Breaking News

Yearly Archives: 2020

ಬಸ್ ಬಂದರೂ ಜನ ಬರುತ್ತಿಲ್ಲ……….

ಉಡುಪಿ: ಜಿಲ್ಲೆಯೊಳಗೆ ಇಂದಿನಿಂದ ಖಾಸಗಿ ಸರ್ಕಾರಿ ಬಸ್‍ಗಳು ಓಡಾಡುತ್ತಿವೆ. ಕುಂದಾಪುರ ರೂಟ್‍ನಲ್ಲಿ ಪ್ರತಿ ಅರ್ಧಗಂಟೆಗೊಂದು ಬಸ್, ಉಡುಪಿ-ಮಣಿಪಾಲ ನಗರದಲ್ಲಿ ನರ್ಮ್ ಬಸ್ ಸಂಚಾರ ಆರಂಭವಾಗಿದೆ. ಉಡುಪಿ ಜಿಲ್ಲೆಯನ್ನು ಕೇಂದ್ರ ಸರ್ಕಾರ ಗ್ರೀನ್ ಝೋನ್ ಎಂದು ಘೋಷಿಸಿದೆ. ನಿರ್ಬಂಧಿತ ವಿನಾಯಿತಿಗಳು ಜಿಲ್ಲೆಗೆ ಸಿಕ್ಕಿದೆ. ಹೀಗಾಗಿ ಜಿಲ್ಲೆಯ ಒಳಗೆ ಖಾಸಗಿ ಮತ್ತು ಸರ್ಕಾರಿ ಬಸ್‍ಗಳ ಓಡಾಟ ಆರಂಭಿಸಬಹುದು ಎಂದು ಜಿಲ್ಲಾಡಳಿತ ಹೇಳಿತ್ತು. ಬೆರಳೆಣಿಕೆಯ ಬಸ್‍ಗಳು ಮಾತ್ರ ಇಂದು ರಸ್ತೆಗೆ ಇಳಿದಿವೆ. ಆದರೆ ಜನ …

Read More »

ಕೇಂದ್ರದಿಂದ ಪಿಎಫ್ ಹಣ – 20 ಲಕ್ಷ ಕೋಟಿ ರೂ. ಹಂಚಿಕೆ ಹೇಗೆ?

ನವದೆಹಲಿ – ಪ್ರಧಾನಿ ನರೇಂದ್ರ ಮೋದಿ ನಿನ್ನೆ ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಹದಗೆಟ್ಟಿರುವ ದೇಶದ ಆರ್ಥಿಕತೆ ಅಭಿವೃದ್ಧಿಗೆ 20 ಲಕ್ಷ ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಘೋಷಿಸಿದ್ದರು. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಈ ಪ್ಯಾಕೇಜ್ ಹೇಗಿರಲಿದೆ ಎನ್ನುವ ಕುರಿತು ಸುದೀರ್ಘವಾಗಿ ವಿವರಿಸಿದರು. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಈ ಪ್ಯಾಕೇಜ್ ನಿಂದ ಸಿಂಹಪಾಲು ಸಿಗಲಿದ್ದು, ಉದ್ಯೋಗಿಗಳಿಗೆ ಸಂಬಳ ನೀಡುವುದಕ್ಕೂ ನೆರವು ನೀಡಲಿದೆ. ಸಣ್ಣ ಕೈಗಾರಿಕೆಗಳು …

Read More »

ಹೊರರಾಜ್ಯದಿಂದ ಧಾರವಾಡಕ್ಕೆ ಆಗಮಿಸಿದ 665 ಮಂದಿಗೆ ಕ್ವಾರಂಟೈನ್- 103 ಮಂದಿಗೆ ಗಂಟಲು ದ್ರವ ಪರೀಕ್ಷೆ

ಧಾರವಾಡ: ಕಳೆದ 6 ದಿನಗಳಿಂದ ಜಿಲ್ಲೆಗೆ ಹೊರ ರಾಜ್ಯದಿಂದ ಒಟ್ಟು 665 ಜನ ವಲಸೆ ಕಾರ್ಮಿಕರು ಹಾಗೂ ಜಿಲ್ಲೆಯಿಂದ ಹೋಗಿದ್ದ ಯಾತ್ರಿಕರು ಆಗಮಿಸಿದ್ದಾರೆ. ಅವರೆಲ್ಲರನ್ನು ಧಾರವಾಡ ನಗರದಿಂದ ಹೊರಗೆ ಇರುವ ಕೃಷಿ ವಿವಿ ಆವರಣದಲ್ಲಿ ತಡೆದು ತಪಾಸಣೆ ಮಾಡಿ ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ. ನಿನ್ನೆಯಷ್ಟೇ ಗುಜರಾತಿನ ಅಹ್ಮದಾಬಾದ್‍ನಿಂದ ಆಗಮಿಸಿದ್ದ 9 ಜನರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಈ ಹಿನ್ನೆಲೆ ಹೊರ ರಾಜ್ಯದಿಂದ ಬರುವವರ ಮೇಲೆ ಕಟ್ಟೆಚ್ಚರ ವಹಿಲಾಗಿದೆ. ಸದ್ಯ ಆಂಧ್ರಪ್ರದೇಶ್‍ನಿಂದ 38, …

