ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 11 ಜನರಿಗೆ ಕಪ್ಪು ಶಿಲೀಂಧ್ರ ಕಾಯಿಲೆ ಇರುವುದು ದೃಢಪಟ್ಟಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಮೃತ ವ್ಯಕ್ತಿ ಶಿವಮೊಗ್ಗ ತಾಲೂಕಿನವರು. ಇದೇ ಕಾಯಿಲೆಯಿಂದ ಬಳಲುತ್ತಿರುವ ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ. ಆದರೆ, ಕಪ್ಪು ಶಿಲೀಂಧ್ರ ಕಾಯಿಲೆಯಿಂದಲೇ ಮೃತಪಟ್ಟಿರುವುದನ್ನು ಆಸ್ಪತ್ರೆ ಆಡಳಿತ ಮಂಡಳಿ ದೃಢಪಡಿಸಿಲ್ಲ. ಕಪ್ಪು ಶಿಲೀಂಧ್ರ ರೋಗಿಗಳ ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಯ ಇಎನ್‌ಟಿ ವಿಭಾಗದ ಮುಖ್ಯಸ್ಥ ಡಾ.ಗಂಗಾಧರ್ ನೇತೃತ್ವದಲ್ಲಿ ಏಳು ತಜ್ಞ ವೈದ್ಯರನ್ನು ಒಳಗೊಂಡ ತಂಡ ರಚಿಸಲಾಗಿದೆ. …
Read More »Daily Archives: ಮೇ 22, 2021
ಧಾರವಾಡ: ಸುಮಾರು 15 ಸಾವಿರ ಮೃತದೇಹಗಳ ವಿಧಿ ವಿಧಾನ ಮಾಡಿದ್ದ ಮುಸ್ತಾಕ್ ಅಹ್ಮದ್ ನಿಧನ
ಧಾರವಾಡ: ಧಾರವಾಡ ತಾಲೂಕು ಬ್ರಾಹ್ಮಣ ಸಭಾ ಕೊಡುಗೆಯಾಗಿ ನೀಡಿದ್ದ ಅಂಬ್ಯುಲೆನ್ಸ್ ಮೂಲಕ ಕಳೆದ 21 ವರ್ಷಗಳಲ್ಲಿ ಸುಮಾರು 15 ಸಾವಿರ ಮೃತದೇಹಗಳನ್ನು ಸಾಗಿಸಿ ಅವುಗಳ ಅಂತಿಮ ವಿಧಿ ವಿಧಾನ ಮಾಡಿದ್ದ ಮುಸ್ತಾಕ್ ಅಹ್ಮದ್ ಖಾತ್ರಿ ಅವರು ಇತ್ತೀಚೆಗೆ ನಿಧನರಾಗಿದ್ದಾರೆ. ಧಾರವಾಡ ತಾಲೂಕು ಬ್ರಾಹ್ಮಣ ಸಭಾ ಮುಸ್ತಾಕ್ ಅಹ್ಮದ್ ಖಾತ್ರಿಗೆ ‘ಮರಳಿ ಮಣ್ಣಿಗೆ’ ಎಂಬ ಅಂಬ್ಯುಲೆನ್ಸ್ ಒಂದನ್ನು ಕೊಡುಗೆಯಾಗಿ ನೀಡಿತ್ತು. ಕಳೆದ 21 ವರ್ಷಗಳಿಂದ ಈ ಅಂಬ್ಯುಲೆನ್ಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದ …
Read More »ನಿರ್ದೇಶಕ ಆರ್.ಚಂದ್ರು ಮತ್ತು ‘ಕಬ್ಜ’ ಚಿತ್ರತಂಡದಿಂದ 1ಲಕ್ಷ ರೂ. ನೆರವು
ಕೊರೊನಾ ಸಂಕಷ್ಟಕ್ಕೆ ಅನೇಕರು ನೆರವು ನೀಡುತ್ತಿದ್ದಾರೆ. ಸಿನಿ ಸೆಲೆಬ್ರಿಟಿಗಳು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಈಗಾಗಲೇ ಅನೇಕ ಮಂದಿ ಹಣ, ಆಕ್ಸಿಜನ್, ವೆಂಟಿಲೇಟರ್, ಫುಡ್ ಕಿಟ್ ಸೇರಿದಂತೆ ಅಗತ್ಯ ವಸ್ತುಗಳ ನೆರವು ನೀಡುತ್ತಿದ್ದಾರೆ. ಇಂಥ ಸಂಕಷ್ಟದ ಪರಿಸ್ಥಿತಿಯಲ್ಲಿ ಸ್ಯಾಂಡಲ್ ವುಡ್ ನ ಕೆಲವು ಸ್ಟಾರ್ ಕಲಾವಿದರು ಮಾನವೀಯ ಕೆಲಸ ಮಾಡುತ್ತಿದ್ದಾರೆ. ಲಾಕ್ ಡೌನ್ ನಿಂದ ಕೆಲಸವಿಲ್ಲದೆ ಒಂದೊತ್ತಿನ ಊಟಕ್ಕೂ ಪರದಾಡುತ್ತಿರುವ ಸಿನಿ ಕಾರ್ಮಿಕರ ಕಷ್ಟಕ್ಕೆ ರಿಯಲ್ ಸ್ಟಾರ್ ಉಪೇಂದ್ರ ನೆರವಾಗಿದ್ದಾರೆ. …
Read More »ಬೆಳಗಾವಿಯಲ್ಲಿ ಬೆಳ್ಳಂಬೆಳಗ್ಗೆ ಹಿರಿಯ ಅಧಿಕಾರಿಗಳೇ ಕಾರ್ಯಾಚರಣೆಗಿಳಿದಿದ್ದಾರೆ.
