Breaking News

Yearly Archives: 2021

ಫಿಟ್ನೆಸ್ ವಿಚಾರವಾಗಿ ಪುನೀತ್ ರಾಜ್​ಕುಮಾರ್ ಯುವಕರಿಗೆ ರೋಲ್ ಮಾಡೆಲ್ ಆಗಿದ್ದರು. ಅಂತಹವರನ್ನು ಭಗವಂತ ಇಷ್ಟು ಬೇಗ ಕರೆಸಿಕೊಳ್ಳುತ್ತಾನೆ ಎಂದು ಕನಸಿನಲ್ಲಿಯೂ ಊಹಿಸಿರಲಿಲ್ಲ ಎಂದು ಡಿ.ಕೆ. ಶಿವಕುಮಾರ್

.ಬೆಂಗಳೂರು: ಸ್ಯಾಂಡಲ್​ವುಡ್​ನ ಪವರ್ ಸ್ಟಾರ್, ಆಪ್ತರು ಹಾಗೂ ಅಭಿಮಾನಿಗಳಿಂದ ಅಪ್ಪು ಎಂದೇ ಕರೆಸಿಕೊಳ್ಳುತ್ತಿದ್ದ ಪುನೀತ್ ರಾಜ್​ಕುಮಾರ್ ತಮ್ಮ 46ನೇ ವಯಸ್ಸಿನಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂಗಳಾದ ಎಸ್​.ಎಂ. ಕೃಷ್ಣ, ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮಾಜಿ ಪ್ರಧಾನಿ ದೇವೇಗೌಡರು ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಡಾ. ರಾಜ್​ಕುಮಾರ್ ಕುಟುಂಬದ ಜೊತೆ ಆಪ್ತ ಸಂಬಂಧ ಹೊಂದಿದ್ದ ಡಿಕೆ ಶಿವಕುಮಾರ್ ಅಪ್ಪು ಜೊತೆಗಿನ ತಮ್ಮ …

Read More »

ಪುನೀತ್ ಅವರನ್ನು ಉಳಿಸಿಕೊಳ್ಳಲು ವೈದ್ಯರು ಎಲ್ಲ ಪ್ರಯತ್ನ ಮಾಡಿದರಾದರೂ ಸಾಧ್ಯವಾಗಲಿಲ್ಲ: ಬೊಮ್ಮಾಯಿ

ಬೆಂಗಳೂರು: ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ಸಾಧನೆ ಮಾಡಿದ್ದ ನಟ ಪುನೀತ್ ರಾಜ್​ಕುಮಾರ್ ನಿಧನ ನಾಡಿಗೆ ತುಂಬಲಾರದ ನಷ್ಟ. ಈ ಸುದ್ದಿ ನಮಗೆ ಆಘಾತ ತಂದಿದೆ. ಎದೆನೋವಿನಿಂದ ಪುನೀತ್ ಆಸ್ಪತ್ರೆಗೆ ಸೇರಿದರು. ಅವರನ್ನು ಉಳಿಸಿಕೊಳ್ಳಲು ವೈದ್ಯರು ಎಲ್ಲ ಪ್ರಯತ್ನ ಮಾಡಿದರಾದರೂ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಷಾದಿಸಿದರು. ನಟ ಪುನೀತ್ ರಾಜ್​ಕುಮಾರ್ ಸಣ್ಣ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿದ್ದರು. ನಿನ್ನೆಯಷ್ಟೇ ಕರೆ ಮಾಡಿ ಮಾತನಾಡಿದ್ದರು. ಇಂದು ನನ್ನ ಭೇಟಿಗೆ ಸಮಯ …

Read More »

ಮತ್ತೆ ಏರಿದ ಪೆಟ್ರೋಲ್​ ಬೆಲೆ; ರಾಜ್ಯದಲ್ಲಿ ಎಷ್ಟಾಗಿದೆ ಇಂಧನ ದರ?

