Breaking News

Daily Archives: ಡಿಸೆಂಬರ್ 2, 2022

ಪ್ರತಿಬಂಧಕಾಜ್ಞೆ ಹೊರಡಿಸುವ ಬಗ್ಗೆ ಸಿಎಂ ಸುಳಿವು…

ಬೆಳಗಾವಿ-ಡಿ.6ರಂದು ಬೆಳಗಾವಿಗೆ ಮಹಾರಾಷ್ಟ್ರ ಸಚಿವದ್ವಯರ ಭೇಟಿ ವಿಚಾರವಾಗಿ ಪ್ರತಿಬಂಧಕಾಜ್ಞೆ ಹೊರಡಿಸುವ ಬಗ್ಗೆ ಪರೋಕ್ಷವಾಗಿ ಸಿಎಂ ಬಸವರಾಜ ಬೊಮ್ಮಾಯಿ ಸುಳಿವು ನೀಡಿದ್ದಾರೆ.ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ದೊಡಮಂಗಡಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಸಿಎಂ ಸುಳಿವು ನೀಡಿದ್ದಾರೆ. ಈಗಾಗಲೇ ನಮ್ಮ ರಾಜ್ಯದ ಮುಖ್ಯ ಕಾರ್ಯದರ್ಶಿ ಮಹಾರಾಷ್ಟ್ರದ ಮುಖ್ಯ ಕಾರ್ಯದರ್ಶಿಗೆ ಫ್ಯಾಕ್ಸ್ ಮೂಲಕ ಸಂದೇಶ ಕಳಿಸಿದ್ದಾರೆ.ಎರಡೂ ರಾಜ್ಯಗಳ ಮಧ್ಯೆ ಈ ರೀತಿ ಪರಿಸ್ಥಿತಿ ಇರುವಾಗ ಅವರು ಬರೋದು ಸೂಕ್ತ ಅಲ್ಲ. ಬರಬಾರದು ಅನ್ನೋ ಸಂದೇಶ …

Read More »

ದಿಬ್ಬ ಏರುವಾಗ ನಿಯಂತ್ರಣ ತಪ್ಪಿದ ಸಾರಿಗೆ ಬಸ್

ಹುಬ್ಬಳ್ಳಿ: ದಿಬ್ಬ ಏರುವಾಗ ತಾಂತ್ರಿಕ ಸಮಸ್ಯೆಯಿಂದ ಚಾಲಕನ ನಿಯಂತ್ರಣ ತಪ್ಪಿದ ನಗರ ಸಾರಿಗೆ ಬಸ್ ಕಂದಕಕ್ಕೆ ಉರುಳಿದ್ದು, ಚಾಲಕ ಹಾಗೂ ನಿರ್ವಾಹಕನ ಸಮಯಪ್ರಜ್ಞೆಯಿಂದ ಅನಾಹುತ ತಪ್ಪಿದೆ. ಇಲ್ಲಿನ ಗೋಕುಲ ರಸ್ತೆ ಮೊರಾರ್ಜಿ ನಗರದಲ್ಲಿ ಸಿಬಿಟಿಯಿಂದ ಆರ್.ಎಂ. ಲೋಹಿಯಾ ನಗರಕ್ಕೆ ತೆರಳುತ್ತಿದ್ದ ನಗರ ಸಾರಿಗೆ ಬಸ್‌ ಬೆಳಗ್ಗೆ 11.30 ರ ಸುಮಾರಿಗೆ ದಿಬ್ಬ ಏರುವಾಗ ತಾಂತ್ರಿಕ ಸಮಸ್ಯೆಯಿಂದಾಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಏಕಾಏಕಿ ಹಿಂಬದಿಯಾಗಿ ಚಲಿಸಿ ರಸ್ತೆ ಪಕ್ಷದ ಕಂದಕಕ್ಕೆ ಜಾರಿದೆ. …

Read More »

ಯುವಕನಿಗೆ ಮದ್ವೆ ಆಸೆ ಹುಟ್ಟಿಸಿ ಹಾಸನದ ಮಹಿಳೆ ಹೀಗಾ ಮಾಡೋದು?

