Breaking News

Monthly Archives: ಮಾರ್ಚ್ 2021

ಸಾರಿಗೆ ನೌಕರರಿಗೆ ಶೀಘ್ರ 6ನೇ ವೇತನ ಆಯೋಗದ ಸೌಲಭ್ಯ: ಲಕ್ಷ್ಮಣ ಸವದಿ ಭರವಸೆ

ಹೊಳಲ್ಕೆರೆ: ಸಾರಿಗೆ ನೌಕರರಿಗೆ 6ನೇ ವೇತನ ಆಯೋಗದ ಸೌಲಭ್ಯಗಳನ್ನು ಶೀಘ್ರವೇ ನೀಡಲಾಗುವುದು ಎಂದು ಉಪಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಭರವಸೆ ನೀಡಿದರು. ತಾಲ್ಲೂಕಿನ ಬಸಾಪುರ ಗೇಟ್‌ನಲ್ಲಿ ಭಾನುವಾರ ₹ 16 ಕೋಟಿ ವೆಚ್ಚದ ಕೆಎಸ್‌ಆರ್‌ಟಿಸಿ ಚಾಲಕರ ತರಬೇತಿ ಕೇಂದ್ರದ ಉದ್ಘಾಟನೆ ಹಾಗೂ ₹ 9 ಕೋಟಿ ವೆಚ್ಚದ ಬಸ್ ಡಿಪೊ ಕಾಮಗಾರಿಯ ಶಂಕುಸ್ಥಾಪನೆ ಸಮಾರಂಭದಲ್ಲಿ ಅವರು ಮಾತನಾಡಿದರು. ‘ಕೊರೊನಾ ಸಂಕಷ್ಟ ಕಾಲದಲ್ಲೂ ಸರ್ಕಾರದಿಂದ ₹ 1,900 ಕೋಟಿ ಹಣ …

Read More »

ಮಠ, ಮಂದಿರಗಳಿಗೆ ₹ 80 ಕೋಟಿ: ಪ್ರಭಾವಿ ಮಠಗಳು, ಸಮುದಾಯಗಳಿಗೆ ಮಣೆ

ಬೆಂಗಳೂರು: ಪ್ರಸಕ್ತ ಆರ್ಥಿಕ ವರ್ಷದಲ್ಲಿ ವಿವಿಧ ಇಲಾಖೆಗಳಿಗೆ ಹಂಚಿಕೆ ಮಾಡಿದ್ದ ಅನುದಾನದ ಮೊತ್ತವನ್ನು ಕೋವಿಡ್‌ ಕಾರಣದಿಂದ ಕಡಿತಗೊಳಿಸಿದ್ದ ರಾಜ್ಯ ಸರ್ಕಾರ, ಅಭಿವೃದ್ಧಿ ಕಾಮಗಾರಿಗಳಿಗೂ ತಡೆ ವಿಧಿಸಿತ್ತು. ಆದರೆ, ಆರ್ಥಿಕ ವರ್ಷದ ಕೊನೆಯಲ್ಲಿ ವಿವಿಧ ಮಠ, ಮಂದಿರಗಳು ಮತ್ತು ಜಾತಿವಾರು ಸಂಘ ಸಂಸ್ಥೆಗಳಿಗೆ ಒಂದೇ ಕಂತಿನಲ್ಲಿ ₹ 80.25 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಧಾರ್ಮಿಕ ದತ್ತಿ ಇಲಾಖೆಯ ಮೂಲಕ ಮಾರ್ಚ್‌ 19ರಂದು ಅನುದಾನ ಬಿಡುಗಡೆ ಮಾಡಿ ಆದೇಶ ಹೊರಡಿಸಲಾಗಿದೆ. ರಾಜ್ಯದಾದ್ಯಂತ …

Read More »

