ಗೋಕಾಕ : 67ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮೂಡಲಗಿ ಪಟ್ಟಣದ ಕನ್ನಡ ಪರ ಸಂಘಟನೆಗಳಿಗೆ 3 ಸಾವಿರ ಕನ್ನಡ ಬಾವುಟಗಳನ್ನು ವಿತರಿಸಿದರು. ಮೂಡಲಗಿ ಪಟ್ಟಣದಲ್ಲಿ ನ. 3 ರಂದು ತಾಲೂಕಿನ ಕನ್ನಡ ಪರ ಸಂಘಟನೆಗಳಿಂದ ಈ ಬಾರಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದ್ದು, ಅದಕ್ಕಾಗಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಸಂಘಟನೆಗಳ ಕಾರ್ಯಕರ್ತರಿಗೆ ಕನ್ನಡ ಬಾವುಟಗಳನ್ನು ವಿತರಿಸಿದರು. …
Read More »Yearly Archives: 2022
ನುಡಿದಂತೆ ನಡೆದ ಹೆಮ್ಮೆಯ ಶಾಸಕ ಬಾಲಚಂದ್ರ ಜಾರಕಿಹೊಳಿ
ಮೂಡಲಗಿ: ಮೂಡಲಗಿಗೆ ಉಪನೋಂದಣಿ ಅಧಿಕಾರಿಗಳ ಕಛೇರಿಯನ್ನು ಆರಂಭಿಸುವ ಮೂಲಕ ತಾಲೂಕಿನ ಜನತೆಯ ಬಹುದಿನಗಳ ಬೇಡಿಕೆಯನ್ನು ಈಡೇರಿಸಿದ್ದೇನೆ ಎಂದು ಶಾಸಕ ಮತ್ತು ಕೆ.ಎಂ.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಪಟ್ಟಣದ ತಹಶೀಲ್ದಾರ ಕಚೇರಿ ಬಳಿ ಸೋಮವಾರದಂದು ನೂತನವಾಗಿ ಆರಂಭಗೊಂಡಿರುವ ಉಪನೋಂದಣಾಧಿಕಾರಿಗಳ ಕಛೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಕ್ಟೋಬರ ತಿಂಗಳಾಂತ್ಯಕ್ಕೆ ಮೂಡಲಗಿಯಲ್ಲಿ ಕಛೇರಿಯ ಪೂಜೆ ಸಲ್ಲಿಸುವ ಮೂಲಕ ಸಾರ್ವಜನಿಕರು ಹಾಗೂ ರೈತರಿಗೆ ನೀಡಿದ ವಾಗ್ದಾನದಂತೆ ನಡೆದುಕೊಂಡಿರುವದಾಗಿ ಅವರು ಹೇಳಿದರು. …
Read More »ಕುಂದಾನಗರಿಯಲ್ಲಿ ರಾಜ್ಯೋತ್ಸವಕ್ಕೆ ಭಾರೀ ಸಿದ್ಧತೆ
ಬೆಳಗಾವಿ : ಮೈಸೂರಿಗೆ ಹೇಗೆ ದಸರಾ ಪ್ರಾಮುಖ್ಯವೋ ಹಾಗೆ ರಾಜ್ಯೋತ್ಸವ ಬೆಳಗಾವಿಗೆ ಪ್ರಾಮುಖ್ಯ. ಇಲ್ಲಿ ನಡೆಯುವ ರಾಜ್ಯೋತ್ಸವ ಸಂಭ್ರಮ ಕಣ್ತುಂಬಿಕೊಳ್ಳೋದೇ ಸಂಭ್ರಮ.ಕೊರೋನಾ ಹಾಗೂ ಪುನೀತ್ ರಾಜ್‌ಕುಮಾರ್ ಅಕಾಲಿಕ ನಿಧನದಿಂದಾಗಿ ಎರಡು ವರ್ಷಗಳಿಂದ ಕಳೆಗುಂದಿದ್ದ ರಾಜ್ಯೋತ್ಸವ ಈ ಬಾರಿ ಅದ್ದೂರಿಯಾಗಿ ನೆರವೇರಲಿದೆ. ಈ ಮಧ್ಯೆಯೇ ರಾಜ್ಯೋತ್ಸವದಂದೇ ಕರಾಳ ದಿನಾಚರಣೆಗೆ MES ಮುಂದಾಗಿದೆ.ಇದು ಕನ್ನಡಿಗರನ್ನು ಕೆರಳಿಸಿದೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಕರಾಳ ದಿನಕ್ಕೆ ಕರೆ ನೀಡುತ್ತಿರುವ ಎಂಇಎಸ್ ಪುಂಡರಿಗೆ ಮಹಾರಾಷ್ಟ್ರದ ಮಾಜಿ …
