ಭಾರತೀಯ ಜನತಾ ಪಾರ್ಟಿ ಗೋಕಾಕ ವಿದಾನಸಭಾ ಕ್ಷೇತ್ರ ಗೋಕಾಕ ನಗರ ಹಾಗೂ ಗ್ರಾಮೀಣ ಮಂಡಲ 100 ಕೋಟಿ ಪ್ಲಸ್ ಲಸಿಕೆ ನೀಡಿ ಸಾದನೆ ಮಾಡಿದ ವೈದ್ಯರಿಗೆ,ದಾದಿಯರಿಗೆ ಮಹರ್ಷಿ ಶ್ರೀ ವಾಲ್ಮೀಕಿ ಕ್ರೀಡಾಂಗಣದಲ್ಲಿ ಶಾಸಕ ರಮೇಶ ಜಾರಕಿಹೋಳಿಯವರು ಧನ್ಯವಾದ ಭಾರತ ಧನ್ಯವಾದ ಮೋದಿಜಿ ಸಂಬ್ರಮಾಚರಣೆ ಕಾರ್ಯಕ್ರಮದಲ್ಲಿ ಸತ್ಕರಿಸುವ ಮೂಲಕ ಕೃತಜ್ಞತೆ ಸಲ್ಲಿಸಿದರು. ನಂತರ ಸರಕಾರಿ ಎಕ್ಸ್ ಮುನಿಸಪಲ್ ಪದವಿ ಪೂರ್ವ ಕಾಲೇಜ ಗೋಕಾಕ ಆವರಣದಲ್ಲಿ 90ಲಕ್ಷ ಅನುದಾನದಡಿಯಲ್ಲಿ ನೂತನ ಶಾಲಾ ಕೊಠಡಿಯನ್ನು …
Read More »Yearly Archives: 2021
ಸಿಎಎ ವಿರೋಧಿಸಿ ಮಂಗಳೂರು ಗಲಭೆ ಪ್ರಕರಣ: ‘ಪೊಲೀಸರು ತಪ್ಪಿತಸ್ಥರಲ್ಲ’ ಎಂದ ಸರ್ಕಾರ
ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ನಡೆದ ಗೋಲಿಬಾರ್ ಪ್ರಕರಣದಲ್ಲಿ ಪೊಲೀಸರು ತಪ್ಪಿತಸ್ಥರಲ್ಲ ಎಂದು ಸರ್ಕಾರ ಹೈಕೋರ್ಟ್ ಗೆ ತಿಳಿಸಿದೆ. ಗೋಲಿಬಾರ್ ಘಟನೆ ಸಂಬಂಧ ಸಲ್ಲಿಸಲಾದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠಕ್ಕೆ ಸರ್ಕಾರ ಶುಕ್ರವಾರ ಈ ಮಾಹಿತಿ ನೀಡಿದೆ. ಗೋಲಿಬಾರ್ ಘಟನೆ ಸಂಬಂಧ ಮ್ಯಾಜಿಸ್ಟ್ರೇಟ್ ತನಿಖೆ ಮುಗಿದಿದೆ. ತನಿಖಾ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ …
Read More »ನಾನು ಸಚಿವನಾಗಲು, ಸಿಎಂ ಆಗಲು ಯಡಿಯೂರಪ್ಪ ಕಾರಣ : ಬಸವರಾಜ ಬೊಮ್ಮಾಯಿ
ಹಾವೇರಿ: ‘ನಾನು ಬಿಜೆಪಿಗೆ ಬರಲು, ಶಾಸಕನಾಗಲು, ಸಚಿವನಾಗಲು ಮತ್ತು ಮುಖ್ಯಮಂತ್ರಿಯಾಗಲು ಯಡಿಯೂರಪ್ಪ ಅವರು ಕಾರಣ’ ಎಂದು ಸಿಎಂ ಬಸವರಾಜ ಬೊಮ್ಮಾಯಿ ಶುಕ್ರವಾರ ಹೇಳಿಕೆ ನೀಡಿದ್ದಾರೆ. ಬೊಮ್ಮನಹಳ್ಳಿಯಲ್ಲಿ ಏರ್ಪಡಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಿಎಂ , ‘ನಮ್ಮ ನಾಯಕ ಯಡಿಯೂರಪ್ಪ ಅವರು ಇಲ್ಲಿಗೆ ನೂರು ಬಾರಿ ಬಂದಿದ್ದಾರೆ, ಅವರು ಹಾಗೂ ಸಿಎಂ ಉದಾಸಿ ಅವರ ಚಿಂತನೆಯನ್ನು ಇಡಿ ನಾಡು ನೋಡಿದೆ. ರೈತರ ವಿಚಾರದಲ್ಲಿ ಯಡಿಯೂರಪ್ಪ ಎಂದು ರಾಜಿ ಮಾಡಿಕೊಂಡಿಲ್ಲ. ಬಿಜೆಪಿ ಮಾಡಿರುವ ಯೋಜನೆಗಳು …