ವಿಜಯಪುರ: ಫೇಸ್​ಬುಕ್​ನಲ್ಲಿ ಪರಿಚಯವಾದ ಯುವಕನಿಗೆ ಈಕೆ ಕೊಟ್ಟ ಕಷ್ಟ ಅಷ್ಟಿಷ್ಟಲ್ಲ. ತಾನು ಐಎಎಸ್​ ಪಾಸ್​ ಮಾಡಿರುವೆ, ಕೆಲವೇ ದಿನಗಳಲ್ಲಿ ಜಿಲ್ಲಾಧಿಕಾರಿ ಆಗುವೆ. ನೀನಂದ್ರೆ ನನಗಿಷ್ಟ, ನಿನ್ನನ್ನೇ ಮದ್ವೆ ಆಗುವೆ ಎಂದೆಲ್ಲ ಹೇಳಿದ್ದಳು. ಈಕೆಯ ಮಾತಿಗೆ ಮರುಳಾದ ಯುವಕ ಮಾನಸಿಕ ಹಿಂಸೆ ಅನುಭವಿಸಿದ್ದು ಮಾತ್ರವಲ್ಲ, ಬರೋಬ್ಬರಿ 39 ಲಕ್ಷ ಹಣ ಕಳೆದುಕೊಂಡಿದ್ದಾನೆ. ಏನಿದು ಪ್ರಕರಣ?: ಸಿಂದಗಿ ತಾಲೂಕಿನ ಬಗಲೂರ ಗ್ರಾಮದ ನಿವಾಸಿ ಪರಮೇಶ್ವರ ನಾನಾಗೌಡ ಹಿಪ್ಪರಗಿ ಎಂಬಾತ ಮಂಜುಳಾ ಕೆ.ಆರ್​. ಎಂಬ ಫೇಸ್​ಬುಕ್​ ಖಾತೆಯಿಂದ …

Read More »

ಶಾಲೆಯಲ್ಲೇ ಹೃದಯಾಘಾತವಾಗಿ ಕುಸಿದುಬಿದ್ದು 13 ವರ್ಷದ ಬಾಲಕನ ಸಾವು!

ಹುಬ್ಬಳ್ಳಿ: ಇತ್ತೀಚೆಗೆ ಯುವ ಪೀಳಿಗೆಯವರೇ ಹೆಚ್ಚಿನ ಸಂಖ್ಯೆಯಲ್ಲಿ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪುತ್ತಿರುವುದು ನಿಮಗೆಲ್ಲ ಗೊತ್ತೇ ಇದೆ. ಆದರೆ ಇಲ್ಲೊಬ್ಬ ಹುಡುಗ ಇನ್ನೂ ಯೌವ್ವನಕ್ಕೆ ಕಾಲಿಡುವ ಮೊದಲೇ ಹೃದಯಾಘಾತಕ್ಕೀಡಾಗಿ ಮೃತಪಟ್ಟಿದ್ದಾನೆ.   ಕೇವಲ 13 ವರ್ಷ ವಯಸ್ಸಿನ ಬಾಲಕನೊಬ್ಬ ತಾನು ಕಲಿಯುತ್ತಿದ್ದ ಶಾಲೆಯಲ್ಲೇ ಹೃದಯಾಘಾತವಾಗಿ ಕುಸಿದು ಬಿದ್ದು ಸಾವನ್ನಪ್ಪಿರುವ ಈ ಘಟನೆ ಸಮೀಪದ ಕಲಘಟಗಿಯಲ್ಲಿ ನಡೆದಿದೆ. ಮಕ್ತುಮ್ ಮಹ್ಮದ್‌ರಫಿ ಮನಿಯಾರ್ (13) ಮೃತಪಟ್ಟ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ. ಧಾರವಾಡ ಜಿಲ್ಲೆ ಕಲಘಟಗಿ ಪಟ್ಟಣದ ಸರ್ಕಾರಿ …

Read More »

