Breaking News

Yearly Archives: 2022

ರಾಹುಲ್‌ ಯಾತ್ರೆ ತಡೆಗೆ ಕೋವಿಡ್ ನೆಪ: ಸತೀಶ್‌ ಜಾರಕಿಹೊಳಿ

ಬೆಳಗಾವಿ: ದೇಶದಲ್ಲಿ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿರುವ “ಭಾರತ್‌ ಜೋಡೋ ಯಾತ್ರೆ’ ತಡೆಯಲು ಬಿಜೆಪಿ ಮತ್ತೆ ಕೊರೊನಾ ಬಳಕೆ ಮಾಡುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಆರೋಪಿಸಿದರು.   ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ದೇಶದಲ್ಲಿ ಕಾಂಗ್ರೆಸ್‌ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯುತ್ತಿವೆ. ಇದರಲ್ಲಿ ಮುಖ್ಯವಾಗಿ “ಭಾರತ ಜೋಡೋ ಯಾತ್ರೆ’ ಅಭೂತಪೂರ್ವವಾಗಿ ಮುನ್ನುಗ್ಗುತ್ತಿದೆ. ಇದನ್ನು ಸಹಿಸಿಕೊಳ್ಳದ ಬಿಜೆಪಿ ಅದನ್ನು ತಡೆಯಲು ಕೊರೊನಾ ನೆಪ ಹೇಳುತ್ತಿದೆ …

Read More »

ಬೊಮ್ಮಾಯಿ ಸೋಮವಾರ ದಿಢೀರ್‌ ದಿಲ್ಲಿಗೆ, ವಿಸ್ತರಣೆಯೋ, ಸೇರ್ಪಡೆಯೋ?

ಬೆಂಗಳೂರು: ವರಿಷ್ಠರ ಬುಲಾವ್‌ ಹಿನ್ನೆಲೆಯಲ್ಲಿ ವಿಧಾನಮಂಡಲ ಅಧಿವೇಶನದ ನಡುವೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ದಿಢೀರ್‌ ದಿಲ್ಲಿಗೆ ತೆರಳುತ್ತಿದ್ದು, ಸಂಪುಟ ವಿಸ್ತರಣೆ ಸುದ್ದಿಗೆ ರೆಕ್ಕೆಪುಕ್ಕ ಸಿಕ್ಕಂತಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ 6 ಮಂದಿ ಸಂಕ್ರ ಮಣದ ವೇಳೆಗೆ ಸಚಿವರಾಗಲಿದ್ದಾರೆ ಎನ್ನಲಾಗಿದೆ. ಅಧಿವೇಶನ ಮುಗಿದ ಬಳಿಕ ಜ. 2 ಅಥವಾ 3ರಂದು ಮುಖ್ಯಮಂತ್ರಿ ದಿಲ್ಲಿಗೆ ಹೋಗುವ ನಿರೀಕ್ಷೆಯಿತ್ತು. ಈಗ ದಿಢೀರ್‌ ಬುಲಾವ್‌ ಬಂದಿರುವ ಹಿನ್ನೆಲೆಯಲ್ಲಿ ತುರ್ತಾಗಿ ದಿಲ್ಲಿಗೆ ತೆರಳುತ್ತಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್‌ …

Read More »

ಉರುಳಿದ ಗಾಲಿಗೆ ಸಿಲುಕುವವರು ಯಾರು?

ಗಾಲಿ ಒಂದು ಸುತ್ತು ಉರುಳಿದೆ. ಗಾಲಿ ರಭಸ ಪಡೆದು ಎದುರಾಳಿಗಳನ್ನು ಮಣಿಸುವುದು ಅಷ್ಟು ಸುಲಭದ ಮಾತಲ್ಲ! ನಿರೀಕ್ಷೆಯಂತೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹೊಸ ಪಕ್ಷ ಘೋಷಿಸಿದ್ದಾರೆ. ಅವರ ಈ ಉದ್ದೇಶದಲ್ಲೇ ಎದುರಾಳಿಗಳ ವಿರುದ್ಧ ಸೇಡು ತೀರಿಸಿಕೊಳ್ಳಬೇಕೆಂಬುದು ಅಡಗಿದಂತಿದೆ. ಬಿಜೆಪಿಯನ್ನು ಅಧಿಕಾರದಲ್ಲಿ ಕೂರಿಸಲು ಅಷ್ಟೆಲ್ಲ ದುಡಿದರೂ ಪಕ್ಷದ ಸರಕಾರದಿಂದಲೇ ತಮಗೆ ಅನ್ಯಾಯ ವಾಗಿದೆ. ಸರಕಾರದ ಏಜೆನ್ಸಿಗ ಳಿಂದ ತಮಗೆ ಸಂಕಷ್ಟ ತಪ್ಪಲಿಲ್ಲ ಎಂಬ ರೆಡ್ಡಿ ಅವರ ಆಕ್ರೋಶ ಬಿಜೆಪಿ …