ಬೆಳಗಾವಿ: ಕೊರೊನಾ ಸೋಂಕು ನಿಯಂತ್ರಣಕ್ಕೆ ರಾಜ್ಯಾದ್ಯಂತ ಲಾಕ್ ಡೌನ್ ವಿಸ್ತರಣೆಯಾಗಿದ್ದು, ಇಂದಿನಿಂದಲೇ ಕಠಿಣ ರೂಲ್ಸ್ ಗಳು ಜಾರಿಗೆ ಬಂದಿವೆ. ಕಟ್ಟುನಿಟ್ಟಿನ ಲಾಕ್ ಡೌನ್ ಗೆ ಸಿಎಂ ಯಡಿಯೂರಪ್ಪ ಸೂಚಿಸಿದ ಬೆನ್ನಲ್ಲೇ ಫೀಲ್ಡಿಗಿಳಿದ ಪೊಲೀಸರು ಅನಗತ್ಯವಾಗಿ ಓಡಾಡುವವರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಾರೆ. ಬೆಳಗಾವಿಯಲ್ಲಿ ಇಂದು ಬೆಳಗ್ಗೆ 6 ಗಂಟೆಯಿಂದಲೇ ಸಂಪೂರ್ಣ ಲಾಕ್ ಡೌನ್ ಜಾರಿಯಾಗಿದ್ದು, ಹಾಲು, ಔಷಧ ಹೊರತುಪಡಿಸಿ ಬೇರೆ ಯಾವುದಕ್ಕೂ ಅವಕಾಸ ನೀಡಲಾಗಿಲ್ಲ. ಆಸ್ಪತ್ರೆಗೆ ತೆರಳುವವರು ಮಾತ್ರ ರಸ್ತೆಗೆ ಇಳಿಯಲು …
Read More »ಬಿಟಿಪಿಎಸ್‌ನ 60 ಸಿಬ್ಬಂದಿಗೆ ಕೋವಿಡ್!
ಬಳ್ಳಾರಿ: ತಾಲೂಕಿನ ಕುಡತಿನಿ ಬಳಿಯ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರಕ್ಕೂ (ಬಿಟಿಪಿಎಸ್) ಮಹಾಮಾರಿ ಕೋವಿಡ್ ಸೋಂಕು ಆವರಿಸಿದ್ದು, ಸಿಬ್ಬಂದಿಗಳಲ್ಲಿ ಆತಂಕ ಸೃಷ್ಟಿಸಿದೆ. ಕೇಂದ್ರದಲ್ಲಿನ ಮೂರು ಘಟಕಗಳು ಈಗಾಗಲೇ ಸ್ಥಗಿತಗೊಂಡಿವೆ. ಶೇ.50ರಷ್ಟುಸಿಬ್ಬಂದಿ ಕೆಲಸ ಮಾಡಿಸಿಕೊಳ್ಳುವಂತೆ ರಾಜ್ಯ ಸರ್ಕಾರ ಸುತ್ತೋಲೆಹೊರಡಿಸಿದ್ದರೂ ಮೇಲಧಿಕಾರಿಗಳುಜಾರಿಗೊಳಿಸದಿರುವುದು ಸಿಬ್ಬಂದಿ ಆತಂಕಕ್ಕೆ ಕಾರಣವಾಗಿದೆ. ತಾಲೂಕಿನ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಸಿಬ್ಬಂದಿಗಳಲ್ಲಿ ಕೋವಿಡ್ ಸೋಂಕಿನ ಆತಂಕ ದಿನೇದಿನೆ ಹೆಚ್ಚುತ್ತಿದೆ. ಕೇಂದ್ರದ ವಿವಿಧ ಘಟಕಗಳಲ್ಲಿ ಕರ್ತವ್ಯನಿರ್ವಹಿಸುವ 60ಕ್ಕೂ ಹೆಚ್ಚು ಸಿಬ್ಬಂದಿಗೆ ಕೋವಿಡ್ …
Read More »ಲಾಕ್‍ಡೌನ್, ಬೇಸರ ಕಳೆಯಲು ಮೀನು ಹಿಡಿಯಲು ತೆರಳಿದ ಇಬ್ಬರೂ ನೀರುಪಾಲು