ಮಹಾರಾಷ್ಟ್ರ ಹಳ್ಳಿಗಳಿಗೆ ರಾಜ್ಯದ ಗಂಗೋದಕ; ಜತ್ತ ತಾಲೂಕಿನ 42 ಹಳ್ಳಿಗಳಿಗೆ ಕುಡಿಯುವ ನೀರು

ಬೆಂಗಳೂರು: ಪದೇಪದೆ ಗಡಿ ವಿವಾದವನ್ನು ಕೆಣಕುತ್ತಿರುವ ಮಹಾರಾಷ್ಟ್ರವನ್ನು ಭಾವನಾತ್ಮಕವಾಗಿ ಕಟ್ಟಿ ಹಾಕಲು ಮುಂದಾಗಿರುವ ರಾಜ್ಯ ಸರ್ಕಾರ, ಆ ಮೂಲಕ ಒಂದೇ ಕಲ್ಲಿನಲ್ಲಿ ಮೂರು ಹಕ್ಕಿ ಹೊಡೆದುರುಳಿಸುವ ಕಡೆ ಗಮನ ಹರಿಸಿದೆ. ಮಹಾಜನ ವರದಿ ಸಂಸತ್ತಿನಲ್ಲಿ 1970ರಲ್ಲಿ ಮಂಡನೆಯಾಗಿದೆ ಹೊರತು ಇನ್ನೂ ಅಂಗೀಕಾರವಾಗಿಲ್ಲ. ಆದರೆ, ಮಹಾರಾಷ್ಟ್ರ ಮಾತ್ರ ಆಗಾಗ ಗಡಿ ವಿಚಾರವನ್ನು ಕೆದಕುತ್ತಲೇ ಇರುತ್ತದೆ. ಆದ್ದರಿಂದಲೇ ಮತ್ತೆ ಚಕಾರ ಎತ್ತದಂತೆ ಮಾಡಲುಸರ್ಕಾರದ ಹಂತದಲ್ಲಿ ಚರ್ಚೆ ನಡೆದಿದೆ. ಜತ್ತ ತಾಲೂಕಿಗೆ ರಾಜ್ಯದಿಂದ ನೀರು: ಮಹಾರಾಷ್ಟ್ರದ …

Read More »

ಆಧಾರ್ ಕಾರ್ಡ್ ಇದ್ದರೆ ಮನೆಗಳಿಗೆ ಕುಡಿಯುವ ನೀರಿನ ನಳ ಸಂಪರ್ಕ : ರಾಜ್ಯ ಸರ್ಕಾರ ಸುತ್ತೋಲೆ

ಬೆಂಗಳೂರು : ರಾಜ್ಯ ಸರ್ಕಾರವು ಜಲ ನೀತಿ ಅನ್ವಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಎಲ್ಲ ಮನೆಗಳಿಗೆ ಕುಡಿಯುವ ನೀರಿನ ನಳ ಸಂಪರ್ಕ ಪಡೆಯಲು ನಿಯಮಗಳಲ್ಲಿ ಸರಳೀಕರಣ ಮಾಡಿ ಸುತ್ತೋಲೆ ಹೊರಡಿಸಿದೆ. ಮನೆಗಳಿಗೆ ಕುಡಿಯುವ ನೀರಿನ ನಳ ಸಂಪರ್ಕ ಪಡೆಯಲು ಸೂಕ್ತ ದಾಖಲೆಗಳು ಇಲ್ಲದಿದ್ದರೆ ಆಧಾರ್ ಕಾರ್ಡ್ ಮತ್ತು ನಷ್ಟ ಭರ್ತಿ ಮುಚ್ಚಳಿಕೆ ಪಡೆದು ನಳ ಸಂಪರ್ಕ ಕಲ್ಪಿಸುವಂತೆ ಸೂಚಿಸಲಾಗಿದೆ. ಎಲ್ಲ ಕುಟುಂಬಗಳಿಗೆ ಶುದ್ಧ ಕುಡಿಯುವ ನೀರು ಕೈಗಟಕುವ ದರದಲ್ಲಿ …

Read More »

