Breaking News

Yearly Archives: 2020

ಪತ್ತೆಯಾಗದ ಕೊರೊನಾ ಸೋಂಕಿತ- ಶೋಧದಲ್ಲಿ 2 ರಾಜ್ಯದ ಅಧಿಕಾರಿಗಳು…………

ಕೋಲಾರ: ಕೊರೊನಾ ಸೋಂಕಿತ ತನಗೆ ಸೋಂಕು ತಗುಲಿರೋದು ದೃಢಪಡುತ್ತಿದ್ದಂತೆ ಮೊಬೈಲ್ ಸ್ವಿಚ್ ಆಫ್ ಮಾಡಿ ಎಸ್ಕೇಪ್ ಅಗಿರುವ ಘಟನೆ ಕೋಲಾರದಲ್ಲಿ ಆತಂಕಕ್ಕೆ ಕಾರಣವಾಗಿದೆ. ಕೋಲಾರದಲ್ಲಿ ಈ ಸೋಂಕಿತನಿಂದ ಸೋಂಕು ಹಬ್ಬುತ್ತಾ ಅನ್ನೋ ಆತಂಕ ಮನೆ ಮಾಡಿದೆ. ಮಂಡ್ಯ ಜಿಲ್ಲೆ ನಾಗಮಂಗಲ ಮೂಲದ ವ್ಯಕ್ತಿಯಿಂದ ಸದ್ಯ ಇಂಥಾದೊಂದು ಆತಂಕ ಎದುರಾಗಿದ್ದು, ಕೊರೊನಾ ಸೋಂಕಿತ (ರೋಗಿ-4863) ಜೂನ್ 3 ರಂದು ಆಂಧ್ರದ ತಿರುಪತಿ ತಿರುಮಲದಿಂದ ಕೋಲಾರಕ್ಕೆ ಬಂದಿದ್ದಾನೆ. ತಿರುಮಲದಲ್ಲಿ ಹೋಟೆಲ್ ಒಂದರಲ್ಲಿ ಕೆಲಸ …

Read More »

ಕೊರೊನಾ ಆರ್ಭಟಕ್ಕೆ ರಾಷ್ಟ್ರ ರಾಜಧಾನಿ ತತ್ತರ……….

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ರಣ ಕೇಕೆ ಹಾಕಿ ಆರ್ಭಟಿಸುತ್ತಿದೆ. ದಿನದಿಂದ ದಿನಕ್ಕೆ ಸರ್ಕಾರದ ಕೈ ಮೀರಿ ಸೋಂಕು ಹಬ್ಬುತ್ತಿದೆ. ಒಂದು ಕಡೆ ಆಸ್ಪತ್ರೆಯಲ್ಲಿ ಬೆಡ್ ಸಿಗುತ್ತಿಲ್ಲ. ಮತ್ತೊಂದು ಕಡೆ ಮಣ್ಣಲ್ಲಿ ಶವಗಳನ್ನು ಹೂಳಲು ಜಾಗ ಸಿಗುತ್ತಿಲ್ಲ. ಈ ನಡುವೆ ದೆಹಲಿಯಲ್ಲಿ ಕೊರೊನಾ ಸಮುದಾಯಕ್ಕೆ ಹರಡಿರುವ ಭೀತಿ ಸೃಷ್ಟಿಯಾಗಿದೆ. ದೆಹಲಿ ರಾಜಕೀಯ ವ್ಯವಸ್ಥೆಯ ಶಕ್ತಿ ಕೇಂದ್ರ. ಕೇಂದ್ರಾಡಳಿತ ಪ್ರದೇಶವಾಗಿರುವ ಈ ರಾಜ್ಯ ಈಗ ಕೊರೊನಾ ವಿಚಾರದಲ್ಲಿ ದೊಡ್ಡ ಸದ್ದು …

Read More »

