Breaking News

Monthly Archives: ಜುಲೈ 2021

`ತೆನೆ’ ಇಳಿಸಿ `ಕೈ’ ಹಿಡಿದ ಮಧು ಬಂಗಾರಪ್ಪ..

ಹುಬ್ಬಳ್ಳಿ : ಮಾಜಿ ಸಿಎಂ ಎಸ್ ಬಂಗಾರಪ್ಪ ಪುತ್ರ, ಮಾಜಿ ಶಾಸಕ ಮಧು ಬಂಗಾರಪ್ಪ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಹುಬ್ಬಳ್ಳಿಯಲ್ಲಿ ಕರ್ನಾಟಕ ಕಾಂಗ್ರೆಸ್ ವಿಭಾಗ ಮಟ್ಟದ ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಸಮ್ಮುಖದಲ್ಲಿ ಮಧು ಬಂಗಾರಪ್ಪ ಕಾಂಗ್ರೆಸ್ ಬಾವುಟ ಹಿಡಿದರು. ಅಲ್ಲದೆ ಇದೇ ಸಭೆಯಲ್ಲಿ ಮಧು ಬಂಗಾರಪ್ಪ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಗರ ಜೊತೆ …

Read More »

ವಲಸಿಗರ ಕೈ ಬಿಟ್ರಾ ಬಿ.ಎಸ್.ಯಡಿಯೂರಪ್ಪ..?

ಚಾಮರಾಜನಗರ : ಕೇವಲ ಬಿ.ಎಸ್.ಯಡಿಯೂರಪ್ಪ ಅವರನ್ನು ನಂಬಿ ಬಿಜೆಪಿಗೆ ಬಂದು ಸಚಿವರಾಗಿದ್ದ 17 ಮಂದಿ ಶಾಸಕರಿಗೆ ಬಿಎಸ್ ವೈ ಶಾಕ್ ನೀಡಿದ್ದಾರೆ. ಅವರಿಗೆ ಮತ್ತೆ ಮಂತ್ರಿ ಸ್ಥಾನ ಕೊಡೋದು ಬಿಡೋದು ಸಿಎಂ ಬೊಮ್ಮಾಯಿ ಅವರಿಗೆ ಬಿಟ್ಟಿದ್ದು ಎಂದು ಹೇಳುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಮೈತ್ರಿ ಸರ್ಕಾರದ ವೇಳೆ ಕಾಂಗ್ರೆಸ್ – ಜೆಡಿಎಸ್ ನಲ್ಲಿದ್ದ ಶಾಸಕರನ್ನು ಬಿಜೆಪಿಗೆ ಸೆಳೆದು ಸರ್ಕಾರ ರಚಿಸಿದ್ದ ಬಿಎಸ್ ವೈ ಕೊಟ್ಟ ಮಾತಿನಂತೆ ಅವರಿಗೆ ಸಚಿವ …

Read More »

ಸಂಪುಟ ರಚನೆಯಲ್ಲಿ ಯಾವುದೇ ಹಸ್ತಕ್ಷೇಪ ಮಾಡಲ್ಲ, ಸಲಹೆಯನ್ನು ನೀಡಲ್ಲ -ಬಿಎಸ್​ವೈ

ಚಾಮರಾಜನಗರ: ಮಾಜಿ ಸಿಎಂ ಬಿ.ಎಸ್​. ಯಡಿಯೂರಪ್ಪ ಅವರು ತಮ್ಮ ರಾಜೀನಾಮೆಯಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದ ಅಭಿಮಾನಿ ರವಿ ಮನೆಗೆ ಭೇಟಿ ನೀಡಿ ಕುಟುಂಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಜಿಲ್ಲೆಯ ಗುಂಡ್ಲುಪೇಟೆಯ ತಾಲೂಕಿನ ಬೊಮ್ಮಲಾಪುರಕ್ಕೆ ಭೇಟಿ ನೀಡಿದ ಬಿಎಸ್​​​ವೈ ಅವರು ಮೃತ ಅಭಿಮಾನಿಯ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಂದಿನ ಗಣೇಶ ಚತುರ್ಥಿಯ ನಂತರ ರಾಜ್ಯದ ತುಂಬ ಪ್ರವಾಸ ಮಾಡಲಿದ್ದೇನೆ ಎಂದಿದ್ದಾರೆ. ಪಕ್ಷವನ್ನು ಬಲ …