Read More »ಕಾಂಗ್ರೆಸ್ ನವರಿಗೆ ಟೀಕೆ ಮಾಡಿಲ್ಲ ಅಂದ್ರೆ ತಿಂದಿದ್ದು ಜೀರ್ಣ ಆಗಲ್ಲ; ಸಿದ್ದರಾಮಯ್ಯ ಹೇಳಿಕೆಗೆ ನಯಾಪೈಸೆ ಬೆಲೆ ಇಲ್ಲ; ತಿರುಗೇಟು ನೀಡಿದ ಆರ್. ಅಶೋಕ್
ಬೆಂಗಳೂರು: ಶತಕೋಟಿ ಲಸಿಕಾ ಸಂಭ್ರಮಕ್ಕೆ ಟ್ವೀಟ್ ಮೂಲಕ ಕಿಡಿಕಾರಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿರುವ ಕಂದಾಯ ಸಚಿವ ಆರ್. ಅಶೋಕ್, ವಿಶ್ವ ಆರೋಗ್ಯ ಸಂಸ್ಥೆಯೇ ಅಭಿನಂದನೆ ಸಲ್ಲಿಸಿದ ಮೇಲೆ ಬೇರೆಯವರ ಕಮೆಂಟ್ ಗೆ ನಯಾಪೈಸೆ ಬೆಲೆಯಿಲ್ಲ ಎಂದು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಆರ್. ಅಶೋಕ್, ವಿಶ್ವ ಆರೋಗ್ಯ ಸಂಸ್ಥೆಯೇ ದೇಶದ ಪ್ರಧಾನಿ ಮೋದಿ ಹಾಗೂ ಲಸಿಕೆ ನೀಡಿದ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದೆ. ಹೀಗಿರುವಾಗ ಸಣ್ಣಪುಟ್ಟ ಜನ ಈ ಬಗ್ಗೆ …
Read More »ಕಾಮದ ಮದದಲ್ಲಿ ದಾರಿ ತಪ್ಪಿದ ಪತ್ನಿಯಿಂದಲೇ ಘೋರ ಕೃತ್ಯ, ವಿಚಾರಣೆಯಲ್ಲಿ ಬಯಲಾಯ್ತು ಕೊಲೆ ರಹಸ್ಯ
ಕಲಬುರ್ಗಿ: ಅಕ್ರಮ ಸಂಬಂಧ ಹೊಂದಿದ್ದ ಮಹಿಳೆ ಪ್ರಿಯಕರನೊಂದಿಗೆ ಸೇರಿ ಗಂಡನನ್ನು ಕೊಲೆ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸೇಡಂ ತಾಲೂಕಿನ ಈರನಾಪಲ್ಲಿಯಲ್ಲಿ ಘಟನೆ ನಡೆದಿದ್ದು, ಮದ್ಯ ಸೇವಿಸಿ ಪತಿ ಮೃತಪಟ್ಟಿರುವುದಾಗಿ ಮಹಿಳೆ ಬಿಂಬಿಸಿದ್ದಾಳೆ. ಎರಡು ತಿಂಗಳ ನಂತರ ಕೊಲೆ ವಿಷಯ ಬೆಳಕಿಗೆ ಬಂದಿದೆ. ಈರನಾಪಲ್ಲಿಯ ರಾಜಪ್ಪ(35) ಮೃತಪಟ್ಟ ವ್ಯಕ್ತಿ ಎಂದು ಹೇಳಲಾಗಿದೆ. ಮೃತನ ಪತ್ನಿ ಹಾಗೂ ಪ್ರಿಯಕರ ತೆಲಂಗಾಣದ ಕೊಡಂಗಲ ತಾಲೂಕಿನ ಅಂತಾವರ ಗ್ರಾಮದ ನಿವಾಸಿ ಶ್ರೀಶೈಲಂ ಅವರನ್ನು ಬಂಧಿಸಲಾಗಿದೆ. ಮದ್ಯದಲ್ಲಿ …
Read More »ಹಾನಗಲ್ ನಲ್ಲಿ ಪಕ್ಷ ಸೋಲುತ್ತೆ ಎಂಬುದು ಬೊಮ್ಮಾಯಿಗೂ ಗೊತ್ತು, ನಿರಾಣಿಗೂ ಗೊತ್ತು; ಸುಳ್ಳು ಹೇಳುವುದರಲ್ಲಿ ಬಿಜೆಪಿಗರು ನಿಸ್ಸೀಮರು; ಸಿದ್ದರಾಮಯ್ಯ