ಧಾರವಾಡದಲ್ಲಿ ಎರಡೂವರೆ ವರ್ಷದ ಮಗು ಡಿಸ್ಚಾರ್ಜ್- ನಾಲ್ಕು ವರ್ಷದ ಮಗು ಸೇರಿ ನಾಲ್ವರಿಗೆ ಕೊರೊನಾ

ಧಾರವಾಡ: ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಎರಡೂವರೆ ವರ್ಷದ ಮಗು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಜಿಲ್ಲೆಯಲ್ಲಿ ನಾಲ್ಕು ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ಕುರಿತು ಜಿಲ್ಲಾಧಿಕಾರಿ ದೀಪಾ ಚೋಳನ್ ಮಾಹಿತಿ ನೀಡಿದ್ದು, 46 ವರ್ಷದ ಪುರುಷ ರೋಗಿ ನಂ.5,482, 42 ವರ್ಷದ ಮಹಿಳೆ ರೋಗಿ ನಂ.5483 ಹಾಗೂ 14 ವರ್ಷದ ಬಾಲಕ ರೋಗಿ ನಂ.5,484 ಈ ಮೂವರು ರಾಜಸ್ಥಾನದಿಂದ ಹಿಂದಿರುಗಿರುವ ಹಿನ್ನೆಲೆ ಹೊಂದಿದ್ದಾರೆ. ಇವರು ಹುಬ್ಬಳ್ಳಿ ಮಂಗಳವಾರಪೇಟೆಯ ನಿವಾಸಿಗಳಾಗಿದ್ದು, ಹೋಮ್ …

Read More »

ಪ್ರವಾಸಿಗರೇ ಗಮನಿಸಿ- ಹೊಗೆನಕಲ್ ಜಲಪಾತಕ್ಕಿಲ್ಲ ಪ್ರವೇಶ

ಚಾಮರಾಜನಗರ: ಹೊಗೆನಕಲ್ ಜಲಪಾತವನ್ನ ಪ್ರವಾಸಿಗರಿಗೆ ಮುಕ್ತ ಮಾಡಲು ಯಾವುದೇ ಆದೇಶ ಇದುವರೆಗೂ ಬಂದಿಲ್ಲ. ಆದ್ದರಿಂದ ಜಲಪಾತ ಭೇಟಿಗೆ ಪ್ರವಾಸಿಗರಿಗೆ ನಿರ್ಬಂಧ ಮುಂದುವರಿಸಲಾಗಿದೆ. ಭಾರತದ ನಯಾಗರ ಎಂದೇ ಕರೆಯುವ ಹೊಗೆನಕಲ್ ಜಲಪಾತಕ್ಕೆ ಪ್ರವಾಸಿಗರ ನಿರ್ಬಂಧ ಮುಂದುವರಿಸಲಾಗಿದೆ. ಈ ಬಗ್ಗೆ ಕಾವೇರಿ ವನ್ಯಜೀವಿ ಧಾಮದ ಡಿಎಫ್‍ಒ ಡಾ.ರಮೇಶ್ ಮಾತನಾಡಿ, ಹೊಗೆನಕಲ್ ಜಲಪಾತವನ್ನ ಪ್ರವಾಸಿಗರಿಗೆ ಮುಕ್ತ ಮಾಡಲು ಯಾವುದೇ ಆದೇಶ ಇದುವರೆಗೂ ಬಂದಿಲ್ಲ. ಹೀಗಾಗಿ ಸದ್ಯಕ್ಕೆ ಜಲಪಾತ ಭೇಟಿಗೆ ಪ್ರವಾಸಿಗರಿಗೆ ನಿರ್ಬಂಧ ಮುಂದುವರಿಸಲಾಗಿದೆ ಎಂದು …

Read More »

ಶೇ.99ರಷ್ಟು ಅನ್‍ಲಾಕ್ ಇಂಡಿಯಾ- ಧರ್ಮಸ್ಥಳ, ಕುಕ್ಕೆಯಲ್ಲಿ ದೇವರ ದರ್ಶನ

ಮಂಗಳೂರು: ಲಾಕ್‍ಡೌನ್ ಅಂತ್ಯಗೊಂಡು ಇಡೀ ರಾಜ್ಯದಲ್ಲಿ ದೇಗುಲಗಳು ಓಪನ್ ಆಗಿದೆ. ದೇಗುಲಗಳಲ್ಲಿ ಒಂದಷ್ಟು ರೂಲ್ಸ್‍ಗಳನ್ನು ಪಾಲಿಸಿಕೊಂಡು ಭಗವಂತ ದರ್ಶನ ನೀಡ್ತಿದ್ದಾನೆ. 77 ದಿನಗಳಿಂದ ಲಾಕ್‍ಡೌನ್ ಆಗಿದ್ದ ದೇಶ ಸೋಮವಾರ ಮೊದಲ ಹಂತವಾಗಿ ತೆರೆದುಕೊಂಡಿತು. ಸೋಮವಾರ ದೇವಾಲಯ, ಹೋಟೆಲ್, ಮಾಲ್, ಪ್ರವಾಸಿ ತಾಣಗಳು ಸಾರ್ವಜನಿಕರಿಗೆ ಮುಕ್ತವಾಗಿವೆ. ಬಹುತೇಕ ದೇವಾಲಯಗಳು ಬಾಗಿಲು ತೆರೆದಿದ್ದವು. ಆದರೆ ಭಕ್ತರ ಸಂಖ್ಯೆಯೇ ಕಡಿಮೆಯಿತ್ತು. ಇನ್ನು ಕೆಲವು ಕಡೆ ಜುಲೈ ಬಳಿಕ ದೇಗುಲ ತೆರೆಯಲು ನಿರ್ಧರಿಸಲಾಗಿದೆ. ನಿನ್ನೆಯಿಂದ ರಾಜ್ಯಾದ್ಯಂತ …

