Breaking News

Yearly Archives: 2020

ಕೊನೆಯ ಹೋರಾಟದಲ್ಲಿ ರಾಜ್ಯಸಭೆಗೆ ಇಬ್ಬರು ಹೋಗುವಂತಾಗಿದ್ದು ವಿಧಿಯಾಟ: ಸುಧಾಕರ್

ಬೆಂಗಳೂರು: ಜೆಡಿಎಸ್ ನಿಂದ ಹೆಚ್ ಡಿ ದೇವೇಗೌಡ ಹಾಗೂ ಕಾಂಗ್ರೆಸ್ಸಿನಿಂದ ಹಿರಿಯ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ್ ಅವರು ಹಿರಿಯ ನಾಯಕರ ಕಾಲೆಳೆದಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವರು, ಸುದೀರ್ಘವಾದ ರಾಜಕೀಯ ಬದುಕಿನ ಬಹುಷಃ ಕೊನೆಯ ಹೋರಾಟದಲ್ಲಿ, ಹಿಂಬಾಗಿಲೆನ್ನುವ ರಾಜ್ಯಸಭೆಗೆ ಹೋಗವಂತಾಗಿದ್ದು ವಿಧಿಯ ಆಟ. ಆದರೆ ಈ ಮುತ್ಸದ್ದಿಗಳ ಸೇವೆ ಹಾಗೂ ಹೋರಾಟ ಅನುಕರಣೀಯ. …

Read More »

3 ತಿಂಗಳಾದ್ರೂ ಬಾರದ 3 ಸಾವಿರ ಪ್ರೋತ್ಸಾಹ ಧನ- ಆಶಾ ಕಾರ್ಯಕರ್ತೆಯರು ಆಕ್ರೋಶ…..

ಕಲಬುರಗಿ/ಚಿತ್ರದುರ್ಗ: ಕೊರೊನಾ ಸಮಯದಲ್ಲಿ ಆಶಾ ಕಾರ್ಯಕರ್ತೆಯರು ತಮ್ಮ ಜೀವ ಪಣಕಿಟ್ಟು ಸರ್ಕಾರ ನಿರ್ವಹಿಸಿದ ಕೆಲಸ ಮಾಡಿದ್ದಾರೆ. ಹೀಗಿದ್ದರು ಸಹ ರಾಜ್ಯ ಸರ್ಕಾರ ಘೋಷಿಸಿದ್ದ ಮೂರು ಸಾವಿರ ರೂಪಾಯಿ ಪ್ರೋತ್ಸಾಹ ಹಣ ಮಾತ್ರ ನೀಡಿಲ್ಲ ಎಂದು ಆಶಾ ಕಾರ್ಯಕರ್ತೆಯರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಮಾರು 44-45 ಡಿಗ್ರಿ ಸೆಲ್ಸಿಯಸ್ ಬಿಸಿಲಿನ ತಾಪಮಾನ ಇದ್ದರೂ ಮನೆ ಮನೆಗೆ ಹೋಗಿ ಸರ್ವೇ ಮಾಡಿದ್ದೆವೆ. ಮನೆಯಲ್ಲಿದವರಿಗೇ ಕ್ವಾರಂಟೈನ್ ಹಾಗೂ ಪಾಸಿಟಿವ್ ಬಂದವರನ್ನು ಆಸ್ಪತ್ರೆಗೆ ಸಾಗಿಸುವ …

Read More »