ಹೊಟ್ಟೆಯ ಕೊಬ್ಬನ್ನು ಕರಗಿಸಲು ಇಲ್ಲಿದೆ ಸಿಂಪಲ್ ಟಿಪ್ಸ್, ‘ಡೊಂಟ್‌ ಮಿಸ್’‌

ಹೊಟ್ಟೆಯ ಕೊಬ್ಬು ಹಠಮಾರಿ. ಉತ್ತಮ ಪ್ರಯತ್ನಗಳ ಹೊರತಾಗಿಯೂ ಅದು ಕಡಿಮೆಯಾಗಲು ನಿರಾಕರಿಸುತ್ತದೆ. ಯಾವುದೇ ಪ್ರಮಾಣದ ಆಹಾರ ಪದ್ಧತಿ ಸಹಾಯ ಮಾಡುವುದಿಲ್ಲ ಮತ್ತು ವ್ಯಾಯಾಮ ಕೂಡ ಹೊಟ್ಟೆ ಕರಗಿಸಲು ನೆರವಾಗುವುದಿಲ್ಲ. ಹೊಟ್ಟೆಯ ಕೊಬ್ಬನ್ನು ತೊಡೆದುಹಾಕಲು ಅಸಾಧ್ಯವಾದ ಕೆಲಸವೆಂದು ತೋರುತ್ತದೆ ಇದಕ್ಕೆ ಕಾರಣ ತಪ್ಪು ಜೀವನಕ್ರಮ. ಹೊಟ್ಟೆಕೊಬ್ಬು ವೇಗವಾಗಿ ಕರಗಲು ಬಯಸಿದ್ದರೆ ಅದಕ್ಕಾಗಿ ನಿಖರವಾಗಿ ಏನು ಮಾಡಬೇಕೆಂದು ತಿಳಿದುಕೊಳ್ಳಬೇಕು. ಹೊಟ್ಟೆಯ ಕೊಬ್ಬನ್ನು ವೇಗವಾಗಿ ಕಳೆದುಕೊಳ್ಳಲು ಸಹಾಯ ಮಾಡುವ ಕೆಲವು ಅತ್ಯುತ್ತಮ ವರ್ಕ್ ಔಟ್ …

Read More »

ಬೆಳಗಾವಿ ಜಿಲ್ಲೆಯ ಗೋಕಾಕ್ ಅಥವಾ ಚಿಕ್ಕೋಡಿ ಜಿಲ್ಲೆಗಳನ್ನು ರಚಿಸುವ ಕುರಿತಂತೆ ಚರ್ಚೆ

ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ವಿಜಯನಗರ ಜಿಲ್ಲೆಯನ್ನು ರಚಿಸಲಾಗಿದ್ದು, ಇದರೊಂದಿಗೆ ಜಿಲ್ಲೆಗಳ ಸಂಖ್ಯೆ 31 ಕ್ಕೆ ಏರಿಕೆಯಾಗಿದೆ. ಶೀಘ್ರವೇ ರಾಜ್ಯದಲ್ಲಿ 3 -4 ಹೊಸ ಜಿಲ್ಲೆಗಳನ್ನು ರಚಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಉತ್ತರ ಕರ್ನಾಟಕ ಜಿಲ್ಲೆಯ ಶಿರಸಿ, ಬೀದರ್ ಜಿಲ್ಲೆಯ ಬಸವಕಲ್ಯಾಣ, ತುಮಕೂರು ಜಿಲ್ಲೆಯ ತಿಪಟೂರು ಅಥವಾ ಮಧುಗಿರಿ, ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ, ಬೆಳಗಾವಿ ಜಿಲ್ಲೆಯ ಗೋಕಾಕ್ ಅಥವಾ ಚಿಕ್ಕೋಡಿ ಜಿಲ್ಲೆಗಳನ್ನು ರಚಿಸುವ ಕುರಿತಂತೆ ಚರ್ಚೆ ನಡೆದಿದೆ ಎನ್ನಲಾಗಿದ್ದು, ಸಾರ್ವಜನಿಕರಿಗೆ …

Read More »