ಬೆಂಗಳೂರು: ವಾಹನ ಸವಾರರಿಗೆ ಮತ್ತೆ ಶಾಕಿಂಗ್ ನ್ಯೂಸ್ ಸಿಕ್ಕಿದ್ದು, ಇಂದು ಕೂಡ ಪೆಟ್ರೋಲ್​ ಮತ್ತು ಡಿಸೇಲ್ ಬೆಲೆಯಲ್ಲಿ ಏರಿಕೆ ಕಂಡಿದೆ. ನೆನ್ನೆ ಪೆಟ್ರೋಲ್-ಡೀಸೆಲ್​ ದರಗಳಲ್ಲಿ ಏರಿಕೆ ಕಂಡುಬಂದಿದ್ದು, ಪೆಟ್ರೋಲ್ ದರದಲ್ಲಿ 36 ಪೈಸೆ ಮತ್ತು ಡೀಸೆಲ್ ದರದಲ್ಲಿ 37 ಪೈಸೆ ಏರಿಕೆಯಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ 35 ಪೈಸೆ ಮತ್ತು ಲೀಟರ್ ಡೀಸೆಲ್​ ದರದಲ್ಲಿ 36 ಪೈಸೆ ಹೆಚ್ಚಳವಾಗಿದೆ. ಇದರಂತೆ ದೆಹಲಿಯಲ್ಲಿ ಲೀಟರ್​ ಪೆಟ್ರೋಲ್​ ದರ …

Read More »

ಪ್ರೀತಿಯಲ್ಲಿ ಮೋಸ ಆಗಿದ್ದಕ್ಕೆ ಸಹೋದರ ಆತ್ಮಹತ್ಯೆ; DC ಮುಂದೆ ಗಳಗಳನೇ ಕಣ್ಣೀರಿಟ್ಟ ಯೋಧ..!

ಬೆಳಗಾವಿ: ಪ್ರೀತಿಸಿದ ಹುಡುಗಿಯ ಮನೆಯವರ ವಿರೋಧಕ್ಕೆ ಹೆದರಿ ಯುವಕನೋರ್ವ ಆತ್ಮಹತ್ಯೆಗೆ ಶರಣಾದ ಘಟನೆಗೆ ಸಂಬಂಧಿಸಿದಂತೆ ಮೃತನ ಸಹೋದರ ಹಾಗೂ ಯೋಧ ನನ್ನ ಕುಟುಂಬಕ್ಕೆ ರಕ್ಷಣೆ ಸಿಗುತ್ತಿಲ್ಲ ಎಂದು ಕಣ್ಣಿರಿಟ್ಟಿದ್ದಾನೆ. ಪ್ರೀತಿಸಿದ ಹುಡುಗಿ ಮನೆಯವರು ಮದುವೆಗೆ ವಿರೋಧಿಸಿ ಹಲ್ಲೆ ನಡೆಸಿ, ಬೆದರಿಕೆ ಹಾಕಿದ್ದರು. ಇದರಿಂದ ಮನನೊಂದ ತಾಲೂಕಿನ‌ ಬೆನಕನಹಳ್ಳಿಯ 31 ವರ್ಷದ ಭರಮಾ ಪಾಟೀಲ್ ಎಂಬಾತ ಅಕ್ಟೋಬರ್ 23ರಂದು ಆತ್ಮಹತ್ಯೆ ಮಾಡಿಕೊಂಡಿದ್ದ.     ಸಹೋದರನ ಸಾವು ನೆನೆದು ಜಿಲ್ಲಾಧಿಕಾರಿ ಕಚೇರಿ ಮುಂಭಾಗ …

Read More »

