Breaking News
Home / 2021 / ಮೇ (page 45)

Monthly Archives: ಮೇ 2021

ಕೊರೊನಾ ಸೋಂಕಿಗೆ ಶಿಕ್ಷಕರು ಬಲಿಯಾಗುತ್ತಿದ್ದರೂ ಶಿಕ್ಷಕರ ಹಿತ ಕಾಯುವಲ್ಲಿ ಮುಂದಾಗದ ರಾಜ್ಯ ಸರ್ಕಾರ: ಹೊರಟ್ಟಿ ಆಕ್ರೋಶ

ಬೆಂಗಳೂರು: ಕೊರೊನಾ ಸೋಂಕಿಗೆ ಶಿಕ್ಷಕರು ಬಲಿಯಾಗುತ್ತಿದ್ದರೂ ಶಿಕ್ಷಕರ ಹಿತ ಕಾಯುವಲ್ಲಿ ಮುಂದಾಗದ ರಾಜ್ಯ ಸರ್ಕಾರ ನಿರ್ಲಕ್ಷಕ್ಕೆ ಕಿಡಿಕಾರಿರುವ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಸಿಎಂ ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದಾರೆ. ಇದೇ ವೇಳೆ ಶಿಕ್ಷಕರ ಸಂಕಷ್ಟ ಪರಿಹರಿಸುವ ನಿಟ್ಟಿನಲ್ಲಿ ಕೆಲ ಸಲಹೆ ನೀಡಿದ್ದಾರೆ. ಮೊದಲಿನಿಂದಲೂ ಚುನಾವಣೆಗಳು, ಜನಗಣತಿ ಸೇರಿದಂತೆ ಎಲ್ಲ ಆಪತ್ತುಗಳ ಸಂದರ್ಭದಲ್ಲಿ ಸರಕಾರದ ಎಲ್ಲ ಕೆಲಸಗಳಿಗೂ ಶಿಕ್ಷಕರನ್ನು ತೊಡಗಿಸಿಕೊಳ್ಳಲಾಗುತ್ತಿದೆ. ಆದರೆ ಅಂತಹ ಕೆಲಸ ನಿರ್ವಹಣೆಯಲ್ಲಿ ಅವರಿಗೆ ಏನಾದರೂ ತೊಂದರೆ ಅನಾಹುತ …

Read More »

ಕಷ್ಟದಲ್ಲಿರುವವವರಿಗೆ ಹೆಗಲು ಕೊಡ್ತಿರೋ ಕಿಚ್ಚ & ಟೀಂ

ಸ್ಯಾಂಡಲ್​ವುಡ್​ ಬಾದ್ಶಾ ಕಿಚ್ಚ ಸುದೀಪ್​ ಕಡೆಯಿಂದ ನಿರಂತರವಾಗಿ ಸಾಮಾಜಿಕ ಕಾರ್ಯಗಳು ನಡೀತಾನೇ ಇದೆ. ಈ ಕೊರೊನ ಸಂಕಷ್ಟದಲ್ಲಂತೂ ಕೈ ಮೀರಿ ಸಹಾಯ ಮಾಡುತ್ತಿದ್ದಾರೆ ಕಿಚ್ಚ ಅಂಡ್​ ಟೀಂ. ಇದೀಗ ಮಹಿಳಾ ಅಭಿಮಾನಿಯೊಬ್ಬರ ಕಷ್ಟಕ್ಕೆ ಹೆಗಲು ಕೊಟ್ಟಿದೆ ಕಿಚ್ಚ ಚಾರಿಟೇಬಲ್​ ಟ್ರಸ್ಟ್. ಕಿಚ್ಚನ ಸಹಾಯ ನೆನೆದು ಅಭಿಮಾನಿ ಕಣ್ಣೀರಿಟ್ಟಿದ್ದಾರೆ. ಬಾದ್ಶಾ ಕಿಚ್ಚ ಸುದೀಪ್​ ನಿರಂತರವಾಗಿ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ..ಕೊರೊನಾ ಸಂಧರ್ಭ ಮಾತ್ರವಲ್ದೆ ಬಹಳ ಹಿಂದಿನಿಂದಲೂ ತಮ್ಮ ಚಾರಿಟೇಬಲ್​ ಟ್ರಸ್ಟ್ ವತಿಯಿಂದ ನಿಸ್ವಾರ್ಥ …

Read More »