Read More »ಹೋಳಿಗೆ ದಾಸೋಹಕ್ಕೆ ನಟ ಸಾಯಿ ಕುಮಾರ್ ಹಾಗೂ ಸಚಿವ ಗೋವಿಂದ ಕಾರಜೋಳ ಚಾಲನೆ
ಬೆಳಗಾವಿ :ಕುಂದಾನಗರಿ ಬೆಳಗಾವಿಯಲ್ಲಿ ಮೂರು ವರ್ಷಗಳ ಬಳಿಕ ಅದ್ಧೂರಿ ಕನ್ನಡ ರಾಜ್ಯೋತ್ಸವದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು, ಬರುವವರಿಗೆಲ್ಲಾ ಹೋಳಿಗೆ ಊಟ ಹಾಕಿಸಲು ನಿರ್ಧರಿಸಲಾಗಿದೆ. ಕನ್ನಡ ರಾಜ್ಯೋತ್ಸವದಲ್ಲಿ ಭಾಗಿಯಾಗುವ 50 ಸಾವಿರ ಜನರಿಗೆ ಹುಕ್ಕೇರಿ ಹಿರೇಮಠ ವತಿಯಿಂದ 1 ಲಕ್ಷ ಹೋಳಿಗೆ ದಾಸೋಹದ ವ್ಯವಸ್ಥೆ ಮಾಡಲಾಗಿದೆ ಎಂದು ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ. ಈ ಬಾರಿ ಅದ್ದೂರಿಯಾಗಿ ರಾಜ್ಯೋತ್ಸವ ನಡೆಸಲು ತೀರ್ಮಾನಿಸಿದ್ದೇವೆ, ಒಬ್ಬರಿಗೆ ಎರಡು ಹೋಳಿಗೆ ಪ್ರಕಾರ ಒಂದು ಲಕ್ಷ ಹೋಳಿಗೆ ಮಾಡಿಸಲು …
Read More »ಬೆಳಗಾವಿಗೆ ಬರುತ್ತಿದ್ದ ಶಿವಸೇನೆ ಕಾರ್ಯಕರ್ತರನ್ನು ವಾಪಸ್ ಕಳುಹಿಸಿದ ಪೊಲೀಸರು
ಚೀಕ್ಕೋಡಿ: ಕನ್ನಡ ರಾಜ್ಯೋತ್ಸವ ಆಚರಣೆಗೆ ಸಿದ್ಧತೆ ನಡೆಸಿದ್ದಾರೆ.ಇತ್ತ ಗಡಿ ಪ್ರದೇಶದಲ್ಲಿ ಶಿವಸೇನೆ ಮತ್ತು ಎಂಇಎಸ್ ಕಾರ್ಯಕರ್ತರು ನಾಡವಿರೋಧಿ ಚಟುವಟಿಕೆ ಶುರು ಮಾಡಿದ್ದಾರೆ. ರಾಜ್ಯೋತ್ಸವಕ್ಕೆ ಬೆಳಗಾವಿ ಸಜ್ಜಾಗುತ್ತಿದ್ದರೆ, ನಾಡ ದ್ರೋಹಿ ಶಿವಸೇನೆ ತನ್ನ ಪುಂಡಾಟಿಕೆ ಮುಂದುವರಿಸಿ ರಸ್ತೆಯಲ್ಲಿ ಕುಳಿತು ಹೈಡ್ರಾಮಾ ನಡೆಸಿದೆ.ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 4ರ ಬಳಿ ಇರುವ ಕುಗನೊಳ್ಳಿ ಚೆಕ್‌ಪೋಸ್ಟ್‌ನಲ್ಲಿ ನಾಳೆ ನಾಡಹಬ್ಬವನ್ನು ಜೋರಾಗಿ ಆಚರಣೆ ಮಾಡಬೇಕು ಎಂದು ಕನ್ನಡಿಗರು ತಯಾರಿ ನಡೆಸುತ್ತಿದ್ದಾರೆ. ಇತ್ತ ಶಿವಸೇನೆ …
Read More »ಬೆಳಗಾವಿಯ ಸನೀಹದ ರಸ್ತೆ ಪಕ್ಕದ ಗೂಡಂಗಡಿಯಲ್ಲಿ ಟೀ ಕುಡಿದ ಸಚಿನ್ ತೆಂಡೋಲ್ಕರ್.