ಮಾಲೀಕರ ಕಿರುಕುಳ- ಬೀದಿಗೆ ಬಿದ್ದ ಪಿಜಿ ನಿವಾಸಿಗಳು

ಬೆಂಗಳೂರು: ಕೊರೊನಾ ಹೆಮ್ಮಾರಿಗೆ ಇಡೀ ರಾಜ್ಯವೇ ತತ್ತರಿಸಿದೆ. ರಾಜ್ಯಕ್ಕೆ ರಾಜ್ಯವೇ ಲಾಕ್ ಡೌನ್ ನಿಂದ ಸ್ಥಬ್ಧಗೊಂಡಿತ್ತು. ಲಾಕ್ ಡೌನ್ ಸಡಿಲಿಕೆಯ ನಂತರ ಬೆಂಗಳೂರಿನಲ್ಲಿ ಪಿಜಿ ಮಾಲೀಕರು ಘರ್ಜಿಸ್ತಿದ್ದಾರೆ. ಪಿಜಿ ನಿವಾಸಿಗಳಿಗೆ ಹಣ ಪಾವತಿ ಮಾಡುವಂತೆ ಕಿರುಕುಳ ನೀಡ್ತಿದ್ದಾರೆ. ಪಿಜಿ ಮಾಲೀಕರ ಕಿರುಕುಳ ವಿರುದ್ಧ ಪಬ್ಲಿಕ್ ಟಿವಿ ಮೆಗಾ ಅಭಿಯಾನ ಶುರು ಮಾಡಿದೆ. ಹೌದು. ಕೊರೊನಾ ತಂದ ಅವಾಂತರ ಅಷ್ಟಿಷ್ಟಲ್ಲ. ಬೆಂಗಳೂರಿನ ಪಿಜಿಗಳಲ್ಲಿ ನೆಲೆಸಿದ್ದ ಯುವಕ-ಯುವತಿಯರಿಗೆ ಇದೀಗ ಸಂಕಷ್ಟ ಎದುರಾಗಿದ್ದು, ಪಿಜಿ …

Read More »

ತಮಿಳುನಾಡಿನಲ್ಲಿ ಡಿಎಂಕೆ ಶಾಸಕನನ್ನೇ ಬಲಿ ಪಡೆದ ಕಿಲ್ಲರ್ ಕೊರೊನಾ.!

ಚೆನ್ನೈ, ಜೂ.10- ಡೆಡ್ಲಿ ಕೊರೊನಾ ಸೋಂಕಿಗೆ ಡಿಎಂಕೆ ಮುಖಂಡ ಮತ್ತು ಶಾಸಕ ಜೆ. ಅನ್ಬಳಗನ್(62) ಬಲಿಯಾಗಿದ್ದಾರೆ. ಕೋವಿಡ್-19 ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿ ಚಿಂತಾಜನಕ ಸ್ಥಿತಿಯಲ್ಲಿದ್ದ ಅನ್ಬಳಗನ್ ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ ಮೃತಪಟ್ಟರು. ಮಧುಮೇಹ, ಅಕ ರಕ್ತದೊತ್ತಡ, ಹೃದ್ರೋಗ, ಮೂತ್ರಪಿಂಡ ಸಮಸ್ಯೆಗಳಿಂದ ಬಳಸುತ್ತಿದ್ದ ಅವರಿಗೆ ಕೆಲವು ದಿನಗಳ ಹಿಂದೆ ಉಸಿರಾಟದ ತೊಂದರೆ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಕೋವಿಡ್-19 ವೈರಸ್ ಇರುವುದು ದೃಢಪಟ್ಟಿತ್ತು. ಕೊರೊನಾ ಸೋಂಕು ತಗುಲಿದ …

Read More »

ರೋಗ ನಿರೋಧ ಶಕ್ತಿ ಹೆಚ್ಚಿಸುವಂತಹ ವಿಶೇಷವಾದಂತಹ ಅಕ್ಕಿಯೊಂದು ತಯಾರಾಗುತ್ತಿದೆ………

ತುಮಕೂರು: ಇಡೀ ದೇಶವೇ ಮಹಾಮಾರಿ ಕೊರೊನಾ ವೈರಸ್‍ನಿಂದ ತತ್ತರಗೊಂಡಿದೆ. ಇದುವರೆಗೂ ಕೊರೊನಾ ವೈರಸ್‍ಗೆ ಸೂಕ್ತವಾದ ಔಷಧಿ ಸಿಗಲಿಲ್ಲ. ಸದ್ಯಕ್ಕೆ ತುಮಕೂರು ಜಿಲ್ಲೆಯ ರೈಸ್ ಮಿಲ್ ಒಂದರಲ್ಲಿ ವಿಶೇಷವಾದಂತಹ ಅಕ್ಕಿಯೊಂದು ತಯಾರಾಗುತ್ತಿದೆ. ಈ ಅಕ್ಕಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತಿದೆ. ಆಯುರ್ವೇದಿಕ್ ರೈಸ್ ಎಂದು ಇದರ ಹೆಸರು. ನೈಸರ್ಗಿಕವಾದಂತಹ ವಸ್ತುಗಳನ್ನು ಈ ಅಕ್ಕಿಯಲ್ಲಿ ಬೆರೆಸಿ ತಯಾರು ಮಾಡಲಾಗುತ್ತದೆ. ಈ ರೈಸ್ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಳವಾಗಲಿದೆ ಎನ್ನಲಾಗಿದೆ. …

Read More »

ಮಹಾರಾಷ್ಟ್ರ ಕಂಟಕದಿಂದ ಯಾದಗಿರಿ ಜಿಲ್ಲೆಯ ಜನತೆ ತತ್ತರ……..

