Breaking News

Yearly Archives: 2021

ವಿವಾಹಿತ ಮಹಿಳೆ ಜೊತೆ 21ರ ಯುವಕನ ಚೆಲ್ಲಾಟ; ಬುದ್ಧಿವಾದ ಹೇಳಿದ್ದ ವ್ಯಕ್ತಿಯನ್ನೇ ಕೊಂದ!

ಕೋಲಾರ: ತಪ್ಪು ಮಾಡಿದ್ದನ್ನ ತಿದ್ದುಕೊಂಡು ಜೀವನ ಸಾಗಿಸು ಎಂದು ಹೇಳಿದ್ದಕ್ಕೆ 52 ವರ್ಷದ ವ್ಯಕ್ತಿಯನ್ನ 21 ರ ಯುವಕ (21 Year Old Youth)ಕೊಲೆ ಮಾಡಿರುವ ಘಟನೆ ಕೋಲಾರ (Kolar) ಜಿಲ್ಲೆ ಕೆಜಿಎಫ್ ತಾಲೂಕಿನ ಪೂಗಾನಹಳ್ಳಿ (Pooganahalli, KGF) ಗ್ರಾಮದಲ್ಲಿ ನಡೆದಿದೆ, ಗ್ರಾಮದ ನಾರಾಯಣಸ್ವಾಮಿ, ಇದೇ ನವೆಂಬರ್ ತಿಂಗಳ 2 ನೇ ತಾರೀಖು ಮಧ್ಯಾಹ್ನ ಶವವಾಗಿ ಪತ್ತೆಯಾಗಿದ್ದು, ದೇಹ ಒಂದು ಕಡೆ, ತಲೆ ಒಂದು ಕಡೆ ಬಿದ್ದಿತ್ತು. ಕಳೆದ ಎರಡು …

Read More »

ರಾಜ್ಯ ಸರ್ಕಾರದಿಂದ `SC-ST’ ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿಸುದ್ದಿ

ಬೆಂಗಳೂರು : ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ನೌಕರರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಸ್ವಂತ ಅರ್ಹತೆ ಮೇಲೆ ನೇಮಕವಾದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸರ್ಕಾರಿ ನೌಕರರಿಗೆ ಮುಂಬಡ್ತಿ ಕೊಡುವಾಗ ಶೇ. 15 ಮತ್ತು ಶೇ. 3 ರ ಮೀಸಲಾತಿ ಕೋಟಾ ಪರಿಗಣಿಸದೇ ಸಾಮಾನ್ಯ ವರ್ಗದಲ್ಲೇ ಬಡ್ತಿ ಕೊಡುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಎಸ್ ಸಿ-ಎಸ್ ಟಿ ಸಮುದಾಯಗಳಿಗೆ ರಾಜ್ಯ ಸಿವಿಲ್ ಸೇವಾ ಹುದ್ದೆಗಳಿಗೆ ನೀಡಲಾಗುವ …

Read More »

ರಾಜ್ಯದ ಸರ್ಕಾರಿ ನೌಕರರಿಗೆ ‘ಸಿಎಂ ಬಸವರಾಜ ಬೊಮ್ಮಾಯಿ ಸಿಹಿಸುದ್ದಿ

ಬೆಂಗಳೂರು : ಬೆಂಗಳೂರಿನಲ್ಲಿ ಮನೆ ಕಟ್ಟಿಸುವ ಸರ್ಕಾರಿ ನೌಕರರಿಗೆ ‘ಸಿಎಂ ಬಸವರಾಜ ಬೊಮ್ಮಾಯಿ ‘ಗುಡ್ ನ್ಯೂಸ್ ನೀಡಿದ್ದು, ಸರ್ಕಾರಿ ನೌಕರರಿಗೆ ರಿಯಾಯಿತಿ ದರದಲ್ಲಿ ಮನೆ ಹಂಚಿಕೆ ಮಾಡಲು ಸಿಎಂ ಒಪ್ಪಿಗೆ ನೀಡಿದ್ದಾರೆ . ಬೆಂಗಳೂರು ನಗರದಲ್ಲಿ ಅಪಾರ್ಟ್ ಮೆಂಟ್ ನಿರ್ಮಿಸಿ , ಸರ್ಕಾರಿ ನೌಕರರಿಗೆ ರಿಯಾಯಿತಿ ದರಲ್ಲಿ ಹಂಚಿಕೆ ಮಾಡಲು ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರು ಒಪ್ಪಿಗೆ ನೀಡಿರುತ್ತಾರೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ …

Read More »

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ನಳೀನ್‍ಕುಮಾರ್ ಕಟೀಲ್ ಎತ್ತಂಗಡಿ..!?

