Breaking News

Daily Archives: ಜನವರಿ 22, 2022

ಬಂಡಾಯ ಅಭ್ಯರ್ಥಿಯಾದ ಪರ್ರಿಕರ್ ಪುತ್ರ

ಪಣಜಿ: ಗೋವಾ ವಿಧಾನಸಭಾ ಚುನಾವಣೆಯಲ್ಲಿ ಪಣಜಿ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಫರ್ಧಿಸುವುದಾಗಿ ಗೋವಾ ಮಾಜಿ ಮುಖ್ಯಮಂತ್ರಿ ದಿ.ಮನೋಹರ್ ಪರ್ರಿಕರ್ ಪುತ್ರ ಉತ್ಪಲ್ ಪರ್ರಿಕರ್ ಶುಕ್ರವಾರ ಘೋಷಿಸಿದ್ದಾರೆ. ಪಣಜಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ರಾಜಕೀಯ ಭವಿಷ್ಯದ ಕುರಿತು ರಾಜ್ಯದ ಜನತೆ ನಿರ್ಧರಿಸಲಿದ್ದಾರೆ. ಕೇವಲ ಮನೋಹರ್ ಪರ್ರಿಕರ್ ರವರ ತತ್ವ ಸಿದ್ಧಾಂತಗಳನ್ನು ಮುಂದುವರೆಸಿಕೊಂಡು ಹೋಗಲು ನಾನು ಪಣಜಿ ಕ್ಷೇತ್ರದಿಂದ ಸ್ಫರ್ಧಿಸುತ್ತಿದ್ದೇನೆ ಎಂದರು. ಪಣಜಿ ಕ್ಷೇತ್ರದ ಹಾಲಿ ಬಿಜೆಪಿಯ ಉಮೇದುವಾರರ ಬಗ್ಗೆ ಮಾತನಾಡುವುದು ಕೂಡ ನಾಚಿಕೆಗೇಡಿನ …

Read More »

ಮೂತ್ರ ವಿಸರ್ಜನೆಗೆಂದು ನಿಂತ ಕ್ಷಣಾರ್ಧದಲ್ಲೇ ಸ್ನೇಹಿತರಿಬ್ಬರ ಪ್ರಾಣ ಹೊತ್ತೊಯ್ದ ಜವರಾಯ!

ನೆಲಮಂಗಲ: ಜವರಾಯ ಯಾವಾಗ? ಯಾವ ರೂಪದಲ್ಲಿ ಬರ್ತಾನೆ ಎಂದು ಊಹಿಸೋಕು ಆಗಲ್ಲ. ಆಟೋ ಚಾಲಕರಿಬ್ಬರು ಮನೆಗೆ ಹೋಗುವ ಮಾರ್ಗಮಧ್ಯೆ ಮೂತ್ರ ವಿಸರ್ಜನೆಗೆಂದು ರಸ್ತೆಬದಿ ಆಟೋ ನಿಲ್ಲಿಸಿದ ಕ್ಷಣಾರ್ಧದಲ್ಲೇ ದುರಂತ ಅಂತ್ಯಕಂಡಿದ್ದಾರೆ. ಇಂತಹ ಘಟನೆ ಬುಧವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿ 75ರ ಮಹದೇವಪುರ ಬಳಿಯ ಚಾಕಲೇಟ್​ ಕಾರ್ಖಾನೆ ಬಳಿ ಸಂಭವಿಸಿದೆ. ಚಕ್ಕಸಂದ್ರದ ರಮೇಶ್​(36) ಮತ್ತು ಅಡೇಪೇಟೆಯ ಉಮೇಶ್​ (35) ಮೃತ ದುರ್ದೈವಿಗಳು. ಸ್ನೇಹಿತರಾದ ಉಮೇಶ್​ ಮತ್ತು ರಮೇಶ್​ ಇಬ್ಬರೂ ಆಟೋ ಚಾಲಕರಾಗಿದ್ದರು. ಇವರಿಬ್ಬರೂ …

Read More »

ಐವರು ವಿದ್ಯಾರ್ಥಿಗಳಿಗೆ ಕೋವಿಡ್​​ ಬಂದ್ರೂ ಸ್ಕೂಲ್​​ ಕ್ಲೋಸ್​..​?