ಯಾದಗಿರಿ: ಮಹಾರಾಷ್ಟ್ರ ಕಂಟಕದಿಂದ ಜಿಲ್ಲೆಯ ಜನತೆ ತತ್ತರಿಸಿ ಹೋಗಿದ್ದು, ಈಗ ಮತ್ತೊಂದು ಆತಂಕ ಎದುರಾಗಿದೆ. ವರದಿ ಬರುವ ಮುನ್ನವೇ ಕ್ವಾರಂಟೈನ್ ಕೇಂದ್ರದಲ್ಲಿದ್ದವರನ್ನು ಮನೆಗೆ ಕಳುಹಿಸಿದ ಪರಿಣಾಮ ಯಾದಗಿರಿ ನಗರದಲ್ಲಿ ಕೊರೊನಾ ಭೀತಿ ಶುರುವಾಗಿದೆ. ಕೊರೊನಾ ಪರೀಕ್ಷೆಯ ವರದಿ ಬರುವ ಮುನ್ನವೇ ಮಹಾರಾಷ್ಟ್ರದಿಂದ ಬಂದವರನ್ನು ಮನೆಗೆ ಕಳುಹಿಸಲಾಗಿದೆ. ನಗರದ ವಿವಿಧ ವಾರ್ಡ್ ಗಳಲ್ಲಿ ಹೋಮ್ ಕ್ವಾರಂಟೈನ್ ನಲ್ಲಿದ್ದ 18 ಜನರಿಗೆ, ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ. ಸೋಂಕು ಪತ್ತೆಯಾದ 18 ಜನ …

Read More »

ಮಹಿಳಾ ಸಂಘದಲ್ಲಿ ಎರಡು ಗುಂಪುಗಳ ನಡುವೆ ಜಡೆ ಜಗಳ……

ಬೆಂಗಳೂರು: ಕೊರೊನಾ ವೈರಸ್ ನಡುವೆ ಯಾವುದೇ ಮಾಸ್ಕ್ ಇಲ್ಲದೆ, ಮಹಿಳಾ ಸಂಘದಲ್ಲಿನ ಎರಡು ಗುಂಪುಗಳ ನಡುವೆ ಜಡೆ ಜಗಳ ನಡೆದಿದ್ದು, ಮಹಿಳೆಯರು ಬೀದಿಯಲ್ಲಿ ಹೊಡೆದಾಡಿಕೊಂಡಿದ್ದಾರೆ. ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಬಾವಿಕೆರೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸಂಘದ ಅಧ್ಯಕ್ಷೆಯಿಂದ ಸದಸ್ಯ ಮಹಿಳೆ ಮೇಲೆ ಹಲ್ಲೆ ನಡೆದಿದೆ. ಸಂಘದ ಸಭೆ ಮಾಡುವ ವಿಚಾರದಲ್ಲಿ ಇಬ್ಬರೂ ಜಗಳಾಡಿಕೊಂಡಿದ್ದು, ಬೀದಿ ರಂಪಾಟ ಮಾಡಿದ್ದಾರೆ. ಗಲಾಟೆಯಲ್ಲಿ ಬೈರಮ್ಮ ಗಾಯಗೊಂಡಿದ್ದು, ಗ್ರಾಮಸ್ಥರು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ …

Read More »

ಕೊರೊನಾ ಸೋಂಕಿತರಿಗೆ ಚಿಕಿತ್ಸೆ, ಊಟ ಇಲ್ಲ- ಸೌಲಭ್ಯ ನೀಡದೇ ನಿರ್ಲಕ್ಷ್ಯ ಮಾಡಿತಾ ಬ್ರಿಮ್ಸ್?