ಪುನೀತ್ ರಾಜ್‍ಕುಮಾರ್ ಅವರ ಕಣ್ಣುಗಳನ್ನು ನಾರಾಯಣ ನೇತ್ರಾಲಯಕ್ಕೆ ದಾನ

ಬೆಂಗಳೂರು,ಅ.29- ಇಂದು ನಿಧನರಾದ ನಟ ಪುನೀತ್ ರಾಜ್‍ಕುಮಾರ್ ಅವರ ಕಣ್ಣುಗಳನ್ನು ನಾರಾಯಣ ನೇತ್ರಾಲಯಕ್ಕೆ ದಾನ ಮಾಡಲಾಯಿತು. ಪುನೀತ್ ಅವರ ತಂದೆ ವರನಟ ಡಾ.ರಾಜ್‍ಕುಮಾರ್ ಅವರು ನಿಧನರಾದಾಗ ಅವರ ನೇತ್ರಗಳನ್ನು ಕೂಡ ದಾನ ಮಾಡಲಾಗಿತ್ತು. ಆ ಸಂದರ್ಭದಲ್ಲೇ ತಮ್ಮ ನೇತ್ರಗಳನ್ನು ದಾನ ಮಾಡುವ ಸಹಮತಕ್ಕೆ ಸಹಿ ಹಾಕಿದ್ದರು. ಅದರಂತೆ ಇಂದು ಅಪ್ಪು ಅವರ ನೇತ್ರಗಳನ್ನು ನಾರಾಯಣ ನೇತ್ರಾಲಯಕ್ಕೆ ದಾನ ಮಾಡಲಾಗಿದೆ. ಡಾ.ರಾಜ್ ಅವರು ಮೃತಪಟ್ಟ ನಂತರ ಇಬ್ಬರು ಅಂಧರ ಬಾಳಿಗೆ ಬೆಳಕಾಗಿದ್ದರು. ಈಗ …

Read More »

ನಾಳೆ ಸಂಜೆ ಪುನೀತ್ ಅಂತ್ಯಕ್ರಿಯೆ : ಕಂಠೀರವ ಕ್ರೀಡಾಂಗಣದಲ್ಲಿ ಅಂತಿಮ ದರ್ಶನ

ಬೆಂಗಳೂರು : ಇಹಲೋಕ ತ್ಯಜಿಸಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಂತ್ಯಕ್ರಿಯೆಯನ್ನು ನಾಳೆ (ಶನಿವಾರ) ಸಂಜೆಯೊಳಗೆ ನಡೆಸಲು ಕುಟುಂಬ ಸದಸ್ಯರು ತೀರ್ಮಾನಿಸಿದ್ದಾರೆ ಎಂದು ತಿಳಿದು ಬಂದಿದೆ. ಇಂದು ಸಂಜೆ 5 ಗಂಟೆಯಿಂದ ಕಂಠೀರವ ಕ್ರೀಡಾಂಗಣದಲ್ಲಿ ಅಭಿಮಾನಿಗಳಿಗೆ ಅಂತಿಮ ದರ್ಶನಕ್ಕಾಗಿ ವ್ಯವಸ್ಥೆ ಮಾಡಲಾಗಿದೆ. ಪುನೀತ್ ಅವರ ಪಾರ್ಥಿವ ಶರೀರವನ್ನು ವಿಕ್ರಂ ಆಸ್ಪತ್ರೆಯಿಂದ ಅವರ ಸದಾಶಿವ ನಗರ ನಿವಾಸಕ್ಕೆ ತರಲಾಗಿದೆ. ಕುಟುಂಬ ಸದಸ್ಯರೊಂದಿಗೆ ಕನ್ನಡ ಚಿತ್ರ ರಂಗದ ಹಲವಾರು ಗಣ್ಯರು ಮನೆಯಲ್ಲಿದ್ದಾರೆ. …

Read More »

ಸ್ಟಾರ್ ಪುನೀತ್ ರಾಜ್ ಕುಮಾರ್ ತೀವ್ರ ಅನಾರೋಗ್ಯದಿಂದ ವಿಧಿವಶ.

ಬೆಂಗಳೂರು: ಇಂದು ಇಡೀ ಕನ್ನಡ ನಾಡು ಕಣ್ಣೀರ ಕಡಲಲ್ಲಿ ಮುಳುಗಿದೆ. ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತೀವ್ರ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. ಜಿಮ್ ಮಾಡುವ ವೇಳೆ ತೀವ್ರ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದ ಪುನೀತ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ತೀವ್ರ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ವರನಟ ಡಾ. ರಾಜ್ ಕುಮಾರ್ ಹಾಗೂ ಪಾರ್ವತಮ್ಮ ರಾಜ್ ಕುಮಾರ್ ಅವರ ಕಿರಿಯ ಪುತ್ರನಾಗಿ 1975ರಲ್ಲಿ ಜನಿಸಿದ್ದ ಪುನೀತ್ ರಾಜ್ …

Read More »