Read More »

ಕುದರೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ನೆಟ್‌ವರ್ಕ್ ಸೌಲಭ್ಯ ಕಲ್ಪಿಸುವಂತೆ ಆಗ್ರಹ

ಸಾಗರ: ತಾಲ್ಲೂಕಿನ ಕುದರೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಮೊಬೈಲ್ ನೆಟ್‌ವರ್ಕ್ ಸೌಲಭ್ಯ ಕಲ್ಪಿಸಲು ಅಗತ್ಯವಿರುವ ವ್ಯವಸ್ಥೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಾಡಬೇಕು ಎಂದು ಕೆಪಿಸಿಸಿ ಕಾರ್ಯದರ್ಶಿ ಡಾ.ರಾಜನಂದಿನಿ ಕಾಗೋಡು ಒತ್ತಾಯಿಸಿದ್ದಾರೆ. ತಾಲ್ಲೂಕಿನ ಕುದರೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಇರುವ ಕಾರಣ ಬುಧವಾರ ಜಿಯೋ ಕಂಪೆನಿ ಪ್ರತಿನಿಧಿಗಳೊಂದಿಗೆ ಗ್ರಾಮಗಳಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರು ಮಾತನಾಡಿದರು. ನಾಡಿಗೆ ಬೆಳಕು ನೀಡಲು ಜಲ ವಿದ್ಯುತ್ …

Read More »

ದೆಹಲಿಗೆ ತೆರಳಿದ ಸಿಎಂ ಬೊಮ್ಮಾಯಿ: ಇವತ್ತೇ ಫೈನಲ್ ಆಗುತ್ತಾ ಸಚಿವ ಸಂಪುಟ?

ಬೆಂಗಳೂರು: ಮುಖ್ಯಮಂತ್ರಿಯಾಗಿ ಚುಕ್ಕಾಣಿ ಹಿಡಿದ ಬಳಿಕ ಬಸವರಾಜ ಬೊಮ್ಮಾಯಿಯವರು ಮೊದಲ ಬಾರಿ ದೆಹಲಿ ವಿಮಾನ ಏರಿದ್ದಾರೆ. ಸಿಎಂ ದೆಹಲಿ ಭೇಟಿ ರಾಜ್ಯದ ಸಚಿವ ಸ್ಥಾನಾಕಾಂಕ್ಷಿಗಳ ನೀರಿಕ್ಷೆ ಹೆಚ್ಚಿಸುವಂತೆ ಮಾಡಿದೆ. ಸಿಎಂ ಬೊಮ್ಮಾಯಿ ಇಂದು ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಲಿದ್ದಾರೆ. ತನ್ನನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿದ್ದಕ್ಕೆ ಧನ್ಯವಾದ ಹೇಳಲು ತಾನು ದೆಹಲಿಗೆ ಹೋಗುತ್ತಿರುವುದಾಗಿ ಬೊಮ್ಮಾಯಿ ಹೇಳಿಕೆ …

Read More »

133 ವರ್ಷ ಹಳೆಯ ಕನ್ನಡ ಶಾಲೆಯನ್ನ ದತ್ತು ಪಡೆದ ಕಿಚ್ಚಸುದೀಪ್​ ತಂಡ

ಶಿವಮೊಗ್ಗ: ಜಿಲ್ಲೆಯ ಸುಮಾರು 133 ವರ್ಷ ಹಳೆಯ ಕನ್ನಡ ಶಾಲೆಯನ್ನ ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ ದತ್ತು ಪಡೆದಿದೆ. ಈ ಬಗ್ಗೆ ಶಿವಮೊಗ್ಗ ಕ್ಷೇತ್ರಶಿಕ್ಷಣಾಧಿಕಾರಿಗಳು ಅನುಮೋದನೆ ನೀಡಿದ್ದಾರೆ. ನಗರದ ಬಿಹೆಚ್​ ರಸ್ತೆಯಲ್ಲಿರುವ ಸರ್ಕಾರಿ ಶಾಲೆಯನ್ನ ಕಿಚ್ಚಸುದೀಪ್​ ತಂಡ ದತ್ತು ಪಡೆದಿದ್ದು, ಶಾಲೆಯನ್ನ ಅಭಿವೃದ್ಧಿ ಪಡಿಸಲು ಪಣ ತೊಟ್ಟಿದೆ. ಈಗಾಗಲೇ ನೂರಾರು ಶಾಲೆಗಳನ್ನ ದತ್ತು ತೆಗೆದುಕೊಂಡು ಅಭಿವೃದ್ಧಿ ಪಡಿಸುವ ಕೆಲಸವನ್ನ ಈ ಕಿಚ್ಚ ಸುದೀಪ್​ ಚಾರಿಟಬಲ್​ಟ್ರಸ್ಟ್​ ಮಾಡುತ್ತಿದ್ದು, ಈ ಕಾರ್ಯಕ್ಕೆ ಅಪಾರ …

