Breaking News

Daily Archives: ಆಗಷ್ಟ್ 17, 2022

ಮಗನ ಶಿವಗಣಾರಾಧನೆ ವೇಳೆ ಹೃದಯಘಾತದಿಂದ ತಾಯಿ ಸಾವು: 9 ದಿನ ಅಂತರದಲ್ಲಿ ಎರಡು ಸಾವು ಕಂಡ ಮನೆ

ಕುಷ್ಟಗಿ: ಮಗನ ಶಿವಗಣಾರಾಧನೆ ಸಂದರ್ಭದಲ್ಲಿ ತಾಯಿಗೆ ಹೃದಯಘಾತವಾಗಿದ್ದು, 9 ದಿನಗಳ ಅಂತರದಲ್ಲಿ ತಾಯಿ ಮಗ ಸಾವಿನಲ್ಲಿ ಒಂದಾದ ಮನಕಲಕುವ ಘಟನೆ ನಡೆದಿದೆ. ಕುಷ್ಟಗಿ ಪಟ್ಟಣದ 14ನೇ ವಾರ್ಡ್ ನ ಅಂಬೇಡ್ಕರ್ ನಗರದಲ್ಲಿ ರವಿಕುಮಾರ ದುರಗಪ್ಪ ಕೆಂಗಾರಿ ಲೋ ಬಿಪಿಯಿಂದ ಕಳೆದ ಆ.9ರಂದು ಅಕಾಲಿಕವಾಗಿ ನಿಧನರಾಗಿದ್ದರು. ಈ ಹಿನ್ನೆಲೆಯಲ್ಲಿ ಅವರ ಮನೆಯಲ್ಲಿ ಬುಧವಾರ ಶಿವಗಣಾರಾಧನೆ ಕಾರ್ಯಕ್ರಮ ಕ್ಕಾಗಿ ಬಂಧು ಬಾಂಧವರನ್ನು ಅಹ್ವಾನಿಸಿದ್ದರು. ದಿವಂಗತ ರವಿಕುಮಾರ ಕೆಂಗಾರಿ ಶಿವಗಣಾರಾಧನೆಯ ಪೂಜೆಯ ಸಿದ್ದತೆಯ ಸಂಧರ್ಭದಲ್ಲಿ ಮಗನ …

Read More »

ಗ್ರಾಮ ಒನ್ ಗೆ ಇನ್ನಷ್ಟು ಸೇವೆ ಸೇರ್ಪಡೆ: C.M. ಬೊಮ್ಮಾಯಿ

ಬೆಂಗಳೂರು: ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೇ ನಾಗರಿಕ ಸೇವೆಗಳನ್ನು ಒದಗಿಸಲು ಪ್ರಾರಂಭಿಸಲಾಗಿರುವ ಗ್ರಾಮ ಒನ್ ಕೇಂದ್ರಗಳನ್ನು ಬಲಪಡಿಸಲು ಇನ್ನಷ್ಟು ಸೇವೆಗಳನ್ನು ಸೇರ್ಪಡೆಗೊಳಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ. ಅವರು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಇ-ಆಡಳಿತ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು. ಗ್ರಾಮ ಒನ್ ಕೇಂದ್ರಗಳ ಮೂಲಕ ಒದಗಿಸಬಹುದಾದ ಸೇವೆಗಳನ್ನು ಗುರುತಿಸಿ, ಸಂಬಂಧಿಸಿದ ಇಲಾಖೆಗಳೊಂದಿಗೆ ಚರ್ಚಿಸಿ, ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದರು. ವಿವಿಧ ಜಿಲ್ಲೆಗಳಿಗೆ ವಿಶಿಷ್ಟವಾದ ಸೇವೆಗಳನ್ನು ಆಯಾ ಜಿಲ್ಲೆಗಳಿಗೆ …

Read More »

ವಿಧಾನಸಭೆ ಚುನಾವಣೆಗೆ ಕಾರ್ಯತಂತ್ರ ರೂಪಿಸುವ ಬಗ್ಗೆ ಪಕ್ಷದ ಚುನಾವಣಾ ತಂತ್ರ: KPCC ಕಚೇರಿಯಲ್ಲಿ ಸಭೆ