ಕ್ರಿಕೇಟ್ನ ದಿಗ್ಗಜ, ಕ್ರಿಕೇಟ್ನ ದೇವರು ಎಂದೇ ಕ್ಯಾತಿಯಾಗಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ( Sachin Tendulkar ) ಇಂದು (ಅ.31) ಬೆಳಗಾವಿಯ ಸನೀಹದ ರಸ್ತೆ ಪಕ್ಕದ ಗೂಡಂಗಡಿಯಲ್ಲಿ ಟೀ ಕುಡಿದಿದ್ದಾರೆ. ಸಚಿನ್ ತೆಂಡೂಲ್ಕರ್ ಮುಂಬೈಯಿಂದ ಬೆಳಗಾವಿ ಮಾರ್ಗವಾಗಿ ಗೋವಾಗೆ ತೆರಳುತ್ತಿದ್ದರು. ಈ ವೇಳೆ ಬೆಳಗಾವಿ ಹೊರ ವಲಯದ ಮಚ್ಚೆ ಬಳಿಯ ರಾಷ್ಟ್ರೀಯ ಹೆದ್ದಾರಿ 4 (ಎ) ಮೇಲಿರುವ ವೈಜು ನಿತೂರ್ಕರ್ ಎಂಬುವವರ ಫೌಜಿ ಟೀ ಸ್ಟಾಲ್ನಲ್ಲಿ ಚಹಾ ಸವಿದಿದ್ದಾರೆ. …
Read More »ಬೆಳಗಾವಿ: ಹೆಂಡತಿ ಚುಡಾಯಿಸುತ್ತಿರುವುದನ್ನು ಪ್ರಶ್ನೆ ಮಾಡಿದ ಗಂಡನ ಬರ್ಬರ ಹತ್ಯೆ
ಬೆಳಗಾವಿ: ಹೆಂಡತಿಯನ್ನ ಚುಡಾಯಿಸುತ್ತಿರುವುದನ್ನು ಪ್ರಶ್ನೆ ಮಾಡಿದ್ದಕ್ಕೆ ವ್ಯಕ್ತಿಯನ್ನು ಕಟ್ಟಿಗೆಯಿಂದ ಹೊಡೆದು, ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಖಾನಾಪೂರದಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆ ಖಾನಾಪುರ ಪಟ್ಟಣದ ಬಾಹೇರ್ ಗಲ್ಲಿಯ ನಿವಾಸಿ ಮಾರುತಿ ಜಾಧವ್ (40) ಕೊಲೆಯಾದ ವ್ಯಕ್ತಿ. ಪಕ್ಕದ ಮನೆಯ ಪ್ರಶಾಂತ್ ನಾರ್ವೇಕರ್ (35) ಹತ್ಯೆ ಮಾಡಿದ ಆರೋಪಿ. ಕಳೆದ ಕೆಲ ದಿನಗಳಿಂದ ಆರೋಪಿ ಪ್ರಶಾಂತ್, ಮಾರುತಿ ಪತ್ನಿಯನ್ನ ಚುಡಾಯಿಸುತ್ತಿದ್ದನಂತೆ. ಈ ಬಗ್ಗೆ ನಿನ್ನೆ ರಾತ್ರಿ ಮಾರುತಿ ಪ್ರಶ್ನೆ …
Read More »ರಾಜ್ಯದಲ್ಲಿ ಒಟ್ಟು 29 ಹೊಸ ಸರ್ಕಾರಿ ಪದವಿ ಪೂರ್ವ ಕಾಲೇಜು ಘೋಷಣೆ ಮಾಡಲಾಗಿದೆ.