ರಾಜ್ಯದಲ್ಲಿ ಮುಸ್ಲಿಮರಿಗೆ ಪ್ರತ್ಯೇಕ ಕಾಲೇಜುಗಳ ಸ್ಥಾಪನೆ ಇಲ್ಲ : C.M. ಬೊಮ್ಮಾಯಿ

ಬೆಂಗಳೂರು: ರಾಜ್ಯದಲ್ಲಿ ನೂತನವಾಗಿ ಮುಸ್ಲೀಂ ಸಮುದಾಯದ ( Muslim community ) ಮಹಿಳೆಯರಿಗೆ ಸರ್ಕಾರದಿಂದ ಪ್ರತ್ಯೇಕ ಕಾಲೇಜು ಸ್ಥಾಪನೆ ಮಾಡಲಾಗುತ್ತದೆ ಎನ್ನಲಾಗುತ್ತಿತ್ತು. ಆದ್ರೇ ಮುಸ್ಲೀಂ ಮಹಿಳೆಯರಿಗೆ ಪ್ರತ್ಯೇಕ ಕಾಲೇಜು ( College ) ಸ್ಥಾಪನೆ ಚರ್ಚೆಯಾಗಿಲ್ಲ ಎಂಬುದಾಗಿ ಸಿಎಂ ಬಸವರಾಜ ಬೊಮ್ಮಾಯಿ ( CM Basavaraj Bommai ) ಹೇಳಿದ್ದಾರೆ.     ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ವಕ್ಫ್ ಮಂಡಳಿ ಅಧ್ಯಕ್ಷರು ಮುಸ್ಲಿಂ ಮಹಿಳೆಯರಿಗೆ ಪ್ರತ್ಯೇಕವಾಗಿ ಕಾಲೇಜು ತೆರೆಯಲಿದ್ದು ಹಿಜಾಬ್ …

Read More »

ಅವ್ರಿವ್ರು ಸಹಾಯ ಮಾಡಿದ್ರು ಅನ್ನೋದೆಲ್ಲಾ ಸುಳ್ಳು.. ಆ ಪರಿಸ್ಥಿತಿ ನನಗಿನ್ನೂ ಬಂದಿಲ್ಲ”-ರವಿಚಂದ್ರನ್!

ಕ್ರೇಜಿಸ್ಟಾರ್ ರವಿಚಂದ್ರನ್ ಅವರದ್ದು ಏನೇ ಇದ್ದರೂ ನೇರ ನುಡಿ. ಎದುರಿಗೆ ಅದೆಷ್ಟೇ ದೊಡ್ಡ ಮಂದಿ ಇದ್ದರೂ, ಕ್ರೇಜಿ ಸ್ಟಾರ್ ಯಾರಿಗೂ ಕ್ಯಾರೇ ಅನ್ನೋದಿಲ್ಲ. ತಮ್ಮ ಮನಸ್ಸಿಗೆ ಅನಿಸಿದ್ದನ್ನು ಹಾಗೇ ಹೇಳಿ ಬಿಡುತ್ತಾರೆ. ಇದು ಇತ್ತೀಚೆಗಷ್ಟೇ ಬಂದಿಲ್ಲ. ಮೊದಲಿನಿಂದಲೂ ಕ್ರೇಜಿಸ್ಟಾರ್ ಇದ್ದಿದ್ದೇ ಹೀಗೆ.   ಸ್ಯಾಂಡಲ್‌ವುಡ್‌ನಲ್ಲಿ ಇದ್ದಿದ್ದು ಇದ್ದಂಗೆ ಮಾತಾಡೋ ಕೆಲವೇ ಕೆಲವು ನಟರಲ್ಲಿ ರವಿಚಂದ್ರನ್ ಕೂಡ ಒಬ್ಬರು. ಇತ್ತೀಚೆಗೆ ಕ್ರೇಜಿಸ್ಟಾರ್ ತಿಲಲಕ್ಷದೀಪೋತ್ಸವ ಅನ್ನೋ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಭಾಗವಹಿಸಿದ್ದರು. ಈ ವೇಳೆ …

Read More »