ಕಾರವಾರ: ಲಾಕ್‍ಡೌನ್ ನಲ್ಲಿ ಬೇಸರ ಕಳೆಯಲೆಂದು ಮೀನು ಹಿಡಿಯಲು ತೆರಳಿದ್ದ ಇಬ್ಬರು ಯುವಕರು ನೀರುಪಾಲಾಗಿರುವ ಆಘಾತಕಾರಿ ಘಟನೆ ಅಂಕೋಲಾ ತಾಲೂಕಿನ ಬಸಾಕಲ್ ಗುಡ್ಡದ ಸಮೀಪ ನಡೆದಿದೆ. ಅಂಕೋಲಾದ ಬೆಳಾಬಂದರ್ ನಿವಾಸಿ ಸಂದೀಪ ಬೀರಪ್ಪ ನಾಯ್ಕ (30), ಚೇತನ ನಾಗೇಶ ನಾಯ್ಕ (23) ನೀರುಪಾಲಾದವರಾಗಿದ್ದು, ಸಂದೀಪ ನಾಯ್ಕ ಮೃತ ದೇಹ ಪತ್ತೆಯಾಗಿದೆ. ನಾಪತ್ತೆಯಾದ ಇನ್ನೋರ್ವನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಲಾಕ್‍ಡೌನ್ ಹಿನ್ನೆಲೆ ಮನೆಯಲ್ಲಿದ್ದು ಬೇಸರಗೊಂಡಿದ್ದ ಇಬ್ಬರು ಯುವಕರು ಮೀನು ಹಿಡಿಯಲೆಂದು ಬಸಾಕಲ್ ಸಮೀಪ …
Read More »ಕೋವಿಡ್ ಲಸಿಕೆ ಪ್ರಮಾಣಪತ್ರದಲ್ಲಿ ಮೋದಿ ಚಿತ್ರಕ್ಕೆ ಛತ್ತೀಸ್‌ಗಢ ಕೊಕ್
ರಾಯಪುರ : ಕೋವಿಡ್-19 ಲಸಿಕೆ ಪ್ರಮಾಣಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರ ಹಾಕಿರುವ ಬಗ್ಗೆ ವ್ಯಾಪಕ ಪ್ರಶ್ನೆಗಳು ಎದ್ದಿರುವ ಬೆನ್ನಲ್ಲೇ, ಕಾಂಗ್ರೆಸ್ ಆಡಳಿತವಿರುವ ಛತ್ತೀಸ್‌ಗಢ ಸರ್ಕಾರ 18-44 ವರ್ಷ ವಯೋಮಿತಿಯ ಲಸಿಕೆ ಹಾಕಿಕೊಂಡವರಿಗೆ ತನ್ನದೇ ಪ್ರಮಾಣಪತ್ರ ನೀಡಲು ಆರಂಭಿಸಿದೆ. ಇದರಲ್ಲಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ಭಾವಚಿತ್ರವಿದೆ. 18-44 ವಯೋಮಿತಿಯವರು ಲಸಿಕೆಗೆ ನೋಂದಾಯಿಸಿಕೊಳ್ಳಲು ರಾಜ್ಯ ಸರ್ಕಾರ ಈಗಾಗಲೇ ತನ್ನದೇ ಸಿಜಿಟೀಕಾ ಎಂಬ ಪೋರ್ಟೆಲ್ ನಿಯೋಜಿಸಿಕೊಂಡಿದ್ದು, ಲಸಿಕೆ ಹಾಕಿಕೊಂಡವರಿಗೆ ಕೇಂದ್ರ ಸರ್ಕಾರ …
Read More »ಪ್ರಶ್ನಾತೀತ ಪ್ರಧಾನಿ ದೇಶದ ಹಿತಕ್ಕೆ ಹಾನಿ: ಕೃಷ್ಣ ಬೈರೇಗೌಡ
ಪ್ರಧಾನಿ ಪ್ರಶ್ನಾತೀತರೂ ಅಲ್ಲ, ಹಾಗೆ ಆಗಲೂಬಾರದು. ಅದರಿಂದ ಜನಹಿತ ಮತ್ತು ಪ್ರಜಾಪ್ರಭುತ್ವ ಕ್ಷೀಣಿಸುತ್ತದೆ. ಅಂಧ ಸರ್ವಾಧಿಕಾರ ಬೆಳೆಯುತ್ತದೆ. ಅದು ದೇಶಕ್ಕೆ ಹಾನಿ. ಪ್ರಧಾನಿಯನ್ನು ಅಥವಾ ಸರ್ಕಾರವನ್ನು ಪ್ರಶ್ನಿಸುವುದು ದೇಶದ ಬಗ್ಗೆ ನೈಜ ಕಾಳಜಿ ಹೊಂದಿರುವ ಭಾರತೀಯನ ಹಕ್ಕು ಹಾಗೂ ಕರ್ತವ್ಯ. ಇದರಿಂದ ದೇಶ ಮತ್ತಷ್ಟು ಬಲಿಷ್ಠ, ಸದೃಢ ಅಭಿವೃದ್ಧಿಯನ್ನು ಸಾಧಿಸಬಹುದು ನಿಜ, ‘ಪ್ರಜಾಪ್ರಭುತ್ವ ಒಂದು ಕೆಟ್ಟ ಆಡಳಿತ ವ್ಯವಸ್ಥೆ. ಆದರೆ ಅದು ಇಲ್ಲಿಯವರೆಗೂ ಕಂಡಂತಹ ಇತರ ಎಲ್ಲಾ ಆಡಳಿತ ವ್ಯವಸ್ಥೆಗಳಿಗಿಂತ …
