ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಕೋವಿಡ್-19 ದೃಢಪಟ್ಟ 833 ಹೊಸ ಪ್ರಕರಣಗಳು ದಾಖಲಾಗಿದ್ದು, ಇದೇ ಅವಧಿಯಲ್ಲಿ 5 ಮಂದಿ ಸಾವಿಗೀಡಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು 9,58,417 ಪ್ರಕರಣಗಳು ವರದಿಯಾಗಿದ್ದು, ಸಾವಿನ ಸಂಖ್ಯೆ 12,386ಕ್ಕೆ ತಲುಪಿದೆ. ಶುಕ್ರವಾರ ಗುಣಮುಖರಾದ 545 ಮಂದಿಯೂ ಸೇರಿದಂತೆ ಇದುವರೆಗೆ ಒಟ್ಟು 9,37,898 ಸೋಂಕಿತರು ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಸದ್ಯ 8,114 ಸಕ್ರಿಯ ಪ್ರಕರಣಗಳಿವೆ. ಐಸಿಯುನಲ್ಲಿ …
Read More »Monthly Archives: ಮಾರ್ಚ್ 2021
16 ವರ್ಷ ಮೇಲ್ಪಟ್ಟರೆ ಬಾಲಾರೋಪಿ ಅಲ್ಲ?
ನವದೆಹಲಿ: ಲೈಂಗಿಕ ದೌರ್ಜನ್ಯದಿಂದ ಮಕ್ಕಳನ್ನು ರಕ್ಷಿಸುವ ಕಾಯ್ದೆ (ಪೋಸ್ಕೊ) ಅಡಿಯಲ್ಲಿ ವಯಸ್ಕ ಆರೋಪಿಯ ವಯೋಮಿತಿಯನ್ನು 18ರಿಂದ 16 ವರ್ಷಕ್ಕೆ ಇಳಿಸಬೇಕು ಎಂದು ಉನ್ನತಮಟ್ಟದ ಸಮಿತಿಯೊಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. 2017ರಲ್ಲಿ ಪೋಸ್ಕೊ ಅಡಿಯಲ್ಲಿ 32,608 ಪ್ರಕರಣಗಳು ದಾಖಲಾಗಿದ್ದವು. 2019ರಲ್ಲಿ ಈ ಪ್ರಮಾಣ 47,325ಕ್ಕೆ (ಶೇ. 45) ಏರಿಕೆ ಆಗಿದೆ. ಆದ್ದರಿಂದ ವಯೋಮಿತಿಯನ್ನು ಪುನರ್ ಪರಿಶೀಲಿಸುವ ಮತ್ತು ಸೈಬರ್ ಅಪರಾಧ ಎಸಗುವವರ ವಯಸ್ಸನ್ನು ಪುನರ್ ವಿಮಶಿಸಬೇಕಿದೆ ಎಂದು ಸಮಿತಿ ಶಿಫಾರಸು …
Read More »ಭದ್ರಾವತಿ ಶಾಸಕ ಸಂಗಮೇಶ್’ಗೆ ಬೆಂಬಲ: ಶಿವಮೊಗ್ಗದಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಲು ಕಾಂಗ್ರೆಸ್ ಸಜ್ಜು
ಶಿವಮೊಗ್ಗ: ಕಾಂಗ್ರೆಸ್ ಪಕ್ಷದ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ ವಿರುದ್ಧ ಪೊಲೀಸ್ ದೌರ್ಜನ್ಯ ನಡೆದಿದೆ ಎಂದು ಆರೋಪಿಸಿ ಸರ್ಕಾರದ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸಲು ಕಾಂಗ್ರೆಸ್ ಸಜ್ಜಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ದಿನೇಶ್ ಗುಂಡೂರಾವ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬೀದಿಗಿಳಿದು ಹೋರಾಟ ನಡೆಸಲು ಮುಂದಾಗಿದ್ದಾರೆ. ಇದಕ್ಕಾಗಿ ಕಾಂಗ್ರೆಸ್ ಪಕ್ಷ ಶಿವಮೊಗ್ಗ ಚಲೋ ಆಯೋಜಿಸಿದೆ. ಬಿಜೆಪಿ ಸರ್ಕಾರ ದ್ವೇಷ ರಾಜಕಾರಣ ಮಾಡುತ್ತಿದೆ. ವಿಧಾನಸಭೆಯಿಂದ ಸಂಗಮೇಶ್ ಅವರನ್ನು …