Read More »

ಸರಕಾರದ ವಿವಿಧ 44 ಇಲಾಖೆಗಳಲ್ಲಿ 2.58 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ

ಬೆಂಗಳೂರು: ಸರಕಾರದ ವಿವಿಧ 44 ಇಲಾಖೆಗಳಲ್ಲಿ 2.58 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ ಇವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಒಂದು ವರ್ಷದಲ್ಲಿ ಒಂದು ಲಕ್ಷ ಹುದ್ದೆಗಳನ್ನು ಭರ್ತಿ ಮಾಡಿರುವುದಾಗಿ ಹೇಳಿರುವುದು ಹೊಸ ಭರವಸೆ ಮೂಡಿಸಿದೆ.   ಗಮನಾರ್ಹ ವಿಚಾರವೆಂದರೆ ಪ್ರತಿನಿತ್ಯ ಜನರೊಂದಿಗೆ ಹೆಚ್ಚು ಒಡನಾಡಬೇಕಾದ ಶಿಕ್ಷಣ, ಆರೋಗ್ಯ, ಸಮಾಜ ಕಲ್ಯಾಣ, ಕಂದಾಯ, ಗೃಹ ಇಲಾಖೆಗಳಲ್ಲೇ ಹೆಚ್ಚು ಹುದ್ದೆಗಳು ಖಾಲಿ ಇವೆ. ಕೆಲವು ತಿಂಗಳಲ್ಲಿ ಒಂದಿಷ್ಟು ನೇಮಕಾತಿ ಪ್ರಕ್ರಿಯೆಗಳು ನಡೆದಿದ್ದರೂ, …

Read More »

ಬೆಳಗಾವಿ: ಸರ್ಕಾರಿ ನೌಕರರ ನಿಯೋಜನೆ ನಿಯಮಗಳು ಇನ್ನಷ್ಟು ಕಠಿಣ- ಸಿಎಂ ಬೊಮ್ಮಾಯಿ

ಬೆಳಗಾವಿ, : ಸರ್ಕಾರಿ ಅಧಿಕಾರಿಗಳು ಮತ್ತು ನೌಕರರನ್ನು ಅನ್ಯ ಇಲಾಖೆಗಳಿಗೆ ನಿಯೋಜಿಸುವ ಸರ್ಕಾರದ ಕ್ರಮವನ್ನು ಅಧಿಕಾರಿ ಹಾಗೂ ನೌಕರರು ಪ್ರಭಾವ ಬಳಸಿ ಅನಗತ್ಯವಾಗಿ ಇತರೆ ಇಲಾಖೆಗಳಿಗೆ ನಿಯೋಜನೆಗೊಳ್ಳುತ್ತಿದ್ದಾರೆ. ಇದನ್ನು ತಪ್ಪಿಸಲು ನಿಯೋಜನೆ ನಿಯಮಗಳನ್ನು ಇನ್ನಷ್ಟು ಕಠಿಣಗೊಳಸಿಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.   ವಿಧಾನ ಪರಿಷತ್‍ನಲ್ಲಿ ಶಾಸಕ ಮಂಜುನಾಥ ಭಂಡಾರಿಯವರು ಕೇಳಿದ ಪ್ರಶ್ನೆಗೆ ಅವರು ಉತ್ತರ ನೀಡಿದರು. ಸರ್ಕಾರಿ ನೌಕರರು ನಿಯೋಜನೆ ಮೇರೆಗೆ ಅನ್ಯ ಇಲಾಖೆ ತೆರಳವುದರಿಂದ ಅನೇಕ ತೊಂದರೆಗಳು …

Read More »

ಜನಾರ್ಧನ ರೆಡ್ಡಿ ಹೊಸ ಪಕ್ಷ ಘೋಷಣೆ ಜಗದೀಶ್ ಶೆಟ್ಟರ್ ಹೇಳಿದ್ದೇನು?