Read More »

ಗದಗ ಜಿಲ್ಲೆಯಲ್ಲಿ ‘ಸಲ್ಮಾನ್ ಖಾನ್’ಗ್ರಾಮ ಕೇಳಿದ್ದೀರಾ? ಇಲ್ಲಿ ಮದುವೆಯಾಗಲು ಕ್ಯೂನಲ್ಲಿ ನಿಂತಿದ್ದಾರೆ ಯುವಕರು!

ಗದಗ:ಜಿಲ್ಲೆಯ ರೋಣ ತಾಲ್ಲೂಕಿನ ಸಣ್ಣ ಹಳ್ಳಿಯಿದು, ಈ ಹಳ್ಳಿ ಗದಗ ಪಟ್ಟಣದಿಂದ 59 ಕಿಲೋ ಮೀಟರ್ ದೂರದಲ್ಲಿದೆ. ಸಲ್ಮಾನ್ ಖಾನ್ ಗ್ರಾಮ ಎಂಬ ಹೆಸರು ಈ ಗ್ರಾಮಕ್ಕೆ ಬಂದಿದೆ, ಅರೆ ಬಾಲಿವುಡ್ ನಟ ಸಲ್ಮಾನ್ ಖಾನ್ ಗೂ ಈ ಗ್ರಾಮಕ್ಕೂ ಏನು ಸಂಬಂಧ ಎಂದುಕೊಂಡಿರಾ? ಈ ಗ್ರಾಮದಲ್ಲಿ ಯಾರೂ ನಟರಿಲ್ಲ, ಬದಲಿಗೆ ಹಲವು ಯುವಕರು, ಪುರುಷರು ಮದುವೆಯಾಗಲು ಸೂಕ್ತ ಹೆಣ್ಣು ಸಿಗದೆ ಬ್ರಹ್ಮಚಾರಿಗಳಾಗಿಯೇ ಉಳಿದಿದ್ದಾರೆ. ಕಳೆದ 10 ವರ್ಷಗಳಿಂದ ಗ್ರಾಮದಲ್ಲಿ …

Read More »

ಮೇರಿ ಕೋಮ್ ಎಂಬ ‘ಫೈಟಿಂಗ್ ಸ್ಪಿರಿಟ್’ಗೆ ವಿದಾಯ

ಇಂದು ನೂರಾರು ರಾಜಕೀಯ ಸುದ್ದಿಗಳ ನಡುವೆ ಇದೊಂದು ಸುದ್ದಿ ಪ್ರಾಮುಖ್ಯತೆ ಪಡೆಯಲೇ ಇಲ್ಲ! ಬಾಕ್ಸಿಂಗ್ ಲೆಜೆಂಡ್ ಮೇರಿ ಕೋಮ್ ಒಲಿಂಪಿಕ್ಸ್ ಕೂಟದ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಇಂದು ಕೊಲಂಬಿಯಾದ ವೇಲೆಂಶಿಯ ಎಂಬ ಬಾಕ್ಸರ್ ಗೆ ಭಾರೀ ಫೈಟ್ ಕೊಟ್ಟು 3-2 ಅಂಕಗಳಿಂದ ಸೋತು ರಿಂಗ್ಸ್ ನಿಂದ ನಿರ್ಗಮಿಸುವಾಗ ಆಕೆಯ ಕಣ್ಣಂಚಿನಲ್ಲಿ ಜಿನುಗಿದ ಕಣ್ಣೀರು ಯಾವುದೇ ಮಾಧ್ಯಮಕ್ಕೆ ಕೂಡ TRP ಕಂಟೆಂಟ್ ಆಗಿಲ್ಲ. ಇನ್ನು ಮುಂದೆ ಮೇರಿ ಕೋಮ್ ಬಾಕ್ಸಿಂಗ್ …