Read More »CBSE ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ: “ಕೃತಕ ಬುದ್ಧಿಮತ್ತೆ” ಲಭ್ಯ: ನೋಂದಾಯಿಸುವುದು ಹೇಗೆ | ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ
ನವದೆಹಲಿ: ಸಿಬಿಎಸ್‌ಇ 10 ನೇ ತರಗತಿ ಮತ್ತು 12 ನೇ ತರಗತಿ ಪರೀಕ್ಷೆಗಳ ಸಲುವಾಗಿ ವಿದ್ಯಾರ್ಥಿಗಳಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ, ಕೇಂದ್ರೀಯ ಪ್ರೌಡಶಿಕ್ಷಣ ಮಂಡಳಿ (ಸಿಬಿಎಸ್‌ಇ) ಇಂಟೆಲ್ ಸಹಯೋಗದೊಂದಿಗೆ ಎಐ (Artificial Intelligence Platform) ವಿದ್ಯಾರ್ಥಿ ಸಮುದಾಯವನ್ನು (ಎಐಎಸ್‌ಸಿ) ಶುಕ್ರವಾರ ಪ್ರಾರಂಭಿಸಿದೆ. ಈ ‘ಕೃತಕ ಬುದ್ಧಿಮತ್ತೆ’ ಪ್ಲಾಟ್‌ಫಾರ್ಮ್‌ನ ಮುಖ್ಯ ಉದ್ದೇಶವೆಂದರೆ ವಿದ್ಯಾರ್ಥಿಗಳು ಕಲಿಯಲು ಮತ್ತು ಅನುಭವಗಳನ್ನು ಹಂಚಿಕೊಳ್ಳಲು ಒಟ್ಟಿಗೆ ಸೇರುವುದಕ್ಕೆ ಇದು ಸ್ಥಳವನ್ನು ಒದಗಿಸುತ್ತದೆ. ಇದಲ್ಲದೇ ಸಿಬಿಎಸ್‌ಇಯ ನವೀಕರಣಗಳ ಪ್ರಕಾರ, ಕೃತಕ …
Read More »ಸಿಂಧಗಿ ಕ್ಷೇತ್ರವನ್ನು ತನ್ನತೆಕ್ಕೆಗೆ ತೆಗೆದುಕೊಳ್ಳಲು ಹವಣಿಸುತ್ತಿರುವ ಬಿಜೆಪಿ, ಇದಕ್ಕಾಗಿ ರಣತಂತ್ರ ಹೆಣೆಯಲು ಇಬ್ಬರು ಉಪಮುಖ್ಯಮಂತ್ರಿಗಳೂ ಸೇರಿದಂತೆ ಐವರು ಸಚಿವರನ್ನು ನಿಯೋಜಿಸಿದೆ.
ಬೆಂಗಳೂರು,ಮಾ.12- ಸಿಂಧಗಿ ಉಪಚುನಾವಣೆ ಸನ್ನಿಹಿತವಾಗುತ್ತಿರು ವಂತೆಯೇ ರಾಜ್ಯ ರಾಜಕೀಯದಲ್ಲಿ ಮಹತ್ತರ ಬದಲಾವಣೆಗಳಾಗುತ್ತಿದ್ದು, ಜೆಡಿಎಸ್ ಶಾಸಕರಾಗಿದ್ದ ದಿವಂಗತ ಎಂ.ಸಿ.ಮನಗೂಳಿ ಯವರ ಪುತ್ರ ಅಶೋಕ್ ಮನಗೂಳಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಬೆನ್ನಲ್ಲೇ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿದೆ. ಸಿಂಧಗಿ ಕ್ಷೇತ್ರವನ್ನು ತನ್ನತೆಕ್ಕೆಗೆ ತೆಗೆದುಕೊಳ್ಳಲು ಹವಣಿಸುತ್ತಿರುವ ಬಿಜೆಪಿ, ಇದಕ್ಕಾಗಿ ರಣತಂತ್ರ ಹೆಣೆಯಲು ಇಬ್ಬರು ಉಪಮುಖ್ಯಮಂತ್ರಿಗಳೂ ಸೇರಿದಂತೆ ಐವರು ಸಚಿವರನ್ನು ನಿಯೋಜಿಸಿದೆ. ಪ್ರಮುಖವಾಗಿ ಡಿಸಿಎಂಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ್ ಸವದಿ ಮತ್ತು ಸಚಿವರಾದ ಮುರುಗೇಶ್ ನಿರಾಣಿ, …
