Breaking News

Monthly Archives: ಮೇ 2021

ಕರೆ ಮಾಡಿ ಸಹಾಯ ಕೇಳಿದ ಮಹಿಳೆ, ಮಂಚಕ್ಕೆ ಕರೆದ ಭೂಪ

ಗದಗ: ಗಂಡನಿಗೆ ಕೆಲಸ ಕೊಡಿಸುವಂತೆ ಸಹಾಯ ಕೇಳಿದ ಮಹಿಳೆಯನ್ನು ಮುಖಂಡನೊಬ್ಬ ಮಂಚಕ್ಕೆ ಆಹ್ವಾನಿಸಿದ್ದು, ಪೊಲೀಸರಿಗೆ ದೂರು ನೀಡಲಾಗಿದೆ. ಗದಗ ತಾಲೂಕಿನ ಹುಯಿಲಗೋಳ ಗ್ರಾಮ ಪಂಚಾಯಿತಿ ಸದಸ್ಯೆಯ ಪತಿ ವಿರುದ್ಧ ಇಂತಹ ಆರೋಪ ಕೇಳಿಬಂದಿದೆ. ಗ್ರಾಮ ಪಂಚಾಯಿತಿಯಲ್ಲಿ 18 ವರ್ಷಗಳಿಂದ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಎರಡು ತಿಂಗಳ ಹಿಂದೆ ಕೈಗೆ ಪೆಟ್ಟಾಗಿ ವಿಶ್ರಾಂತಿ ಪಡೆದಿದ್ದ. ಆತ ಸರಿಯಾಗಿ ಕೆಲಸ ಮಾಡದ ಕಾರಣ ಪಂಚಾಯಿತಿಯವರು ಕೆಲಸಕ್ಕೆ ಸರಿಯಾಗಿ ಬರದಿದ್ದ ಬರಬೇಡ ಎಂದು ಹೇಳಿದ್ದಾರೆ. …

Read More »

ಬೆಳಗಾವಿಯಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಮತ್ತು ಸಾವಿನ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ.

ಬೆಳಗಾವಿ – ಬೆಳಗಾವಿಯಲ್ಲಿ ಕೊರೋನಾ ಓಟ ನಿಲ್ಲುತ್ತಿಲ್ಲ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಮತ್ತು ಸಾವಿನ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಬುಧವಾರ ಜಿಲ್ಲೆಯಲ್ಲಿ 2234 ಜನರಿಗೆ ಸೋಂಕು ಪತ್ತೆಯಾಗುವ ಮೂಲಕ ಹಳೆಯ ದಾಖಲೆಗಳನ್ನೆಲ್ಲ ಮುರಿದಿದೆ. ಇದೇ ವೇಳೆ ಒಂದೇ ದಿನ 11 ಜನರು ಸಾವಿಗೀಡಾಗಿದ್ದಾರೆ ಎಂದು ಅಧಿಕೃತವಾಗಿ ಪ್ರಕಟಿಸಲಾಗಿದೆ. ರಾಜ್ಯದಲ್ಲಿ ಒಟ್ಟೂ 34281 ಜನರಿಗೆ ಬುಧವಾರ ಸೋಂಕು ಪತ್ತೆಯಾಗಿದೆ. 49953 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 468 ಜನರು ಸಾವಿಗೀಡಾಗಿದ್ದಾರೆ. ಪಾಸಿಟಿವಿಟಿ …

Read More »

ಕೊರೊನಾ ವಾರಿಯರ್ಸ್ ಅಂತ ಖಾಸಗಿ ಶಿಕ್ಷಕರ ಕಿವಿಗೆ ಹೂವು ಇಟ್ಟ “ಸಿಎಂ”