ಹುಬ್ಬಳ್ಳಿ: ಹಾನಗಲ್, ಸಿಂದಗಿ ಉಪಚುನಾವಣಾ ಅಖಾಡ ರಂಗೇರಿದ್ದು, ಆಡಳಿತ ಪಕ್ಷ ಬಿಜೆಪಿ, ವಿಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಮೂರು ಪಕ್ಷಗಳು ಎರಡೂ ಕ್ಷೇತ್ರಗಳನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಮತದಾರರನ್ನು ಸೆಳೆಯಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಹಾನಗಲ್ ಉಪಚುನಾವಣೆಯಲ್ಲಿ ಬಿಜೆಪಿ ಸೋಲು ಖಚಿತ. ಬಿಜೆಪಿ ಸೋಲಲಿದೆ ಎಂಬುದು ಸಿಎಂ ಬೊಮ್ಮಾಯಿಗೂ ಗೊತ್ತು, ಸಚಿವ ನಿರಾಣಿಗೂ ಗೊತ್ತು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಹಾನಗಲ್ ನಲ್ಲಿ ಬಿಜೆಪಿ ಸೋಲಲಿದೆ. ಹೀಗಾಗಿ ಹಣ …
Read More »ಕೆಲವೊಮ್ಮೆ ಇಂಟಲಿಜನ್ಸ್ ರಿಪೋರ್ಟ್ ಸುಳ್ಳಾಗುತ್ತೆ; ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ; ಸಚಿವ ನಿರಾಣಿ ವಿಶ್ವಾಸ
ಹಾವೇರಿ: ಹಾನಗಲ್ ನಲ್ಲಿ ಬಿಜೆಪಿ ಸೋಲನುಭವಿಸಲಿದೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿರುವ ಸಚಿವ ಮುರುಗೇಶ್ ನಿರಾಣಿ, ನೂರಕ್ಕೆ ನೂರರಷ್ಟು ಹಾನಗಲ್ ನಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದರು. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ನಿರಾಣಿ, ಬಹಷ್ಟು ಸಲ ಇಂಟಲಿಜನ್ಸ್ ರಿಪೋರ್ಟ್ ಸುಳ್ಳಾಗುತ್ತೆ. ಈ ಬಗ್ಗೆ ಸಾಕಷ್ಟು ಉದಾಹರಣೆಗಳಿವೆ. ಹಾನಗಲ್ ಹಾಗೂ ಸಿಂದಗಿ ಎರಡೂ ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಸಾಧಿಸಲಿದೆ ಎಂದರು. ಉಪಚುನಾವಣೆಯಲ್ಲಿ ನಾವು ಗೆಲ್ಲಲಿದ್ದೇವೆ ಎಂಬ ವಿಶ್ವಾಸವಿದೆ. ಯಾವುದೇ ವರದಿ …
Read More »80 ಟನ್ ಹೆರಾಯಿನ್ ಯಾರದ್ದು ಎಂಬುದು ಕಟೀಲ್ ಉತ್ತರಿಸಲಿ : ಹರಿಪ್ರಸಾದ್