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗೆ ಕಾರ್ಯತಂತ್ರ ರೂಪಿಸುವ ಬಗ್ಗೆ ಪಕ್ಷದ ಚುನಾವಣಾ ತಂತ್ರಗಾರ ಸುನಿಲ್‌ ಕನುಗೊಳ್ ಜೊತೆ ರಾಜ್ಯ ಕಾಂಗ್ರೆಸ್‌ ನಾಯಕರು ಚರ್ಚೆ ನಡೆಸುತ್ತಿದ್ದಾರೆ. ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ನೇತೃತ್ವದಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಈ ಸಭೆ ನಡೆಯುತ್ತಿದೆ.   ಎಐಸಿಸಿ ಸೂಚನೆಯಂತೆ ರಾಜ್ಯದಲ್ಲಿನ ಕಾಂಗ್ರೆಸ್‌ನ ಸ್ಥಿತಿಗತಿ ಬಗ್ಗೆ ಸುನಿಲ್‌ ಕನುಗೊಳ್ ತಂಡ ಇತ್ತೀಚೆಗೆ ಸಮೀಕ್ಷೆ ನಡೆಸಿತ್ತು. ಈಗಾಗಲೇ ಈ ಸಮೀಕ್ಷೆಯ ವರದಿಯನ್ನು ಎಐಸಿಸಿಗೆ ತಂಡ ಸಲ್ಲಿಸಿದೆ. …

Read More »

ಏಳು ಕೆಎಸ್‌ಪಿಎಸ್‌ ಅಧಿಕಾರಿಗಳಿಗೆ ಐಪಿಎಸ್‌ಗೆ ಬಡ್ತಿ

ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸ್‌ ಸೇವೆಯ (ಕೆಎಸ್‌ಪಿಎಸ್‌) ಏಳು ಅಧಿಕಾರಿಗಳಿಗೆ ಭಾರತೀಯ ಪೊಲೀಸ್‌ ಸೇವೆಗೆ (ಐಪಿಎಸ್‌) ಬಡ್ತಿ ನೀಡಲಾಗಿದೆ. ಸಚಿನ್ ಘೋರ್ಪಡೆ, ಅಮಟೆ ವಿಕ್ರಂ, ಸಜಿತ್‌ ವಿ. ಜೆ, ರಾಮ್‌ ಲಕ್ಷ್ಮಣಸಾ ಅರಸಿದ್ದಿ, ಬಾಬಾಸಾಬ್‌ ನೇಮಗೌಡ, ಗೋಪಾಲ್‌ ಬಿ. ಬ್ಯಾಕೋಡ, ಮಹಾನಿಂಗ ನಂದಗಾನ್ವಿ ಬಡ್ತಿ ಪಡೆದವರು. 2021ನೇ ಸಾಲಿನ ಆಯ್ಕೆ ಪಟ್ಟಿಯಲ್ಲಿ ಬಡ್ತಿ ನೀಡಲು ಜುಲೈ 25ರಂದು ಆಯ್ಕೆ ಸಮಿತಿ ಸಭೆ ನಡೆದಿತ್ತು. ಇದೀಗ ಕೇಂದ್ರ ಲೋಕಸೇವಾ ಆಯೋಗ ಈ …

Read More »