ವಿದ್ಯಾರ್ಥಿಗಳೊಂದಿಗೆ ಕುಳಿತು ಬಿಸಿಯೂಟ ಸವಿದ ಆಹಾರ ನಿಗಮದ ಅಧ್ಯಕ್ಷ ನಡಹಳ್ಳಿ

ಮುದ್ದೇಬಿಹಾಳ: ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷರಾಗಿ ಸಂಪುಟ ದರ್ಜೆ ಸಚಿವ ಸ್ಥಾನಮಾನ ಹೊಂದಿರುವ ವಿಜಯಪುರ ‌ಜಿಲ್ಲೆ ಮುದ್ದೇಬಿಹಾಳದ ಬಿಜೆಪಿ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿಯವರು ಗುರುವಾರ ವಿದ್ಯಾರ್ಥಿಗಳೊಂದಿಗೆ ಸಹ ಪಂಕ್ತಿಯಲ್ಲಿ ಕುಳಿತು ಸರ್ಕಾರಿ ಶಾಲೆಯ ಮದ್ಯಾಹ್ನದ ಬಿಸಿಯೂಟ ಸೇವಿಸಿ ಗುಣಮಟ್ಟ ಖಚಿತಪಡಿಸಿಕೊಂಡರು. ಗುಡದಿನ್ನಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ತಮ್ಮ ಕುಟುಂಬದಿಂದ ಉಚಿತ ನೋಟಬುಕ್ ವಿತರಿಸಿದ ನಂತರ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಿಕ್ಷಕರು ಮತ್ತು ಎಲ್ಲ …

Read More »

ಪುನೀತ್ ರಾಜ್ ಕುಮಾರ್ ಜಿಮ್ ಮಾಡುವ ಸಂದರ್ಭದಲ್ಲಿ ಎದೆ ನೋವು

ಬೆಂಗಳೂರು: ಸ್ಯಾಂಡಲ್ ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅನಾರೋಗ್ಯಕ್ಕೀಡಾಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜಿಮ್ ಮಾಡುವ ಸಂದರ್ಭದಲ್ಲಿ ಎದೆ ನೋವು ಕಾಣಿಸಿಕೊಂಡಿತ್ತು ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಪುನೀತ್ ಅವರನ್ನು ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯದ ಮಾಹಿತಿ ಪ್ರಕಾರ ಪುನೀತ್ ರಾಜ್ ಕುಮಾರ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ತಿಳಿದುಬಂದಿದೆ.

Read More »

ಶಾಸಕ ಶ್ರೀಮಂತ ಪಾಟೀಲ್‌ ಮತ್ತವರ ಇಬ್ಬರು ಮಕ್ಕಳ ವಿರುದ್ಧ ಕೇಸ್ ದಾಖಲು

ಬೆಳಗಾವಿ: ಶಾಸಕ ಶ್ರೀಮಂತ ಪಾಟೀಲ್‌ ಮತ್ತು ಅವರ ಮಗ ಶ್ರೀನಿವಾಸ ಯೋಗೇಶ್ ಪಾಟೀಲ್​ ಸೇರಿದಂತೆ ಒಟ್ಟು 8 ಮಂದಿಯ ವಿರುದ್ಧ ಕಾಗವಾಡ ಪೊಲೀಸ್ ಠಾಣೆಯಲ್ಲಿ ಜೀವ ಬೆದರಿಕೆ ಪ್ರಕರಣ ದಾಖಲಾಗಿದೆ. ಕಾಗವಾಡ ತಾಲ್ಲೂಕಿನ ನವಿಲೇಹಾಳ ಗ್ರಾಮದ ನಿವಾಸಿ ದೇವದಾಸ ದೊಂಡಿಬಾ ಶೇರಖಾನೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ‘ಜಮೀನಿನ ವಿವಾದಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿದೆ. ಶಾಸಕ ಶ್ರೀಮಂತ ಪಾಟೀಲ ಅವರಿಂದ ಜೀವ ಬೇದರಿಕೆ ಇದೆ. ಜನಸಾಮಾನ್ಯರ ಜಮೀನು ಕಸಿದುಕೊಳ್ಳಲು ಅವರು …

Read More »