ಕೊರೊನಾ ರಜೆಯಲ್ಲಿರೋ ಮಕ್ಕಳೆಲ್ಲ ಸ್ಕೂಲ್ ಬ್ಯಾಗ್ ರೆಡಿ ಮಾಡ್ಕೊಳ್ಳಿ. ವೀಕೆಂಡ್ ಕರ್ಫ್ಯೂ ಕಡಿವಾಣ ತೆರವುಗೊಳಿಸಿರೋ ಸರ್ಕಾರ ಶಾಲಾ-ಕಾಲೇಜುಗಳ ಆರಂಭಕ್ಕೂ ಹಸಿರು ನಿಶಾನೆ ತೋರಿದೆ. ಆದರೆ ಬೆಂಗಳೂರಿನ ಶಾಲೆಗಳ ಬಾಗಿಲು ಮಾತ್ರ ಜನವರಿ 29ರವರೆಗೂ ಕ್ಲೋಸ್ ಆಗಿರಲಿದೆ.   ರಾಜ್ಯದಲ್ಲಿ ಕೊರೊನಾ ತೀವ್ರವಾಗುತ್ತಿದ್ದಂತೆ ಬೆಂಗಳೂರು ಮತ್ತು ಸೋಂಕು ಹೆಚ್ಚಿರುವ ಮೈಸೂರು, ಶಿವಮೊಗ್ಗ ಸೇರಿದಂತೆ ಕೆಲವು ಮಹಾನಗರಗಳಲ್ಲಿ ಶಾಲೆ-ಕಾಲೇಜುಗಳಿಗೆ ಬೀಗಬಿದ್ದಿತ್ತು. ಆದರೆ ಪುನಃ ಶಾಲೆಗಳ ಆರಂಭಕ್ಕೆ ಸರ್ಕಾರ ಗ್ನೀನ್ ಸಿಗ್ನಲ್ ನೀಡಿದೆ. ಬೆಂಗಳೂರಲ್ಲಿ …

Read More »

ಮಗನ ವರ್ತನೆಗೆ ಬೇಸತ್ತ ತಾಯಿ,ಮಗನನ್ನೇ ಸಂಬಂಧಿಕರೊಂದಿಗೆ ಸೇರಿ ಕೊಲೆ ಮಾಡಿದ ತಾಯಿ

ರಾಯಚೂರು : ವ್ಯಕ್ತಿಯೊಬ್ಬ ಇರುವ ಚಟಗಳಿಗೆಲ್ಲ ದಾಸನಾಗಿದ್ದ. ಇದರಿಂದಾಗಿ ಸಾಕಷ್ಟು ಸಾಲ ಮಾಡಿಕೊಂಡು ಕೊನೆಗೆ ಮನೆಯನ್ನೇ ಮಾರಲು ಮುಂದಾಗಿದ್ದ. ಮಗನ ವರ್ತನೆಗೆ ಬೇಸತ್ತ ತಾಯಿ ಹಾಗೂ ಸಂಬಂಧಿಕರು ಕೊಲೆ ಮಾಡಿರುವ ಘಟನೆ ನಡೆದಿದೆ. ಈ ಘಟನೆ ಜಿಲ್ಲೆಯ ಸಿರವಾರದಲ್ಲಿ ನಡೆದಿದ್ದು, ಅಮರೇಶ್(43) ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಈ ವ್ಯಕ್ತಿ ಇಸ್ಪೀಟ್ ಸೇರಿದಂತೆ ಮದ್ಯದ ವ್ಯಸನಿಯಾಗಿದ್ದ ಎನ್ನಲಾಗಿದೆ. ಹೀಗಾಗಿ ಕಂಡ ಕಂಡವರಲ್ಲಿ ಸಾಕಷ್ಟು ಸಾಲ ಮಾಡಿದ್ದ. ಸಾಲ ತೀರಿಸಲು ಆಗದೆ ಕೊನೆಗೆ …

Read More »