ಬೆಂಗಳೂರು,ನ.6- ನಿರೀಕ್ಷಿತ ಮಟ್ಟದಲ್ಲಿ ಪಕ್ಷ ಸಂಘಟಿಸುವಲ್ಲಿ ವಿಫಲ, ಉಪಚುನಾವಣೆ ಹಿನ್ನಡೆ, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಸೋತಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಅವರ ಸ್ಥಾನ ಬದಲಾಗಿದೆ ಎಂಬ ವದಂತಿ ಹಬ್ಬಿದೆ. ಇದೇ 9ರಂದು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬೆಂಗಳೂರಿಗೆ ಆಗಮಿಸಲಿದ್ದು, ಅಂದು ಪಕ್ಷದ ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಖಜಾಂಚಿ, ಜಿಲ್ಲಾ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಕೋರ್ ಕಮಿಟಿ ಮುಖಂಡರ ಜೊತೆ ಸಭೆ ನಡೆಸಲಿದ್ದಾರೆ. ಇತ್ತೀಚೆಗೆ ನಡೆದ ಎರಡು ವಿಧಾನಸಭಾ …

Read More »

ಪ್ರಿಯಕರನೊಂದಿಗೆ ಅಮೀರ್ ಖಾನ್ ಪುತ್ರಿಯ ದೀಪಾವಳಿ ಸಂಭ್ರಮ

ಮುಂಬಯಿ: ಬಾಲಿವುಡ್ ನಟ ಅಮೀರ್ ಖಾನ್ ಅವರ ಪುತ್ರಿ ಇರಾ ಖಾನ್ ಅವರು ಗೆಳೆಯ ನೂಪುರ್ ಶಿಖರೆ ಮತ್ತು ಅವರ ತಾಯಿ ಪ್ರೀತಮ್ ಶಿಖರೆ ಅವರೊಂದಿಗೆ ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮಿಸಿದರು. ಇರಾ ಖಾನ್ ಸುಂದರವಾದ ರೇಷ್ಮೆ ಸೀರೆಯನ್ನು ಧರಿಸಿ ದೀಪಾವಳಿಯನ್ನು ಆಚರಿಸಿಕೊಂಡಿರುವ ಫೋಟೋಗಳು ವೈರಲ್ ಆಗಿವೆ.   ಫಿಟ್‌ನೆಸ್ ತರಬೇತುದಾರರಾಗಿರುವ ನೂಪುರ್ ಫೋಟೋಗಳನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ್ದು, ಮೂವರೂ ಸಾಂಪ್ರದಾಯಿಕ ಬಟ್ಟೆಗಳನ್ನು ಧರಿಸಿದ್ದಾರೆ. ಇರಾ ಖಾನ್ ಈ ವರ್ಷದ ಆರಂಭದಲ್ಲಿ …

Read More »

ಕಾಂಗ್ರೆಸ್ ಇರುವ ರಾಜ್ಯಗಳಲ್ಲಿ ಇಂಧನ ಬೆಲೆ ಇಳಿಕೆ ಆಗಿದೆಯಾ: ಪ್ರಹ್ಲಾದ ಜೋಶಿ

ಧಾರವಾಡ: ಯಾವ ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆಯೋ ಅಲ್ಲಿ ಇಂಧನದ ಮೇಲಿನ ವ್ಯಾಟ್ ಕಡಿಮೆ ಆಗಿದೆಯಾ ಅಥವಾ ಕಡಿಮೆ ಮಾಡುತ್ತಾರಾ ಎಂಬುದನ್ನು ಡಿ.ಕೆ.ಶಿವಕುಮಾರ ಅವರು ರಾಹುಲ್ ಗಾಂಧಿ ಅವರನ್ನು ಕೇಳಿ ಹೇಳಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಡಿ.ಕೆ.ಶಿವಕುಮಾರ ಅವರಿಗೆ ಟಾಂಗ್ ಕೊಟ್ಟಿದ್ದಾರೆ. ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಮುಂದಿಟ್ಟುಕೊಂಡು ಬೆಲೆ ಇಳಿಕೆ ಮಾಡುವುದು ನಮ್ಮ ಪ್ರವೃತ್ತಿಯಲ್ಲ. ಒಟ್ಟಾರೆ ದೇಶದಲ್ಲಿ 29 ಉಪಚುನಾವಣೆಗಳು ನಡೆದಿವೆ. ಅದರಲ್ಲಿ 12 ಸ್ಥಾನಗಳಲ್ಲಿ …