ಬೆಂಗಳೂರು, : ಶಿಕ್ಷಕರನ್ನು ಕೊರೊನಾ ವಾರಿಯರ್ಸ್ ಅಂತ ಪರಿಗಣಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಬುಧವಾರ ಘೋಷಣೆ ಮಾಡಿದ ವಿಶೇಷ ಪ್ಯಾಕೇಜ್ ನಲ್ಲಿ ಖಾಸಗಿ ಶಾಲಾ ಶಿಕ್ಷಕರು ಶಿಕ್ಷಕೇತರರನ್ನು ಪರಿಗಣಿಸಿಲ್ಲ. ಇಡೀ ಶಿಕ್ಷಣ ವ್ಯವಸ್ಥೆ ನಿರ್ನಾಮಕ್ಕೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ನಾಂದಿ ಹಾಡಿದ್ದಾರೆ ಎಂದು ಆರೋಪಿಸಿರುವ ಖಾಸಗಿ ಶಾಲೆಗಳ ಶಿಕ್ಷಣ ಸಂಸ್ಥೆ ಪ್ರತಿನಿಧಿಗಳು ಅವರ ರಾಜೀನಾಮೆಗೆ ಆಗ್ರಹಿಸಿವೆ. ರಾಜ್ಯದಲ್ಲಿ 3.5 ಲಕ್ಷ ಮಂದಿ ಶಿಕ್ಷಕರು ಇದ್ದಾರೆ. ಕೊರೊನಾ ಲಾಕ್ ಡೌನ್ ನಿಂದ …

Read More »

ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಗುಡ್ ನ್ಯೂಸ್: ಶಿಕ್ಷಕರ ನೇಮಕಾತಿಗೆ ಸಚಿವ ಸುರೇಶ್ ಕುಮಾರ್ ಸೂಚನೆ

ಬೆಂಗಳೂರು: ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಚುರುಕುಗೊಳಿಸುವಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಲಾಕ್ಡೌನ್ ಮುಗಿದ ಕೂಡಲೇ ಶಿಕ್ಷಕರ ವರ್ಗಾವಣೆ ಮಾಡಲಾಗುವುದು. 6 ರಿಂದ 8 ನೇ ತರಗತಿ ಪದವೀಧರ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರಲು ಆದೇಶಿಸಿದ್ದು, ವಿಳಂಬವಾಗಿರುವ ಕಾರಣ ನೇಮಕಾತಿಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಈ ಹಿನ್ನೆಲೆಯಲ್ಲಿ ಕಾಲಮಿತಿಯೊಳಗೆ ನೇಮಕಾತಿಗೆ ಕ್ರಮ ಕೈಗೊಳ್ಳಲು …

Read More »

ಮಕ್ಕಳ ಮೇಲೆ ಅಪ್ಪಳಿಸಬಹುದಾದ ಕೊರೋನಾ 3ನೇ ಅಲೆ: ಕೆಎಲ್ಇ ಆಸ್ಪತ್ರೆಯಲ್ಲಿ ಸಕಲ ಸಿದ್ಧತೆ

ಬೆಳಗಾವಿ – ಜಗತ್ತಿನಾದ್ಯಂತ ವಿಶೇಷವಾಗಿ ಭಾರತವನ್ನು ತಲ್ಲಣಗೊಳಿಸಿರುವ ಕೊರೊನಾ ವೈರಸ್ ಕೋವಿಡ್ -೧೯ ಸಾಂಕ್ರಾಮಿಕ ರೋಗದ ತುರ್ತು ಸಂದರ್ಭದಲ್ಲಿ ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಆಂಡ್ ರಿಸರ್ಚ್, ಡೀಮ್ಡ್ ವಿಶ್ವವಿದ್ಯಾಲಯ, ಜೆಎನ್ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಇವುಗಳ ಸಂಯುಕ್ತಾಶ್ರಯದಲ್ಲಿ ಈ ಭಾಗದ ಜನರಿಗೆ ಸಕಲ ಸೇವೆ ನೀಡಲು ಬದ್ದವಾಗಿದ್ದು, ಗರ್ಭಿಣಿ ಮತ್ತು ಮಕ್ಕಳ ಆರೈಕೆಗಾಗಿ ೪೦ ಹಾಸಿಗೆಗಳನ್ನು ಮೀಸಲಿಟ್ಟು ಚಿಕಿತೆಗ್ಸೆ …

Read More »

ಬಳ್ಳಾರಿಯ ಕೋವಿಡ್‌ ಆಸ್ಪತ್ರೆಗೆ 65 ವೈದ್ಯಾಧಿಕಾರಿಗಳ ನೇಮಕಕ್ಕೆ ಆಹ್ವಾನ: ನಾಲ್ಕು ಲಕ್ಷ ರೂ. ಸಂಬಳ