Read More »ಮಾಸಿಕ ಸುವಿಚಾರ ಚಿಂತನ ಕಾರ್ಯಕ್ರಮ
ಘಟಪ್ರಭಾ: ಸಮೀಪದ ಹುಣಶ್ಯಾಳ ಪಿ.ಜಿ ಗ್ರಾಮದ ಶ್ರೀ ಸಿದ್ದಲಿಂಗ ಕೈವಲ್ಯಾಶ್ರಮದ ಶ್ರೀ ಸಿದ್ದಲಿಂಗ ಸಮುದಾಯ ಭವನದಲ್ಲಿ ದಿ.13 ರಂದು ಮುಂಜಾನೆ 12 ಗಂಟೆಗೆ 128 ನೇ ಮಾಸಿಕ ಸುವಿಚಾರ ಚಿಂತನ ಗೋಷ್ಠಿ ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರಮದ ಪಾವನ ಸಾನಿಧ್ಯವನ್ನು ಶ್ರೀ ಮಠದ ಪೀಠಾಧಿಕಾರಿ ಶ್ರೀ ನಿಜಗುಣ ದೇವರು, ಅಧ್ಯಕ್ಷತೆಯನ್ನು ಚಿಕ್ಕಹಂಚಿನಾಳ ಶಿವಾನಂದ ಮಠದ ಶಾಂತಾನಂದ ಸ್ವಾಮಿಗಳು ವಹಿಸುವರು. ಶ್ರೀಗಳ ಕಿರೀಟ ಮಹಾಪೂಜೆ ಜರಗುವುದು. ಅನ್ನ ದಾಸೋಹವನ್ನು ಗುರುಸಿದ್ದ ಕರಬನ್ನಿ ಹಾಗೂ …
Read More »ಸಿಡಿ ಪ್ರಕರಣದ ತನಿಖೆಗೆ ಎಸ್ಐಟಿ ರಚನೆ ಸ್ವಾಗತಾರ್ಹ. ಆದರೆ, ಯಾವುದೇ ಪ್ರಕರಣದಲ್ಲಾಗಲಿ ಎಸ್ಐಟಿ ವರದಿಯನ್ನಷ್ಟೇ ನೀಡುತ್ತದೆ. ಎಫ್ಐಆರ್ ದಾಖಲಾದರೆ ಮಾತ್ರ ಅಪರಾಧಿಗಳಿಗೆ ಶಿಕ್ಷೆ : ಸತೀಶ ಜಾರಕಿಹೊಳಿ
ಬೆಳಗಾವಿ: “ಸಿಡಿ ಪ್ರಕರಣದ ತನಿಖೆಗೆ ಎಸ್ಐಟಿ ರಚನೆ ಸ್ವಾಗತಾರ್ಹ. ಆದರೆ, ಯಾವುದೇ ಪ್ರಕರಣದಲ್ಲಾಗಲಿ ಎಸ್ಐಟಿ ವರದಿಯನ್ನಷ್ಟೇ ನೀಡುತ್ತದೆ. ಎಫ್ಐಆರ್ ದಾಖಲಾದರೆ ಮಾತ್ರ ಅಪರಾಧಿಗಳಿಗೆ ಶಿಕ್ಷೆ ನೀಡಲು ಸಾಧ್ಯ” ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅಭಿಪ್ರಾಯ ವ್ಯಕ್ತಪಡಿಸಿದರು. ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಎಸ್ಐಟಿ ರಚನೆ ಬಗ್ಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸೇರಿದಂತೆ ಕೆಲವು ಮುಖಂಡರು ವ್ಯಕ್ತಪಡಿಸಿರುವ ಅಭಿಪ್ರಾಯ ಸರಿ ಇದೆ” ಎಂದರು. “ಸಿಡಿ ಪ್ರಕರಣದಿಂದ ಜಾರಕಿಹೊಳಿ …
Read More »ಆದಷ್ಟು ಬೇಗ ರಮೇಶ್ ಆರೋಪ ಮುಕ್ತರಾಗಿ ಹೊರ ಬರುತ್ತಾರೆ: ಮುರುಗೇಶ ನಿರಾಣಿ