Read More »

ಆಧಾರ್‌ ಕಾರ್ಡ್‌ ಸಿಕ್ಕಿಲ್ಲ: ಅಂಗವಿಕಲ ವೇತನವೂ ಇಲ್ಲ: ಅಂಗವಿಕಲ ಯುವತಿಯ ಅಳಲು

ಬಜಪೆ: ಎಷ್ಟು ಪ್ರಯತ್ನ ಪಟ್ಟರೂ ಆಧಾರ್‌ ಕಾರ್ಡ್‌ ಪಡೆಯಲು ಸಾಧ್ಯವಾಗದೆ ಇಲ್ಲೊಬ್ಬ ವಿಶೇಷ ಚೇತನ ಯುವತಿ ಸರಕಾರದ ಸವಲತ್ತುಗಳಿಂದ ವಂಚಿತರಾಗಿದ್ದಾರೆ. ಮಂಗಳೂರು ತಾಲೂಕು ಎಕ್ಕಾರು ಗ್ರಾಮ ಪಂಚಾಯತ್‌ನ ತೆಂಕ ಎಕ್ಕಾರು ಪಲ್ಲದ ಕೋಡಿ ಮುರ ಮನೆಯ ಪದ್ಮನಾಭ ಗೌಡ – ಮೀನಾಕ್ಷಿ ದಂಪತಿಯ ಪುತ್ರಿ ಧನ್ಯಶ್ರೀ (23) ಸಂತ್ರಸ್ತ ಯುವತಿ. ಕೂಲಿ ಕಾರ್ಮಿಕ ದಂಪತಿಗೆ ನಾಲ್ವರು ಮಕ್ಕಳು. ಧನ್ಯಶ್ರೀ ಹುಟ್ಟಿನಿಂದ ಅಂಗವೈಕಲ್ಯ ಮತ್ತು ಮಧ್ಯಮ ಬುದ್ಧಿ ಮಾಂದ್ಯತೆಯಿಂದ ಬಳಲುತ್ತಿದ್ದಾರೆ. ದಿನಗೂಲಿ …

Read More »

ಬಿಜೆಪಿ ಸರ್ಕಾರಕ್ಕೆ 2 ವರ್ಷಗಳ ಸಂಭ್ರಮ; ಕಾಂಗ್ರೆಸ್​ನಿಂದ BSY ಆಡಳಿತ ವೈಫಲ್ಯಗಳ ಬಗ್ಗೆ ಪುಸ್ತಕ ರಿಲೀಸ್

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರ ನಡೆಸಿದ 2 ವರ್ಷಗಳ ಆಡಳಿತ ವೈಫಲ್ಯ ಕುರಿತ ಪುಸ್ತಕವನ್ನ ಮಾಜಿ ಸಿಎಂ ಸಿದ್ದರಾಮಯ್ಯ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಸಿದ್ದರಾಮಯ್ಯ.. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ 2 ವರ್ಷ ಪೂರೈಸಿ, ಸಂಭ್ರಮದ ದಿನ ಆಚರಿಸಿ ರಾಜೀನಾಮೆ ನೀಡಿದ್ರು. ಸಂಕಷ್ಟದ ಸಮಯದಲ್ಲಿ ರಾಜ್ಯವನ್ನು ಅಭಿವೃದ್ಧಿ ಪತದತ್ತ ತೆಗೆದುಕೊಂಡು ಹೋಗಿದ್ದೀವಿ ಅಂದ್ರು. ಯಡಿಯೂರಪ್ಪ ನಿರ್ಗಮಿಸಿದ್ದಾರೆ, ಬಸವರಾಜು ಬೊಮ್ಮಾಯಿಗೆ ಅಭಿನಂದಿಸಿ, ಶುಭವಾಗಲಿ ಎಂದು ಹಾರೈಸುವೆ. ಶಶಿಕಲಾ ಜೊಲ್ಲೆಯವರ ರಾಜೀನಾಮೆ ಪಡೆಯಲಿಲ್ಲ ಈ …

Read More »