ಕರೊನಾ ಸಾಂಕ್ರಾಮಿಕವನ್ನು ತಡೆಗಟ್ಟಲು ಹಾಗೂ ಕೋವಿಡ್​ ರೋಗಿಗಳಿಗೆ ಉತ್ತಮ ಮತ್ತು ಪರಿಣಾಮಕಾರಿ ಚಿಕಿತ್ಸೆ ನೀಡುವ ಹಿನ್ನೆಲೆಯಲ್ಲಿ ಬಳ್ಳಾರಿಯ ಜಿಲ್ಲಾ ಆಡಳಿತ ಸಂಡೂರು ತಾಲೂಕಿನ ತೋರಣಗಲ್​ನಲ್ಲಿ 1000 ಹಾಸಿಗೆಯ ಕೋವಿಡ್​ ಆಸ್ಪತ್ರೆಯನ್ನು ತೆರೆದಿದೆ. ಸದರಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಲು ವೈದ್ಯರು/ ತಜ್ಞ ವೈದ್ಯರನ್ನು ನೇಮಕ ಮಾಡಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಅಧಿಸೂಚನೆ ಹೊರಡಿಸಲಾಗಿದೆ. ಒಟ್ಟು ಹುದ್ದೆಗಳು: 65 ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಆರಂಭಿಸಿರುವ 1,000 ಹಾಸಿಗೆ ಕೋವಿಡ್​ ಆಸ್ಪತ್ರೆಯಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿರುವ ಹುದ್ದೆಗಳಿಗೆ ತಾತ್ಕಾಲಿಕವಾಗಿ …

Read More »

ಸೋಂಕಿತರಿಗೆ ಆಪತ್ಬಾಂಧವ ಸರಕಾರಿ ಆಸ್ಪತ್ರೆ

ಬಾಗಲಕೋಟೆ: ಸರ್ಕಾರಿ ಆಸ್ಪತ್ರೆ ಎಂದರೆ ಮೂಗು ಮುರಿಯುವ ಕಾಲವೊಂದಿತ್ತು. ಆದರೆ, ಕೊರೊನಾ ಮೊದಲ ಅಲೆ ಮತ್ತು ಎರಡನೇ ಅಲೆ ಕಾಲಿಟ್ಟಿದ್ದೇ ತಡ, ಬಡವರು-ಶ್ರೀಮಂತರೆನ್ನದೇ ಸರ್ಕಾರಿ ಆಸ್ಪತ್ರೆಯನ್ನೇ ಸ್ಮರಿಸುತ್ತಿದ್ದಾರೆ. ಸದ್ಯ ಇಡೀ ಜಿಲ್ಲೆಯ ಏಕೈಕ ದೊಡ್ಡ ಸರ್ಕಾರಿ ಆಸ್ಪತ್ರೆ ಎಂಬ ಖ್ಯಾತಿ ಪಡೆದ ಜಿಲ್ಲಾ ಸರ್ಕಾರಿ ಆಸ್ಪತ್ರೆ ಕೊರೊನಾ ಸಂಕಷ್ಟದ ಕಾಲದಲ್ಲಿ ಸಾವಿರಾರು ಜನರಿಗೆ ಆಪತ್ಭಾಂದವ ಆಗಿದೆ. ಹೌದು. ಸದ್ಯ ಜಿಲ್ಲಾಸ್ಪತ್ರೆಗೆ ಎಲ್ಲಿಲ್ಲದ ಬೇಡಿಕೆ. ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು, ಶ್ರೀಮಂತರು, ಗಣ್ಯರು, …

Read More »