ಬೆಂಗಳೂರು : ಅದಾನಿ ಪೋರ್ಟ್‌ನಲ್ಲಿ ದೊರೆತ ಎಂಬತ್ತು ಟನ್ ಹೆರಾಯಿನ್ ಡೀಲರ್ ಯಾರು ಎಂಬುದರ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಉತ್ತರ ನೀಡಲಿ ಎಂದು ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಆಗ್ರಹಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಇಡದ ಅವರು, ಹೆರಾಯಿನ್ ಡೀಲರ್ ಯಾರು ಎಂಬುದರ ಬಗ್ಗೆ ನಿಜವಾದ ಉತ್ತರ ಕೊಟ್ಟರೆ ನಾನು ರಾಜಕೀಯ ಬಿಡುತ್ತೇನೆ ಎಂದು ಸವಾಲು ಹಾಕಿದರು. ಈ ವಿಚಾರ ಬೇರೆಡೆಗೆ ಸೆಳೆಯಲು ಒಂದೆರಡು ಗ್ರಾಂ ಡ್ರಗ್ಸ್ …
Read More »ಚುನಾವಣೆಗಾಗಿ ಬಿಜೆಪಿಯವರು ಚೀಲದಲ್ಲಿ ಹಣ ತುಂಬಿಸಿಕೊಂಡು ಹಂಚುತ್ತಿದ್ದಾರೆ : ಡಿ.ಕೆ ಶಿವಕುಮಾರ್
ಹಾವೇರಿ : ಬಿಜೆಪಿಯವರು ಹಣ ಹಂಚಿ ಉಪಚುನಾವಣೆಯಲ್ಲಿ ಗೆಲುವು ಸಾಧಿಸಲು ಮುಂದಾಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ. ಹಾವೇರಿ ಜಿಲ್ಲೆಯ ಹುಲ್ಲತ್ತಿ ಗ್ರಾಮದಲ್ಲಿ ಮಾತನಾಡಿದ ಅವರು ಬಿಜೆಪಿಯವರು ಗೋಣಿ ಚೀಲದಲ್ಲಿ ಹಣ ತುಂಬಿಸಿಕೊಂಡು ಹೋಗಿ ಕೊಡುತ್ತಿದ್ದಾರೆ. ಬಿಜೆಪಿಯವರು ಒಂದು ವೋಟ್ಗೆ 2ರಿಂದ 3 ಸಾವಿರ ರೂ. ಕೊಡ್ತಿದ್ದಾರಂತೆ ಸಚಿವರು ಗೋಣಿ ಚೀಲದಲ್ಲಿ ಹಣ ತುಂಬಿಕೊಂಡು ಬಂದಿದ್ದಾರೆ. ಹೆದ್ದಾರಿಯಲ್ಲಿ ನಿಂತು ಹಣ ಹಂಚಲಾಗುತ್ತಿದೆ ಎಂದು ಡಿಕೆ ಶಿವಕುಮಾರ್ …
Read More »ಜ್ಯುವೆಲರಿ ಶಾಪ್‌ಗೆ ಕನ್ನ ಹಾಕಿದ ಹೋಟೆಲ್ ಉದ್ಯಮಿಗಳಿಗೆ ಮುಳವಾದ ಕಾರು
ಬೆಂಗಳೂರು, ಅ. 21: ಅವರಿಬ್ಬರೂ ಬಾಲ್ಯದ ಗೆಳೆಯರು. ಕಷ್ಟ ಪಟ್ಟು ಮೇಲೆ ಬರಬೇಕು ಎಂದು ಆಸೆ ಪಟ್ಟು ಹೋಟೆಲ್ ಉದ್ಯಮ ಆರಂಭಿಸಿದ್ದರು. ಇನ್ನೇನು ಯಶಸ್ಸು ಗಳಿಸುವ ಸಮಯದಲ್ಲಿ ಕೊರೊನಾ ಎದುರಾಗಿ ನಷ್ಟ ಅನುಭವಿಸಿದರು. ಮಾಡಿರುವ ಸಾಲ ತೀರಿಸಲು ಕಳ್ಳತನ ಮಾಡಲು ಪ್ಲಾನ್ ರೂಪಿಸಿದರು. ಯೂಟ್ಯೂಬ್ ನಲ್ಲಿ ವಿಡಿಯೋ ನೋಡಿ ಜ್ಯುವೆಲರಿ ಶಾಪ್‌ನಲ್ಲೇ ಕಳ್ಳತನ ಮಾಡಿದ್ದರು. ಅವರು ಮಾಡಿದ್ದ ಸಣ್ಣ ಎಡವಿಟ್ಟಿನಿಂದ ಬಾಲ್ಯದ ಗೆಳೆಯರು ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಇದು ಮಹೇಂದ್ರ, …
Read More »