Read More »

“ದೇವರಾಣೆಗೂ ಜಿಲ್ಲೆಯ ಅಭಿವೃದ್ಧಿಯೇ ನನ್ನ ಮೂಲಮಂತ್ರ”

ಹಾಸನ, ಜೂ.8- ದೇವರಾಣೆ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವುದಾಗಿ ಹಾಗೂ ಯಾವುದೇ ರಾಜಕೀಯ ಮಾಡುವ ಉದ್ದೇಶವಿಲ್ಲ ಎಂದು ನೂತನ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಆಹಾರ ನಾಗರಿಕ ಮತ್ತು ವ್ಯವಹಾರಗಳ ಖಾತೆ ಸಚಿವ ಕೆ.ಗೋಪಾಲಯ್ಯ ತಿಳಿಸಿದರು. ಜಿಲ್ಲೆಯ ಚನ್ನರಾಯಪಟ್ಟಣದ ಹಿರೀಸಾವೆಯಲ್ಲಿ ಸಾಯಿಬಾಬಾ ಮಂದಿರಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಪ್ರಾಭಲ್ಯವಿರುವ ಜಿಲ್ಲಾಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಹಾಸನ ಜಿಲ್ಲಾಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. …

Read More »

ಅನಂತಕುಮಾರ್ ಕುಟುಂಬ ಕಡೆಗಣನೆ, ಬಿಜೆಪಿಯಲ್ಲಿ ಶುರುವಾಯ್ತು ಅಸಮಾಧಾನ

ಬೆಂಗಳೂರು,ಜೂ.8-ರಾಜ್ಯದಲ್ಲಿ ಬಿಜೆಪಿಯನ್ನು ತಳಮಟ್ಟದಿಂದ ಕಟ್ಟಿ ಪಕ್ಷವನ್ನು ಬೆಳೆಸಿ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ದಿ.ಅನಂತಕುಮಾರ್ ಅವರ ಕುಟುಂಬವನ್ನು ಕಡೆಗಣಿಸುತ್ತಿರುವುದಕ್ಕೆ ಪಕ್ಷದ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಹೊರತುಪಡಿಸಿದರೆ ಕರ್ನಾಟಕದಲ್ಲಿ ಬಿಜೆಪಿಯನ್ನು ನಗರಪ್ರದೇಶದಿಂದ ಹಳ್ಳಿಹಳ್ಳಿಗೂ ಕೊಂಡೊಯ್ದ ಕೀರ್ತಿ ಅನಂತ್‍ಕುಮಾರ್ ಅವರಿಗೆ ಸಲ್ಲುತ್ತದೆ. ಕಳೆದ ವರ್ಷ ಕ್ಯಾನ್ಸರ್ ಕಾಣಿಸಿಕೊಂಡು ಅನಂತ್‍ಕುಮಾರ್ ನಿಧನರಾದ ಮೇಲೆ ಅವರ ಕುಟುಂಬವನ್ನು ಸಂಪೂರ್ಣವಾಗಿ ಬಿಜೆಪಿ ನಾಯಕರು ನಿರ್ಲಕ್ಷ್ಯ ಮಾಡುತ್ತಾ …

Read More »

ಬ್ರೇಕ್ ಫೇಲ್- ಡಿಪೋದಿಂದ ಹೊರ ನುಗ್ಗಿದ ಬಸ್………..