ಕೋವಿಡ್-19 ಸಂಬಂಧಿತ ನೆರವಿಗೆ ‘ಬಿಎಂಸಿ 92’ ಉಚಿತ ವೈದ್ಯ ಸೇವೆ

ಬೆಂಗಳೂರು: ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕದ 2ನೇ ಅಲೆಗೆ ಜನರು ತತ್ತರಿಸಿ ಹೋಗಿರುವಂತೆಯೇ ಇತ್ತ ವೈದ್ಯರ ತಂಡವೊಂದು ಉಚಿತ ವೈದ್ಯಕೀಯ ಸೇವೆ ಆರಂಭಿಸಿದೆ. ಬೆಂಗಳೂರು ವೈದ್ಯಕೀಯ ಕಾಲೇಜಿನ 1992ರ ಬ್ಯಾಚ್‌ನ ಪದವೀಧರರ ಗುಂಪು ಬಿಎಂಸಿ-92 ಎಂಬ ಹೆಸರಿನಲ್ಲಿ ಪರ್ಯಾಯ ವೈದ್ಯಕೀಯ ಸೇವೆಯನ್ನು ಆರಂಭಿಸಿದ್ದು, ಸೋಂಕಿತರ ಚಿಕಿತ್ಸೆಗೆ ತಜ್ಞ ವೈದ್ಯರು, ಆಪ್ತ ಸಮಾಲೋಚಕರು, ಸಹಾಯವಾಣಿ, ಆಮ್ಲಜನಕ ಸಾಂದ್ರಕಗಳು, ಪಲ್ಸ್‌ ಆಕ್ಸಿಮೀಟರ್‌ಗಳು ಸೇರಿದಂತೆ ಹಲವು ಸೇವೆಗಳನ್ನು ಒದಗಿಸಲಾಗುತ್ತಿದೆ. ಕೋವಿಡ್‌ ರೋಗಿಗಳು ಆಮ್ಲಜನಕದ ಹಾಸಿಗೆಯವರೆಗೂ …

Read More »

ಕೋರೋನ ಹತೋಟಿಗೆ ಬರದಿದಲ್ಲಿ ಲಾಕ್ ಡೌನ್ ಅನಿವಾರ್ಯ: ಉಮೇಶ್ ಕತ್ತಿ

ಬಾಗಲಕೋಟೆ : ರಾಜ್ಯದಲ್ಲಿ ದಿನದಿನವೂ ಕೊರೋನಾ ಪ್ರಕರಣಗಳು ಏರಿಕೆಯಾಗುತ್ತಲೇ ಇದೆ. ಈ ನಿಟ್ಟಿನಲ್ಲಿ ಜನರು ಅರ್ಥ ಮಾಡಿಕೊಂಡು ಮುನ್ನಡೆಯಬೇಕು. ಇಲ್ಲವಾದಲ್ಲಿ ಲಾಕ್‌ಡೌನ್ ಮುಂದುವರಿಸಲಾಗುತ್ತದೆ ಎಂದು ಸಚಿವ ಉಮೇಶ್ ಕತ್ತಿ ಹೇಳಿದರು. ಬಾಗಲಕೋಟೆಯಲ್ಲಿಂದು ಮಾತನಾಡಿದ ಸಚಿವ ಉಮೇಶ ಕತ್ತಿ ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಮುಂದುವರಿಸುವ ಬಗ್ಗೆ ಸುಳಿವು ನೀಡಿದ್ದಾರೆ. ರಾಜ್ಯದಲ್ಲಿ 3 ದಿನ ಲಾಕ್ ಡೌನ್ ಮಾಡಬೇಕೆನ್ನುವ ವಿಚಾರ ಮಾಡಿದ್ದಾರೆ. ಸೋಮವಾರ, ಬುಧುವಾರ ಮತ್ತು ಶುಕ್ರವಾರ ಪುಲ್ ಲಾಕ್ ಡೌನ್ …

Read More »

ಮೋದಿ ಟೀಕಿಸುವ ಭರದಲ್ಲಿ ಭಾರತಕ್ಕೆ ಅಪಮಾನ- ಜೋಶಿ ಆಕ್ರೋಶ

ಹುಬ್ಬಳ್ಳಿ: ಕಾಂಗ್ರೆಸ್ ದೇಶದ ಜನತೆಯ ಆತ್ಮಬಲ ಕುಗ್ಗಿಸುವ ಹಾಗೂ ದೇಶಕ್ಕೆ ಅಪಮಾನ ಮಾಡುವ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದರು. ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಕಾಂಗ್ರೆಸ್ ಮಾಡಿರುವ ಟೂಲ್ ಕಿಟ್ ವಿಚಾರಕ್ಕೆ ನಗರದಲ್ಲಿಂದು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ ಜೋಶಿ, ಕೊರೊನಾ ವೈರಸ್ ಹುಟ್ಟಿದ್ದೇ ಚೀನಾದಲ್ಲಿ. ಆದರೆ ಕಾಂಗ್ರೆಸ್ ನಾಯಕರಾಗಲಿ, ಕಮ್ಯುನಿಸ್ಟ್ ನವರಾಗಲಿ ಅದನ್ನು ಚೀನಾ ವೈರಸ್ ಎನ್ನಲಿಲ್ಲ. ಬದಲಿಗೆ ಮೋದಿ ವೈರಸ್ ಎಂದು …

Read More »