Read More »

ಇಎಂಐ ಪಾವತಿಸಲು ಇಟ್ಟಿದ್ದ ಹಣದಿಂದ ಚಿನ್ನಾಭರಣ ಖರೀದಿ: ಪತ್ನಿಯನ್ನು ಹೊಡೆದು ಕೊಂದ ಆಟೋ ಚಾಲಕ!

ಬೆಂಗಳೂರು: ಆಟೋ ರಿಕ್ಷಾ ಇಎಂಐ ಪಾವತಿಸಲು ಇಟ್ಟಿದ್ದ ನಗದನ್ನು ಬಳಕೆ ಮಾಡಿದ್ದಕ್ಕಾಗಿ ಆಟೋ ಚಾಲಕನೋರ್ವ ತನ್ನ ಪತ್ನಿಯನ್ನು ಹೊಡೆದು ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಸಿದ್ದಪುರದಲ್ಲಿ ವರದಿಯಾಗಿದೆ. ನಾಜಿಯಾ ಮೃತ ದುರ್ದೈವಿಯಾಗಿದ್ದು, ಕೆಎಂ ಕಾಲೋನಿಯ ನಿವಾಸಿಯೆಂದು ಗುರುತಿಸಲಾಗಿದೆ. ಆಕೆಯ ಪತಿ ಶೇಖ್ ಫಾರೂಖ್ ಎಂಬಾತ ಆಟೋ ಚಾಲಕನಾಗಿದ್ದು, ಪೊಲೀಸರು ಈತನನ್ನು ಬಂಧಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಈ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. “ಆರೋಪಿ ಶೇಖ್ ಫಾರೂಖ್, ಆಟೋ ಇಎಂಐ ಪಾವತಿಸುವುದಕ್ಕಾಗಿ …

Read More »

ತುಮಕೂರು-ಯಶವಂತಪುರ ನಡುವೆ ಮೆಮು ರೈಲಿಗೆ ಬೇಡಿಕೆ

ಬೆಂಗಳೂರು: ತುಮಕೂರು-ಬೆಂಗಳೂರು ನಡುವಿನ ರೈಲು ಮಾರ್ಗದ ವಿದ್ಯುದ್ದೀಕರಣ ಯೋಜನೆ ಕಾಮಗಾರಿ ಪೂರ್ಣಗೊಂಡಿದ್ದು, ರೈಲ್ವೆ ಸುರಕ್ಷತಾ ಆಯುಕ್ತರಿಂದ ಪರಿಶೀಲನೆಯೂ ನಡೆದಿದೆ. ಎರಡೂ ನಗರಗಳ ನಡುವೆ ಮೆಮು ರೈಲು(ಎಲೆಕ್ಟ್ರಿಕ್ ರೈಲು) ಸಂಚಾರಕ್ಕೆ ಈಗ ಬೇಡಿಕೆ ಹೆಚ್ಚಾಗಿದೆ.   ಬೆಂಗಳೂರಿನಿಂದ ತುಮಕೂರಿಗೆ ನಿತ್ಯ ಲಕ್ಷಾಂತರ ಜನ ಪ್ರಯಾಣಿಸುತ್ತಾರೆ. ಕೆಲಸಕ್ಕೆ ಬೆಂಗಳೂರಿಗೆ ಬಂದು ಹೋಗುವ ಜನರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಯಶವಂತಪುರದಿಂದ ತುಮಕೂರಿಗೆ ಪ್ರಯಾಣದ ಅವಧಿ ಗರಿಷ್ಠ ಒಂದೂವರೆ ಗಂಟೆ ಆಗಿರುವುದರಿಂದ ರೈಲಿನಲ್ಲಿ ಪ್ರಯಾಣಕ್ಕೆ ಜನ ಬಯಸುತ್ತಾರೆ. …

