಗ …
Read More »ಕನ್ನಡ ರಾಜ್ಯೋತ್ಸವದಂದು ಕರಾಳ ದಿನ ಆಚರಣೆಗೆ M.E.S.ಸಿದ್ಧತೆ
ಬೆಳಗಾವಿ: ನಾಡದ್ರೋಹಿ ಎಂಇಎಸ್‍ನಿಂದ (MES) ಮತ್ತೆ ಗಡಿ ಖ್ಯಾತೆ ಆರಂಭವಾಗಿದ್ದು, ನವೆಂಬರ್ 1ರ ಕನ್ನಡ ರಾಜ್ಯೋತ್ಸವದಂದು (Kannada Rajyotsava) ಎಂಇಎಸ್ ಮುಖಂಡರು ಕರಾಳ ದಿನಾಚರಣೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ನಾಡದ್ರೋಹಿಗಳು ಕರಾಳ ದಿನ ಆಚರಿಸುವ ಕುರಿತಾಗಿ ಪೋಸ್ಟ್ ಹಾಕಿದ್ದಾರೆ. ನವೆಂಬರ್ 1ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುತ್ತಿದೆ. ಅದರಲ್ಲೂ ಕುಂದಾನಗರಿ ಬೆಳಗಾವಿಯಲ್ಲಿ (Belagavi) ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ರಾಜ್ಯದ ಮೂಲೆಮೂಲೆಗಳಿಂದ ಕನ್ನಡ ರಾಜ್ಯೋತ್ಸವ ನೋಡಲು …
Read More »