ಬೆಂಗಳೂರು: ಬ್ರೀಕ್ ಫೇಲ್‍ನಿಂದಾಗಿ ಬಸ್‍ವೊಂದು ಡಿಪೋದಿಂದ ಹೊರ ನುಗ್ಗಿದ ಘಟನೆ ಪೂರ್ಣಪ್ರಜ್ಞ ನಗರದಲ್ಲಿ ನಡೆದಿದ್ದು, ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪೂರ್ಣಪ್ರಜ್ಞ ನಗರದ ಡಿಪೋ 33ರಲ್ಲಿ ಇಂದು ಬೆಳಗ್ಗೆ 10:45 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಸಿಬ್ಬಂದಿ ನಿಲ್ಲಿಸಿದ್ದ 2 ಬೈಕ್, ಒಂದು ಸೈಕಲ್‍ಗೆ ಜಖಂಗೊಡಿವೆ. ಬಸ್ ಏನಾದ್ರು ಇನ್ನು ಸ್ವಲ್ಪ ಮುಂದೆ ಬಂದಿದ್ದರೆ ದೊಡ್ಡ ಹಳ್ಳಕ್ಕೆ ಬೀಳುತ್ತಿತ್ತು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಡಿಪೋ 33ರ ಮ್ಯಾನೇಜರ್, ಅಪಘಾತ …

Read More »

ತೀವ್ರ ಜ್ವರ, ಗಂಟಲು ನೋವು – ಸಿಎಂ ಕೇಜ್ರಿವಾಲ್‍ಗೆ ಕೊರೊನಾ ಟೆಸ್ಟ್………..

ನವದೆಹಲಿ: ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನಾಳೆ ಬೆಳಗ್ಗೆ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಲಿದ್ದಾರೆ. ಭಾನುವಾರದಿಂದ ಕೇಜ್ರಿವಾಲ್ ಆರೋಗ್ಯದಲ್ಲಿ ಏರುಪೇರಾಗಿದ್ದು, ವೈದ್ಯರ ಸಲಹೆ ಹಿನ್ನೆಲೆ ನಾಳೆ ಕೊರೊನಾ ಪರೀಕ್ಷೆಗೆ ಒಳಗಾಗಲಿದ್ದಾರೆ. ಕೇಜ್ರಿವಾಲ್ ತೀವ್ರ ಜ್ವರ, ಗಂಟಲು ನೋವಿನಿಂದ ಬಳಲುತ್ತಿದ್ದರು. ಚಿಕಿತ್ಸೆ ಬಳಿಕವೂ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಕೊರೊನಾ ಪರೀಕ್ಷೆ ನಡೆಸಲು ತಿರ್ಮಾನಿಸಲಾಗಿದೆ.ಕೊರೊನಾ ಹೋರಾಟದ ಮುನ್ನಲೆಯಲ್ಲಿರುವ ಅರವಿಂದ ಕೇಜ್ರಿವಾಲ್, ಪ್ರತಿ ನಿತ್ಯ ಅಧಿಕಾರಗಳ ಸಭೆ ನಡೆಸುತ್ತಿದ್ದಾರೆ. ಜ್ವರ ಕಾಣಿಸಿಕೊಂಡ …

Read More »

ಕಂದನಿಗಾಗಿ ಕಾಯುತ್ತಿದ್ದ ಚಿರು, ಪತ್ನಿಗೆ ಗೊಂಬೆ ಗಿಫ್ಟ್

ಬೆಂಗಳೂರು: ಸ್ಯಾಂಡಲ್‍ವುಡ್ ನಟ ಚಿರಂಜೀವಿ ಸರ್ಜಾ ಅವರು ಅಪ್ಪನಾಗುತ್ತಿರುವ ಸಂಭ್ರಮದಲ್ಲಿದ್ದರು. ಆದರೆ ಮುದ್ದು ಕಂದ ಬರುವ ಮೊದಲೇ ಚಿರು ಇಹಲೋಕ ತ್ಯಜಿಸಿದ್ದಾರೆ. ಚಿರಂಜೀವಿ ಸರ್ಜಾ ತಮ್ಮ ಮುದ್ದು ಕಂದನ ಬರುವಿಕೆಗಾಗಿ ಕಾತುರದಿಂದ ಕಾಯುತ್ತಿದ್ದರು. ಈ ಹಿನ್ನೆಲೆಯಲ್ಲಿ ಮುದ್ದು ಮಡದಿ ಮೇಘನಾಗೆ ಒಂದು ಗೊಂಬೆಯನ್ನು ಕೂಡ ಗಿಫ್ಟಾಗಿ ನೀಡಿದ್ದರು. ಈಗ ಮೇಘನಾ ಚಿರು ಇಲ್ಲದ ಹೊತ್ತಲ್ಲಿ ಆ ಮುದ್ದಾದ ಬೊಂಬೆಯನ್ನು ನೋಡುತ್ತಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಅಲ್ಲದೇ ಜೋಕಾಲಿ ಕಟ್ಟಿ ಬೊಂಬೆಗೆ …

Read More »