Read More »ಸಂವಾದ ; ಕಣ್ಣೀರು ಹೇಡಿಯ ಅಸ್ತ್ರ ಎಂದ ಕಾಂಗ್ರೆಸ್
ಬೆಂಗಳೂರು, : ಆರೋಗ್ಯ ಕಾರ್ಯಕರ್ತರೊಂದಿಗೆ ಸಂವಾದದ ವೇಳೆ ಪ್ರಧಾನಿ ಮೋದಿ ಗದ್ಗಿತರಾದ ಬಗ್ಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ವ್ಯಂಗ್ಯವಾಡಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಕೆಪಿಸಿಸಿ, “ಕಣ್ಣೀರು ಹೇಡಿಯ ಪ್ರಮುಖ ಅಸ್ತ್ರ. ಎದುರಿಗಿದ್ದ ಕ್ಯಾಮೆರಾ ಹಾಗೂ ಟೆಲಿಪ್ರಾಂಪ್ಟರ್ ನೋಡಿಕೊಂಡು ಕಣ್ಣೀರು ಸುರಿಸುವುದು ಅದ್ಬುತ ನಟನಾ ಕೌಶಲ್ಯ! @narendramodi ಅವರೇ, ಜನತೆಗೆ ಬೇಕಿರುವುದು ನಿಮ್ಮ ಕಣ್ಣೀರಲ್ಲ””ಆಕ್ಸಿಜನ್, ಲಸಿಕೆ, ವೈದ್ಯಕೀಯ ವ್ಯವಸ್ಥೆ, ಚಿಕಿತ್ಸೆ, ಆರ್ಥಿಕ ನೆರವು. ಇದ್ಯಾವುದನ್ನೂ ನೀಡದೆ ಎರಡು …
Read More »ಅಬ್ಬಬ್ಬಾ..! 707 ಹುದ್ದೆಗಳಿಗೆ 4.71 ಲಕ್ಷ ಅರ್ಜಿ
ನೂರೈವತ್ತು ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ ಪುಟ್ಟದೊಂದು ಕೆಲಸ ಸಿಕ್ಕರೆ ಸಾಕು ಎಂದು ಹಾತೊರೆಯುವ ಕೋಟ್ಯಂತರ ಜೀವಗಳನ್ನು ನೋಡುತ್ತಲೇ ಇರುತ್ತೇವೆ. ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಉದ್ಯಮಗಳ ಸಂಪರ್ಕ ಪೋರ್ಟಲ್‌ನಲ್ಲಿ ಈ ವಾಸ್ತವದ ಕರಾಳ ರೂಪ ಕಣ್ಣಿಗೆ ರಾಚುವಂತೆ ಕಂಡಿದೆ. ಮೇ 21ರಂದು ಕಂಡಂತೆ 707 ಹುದ್ದೆಗಳಿಗೆ 4,71,922 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಎಂಎಸ್‌ಎಂಇ ಸಂಪರ್ಕ ಪೋರ್ಟಲ್‌ಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಜೂನ್ 2018ರಲ್ಲಿ ಚಾಲನೆ ಕೊಟ್ಟಿದ್ದರು. …
Read More »
Laxmi News 24×7