ಕಾಂಗ್ರೆಸ್‌ಗೆ ಆರೋಗ್ಯವೇ ಆಘಾತಕಾರಿ: ಆಜಾದ್ ರಾಜೀನಾಮೆ ಬಗ್ಗೆ ಬಿಜೆಪಿ ವ್ಯಂಗ್ಯ

ಬೆಂಗಳೂರು: ಜಮ್ಮು ಮತ್ತು ಕಾಶ್ಮೀರ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಕೆಲವೇ ಗಂಟೆಗಳಲ್ಲಿ ರಾಜೀನಾಮೆ ನೀಡಿರುವುದರಿಂದ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪಕ್ಷದ ಒಳಜಗಳ ಮತ್ತೆ ಬೀದಿಗೆ ಬಿದ್ದಿದೆ ಎಂದು ಬಿಜೆಪಿ ಟೀಕಿಸಿದೆ.   ಗುಲಾಂ ನಬಿ ಆಜಾದ್ ರಾಜೀನಾಮೆ ವಿಚಾರ ಪ್ರಸ್ತಾಪಿಸಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಹಿರಿಯ ನಾಯಕ ಗುಲಾಂ‌ ನಬಿ ಆಜಾದ್ ಅವರನ್ನು ಕಾಶ್ಮೀರ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ನೇಮಿಸಿದ ಕೆಲವೇ ಗಂಟೆಗಳಲ್ಲಿ ರಾಜೀನಾಮೆ ನೀಡಿದ್ದಾರೆ. …

Read More »

ನ. 1ರಿಂದ 20 ನಿಮಿಷಗಳಲ್ಲೇ ಆಸ್ತಿ ನೋಂದಣಿ ಸೌಲಭ್ಯ :ಅಕ್ರಮಗಳಿಗೆ ಬೀಳಲಿದೆ ಇನ್ನುಮುಂದೆ ಕಡಿವಾಣ

ಬೆಂಗಳೂರು:  ಆಸ್ತಿ ನೋಂದಣಿಯ ಹಲವು ತೊಡಕುಗಳನ್ನು ನಿವಾರಿಸಲು ಮುಂದಾದ ಸರಕಾರ ನ. 1ರಿಂದ ಹೊಸ ನಿಯಮ ಜಾರಿಗೊಳಿಸಲಿದೆ. ಪಾಸ್ ಪೋರ್ಟ್ ಪಡೆಯುವ ಮಾದರಿಯ ವೆಬ್ ಆಧಾರಿತ ಸೇವೆ ಇದಾಗಿದ್ದು ತರುವ ಮೂಲಕ 20 ನಿಮಿಷಗಳಲ್ಲಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳುವಂತೆ ರಾಜ್ಯ ಸರಕಾರ ತನ್ನ ಇ- ಆಡಳಿತ ಇಲಾಖೆ ಅಧೀನ ಸಂಸ್ಥೆ ಸೆಂಟರ್ ಫಾರ್ ಸ್ಮಾರ್ಟ್ ಗವರ್ನನ್ಸ್ ಸಂಸ್ಥೆ ಅಭಿವೃದ್ಧಿಪಡಿಸಿದ  ‘ಕಾವೇರಿ-2’ ತಂತ್ರಾಂಶವನ್ನು ರೂಪಿಸಿದೆ. ಸಂಪೂರ್ಣ ತಾಂತ್ರಿಕ ದೋಷರಹಿತವಾಗಿರುವ ಇದರಲ್ಲಿ ಆಸ್ತಿ ನೋಂದಣಿ …

Read More »

ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳುವು ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿ: ಜಿಲ್ಲೆಯ ನಿಪ್ಪಾಣಿ ತಾಲೂಕಿನ ಬೇನಾಡಿಯಲ್ಲಿ ಮನೆಯ ಬೀಗ ಮುರಿದು ಒಳಹೊಕ್ಕ   ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳುವು ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆ.12ರಂದು ಮಧ್ಯಾಹ್ನ 3 ರಿಂದ ಸಂಜೆ 5 ರ ಅವಧಿಯಲ್ಲಿ ತಮ್ಮ ಮನೆಯ ಬೀಗ ಮುರಿದು ಒಳಹೊಕ್ಕಿ ತಿಜೋರಿಯಲ್ಲಿದ್ದ ಲಾಕರ್ ತೆರೆದು 1.32 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 9 ಸಾವಿರ ರೂ. ನಗದು ಕಳುವು ಮಾಡಿದ ಬಗ್ಗೆ ಮಾಧುರಿ ಶರದ ಪಿಂಪಳೆ ಎಂಬುವವರು …

Read More »