ಧಾರರವಾಡ: ಜನಾರ್ಧನ ರೆಡ್ಡಿ ಹೊಸ ಪಕ್ಷ ಘೋಷಣೆ ಮಾಡಿದ ಬಗ್ಗೆ ನಮ್ಮ ಪಕ್ಷ ಏನು ತೀರ್ಮಾನ ಕೈಗೊಳ್ಳುತ್ತದೋ ಎಂಬುದನ್ನು ಕಾದು ನೋಡಬೇಕಾಗಿದೆ ಎಂಬುದಾಗಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಜನಾರ್ಧನ ರೆಡ್ಡಿ ಹೊಸ ಪಕ್ಷ ಘೋಷಣೆ ವಿಚಾರವಾಗಿ ಮಾತನಾಡಿದ ಅವರು, ನಮ್ಮ ಪಕ್ಷ ಈ ಬಗ್ಗೆ ಏನು ತೀರ್ಮಾನ ಕೈಗೊಳ್ಳುತ್ತದೋ ಗೊತ್ತಿಲ್ಲ. ಈ ಬಗ್ಗೆ ಪಕ್ಷದ ವೇದಿಕೆಯಲ್ಲೇ ನಾವು ಚರ್ಚೆ ಮಾಡುತ್ತೇವೆ ಎಂದರು. ನಮ್ಮ …

Read More »

ಹುಬ್ಬಳ್ಳಿ ಜಯದೇವ ಆಸ್ಪತ್ರೆ’: ಜ.12ಕ್ಕೆ ಪ್ರಧಾನಿಯಿಂದ ಶಂಕುಸ್ಥಾಪನೆ ಸಾಧ್ಯತೆ

ಬೆಂಗಳೂರು: ಕಿತ್ತೂರು ಕರ್ನಾಟಕ ಭಾಗದ ಬಹುನಿರೀಕ್ಷಿತ ಜಯದೇವ ಹೃದ್ರೋಗ ಆಸ್ಪತ್ರೆ ನಿರ್ಮಾಣಕ್ಕೆ ಕೊನೆಗೂ ಕಾಲ ಕೂಡಿ ಬಂದಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು 2023ರ ಜ.12ಕ್ಕೆ ಶಂಕು ಸ್ಥಾಪನೆ ನೆರವೇರಿಸುವ ಸಾಧ್ಯತೆಯಿದೆ.   ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕನಸಿನ ಕೂಸಾಗಿರುವ ಹುಬ್ಬಳ್ಳಿ ಜಯದೇವ ಆಸ್ಪತ್ರೆ ನಿರ್ಮಾಣಕ್ಕೆ ಈಗಾಗಲೇ ಸಿದ್ಧತೆಗಳು ಭರದಿಂದ ಸಾಗಿದ್ದು 2022-23ರ ರಾಜ್ಯ ಬಜೆಟ್‌ನಲ್ಲಿ 250 ಕೋಟಿ ರೂ. ಘೋಷಿಸಲಾಗಿತ್ತು. ಈ ಹಿಂದೆಯೇ ಹಲವು ಬಾರಿ ಆಸ್ಪತ್ರೆ ಕಟ್ಟಡದ ಶಂಕುಸ್ಥಾಪನೆಗೆ …

Read More »

ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ ಮಾಡುವುದಾಗಿ ಘೋಷಿಸಿದ ಜನಾರ್ದನ ರೆಡ್ಡಿ

ಬೆಂಗಳೂರು: ಕೆಲ ದಿನಗಳಿಂದ ರಾಜಕೀಯ ಮರು ಪ್ರವೇಶದ ಬಗ್ಗೆ ಕುತೂಹಲಕ್ಕೆ ಕಾರಣವಾಗಿದ್ದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಹೊಸ ಪಕ್ಷ ಸ್ಥಾಪನೆ ಮಾಡುವುದಾಗಿ ಘೋಷಿಸಿಕೊಂಡಿದ್ದಾರೆ. ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ ಎಂದು ಹೊಸ ಪಕ್ಷ ಸ್ಥಾಪಿಸಿ ರಾಜಕೀಯದ ಎರಡನೇ ಇನ್ನಿಂಗ್ಸ್ ಆರಂಭಿಸುವುದಾಗಿ ಇಂದು ಹೇಳಿದ್ದಾರೆ.   ಬಸವಣ್ಣನವರು ಹೇಳಿದ ಹಾಗೆ ಯಾವುದೇ ಜಾತಿ ಮತ ಭೇದ ಇಲ್ಲದ ಹಾಗೆ, ಮೇಲು ಕೀಳು ಇಲ್ಲದ ಹಾಗೆ ಏನೆಲ್ಲಾ ಅಭಿವೃದ್ಧಿ …