ಬೆಂಗಳೂರು: ಶಿಕ್ಷಣ ಇಲಾಖೆಯಿಂದ (Education Department) ಹೊಸ ಪಿಯು ಕಾಲೇಜು ಪ್ರಾರಂಭಿಸಲು ಆದೇಶ ನೀಡಲಾಗಿದೆ. ರಾಜ್ಯದಲ್ಲಿ ಒಟ್ಟು 29 ಹೊಸ ಸರ್ಕಾರಿ ಪದವಿ ಪೂರ್ವ ಕಾಲೇಜು ಘೋಷಣೆ ಮಾಡಲಾಗಿದೆ. ಹೊಸ ಸರ್ಕಾರಿ ಪದವಿ ಪೂರ್ವ ಕಾಲೇಜನ್ನು ಮಂಜೂರು ಮಾಡಲಾದ ಸ್ಥಳಗಳ ಪಟ್ಟಿ ಈ ಕೆಳಗಿನಂತಿದೆ. 1.ಸರ್ಕಾರಿ ಪದವಿ ಪೂರ್ವ ಕಾಲೇಜು, ದೇವತ್ಕಲ್, ಸುರಪೂರ ತಾಲ್ಲೂಕು, ಯಾದಗಿರಿ ಜಿಲ್ಲೆ. 2. ಸರ್ಕಾರಿ ಪದವಿ ಪೂರ್ವ ಕಾಲೇಜು, ಹುಣಸಗಿ, ಸುರಪೂರ ತಾಲ್ಲೂಕು, ಯಾದಗಿರಿ …
Read More »ಅಂಗವೈಕಲ್ಯದ ಮಧ್ಯೆಯೂ ಕ್ರೀಡಾ ಕ್ಷೇತ್ರದಲ್ಲಿ ಬೆಳಗಾವಿಯ ಈಜುಪಟು ರಾಘವೇಂದ್ರ ಅಣ್ವೇಕರ್‌ಗೆ ರಾಜ್ಯೋತ್ಸವ ಪ್ರಶಸ್ತಿ
ಬೆಳಗಾವಿಯ ಈಜುಪಟು ರಾಘವೇಂದ್ರ ಅಣ್ವೇಕರ್‌ಗೆ ರಾಜ್ಯೋತ್ಸವ ಪ್ರಶಸ್ತಿ ಬೆಳಗಾವಿ: ಇಲ್ಲಿನ ಸಹ್ಯಾದ್ರಿ ನಗರದ ನಿವಾಸಿ, ಅಂಗವಿಕಲ ಈಜುಪಟು ರಾಘವೇಂದ್ರ ರತ್ನಾಕರ ಅಣ್ವೇಕರ್(35) ಕ್ರೀಡಾ ಕ್ಷೇತ್ರದ ಸಾಧನೆಗಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಅವರು ಮೂಲತಃ ಧಾರವಾಡ ಜಿಲ್ಲೆಯ ಹುಬ್ಬಳ್ಳಿಯವರು. ಎಂ.ಎ(ರಾಜ್ಯಶಾಸ್ತ್ರ) ಸ್ನಾತಕೋತ್ತರ ಪದವಿ ಗಳಿಸಿದ್ದಾರೆ. 2014ರಿಂದ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದಾರೆ. 14ನೇ ವಯಸ್ಸಿನಿಂದ ಈಜು ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿರುವ ಅವರು, ಹಾಂಕಾಂಗ್, ಮಲೇಷ್ಯಾ, ಡೆನ್ಮಾರ್ಕ್ ಮತ್ತಿತರ …
Read More »ಸ್ವಾಮೀಜಿ ವಿರುದ್ಧ ಸೇಡು ತೀರಿಸಿಕೊಳ್ಳಲು ‘ಹನಿ ಟ್ರ್ಯಾಪ್’ ಗೆ ಮುಂದಾಗಿದ್ದಳಾ ಇಂಜಿನಿಯರಿಂಗ್ ವಿದ್ಯಾರ್ಥಿನಿ ?
ಕಂಚುಗಲ್ ಬಂಡೆ ಮಠದ ಬಸವಲಿಂಗ ಶ್ರೀಗಳ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಕಣ್ಣೂರು ಮಠದ ಶ್ರೀ ಮೃತ್ಯುಂಜಯ ಸ್ವಾಮೀಜಿ, ತುಮಕೂರಿನ ವಕೀಲ ಮಹಾದೇವಯ್ಯ ಹಾಗೂ ದೊಡ್ಡಬಳ್ಳಾಪುರದ ಇಂಜಿನಿಯರಿಂಗ್ ವಿದ್ಯಾರ್ಥಿನಿ ನೀಲಾಂಬಿಕೆ ಬಂಧಿತರಾದವರಾಗಿದ್ದಾರೆ. ಕಂಚುಗಲ್ ಬಂಡೆ ಮಠದ ಪೀಠಾಧಿಪತಿ ಆಗಬೇಕೆಂಬ ಹಂಬಲ ಹೊಂದಿದ್ದ ಮೃತ್ಯುಂಜಯ ಸ್ವಾಮೀಜಿ, ವಕೀಲ ಮಹದೇವಯ್ಯ ಅವರೊಂದಿಗೆ ಸೇರಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ನೀಲಾಂಬಿಕೆ ಉರ್ಫ್ ಚಂದು ಎಂಬಾಕೆಯನ್ನು ಬಳಸಿಕೊಂಡು ಹನಿ ಟ್ರ್ಯಾಪ್ ಖೆಡ್ಡಾ ತೋಡಿದ್ದರು …
Read More »