ಬೀದರ್: ಕೋವಿಡ್ 19 ನಿರ್ವಹಣೆಗಾಗಿ ಸರ್ಕಾರ ಕೋಟಿ ಕೋಟಿ ಖರ್ಚು ಮಾಡ್ತಿದೆ. ಆದರೆ ಸೋಂಕಿತರಿಗೆ ಸರಿಯಾದ ಚಿಕಿತ್ಸೆ ಹಾಗೂ ಸೌಕರ್ಯಗಳು ಸಿಗ್ತಿದ್ಯಾ ಅನ್ನೋ ಪ್ರಶ್ನೆ ಮೂಡಲು ಗಡಿ ಜಿಲ್ಲೆಯ ಸೋಂಕಿತರ ಆಕ್ರೋಶವೇ ಕಾರಣವಾಗಿದೆ ಹೌದು. ಮುಂಬೈ ಕಂಟಕದಿಂದ ಬೀದರ್ ಜಿಲ್ಲೆಯಲ್ಲಿ ಅತಿ ಹೆಚ್ಚು ಕೇಸ್ ದಾಖಲಾಗ್ತಿದ್ದು ಸೋಂಕಿತರ ಸಂಖ್ಯೆ ತ್ರಿಶತಕದತ್ತ ಬಂದು ನಿಂತಿದೆ. ಹೀಗಿದ್ದರೂ ಬ್ರಿಮ್ಸ್ ಆಸ್ಪತ್ರೆ ಕೋವಿಡ್ ವಿಶೇಷ ವಾರ್ಡಿನಲ್ಲಿರೋ 124 ಸೋಂಕಿತರಿಗೆ ಯಾವುದೇ ಸೌಲಭ್ಯ ನೀಡದೇ ನಿರ್ಲಕ್ಷ್ಯ …

Read More »

ಆತ್ಮಹತ್ಯೆ ಮಾಡ್ಕೊಂಡ ಪತಿ,ಪತ್ನಿ , ಅನಾಥವಾದ ಇಬ್ಬರು ಮಕ್ಕಳು……

ಬೆಳಗಾವಿ: ಗಂಡ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಕೇಳುತ್ತಿದ್ದಂತೆಯೇ ಪತ್ನಿಯೂ ನೇಣಿಗೆ ಶರಣಾದ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಚಿಕ್ಕಮುನವಳ್ಳಿ ಗ್ರಾಮದಲ್ಲಿ ನಡೆದಿದೆ. ಗುರುನಾಥ್ ತಾವರೆ(45), ಹೆಂಡತಿ ಮೀನಾಕ್ಷಿ (35) ಜೋಡಿ ಇಬ್ಬರು ಮುದ್ದಾದ ಮಕ್ಕಳನ್ನ ಅನಾಥ ಮಾಡಿ ಹೋಗಿದ್ದಾರೆ. ಗುರುನಾಥ್ ಬೈಲಹೊಂಗಲ ತಾಲೂಕಿನ ಅಮಟೆ ಗ್ರಾಮದ ಪ್ರೌಢ ಶಾಲೆಯ ಶಿಕ್ಷಕರಾಗಿದ್ದು, ಹೀಗಾಗಿ ದಂಪತಿ ಬೈಲಹೊಂಗಲ ಪಟ್ಟಣಕ್ಕೆ ಬಂದು ನೆಲೆಸಿದ್ದಾರೆ. ಆಗಾಗ ಸಣ್ಣಪುಟ್ಟ ಜಗಳ ಬಿಟ್ಟರೆ ಬಡಿದಾಡಿಕೊಂಡ …

Read More »

ಅತ್ಯಾಚಾರಕ್ಕೆ ಯತ್ನ- ಆತ್ಮಹತ್ಯೆಗೆ ಶರಣಾದ ವಿಕಲಾಂಗ ಚೇತನ ಮಹಿಳೆ………….

ಗದಗ: ಅತ್ಯಾಚಾರ ಯತ್ನಕ್ಕೊಳಗಾದ ಮಹಿಳೆ ಹೆದರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ರೋಣ ತಾಲೂಕಿನಲ್ಲಿ ನಡೆದಿದೆ. ಜೂನ್ 4ರಂದು ಮಹಿಳೆ ಕುರಿ ಮೇಯಿಸಲು ಹೋಗಿದ್ದರು. ಈ ವೇಳೆ ಯಾರು ಇಲ್ಲದ ಸಂದರ್ಭದಲ್ಲಿ ಸ್ಥಳೀಯ ಬಸಪ್ಪ ಕಂಬಳಿ ಎಂಬಾತ ಅತ್ಯಾಚಾರಕ್ಕೆ ಮುಂದಾಗಿದ್ದನು ಎಂಬ ಆರೋಪ ಕೇಳಿ ಬಂದಿದೆ. ಘಟನೆಯಿಂದ ಮಾನಸಿಕವಾಗಿ ನೊಂದಿದ್ದ ಸಂತ್ರಸ್ತೆ ವಿಷ ಸೇವಿಸಿದ್ದರು. ಕೂಡಲೇ ಕುಟುಂಬಸ್ಥರು ಮಹಿಳೆಯನ್ನು ಗದಗನ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಸಾವನ್ನಪ್ಪಿ …

Read More »