ಬೆಂಗಳೂರಲ್ಲಿಂದು ರೈತರ ರಣಕಹಳೆ

ಬೆಂಗಳೂರು: ದೆಹಲಿ ರೈತ ನಾಯಕರ ನೇತೃತ್ವದಲ್ಲಿ ಇಂದು ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗಿದೆ. ಭಾರತೀಯ ನಾಯಕರಾದ ರಾಕೇಶ್ ಟಿಕಾಯತ್, ಡಾ. ದರ್ಶನ್ ಪಾಲ್, ಯುದ್ಧವೀರ ಸಿಂಗ್ ಭಾಗಿಯಾಗಲಿದ್ದಾರೆ. ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆ ನೇತೃತ್ವದಲ್ಲಿ ಹೋರಾಟ ನಡೆಯಲಿದೆ. ದೆಹಲಿಯಲ್ಲಿ 100 ಕ್ಕೂ ಅಧಿಕ ದಿನಗಳಿಂದ ಹೋರಾಟ ನಡೆಸಲಾಗುತ್ತಿದೆ. ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ನಡೆಯುತ್ತಿರುವ ಹೋರಾಟ ಮಾರ್ಚ್ 26 ರಂದು 4 ತಿಂಗಳು ಪೂರೈಸಲಿದೆ. ಈ ಹಿನ್ನೆಲೆಯಲ್ಲಿ ರೈತ ನಾಯಕರು …

Read More »

ಸಿ.ಟಿ.ರವಿ, ನಟ ಶಿವಣ್ಣ ಹಾಗೂ ಲಲಿತಾ ನಾಯಕ್ ಹತ್ಯೆ ಮಾಡುವುದಾಗಿ ಬೆದರಿಕೆ ಪತ್ರ..!

ಬೆಂಗಳೂರು,ಮಾ.21- ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಹಾಗೂ ನನ್ನನ್ನೂ ಸೇರಿದಂತೆ ಪ್ರಮುಖರನ್ನು ಹತ್ಯೆ ಮಾಡುವ ಬೆದರಿಕೆ ಪತ್ರ ಬಂದಿದೆ ಎಂದು ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಹೇಳಿದ್ದಾರೆ. ಮೈಸೂರು ರಸ್ತೆಯಲ್ಲಿರುವ ಪೂರ್ಣಿಮಾ ಪ್ಯಾಲೇಸ್‍ನಲ್ಲಿ ಮಾಜಿ ಸಚಿವ ರೇವಣ್ಣ ಅವರು ಸಾರ್ವಜನಿಕ ಜೀವನದಲ್ಲಿ 40 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪ್ರತಿಷ್ಠಾನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೇ 1ರಂದು ಪ್ರಮುಖರನ್ನು ಕೊಲೆ ಮಾಡುವ ಪತ್ರ ಬಂದಿದೆ. …

Read More »

ತಿಂಗಳೊಳಗೆ ಸಿದ್ದರಾಮಯ್ಯ ಕಾಂಗ್ರೆಸ್ ಗೆ ಗುಡ್ ಬೈ..? : ನಳಿನ್‌ ಕುಮಾರ್ ಕಟೀಲ್‌

ಬೆಂಗಳೂರು, ಮಾ.21. ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಒಂದು ತಿಂಗಳಲ್ಲೇ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌ ಭವಿಷ್ಯ ನುಡಿದರು. ಬಿಜೆಪಿ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ಗೆಲ್ಲುವ ಪಕ್ಷವಾಗಿದ್ದು, ಕಾಂಗ್ರೆಸ್‌ ಸೋಲಿನ ಪಕ್ಷವಾಗಿದೆ. ಕಾಂಗ್ರೆಸ್‌ ಒಳಜಗಳದ ಮಿತಿಮೀರಿದ್ದು, ಎಲ್ಲಿಯೂ ನಿಲ್ಲದ ಸಿದ್ದರಾಮಯ್ಯ ಅವರು ಈ ಹಿಂದೆ ಗುರುವಿಗೆ ತಿರುಮಂತ್ರ ಹಾಕಿ ಜೆಡಿಎಸ್‌ ಗೆ ಗುಡ್ ಬೈ ಹೇಳಿ ಕಾಂಗ್ರೆಸ್‌ …

Read More »