Read More »

ಕನ್ನಡ ಭವನ ರಂಗಮಂದಿರ ಸಿದ್ಧ

ಬೆಳಗಾವಿ: ಗಡಿ ಜಿಲ್ಲೆಯ ಕಲಾವಿದರು, ಸಾಹಿತಿಗಳು, ಪ್ರೇಕ್ಷಕರು ಎರಡು ದಶಕಗಳಿಂದ ಕಾಣುತ್ತಿದ್ದ ಕನಸು ಕೊನೆಗೂ ಕೈಗೂಡಿದೆ. ಸಾರಸ್ವತ ಲೋಕದ ಕೇಂದ್ರವಾಗಿ ಕನ್ನಡ ಭವನ ರಂಗಮಂದಿರ ತಲೆಎತ್ತಿದೆ. ಡಿ.27ರಿಂದ ಸಾಂಸ್ಕೃತಿಕ ವೇದಿಕೆಯಾಗಿ ತೆರೆದುಕೊಳ್ಳಲಿದೆ.   ಕುಂದಾನಗರಿಯ ನೆಹರೂ ನಗರದಲ್ಲಿ ಈ ಭವನ ನಿರ್ಮಿಸಲಾಗಿದೆ. ಶ್ರೀಕೃಷ್ಣದೇವರಾಯ ವೃತ್ತದಿಂದ ತುಸು ಮುಂದಕ್ಕೆ ಹೋಗಿ, ಬಲಕ್ಕೆ ತಿರುಗಿದರೆ ರಾಮದೇವ ಹೋಟೆಲ್‌ ಹಿಂಭಾಗದಲ್ಲಿ ಭವನವಿದೆ. ಹೊರಗಡೆಯಿಂದ ಕಣ್ಹಾಯಿಸಿದರೆ ಹೈಟೆಕ್‌ ಕಟ್ಟಡದಂತೆ ಕಾಣುವ ಈ ಭವನ ಎಲ್ಲ ಆಧುನಿಕ ಸೌಕರ್ಯಗಳನ್ನೂ …

Read More »

ಅಥಣಿ ಪುರಸಭೆ ಸದಸ್ಯರಿಂದ ಪ್ರತಿಭಟಣೆ

ಅಥಣಿ ಪುರಸಭೆ ಚುನಾವಣೆ ಮುಗಿದು ಇಂದಿಗೆ ವರ್ಷವಾಯ್ತು, ಇದುವರೆಗೂ ಚುನಾಯಿತ ಪ್ರತಿನಿಧಿಗಳಿಗೆ ಅಧಿಕಾರ ಸಿಕ್ಕಿಲ್ಲ ಇದರಿಂದ ಪಟ್ಟಣದ ಅಭಿವೃದ್ದಿಗೆ ಹಿನ್ನಡೆಯಾಗುತ್ತಿದೆ. ಸರಕಾರ ಜನತಾ ಜನಾರ್ಧನರಿಗೆ ಮೋಸಮಾಡುತ್ತಿದೆ ಎಂದು ಆರೋಪಿಸಿ ಪುರಸಭೆ ಸದಸ್ಯರು ಕೈಗೆ ಕಪ್ಪುಪಟ್ಟಿ ಧರಿಸಿ ಪ್ರತಿಭಟಣೆ ಮಾಡಿದರು. ಪಟ್ಟಣದ ಪುರಸಭೆ ಆವರಣದಲ್ಲಿ ಬೆಳಿಗ್ಗೆ ಪ್ರತಿಭಟಣೆ ಮಾಡುತ್ತಾ ಮಾತನಾಡಿದ ಸದಸ್ಯ ರಾವಸಾಬ ಐಹೊಳೆ ಒಂದು ವರ್ಷವಾಯ್ತು ನಾವು ಆಯ್ಕೆಗೊಂಡು ಇದುವರೆಗೂ ಅಧಿಕಾರ ಸಿಕ್ಕಿಲ್ಲ, ಇದರಿಂದ ವಾರ್ಡಗಳಲ್ಲಿ ಯಾವುದೇ ಅಭಿವೃದ್ದಿ ಕಾರ್ಯವಾಗಿಲ್ಲ, …

Read More »