Read More »

ವಿದ್ಯಾರ್ಥಿನಿಯರೊಂದಿಗೆ ಅಸಭ್ಯ ವರ್ತನೆ- ಶಿಕ್ಷಕ ಅಮಾನತು………..

ಚಿಕ್ಕೋಡಿ: ಏಳನೇ ತರಗತಿ ವಿದ್ಯಾರ್ಥಿನಿಯರೊಂದಿಗೆ ಶಿಕ್ಷಕ ಅಸಭ್ಯವಾಗಿ ವರ್ತಿಸಿರುವ ಘಟನೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನಲ್ಲಿ ನಡೆದಿದ್ದು, ಶಿಕ್ಷಕನನ್ನು ಅಮಾನತು ಮಾಡಿ ಚಿಕ್ಕೋಡಿ ಡಿಡಿಪಿಐ ಗಜಾನನ ಮನ್ನಿಕೇರಿ ಆದೇಶ ಹೊರಡಿಸಿದ್ದಾರೆ. ಶಿಕ್ಷಕ ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತಿಸಿದ್ದು, ಲೈಂಗಿಕ ಕಿರುಕುಳ ನಿಡುತ್ತಿದ್ದ ಎಂದು ಶಾಲಾ ವಿದ್ಯಾರ್ಥಿನಿಯರು ಶಿಕ್ಷಣ ಇಲಾಖೆಗೆ ಲಿಖಿತ ದೂರು ಸಲ್ಲಿಸಿದ್ದರು. ದೂರು ಪರಿಶಿಲಿಸಿ, ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮ 1966 ರ ನಿಯಮ 3 (1) ಉಲ್ಲಂಘನೆ ಅಡಿಯಲ್ಲಿ …

Read More »

ಕ್ವಾರಂಟೈನ್‍ನಲ್ಲಿರುವವರಿಗೆ ಊಟದ ಕೊರತೆ: ಹೊರಗೆ ಓಡಾಡುತ್ತಿರುವ ಕಾರ್ಮಿಕರು

ರಾಯಚೂರು: ಜಿಲ್ಲೆಯಲ್ಲಿ ವಿವಿಧೆಡೆ ಕ್ವಾರಂಟೈನ್ ಮಾಡಿರುವ ಕೂಲಿ ಕಾರ್ಮಿಕರಿಗೆ ಸರಿಯಾದ ಸೌಲಭ್ಯಗಳನ್ನ ನೀಡುವಲ್ಲಿ ಅಧಿಕಾರಿಗಳು ಎಡವಿದ್ದಾರೆ. ಹೀಗಾಗಿ ಸರ್ಕಾರಿ ಕ್ವಾರಂಟೈನ್ ನಲ್ಲಿದ್ದವರು ಹೊರಗಡೆ ಓಡಾಡುತ್ತಿದ್ದಾರೆ. ರಾಯಚೂರಿನ ಬೋಳಮಾನದೊಡ್ಡಿ ರಸ್ತೆಯಲ್ಲಿನ ಕ್ವಾರಂಟೈನ್ ಕೇಂದ್ರದಲ್ಲಿ ವಿವಿಧೆಡೆಯಿಂದ ಬಂದಿರುವ ಕೂಲಿ ಕಾರ್ಮಿಕರನ್ನು ಇರಿಸಲಾಗಿದೆ. ಕ್ವಾರಂಟೈನ್ ಕೇಂದ್ರದಲ್ಲಿ ಮೂಲಭೂತ ಕೊರತೆ ಹಿನ್ನೆಲೆ ಕಾರ್ಮಿಕರು ಹೊರಗೆ ಬರುತ್ತಿದ್ದು, ಸುತ್ತಮುತ್ತಲ ಮನೆಗಳ ನಿವಾಸಿಗಳು ಆತಂಕಗೊಂಡಿದ್ದಾರೆ. ಕ್ವಾರಂಟೈನ್ ಕೇಂದ್ರದ ಅಕ್ಕ ಪಕ್ಕದ ಅಂಗಡಿಗಳಲ್ಲಿ ಸಾಬೂನು, ಬಿಸ್ಕೆಟ್, ನೀರಿನ ಬಾಟಲ್ ಸೇರಿದಂತೆ …