ತಮ್ಮ ಹಾಟ್ ಫೋಟೋಗಳನ್ನು ಹಂಚಿಕೊಂಡ ನಟಿ ಲಕ್ಷ್ಮಿ ರೈ

ಬಹುಭಾಷಾ ನಟಿ ಲಕ್ಷ್ಮಿ ರೈ ಸೋಶಿಯಲ್ ಮೀಡಿಯಾದಲ್ಲಿ ಫುಲ್ ಆಕ್ಟಿವ್ ಆಗಿರುತ್ತಾರೆ ದಿನಕ್ಕೊಂದು ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ನೆಟ್ಟಗರೊಂದಿಗೆ ಸದಾ ಸಂಪರ್ಕದಲ್ಲಿರುತ್ತಾರೆ. ತಮ್ಮ ಹಾಟ್ ಫೋಟೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಲಕ್ಷ್ಮಿ ರೈ ಇದೀಗ ತಮ್ಮ ಹಾಟ್ ಫೋಟೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಿದ್ದು, ಪಡ್ಡೆ ಹುಡುಗರ ಎದೆಯಲ್ಲಿ ಕಚಗುಳಿ ಇಟ್ಟಿದ್ದಾರೆ. ಈ ಫೋಟೋಗಳಿಗೆ ನೆಟ್ಟಿಗರಿಂದ ಸಾಕಷ್ಟು ಲೈಕ್ಸ್ ಗಳು ಹಾಗೂ ಕಮೆಂಟ್ಸ್ ಗಳ ಸುರಿಮಳೆಯೇ ಹರಿದು ಬಂದಿದೆ. ಕರ್ನಾಟಕದ …

Read More »

ಶರಣ್ ನಟನೆಯ ‘ಗುರು ಶಿಷ್ಯರು’ ಚಿತ್ರದ ನಾಯಕಿ ಫಸ್ಟ್ ಲುಕ್ ನಾಳೆ ರಿಲೀಸ್

ಶರಣ್ ನಟನೆಯ ಜಡೇಶ್ ಕುಮಾರ್ ಹಂಪಿ ನಿರ್ದೇಶನದ ‘ಗುರು ಶಿಷ್ಯರು’ ಚಿತ್ರದ ನಾಯಕಿಯ ಫಸ್ಟ್‌ ಲುಕ್ ಅನ್ನು ನಾಳೆ ಬೆಳಿಗ್ಗೆ 11.05ಕ್ಕೆ ರಿವೀಲ್ ಮಾಡಲಿದ್ದಾರೆ. ಈ ಕುರಿತು ಶರಣ್ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.   ಈ ಚಿತ್ರವನ್ನು ಶರಣ್ ಅವರ ಲಡ್ಡು ಸಿನಿಮಾ ಹೌಸ್ ಮತ್ತು ತರುಣ್ ಸುಧೀರ್ ಅವರ ತರುಣ್ ಸುಧೀರ್ ಕ್ರಿಯೆಟೀವ್ಸ್ ನಿಂದ ನಿರ್ಮಾಣ ಮಾಡಲಾಗುತ್ತಿದೆ. ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಿರುವ ನಟಿ ನಿಶ್ವಿಕಾ ನಾಯ್ಡು …

Read More »

ಅಂಗಡಿ ಮುಚ್ಚಿ ಎಂದ ಪೊಲೀಸ್ ಸಿಬ್ಬಂದಿ ಮೇಲೆಯೇ ಹಲ್ಲೆ ಮಾಡಿದ ಅಪ್ಪ-ಮಕ್ಕಳ ಬಂಧನ

ಹುಬ್ಬಳ್ಳಿ: ಲಾಕ್​ಡೌನ್​ ಸಂದರ್ಭದಲ್ಲಿ ನಿಗದಿತ ಸಮಯ ಮೀರಿಯೂ ತೆರೆದಿದ್ದ ಅಂಗಡಿಯನ್ನು ಮುಚ್ಚಿ ಎಂದಿದ್ದಕ್ಕೆ ಅಂಗಡಿ ಮಾಲೀಕ ಹಾಗೂ ಆತನ ಇಬ್ಬರು ಮಕ್ಕಳು ಸೇರಿ ಪೊಲೀಸ್ ಮೇಲೆಯೇ ಹಲ್ಲೆ ನಡೆಸಿದ್ದಾರೆ. ಇಂಥದ್ದೊಂದು ಪ್ರಕರಣ ಹುಬ್ಬಳ್ಳಿಯಲ್ಲಿ ಇಂದು ನಡೆದಿದೆ. ಹುಬ್ಬಳ್ಳಿಯ ತಾರಿಹಾಳ ಗ್ರಾಮದಲ್ಲಿ ಈರಪ್ಪ ಹನುಮಸಾಗರ ಎಂಬವರು ಬೆಳಗ್ಗೆ 10 ಗಂಟೆ ಕಳೆದರೂ ಅಂಗಡಿಯನ್ನು ಮುಚ್ಚದೆ ತೆರೆದೇ ಇರಿಸಿದ್ದರು. ಸಮಯ ಮೀರಿದೆ, ಅಂಗಡಿಯನ್ನು ಮುಚ್ಚಿ ಎಂದು ಆ ಪ್ರದೇಶದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಕಾನ್​ಸ್ಟೆಬಲ್​ …