ಧಾರವಾಡ : ರಮೇಶ್ ಜಾರಕಿಹೊಳಿ ಕುರಿತ ರಾಸಲೀಲೆ ವಿಡಿಯೋ ನಕಲಿ ಎಂದು ಅವರೇ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ತನಿಖೆಗೂ ಸಹ ಸರ್ಕಾರ ಸೂಚಿಸಿದೆ. ಆದಷ್ಟು ಬೇಗ ರಮೇಶ್ ಆರೋಪ ಮುಕ್ತರಾಗಿ ಹೊರ ಬರುತ್ತಾರೆ ಎಂದು ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವ ಮುರುಗೇಶ ನಿರಾಣಿ ಹೇಳಿದರು. ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹ ಇಲಾಖೆಗೆ ತನ್ನದೇ ಆದ ರೀತಿ, ನಿಯಮಗಳಿರುತ್ತವೆ ಆ ಪ್ರಕಾರ ತನಿಖೆ ನಡೆಸುತ್ತದೆ. ರಮೇಶ್ ಅವರು …
Read More »ಸಿಡಿ ಪ್ರಕರಣ ಸಿಬಿಐ ತನಿಖೆ ಆಗಬೇಕಿತ್ತು : ಯತ್ನಾಳ್
ವಿಜಯಪುರ : ಜಾರಕಿಹೊಳಿ ಸಿಡಿ ಹಗರಣವನ್ನು ಎಸ್ ಐ ಟಿ ಬದಲಾಗಿ ಸಿಬಿಐ ತನಿಖೆಗೆ ವಹಿಸಬೇಕತ್ತು. ಸಿಬಿಐ ಸಂಸ್ಥೆ ಮೂಲಕ ತನಿಖೆ ನಡೆಸಿದ್ದರೆ ಅಧಿಕಾರಿಗಳ ಮೇಲೆ ಪ್ರಭಾವ ಬೀರಲಾಗುತ್ತಿರಲಿಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು. ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮಂತ್ರಿಗಳಾಗಲು ಕೆಲವರು ಸಿನಿಮಾ ತಾರೆಯರನ್ನು ದೆಹಲಿಗೆ ಕರೆದೊಯ್ದಿದ್ದರು. ಅಂಥವರೆಲ್ಲ ಈಗ ಸಚಿವರಾಗಿದ್ದಾರೆ. ಹೀಗಾಗಿ ಇಡೀ ಸಿಡಿ ಹಗರಣದ ಸಮಗ್ರ ತನಿಖೆಯನ್ನು ಸಿಬಿಐ ತನಿಖೆಗೆ ವಹಿಸಬೇಕು …
Read More »ಪುಣೆಯಲ್ಲಿ ಮಾರ್ಚ್ 21 ರವರೆಗೆ ಶಾಲೆ ಬಂದ್ : ಮಹಾರಾಷ್ಟ್ರ ಸರ್ಕಾರ
ಪುಣೆ : ಕೊರೋನಾ ಮತ್ತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೇಶದ ಹಲವೆಡೆ ಕಟ್ಟೆಚ್ಚರ ವಹಿಸಲಾಗಿದ್ದು, ಪುಣೆಯಲ್ಲಿ ಮಾರ್ಚ್ 21 ರವರೆಗೆ ಶಾಲೆ ಬಂದ್ ಮಾಡಲು ಮಹಾರಾಷ್ಟ್ರ ಸರ್ಕಾರ ನಿರ್ಧರಿದೆ . ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಕೊರೋನಾ ಅಬ್ಬರ ತಡೆಯುವ ನಿಟ್ಟಿನಲ್ಲಿ ಶಾಲೆ ಬಂದ್ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ . ಮುಂದಿನ ಪರಿಸ್ಥಿತಿಯನ್ನ ಅವಲೋಕಿಸಿ ಶಾಲೆಗಳನ್ನ ಪುನರಾಂಭಿಸಬೇಕೆ ಅಥವಾ ಬಂದ್ …
Read More »