Read More »

ಚಿಕನ್ ತರಲು ಹೋದ ವೃದ್ಧ ನಾಪತ್ತೆ- ಕುಟುಂಬಸ್ಥರಲ್ಲಿ ಆತಂಕ

ಚಿಕ್ಕೋಡಿ (ಬೆಳಗಾವಿ): ಚಿಕನ್ ತರಲು ಹೋದ ವೃದ್ಧನೋರ್ವ ನಾಪತ್ತೆಯಾಗಿರುವ ಘಟನೆ ರಾಯಬಾಗ ತಾಲೂಕಿನಲ್ಲಿ ನಡೆದಿದ್ದು, ಕುಟುಂಬಸ್ಥರಲ್ಲಿ ಆತಂಕ ಶುರುವಾಗಿದೆ. ರಾಯಬಾಗ ತಾಲೂಕಿನ ಮೇಖಳಿ ಗ್ರಾಮದ ರಾಮಪ್ಪ ತಿಪ್ಪಣ್ಣ ಭಜಂತ್ರಿ (80) ಕಾಣೆಯಾದ ವೃದ್ಧ. ರಾಮಪ್ಪ ಅವರು ಏಪ್ರಿಲ್ 28ರಂದು ಸಂಜೆ 4 ಗಂಟೆ ಸುಮಾರಿಗೆ ಸೈಕಲ್ ತೆಗೆದುಕೊಂಡು ಬೂದಿಹಾಳ ಗ್ರಾಮಕ್ಕೆ ಹೋಗಿ ಚಿಕನ್ ತರುತ್ತೇನೆ ಎಂದು ಹೇಳಿ ಹೋಗಿದ್ದರು. ರಾತ್ರಿಯಾದರೂ ಮನೆಗೆ ಮರಳಿ ಬಂದಿಲ್ಲ. ಎಲ್ಲಿದ್ದಾರೆ ಎನ್ನುವ ಸುಳಿವು ಕೂಡ …

Read More »

ಕಿತ್ತೂರು : ಜೀವ ಬೆದರಿಕೆಯೊಡ್ಡಿದ್ದ ೫ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ…..

ಕಿತ್ತೂರು : ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದ ಅನ್ನಪೂರ್ಣಾ ಅಂಗಡಿ ಅವರ ಮೇಲೆ ಸೋಮವಾರ ತಡರಾತ್ರಿ ಹಲ್ಲೆಗೆ ಯತ್ನಿಸಿ ಜೀವ ಬೆದರಿಕೆಯೊಡ್ಡಿದ್ದ ೫ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಅಬ್ದುಲ್ಲಾ ಇಮಾಮ್‌ಹುಸೇನ ಮುಜಾವ. ಸಮೀರ ಮಹಮ್ಮದ ರಫೀಕ ಮುಜಾವರ, ಸರ್ಪರಾಜ್ ಲಿಯಾಖತ್ ಮುಜಾವರ, ಸುಹೇಲ್ ಕುತುಬುದ್ದೀನ್ ಇಮಾಮನವರ ಹಾಗೂ ದಸ್ತಗೀರ ಮಕ್ತುಂಸಾಬ್ ಇಮಾಮನವರ ಬಂಧಿತ ಆರೋಪಿಗಳು. ಆರೋಪಿಗಳ ಮೇಲೆ ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ …

Read More »

ಲಾಕ್‍ಡೌನ್ ನಡುವೆ ಗ್ರಾಹಕರಿಗೆ ಕರೆಂಟ್ ಶಾಕ್ – ಹಿಂದೆ ಎಷ್ಟಿತ್ತು? ಈಗ ಎಷ್ಟು ಏರಿಕೆಯಾಗಿದೆ?