Read More »

ಚೀನಾಕ್ಕೆ ನೀಡಿದ್ದ ಕ್ಲೀನ್‌ ಚಿಟ್‌ ವಾಪಸ್‌ ಪಡೆಯಲಿ: ಮೋದಿಗೆ ಕಾಂಗ್ರೆಸ್‌ ಆಗ್ರಹ

ನವದೆಹಲಿ: ಅರುಣಾಚಲ ಪ್ರದೇಶದಲ್ಲಿ 4.5 ಕಿ.ಮೀ. ಭಾರತದ ಪ್ರದೇಶಕ್ಕೆ ಚೀನಾ ಪ್ರವೇಶಿಸಿದೆ ಎಂಬ ಪೆಂಟಗನ್‌ ವರದಿಯನ್ನು ಪ್ರಧಾನಿ ಮೋದಿ ಅವರು ಅಲ್ಲಗಳೆದು, ಭಾರತದ ಭೂಪ್ರದೇಶಕ್ಕೆ ಯಾರೂ ಪ್ರವೇಶಿಸಿಲ್ಲ ಎಂದು ಚೀನಾಕ್ಕೆ ನೀಡಿರುವ ‘ಕ್ಲೀನ್ ಚಿಟ್’ ಅನ್ನು ಹಿಂಪಡೆಯುವಂತೆ ಕಾಂಗ್ರೆಸ್‌ ಶನಿವಾರ ಒತ್ತಾಯಿಸಿದೆ. ಅಲ್ಲದೇ, ಜಗತ್ತನ್ನು ದಾರಿ ತಪ್ಪಿಸಿದ್ದಕ್ಕಾಗಿ ಪ್ರಧಾನಿ ಕ್ಷಮೆಯಾಚಿಸುವಂತೆ ಆಗ್ರಹಿಸಿದೆ. ಚೀನಾದೊಂದಿಗಿನ ನಮ್ಮ ಎಲ್ಲಾ ಗಡಿಗಳಲ್ಲಿ ಏಪ್ರಿಲ್ 2020ರಂತೆ ಯಥಾಸ್ಥಿತಿಯು ಯಾವಾಗ ಮರುಸ್ಥಾಪನೆಯಾಗಲಿದೆ ಎಂಬುದಕ್ಕೆ ಪ್ರಧಾನಿ ಉತ್ತರಿಸಬೇಕು. ಅಲ್ಲದೇ, ಯಥಾಸ್ಥಿತಿಗೆ …

Read More »

7th Pay Commission : ಕೇಂದ್ರ ಸರ್ಕಾರದ 11.56 ಲಕ್ಷ ನೌಕರರಿಗೆ ಭರ್ಜರಿ ಸಿಹಿ ಸುದ್ದಿ

ನವದೆಹಲಿ : ಕೇಂದ್ರ ಸರ್ಕಾರಿ ನೌಕರರಿಗೆ ಇದು ಡಬಲ್ ಬೊನಾಂಜಾ. ದೀಪಾವಳಿ ಬೋನಸ್ ನಂತರ, ಕೆಲವು ಮಾಧ್ಯಮ ವರದಿಗಳನ್ನು ನಂಬುವುದಾದರೆ, ಜನವರಿ 2022 ರಿಂದ ಅವರು ತಮ್ಮ ಸಂಬಳದಲ್ಲಿ ಹೆಚ್ಚಳವನ್ನು ಪಡೆಯುವ ಸಮಯ. ಜನವರಿ 1, 2021 ರಿಂದ 11.56 ಲಕ್ಷಕ್ಕೂ ಹೆಚ್ಚು ನೌಕರರಿಗೆ ಮನೆ ಬಾಡಿಗೆ ಭತ್ಯೆ (HRA) ಜಾರಿಗೆ ತರಲು ಹಣಕಾಸು ಸಚಿವಾಲಯವು ಕಾರ್ಯನಿರ್ವಹಿಸುತ್ತಿದೆ. ಈ ಪ್ರಸ್ತಾವನೆಯನ್ನು ರೈಲ್ವೆ ಮಂಡಳಿಯ(Railway Board) ಅನುಮೋದನೆಗಾಗಿ ಕಳುಹಿಸಲಾಗಿದೆ. ಭಾರತೀಯ ರೈಲ್ವೇ ತಾಂತ್ರಿಕ …

Read More »