Read More »

ಹಳೇ ದ್ವೇಷ: ಸ್ನೇಹಿತನಿಂದಲೇ ಚಾಕು ಇರಿತ, ಇಬ್ಬರಿಗೆ ಗಂಭೀರ ಗಾಯ

ಮಳವಳ್ಳಿ: ಹಳೆ ದ್ವೇಷದ ಹಿನ್ನೆಲೆಯಲ್ಲಿ ಯುವಕನೊಬ್ಬ ತನ್ನ ಇಬ್ಬರು ಸ್ನೇಹಿತರ ಮೇಲೆ ಚೂರಿಯಿಂದ ದಾಳಿ ನಡೆಸಿ ಇರಿದು ಪರಾರಿಯಾಗಿರುವ ಘಟನೆ ಪಟ್ಟಣದ ಗಂಗಾಮತ ಬೀದಿಯಲ್ಲಿ ನಡೆದಿದೆ. ಚೂರಿಯಿಂದ ಇರಿತಕ್ಕೊಳಗಾದ ಭರತ್ (೨೦) ಹಾಗೂ ಲೋಹಿತ್ (೨೦) ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಇಬ್ಬರ ಸ್ನೇಹಿತನಾದ ಮಧು ಅಲಿಯಾಸ್ ಮಾದಿ ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾದ ಯುವಕ. ಭಾನುವಾರ ರಾತ್ರಿ ೮ ಗಂಟೆ ಸಮಯದಲ್ಲಿ ಭರತ್ ಗಂಗಾಮತ ಬೀದಿಯಲ್ಲಿದ್ದ …

Read More »

ಕೋ-ವಿನ್ ಮುಂದಿನ ವಾರದಲ್ಲಿ ಹಿಂದಿ ಸೇರಿ 14 ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯ : ಕೇಂದ್ರ

ನವ ದೆಹಲಿ : ಕೋ-ವಿನ್ ಪೋರ್ಟಲ್ ಮುಂದಿನ ವಾರದಲ್ಲಿ ಹಿಂದಿ ಮತ್ತು 14 ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಾಗಲಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರ ಅಧ್ಯಕ್ಷತೆಯಲ್ಲಿ ಇಂದು(ಸೋಮವಾರ, ಮೇ 17) ನಡೆದ ಕೋವಿಡ್ ಸೋಂಕಿನ ಕುರಿತು ಉನ್ನತ ಮಟ್ಟದ ಮಂತ್ರಿಗಳ 26 ನೇ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈ ಸಂದರ್ಭ ಮಾತನಾಡಿದ ಹರ್ಷವರ್ಧನ್, ಕೋವಿಡ್ ರೂಪಾಂತರಗಳ ಬಗ್ಗೆ ಅಧ್ಯಯನ ಮಾಡಲು ಇನ್ನೂ 17 …

Read More »