ಬೆಂಗಳೂರು: ಕೊರೊನಾ ಸಂಕಷ್ಟದ ಕಾಲದಲ್ಲಿ ಕರ್ನಾಟಕದ ಜನರಿಗೆ ರಾಜ್ಯ ಸರ್ಕಾರ ಬೇಕಾಬಿಟ್ಟಿ ವಿದ್ಯುತ್ ಬಿಲ್ ಶಾಕ್ ಕೊಟ್ಟಿದೆ. ಸರಾಸರಿ ಬಳಕೆ ಆಧಾರದ ಮೇಲೆ ವಿದ್ಯುತ್ ಸರಬರಾಜು ಕಂಪನಿಗಳು ಅವೈಜ್ಞಾನಿಕ ವಿದ್ಯುತ್ ಬಿಲ್ ವಸೂಲಿಗೆ ಇಳಿದಿವೆ. ದುರ್ಭಿಕ್ಷ ಕಾಲದಲ್ಲಿ ಅಧಿಕ ಮಾಸ ಎಂಬಂತೆ ಗ್ರಾಹಕರ ಮೇಲೆ ಬರೆ ಎಳೆಯುವ ಈ ಕ್ರಮಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಲಾಕ್‍ಡೌನ್ ಹಿನ್ನೆಲೆಯಲ್ಲಿ ವಿದ್ಯುತ್ ಸರಬರಾಜು ಕಂಪನಿಗಳು ಮಾರ್ಚ್ ತಿಂಗಳ ಬಿಲ್ ನೀಡಿರಲಿಲ್ಲ. ಮೇ ತಿಂಗಳಿನಲ್ಲಿ …

Read More »

ಕಲಬುರಗಿ: ಮೃತ 60 ವರ್ಷದ ವೃದ್ಧ ಸೇರಿ ಬುಧವಾರ ಕಲಬುರಗಿ ನಗರದಲ್ಲಿ ಇಬ್ಬರಿಗೆ ಕೊರೊನಾ ಸೋಂಕು ದೃಢ

ಕಲಬುರಗಿ: ಮೃತ 60 ವರ್ಷದ ವೃದ್ಧ ಸೇರಿ ಬುಧವಾರ ಕಲಬುರಗಿ ನಗರದಲ್ಲಿ ಇಬ್ಬರಿಗೆ ಕೊರೊನಾ ಸೋಂಕು ದೃಢವಾಗಿದೆ. ಕಲಬುರಗಿ ನಗರದ ರೋಗಿ ಸಂಖ್ಯೆ-848 ಸಂಪರ್ಕದಲ್ಲಿದ್ದ ಖೂಬಾ ಫ್ಲಾಟ್ ಪ್ರದೇಶದ 45 ವರ್ಷದ ಪುರುಷ(ರೋಗಿ-926) ಮತ್ತು ಮೋಮಿನಪುರ ಕಂಟೈನ್‍ಮೆಂಟ್ ಝೋನ್‍ನಲ್ಲಿದ್ದ 60 ವರ್ಷದ ವೃದ್ಧ(ಮೃತ ರೋಗಿ-927) ಕೊರೊನಾ ಸೋಂಕಿಗೆ ತುತ್ತಾಗಿರುವುದು ವರದಿಯಾಗಿದೆ. ಮೋಮಿನಪುರ ಕಂಟೈನ್‍ಮೆಂಟ್ ಝೋನ್‍ನ ನಿವಾಸಿ 60 ವರ್ಷದ ವೃದ್ಧ ಮೇ 11ರಂದೇ ಆಸ್ಪತ್ರೆಗೆ ಬರುವ ಮುನ್ನವೆ ನಿಧನರಾಗಿದ್ದಾರೆ. ಆದರೆ …

Read More »

ಜುಲೈ 30, 31 ರಂದು ಸಿಇಟಿ ಪರೀಕ್ಷೆ – ಸೆಪ್ಟೆಂಬರ್‌ನಲ್ಲಿ ಡಿಗ್ರಿ ಕಾಲೇಜ್ ಆರಂಭ

ಬೆಂಗಳೂರು: ಕೋವಿಡ್ 19 ಹಿನ್ನೆಲೆಯಲ್ಲಿ ಮುಂದೂಡಿಕೆಯಾಗಿದ್ದ ಸಿಇಟಿ ಪರೀಕ್ಷೆಗಳು ಜುಲೈ 30, 31ರಂದು ನಡೆಸಲು ಉನ್ನತ ಶಿಕ್ಷಣ ಇಲಾಖೆ ಮುಂದಾಗಿದೆ. ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಚಿವ ಅಶ್ವಥ್ ನಾರಾಯಣ್, ಜುಲೈ 30 ಮತ್ತು 31 ರಂದು ಸಿಇಟಿ ಪರೀಕ್ಷೆ ನಡೆಯಲಿದೆ. ಎಂದಿನಂತೆ ಆಫ್ ಲೈನ್ ನಲ್ಲಿ ಈ ಬಾರಿಯೂ ಪರೀಕ್ಷೆ ನಡೆಯಲಿದ್ದು, ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಂಡು ಪರೀಕ್ಷೆ ನಡೆಸಲು ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು. ಸಿಇಟಿ ಪರೀಕ್ಷೆ …

Read More »