ಬಿಸಿಯೂಟ ಸೇವಿಸಿ ಅಮೀನಗಡದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳು ಅಸ್ವಸ್ಥ

ರಾಯಚೂರು: ಬಿಸಿಯೂಟ ಸೇವಿಸಿ 20 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ಮಸ್ಕಿ ತಾಲೂಕಿನ ಅಮೀನಗಡದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.   ಮಧ್ಯಾಹ್ನದ ಬಿಸಿಯೂಟ ಸೇವಿಸಿ ಹೊಟ್ಟೆ ನೋವಿನಿಂದ ಬಳಲಿದ ವಿದ್ಯಾರ್ಥಿಗಳನ್ನು ಕವಿತಾಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.

Read More »

ಬೆಳವಟ್ಟಿಯಲ್ಲಿ ಕಾಣಿಸಿಕೊಂಡ ಚಿರತೆ ಬೆಳಗಾವಿ “ಗಾಲ್ಫ ಕ್ಲಬ್ ಚಿರತೆಯೊ ಅಥವಾ ಇದು ಬೇರೆ ಚಿರತೆಯೊ..?

ಬೆಳಗಾವಿಯಿಂದ 18 ಕಿ.ಮೀ. ದೂರದ ಬೆಳವಟ್ಟಿಯಲ್ಲಿ ರವಿವಾರ ಮುಂಜಾನೆ ಚಿರತೆಯು ಕಾಣಿಸಿಕೊಂಡಿದೆ. ಈ ಚಿರತೆ ಬೆಳಗಾವಿ “ಗಾಲ್ಫ ಕ್ಲಬ್ ಚಿರತೆಯೊ ಅಥವಾ ಇದು ಬೇರೆ ಚಿರತೆಯೊ..? ಎಂಬ ಅನುಮಾನ ಮೂಡಿದೆ. ಹೌದು ಇದೇ ಅಗಸ್ಟ್ 5ರಂದು ಬೆಳಗಾವಿಯ ಜಾಧವ ನಗರದಲ್ಲಿ ಮಟ ಮಟ ಮಧ್ಯಾಹ್ನ 12 ಗಂಟೆಗೆ ಕಾಣಿಸಿಕೊಂಡು ಕಟ್ಟಡ ಕಾರ್ಮಿಕನೊಬ್ಬನ ಮೇಲೆ ದಾಳಿ ಮಾಡಿ ಮಾಯವಾದ ಚಿರತೆಯ ಶೋಧಕ್ಕಾಗಿ ಅರಣ್ಯ ಇಲಾಖೆಯು ನಡೆಸಿದ ಪ್ರಯತ್ನಗಳಿಗೆ ಇನ್ನೂ ಫಲ ಸಿಕ್ಕಿಲ್ಲ. …

Read More »

ಚುನಾವಣಾ ಸಮಿತಿ ಸದಸ್ಯರಾಗಿ ನೇಮಕಗೊಂಡ:B.S.Y.ಶುಭ ಕೋರಿದ ಗಣ್ಯರು

ಬಿಜೆಪಿ ಸಂಸದೀಯ ಮಂಡಳಿ ಹಾಗೂ ಕೇಂದ್ರ ಚುನಾವಣಾ ಸಮಿತಿ ಸದಸ್ಯರಾಗಿ ನೇಮಕಗೊಂಡಿರುವ ನಿಕಟಪೂರ್ವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿನಂದಿಸಿದ್ದಾರೆ. ಹೌದು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ಬಿಜೆಪಿ ಸಂಸದೀಯ ಮಂಡಳಿ ಹಾಗೂ ಕೇಂದ್ರ ಚುನಾವಣಾ ಸಮಿತಿ ಸದಸ್ಯರಾಗಿ ನೇಮಕಗೊಂಡಿರುವ ನಿಕಟಪೂರ್ವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಶು¨s ಕೋರಿದರು. ಈ ವೇಳೆ ಯಡಿಯೂರಪ್ಪನವರಿಗೆ ಶಾಲು ಹೊದಿಸಿ ಸನ್ಮಾನಿಸಿ …

Read More »