ನಿನಗೆ ತಾಕತ್ತಿದ್ದರೆ ಸಿಎಂ ಬದಲಾವಣೆ ಮಾಡಿ ತೋರಿಸು: ಯತ್ನಾಳ್‍ಗೆ ರೇಣುಕಾಚಾರ್ಯ ಸವಾಲ್

ದಾವಣಗೆರೆ: ನಿನಗೆ ಸವಾಲು​ ಹಾಕ್ತೀನಿ.. ತಾಕತ್ತಿದ್ದರೆ ಮುಖ್ಯಮಂತ್ರಿಗಳನ್ನ ಬದಲಾವಣೆ ಮಾಡಿ ನೋಡು ಅಂತ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳೆಗೆ ಸವಾಲೆಸೆದಿದ್ದಾರೆ. ಪಂಚರಾಜ್ಯಗಳ ಚುನಾವಣೆಯ ನಂತರ ನೂರಕ್ಕೆ ನೂರರಷ್ಟು ಸಿಎಂ ಬದಲಾವಣೆ ಖಚಿತ ಎಂದು ಯತ್ನಾಳ್ ಹೇಳಿಕೆ ನೀಡಿದ್ದರು. ಈ ಹಿನ್ನೆಲೆ ರೇಣುಕಾಚಾರ್ಯ ಏಕವಚನದಲ್ಲೇ​​ ಯತ್ನಾಳ್​ ವಿರುದ್ಧ ಕಿಡಿಕಾರಿದ್ದಾರೆ. ​ರಾಜ್ಯದಲ್ಲಿ ಬಿಜೆಪಿಯನ್ನ ಕಟ್ಟಿ ಬೆಳೆಸಿದ್ದು ಯಡಿಯೂರಪ್ಪ, ಅನಂತಕುಮಾರ್​. ಯಡಿಯೂರಪ್ಪನವರನ್ನ ಮುಖ್ಯಮಂತ್ರಿಯನ್ನಾಗಿ ಮಾಡಿದ್ದು, ಪ್ರಧಾನಮಂತ್ರಿ ನರೇಂದ್ರಮೋದಿ …

Read More »

ಖತರ್ನಾಕ್ ಕಳ್ಳರ ಬಂಧನ; ₹6 ಲಕ್ಷ ಮೌಲ್ಯದ 12 ಬೈಕ್​ ವಶ

ಮೈಸೂರು: ನಗರದ ನರಸಿಂಹರಾಜ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ದ್ವಿಚಕ್ರ ವಾಹನ ಕಳ್ಳರನ್ನು ಬಂಧಿಸಿದ್ದಾರೆ. ಫಯಾಜ್​ ಅಹಮ್ಮದ್​ ಹಾಗೂ ಮೊಕ್ತಾರ್​​ ಪಾಷಾ ಬಂಧಿತ ಆರೋಪಿಗಳು. ಈ ಹಿಂದೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳು ನಕಲಿ ಕೀ ಬಳಸಿ ಬೈಕ್​ಗಳನ್ನ ಕಳ್ಳತನ ಮಾಡುತ್ತಿದ್ದರು. ಬೈಕ್​ ಕಳುವಾಗಿರುವ ಸಂಬಂಧ ಪೊಲೀಸ್​ ಠಾಣೆಯಲ್ಲಿ ದೂರುಗಳು ದಾಖಲಾಗಿದ್ದವು. ಕದ್ದ ಬೈಕ್​ಗಳನ್ನ ಮಾರಾಟ ಮಾಡಲು ಮುಂದಾದ ಆರೋಪಿಗಳು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಬಂಧಿತ ಆರೋಪಿಗಳಿಂದ ಪೊಲೀಸರು, 6 …

Read More »

ಬೆಳಗಾವಿಯಲ್ಲಿ CRPF ಯೋಧನ ಸಾವು

ಬೆಳಗಾವಿ: ಕೋಬ್ರಾ ಬಟಾಲಿಯನ್​ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಆರ್​ಪಿಎಫ್​ನ ವೀರ ಯೋಧ ಮೌಲಾಹುಸೇನ್​ ಕಲೇಬಾಯಿ(40) ಅನಾರೋಗ್ಯದ ಕಾರಣ ಸಾವನ್ನಪ್ಪಿದ್ದಾರೆ. ಮೂಲತಃ ಗದಗ ತಾಲೂಕಿನ ಹೊಂಬಳ ಗ್ರಾಮದವರಾದ ಯೋಧ ಬೆಳಗಾವಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಯೋಧ ನಿನ್ನೆ ಸೇನಾ ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾರೆ. ತಾಯಿ, ಪತ್ನಿ, ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಂದು ಗಂಡು ಮಗುವನ್ನ ಅಗಲಿದ್ದಾರೆ. ಇಂದೇ ಹೊಂಬಳ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸಲಾಗುತ್ತಿದೆ.

Read More »