ಮೈಕ್ರೋಸಾಫ್ಟ್ ಆಡಳಿತ ಮಂಡಳಿಯ ಸದಸ್ಯತ್ವಕ್ಕೆ ಬಿಲ್‌ ಗೇಟ್ಸ್‌ ರಾಜೀನಾಮೆ

ವಾಷಿಂಗ್ಟನ್‌: ಮೈಕ್ರೋಸಾಪ್ಟ್ ಸಂಸ್ಥೆಯ ಉದ್ಯೋಗಿಯೊಬ್ಬರ ಜೊತೆ ಇಪ್ಪತ್ತು ವರ್ಷಗಳ ಹಿಂದೆ ಮೈಕ್ರೋ ಸಾಫ್ಟ್ ನ ಸಹ-ಸಂಸ್ಥಾಪಕ ಬಿಲ್‌ ಗೇಟ್ಸ್‌ ಹೊಂದಿದ್ದ ಪ್ರಣಯ ಪ್ರಕರಣದ ತನಿಖೆಯನ್ನು ಆ ಸಂಸ್ಥೆಯು ಆಂತರಿಕ ತನಿಖೆಗೊಳಪಡಿಸಿದೆ. ಈ ಹಿನ್ನೆಲೆಯಲ್ಲಿ, ಮೈಕ್ರೋಸಾಫ್ಟ್ ಆಡಳಿತ ಮಂಡಳಿಯ ಸದಸ್ಯತ್ವಕ್ಕೆ ಬಿಲ್‌ ಗೇಟ್ಸ್‌ ರಾಜೀನಾಮೆ ನೀಡಿದ್ದಾರೆ. ತನಿಖೆ ಮುಗಿಯುವವರಿಗೆ ತಾವು ಸಂಸ್ಥೆಯ ಪ್ರಭಾವಿ ಹುದ್ದೆಯಲ್ಲಿ ಇರಬಾರದೆಂಬ ನೈತಿಕತೆಯಿಂದಾಗಿ ಅವರು ಆಡಳಿತ ಸಂಸ್ಥೆಯಿಂದ ಹೊರಬಂದಿದ್ದಾರೆಂದು ಮೂಲಗಳು ತಿಳಿಸಿವೆ. ಮತ್ತೂಂದೆಡೆ, ಪ್ರಕರಣದ ಕೇಂದ್ರಬಿಂದುವಾಗಿರುವ ಉದ್ಯೋಗಿಗೆ …

Read More »

ಏಪ್ರಿಲ್‌ನಲ್ಲಿ ಸಗಟು ಹಣದುಬ್ಬರ ದರ ದಾಖಲೆಯ ಶೇ. 10.49ಕ್ಕೆ ಏರಿಕೆ

ಸಗಟು ದರ ಸೂಚ್ಯಂಕ ಆಧಾರಿತ ಹಣದುಬ್ಬರವು(WPI) ಏಪ್ರಿ‌ ತಿಂಗಳಿನಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವಾದ ಶೇಕಡಾ 10.49ರಷ್ಟು ತಲುಪಿದೆ. ಕಚ್ಚಾ ತೈಲ ದರ ಏರಿಕೆ ಹಾಗೂ ಉತ್ಪಾದನಾ ಸಾಮಗ್ರಿಗಳ ಬೆಲೆ ಏರಿಕೆಯು ಸಗಟು ಹಣದುಬ್ಬರ ಏರಿಕೆಗೆ ಪ್ರಮುಖ ಕಾರಣವಾಗಿದೆ. 2021ರ ಮಾರ್ಚ್​ನಲ್ಲಿ ಸಗಣಟು ಹಣದುಬ್ಬರ ಶೇಕಡಾ 7.39 ರಷ್ಟಿತ್ತು. ಒಂದು ವರ್ಷದ ಹಿಂದೆ ಶೇ (-) 1.57 ಇತ್ತು. ಆದರೆ ಈ 2021ರ ಏಪ್ರಿಲ್​ನಲ್ಲಿ ಸತತ ನಾಲ್ಕನೇ ಬಾರಿಗೆ WPI ಹಣದುಬ್ಬರ …

Read More »

ಚಿನ್ನ ಗಿರವಿ ಇಟ್ಟು ಸಾಲ ಪಡೆದವರಿಗೆ ಗುಡ್ ನ್ಯೂಸ್ : ಚಿನ್ನದ ಸಾಲದ ಮೇಲಿನ ಬಡ್ಡಿ ಮನ್ನಾ!

ಬೆಂಗಳೂರು : ಚಿನ್ನ ಗಿರವಿ ಇಟ್ಟು ಸಾಲ ಪಡೆದ ಗ್ರಾಹಕರಿಗೆ ಸಿಹಿಸುದ್ದಿಯೊಂದು ಸಿಕ್ಕಿದ್ದು, ಚಿನ್ನದ ಸಾಲದ ಮೇಲಿನ 2-3 ತಿಂಗಳ ಬಡ್ಡಿ ಮನ್ನಾ ಮಾಡುವ ಬಗ್ಗೆ ರಾಜ್ಯ ಆಭರಣ ವರ್ತಕರ ಒಕ್ಕೂಟ ಚಿಂತಿಸಿದೆ.   ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಬಡ್ಡಿ ಮನ್ನಾ ಮಾಡುವ ಚಿಂತನೆಯಿದ್ದು, ಈ ಬಗ್ಗೆ ಸದ್ಯದಲ್ಲೇ ವರ್ತಕರ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ರಾಜ್ಯ ಆಭರಣ ವರ್ತಕರ ಸಂಘ ತಿಳಿಸಿದೆ.   ಬಡ ಮತ್ತು …

Read More »