Breaking News

Yearly Archives: 2020

ಬೆಂಗಳೂರಲ್ಲಿ ಲಾಕ್‍ಡೌನ್ ಮುಂದುವರಿಯುತ್ತಾ?- ಸಚಿವರಲ್ಲಿ ಗೊಂದಲವೋ, ಗೊಂದಲ

ಬೆಂಗಳೂರು: ಲಂಗು ಲಗಾಮಿಲ್ಲದೇ ಅಬ್ಬರಿಸಿ ಬೊಬ್ಬಿರಿಯುತ್ತಿರುವ ಕೊರೊನಾ ಮಾರಿ ಬೆಂಗಳೂರಲ್ಲಿ ಕಂಟ್ರೋಲ್ ಸಿಗುತ್ತಿಲ್ಲ. ಒಂದು ವಾರ ಸಾವಿರ ರೇಂಜ್‍ನಲ್ಲಿದ್ದ ಸೋಂಕು ಈಗ 2 ಸಾವಿರ ರೇಂಜ್‍ಗೆ ಬಂದಿದೆ. ಕಳೆದ ಮೂರು ದಿನಗಳಿಂದ 2 ಸಾವಿರಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗ್ತಿವೆ. ಇದನ್ನರಿತ ಸರ್ಕಾರ ಒಂದು ವಾರ ಬೆಂಗಳೂರಿಗೆ ಬೀಗ ಜಡಿದಿದೆ. ಅದರಲ್ಲಿ ಈಗ 3 ದಿನ ಕಳೆದು ಹೋಗಿದೆ. ಉಳಿದಿರೋದು ಇನ್ನೂ ನಾಲ್ಕು ದಿನ ಮಾತ್ರ. ಅಷ್ಟರಲ್ಲಿ ಕೊರೊನಾ ಕಂಟ್ರೋಲ್‍ಗೆ ಸಿಗುತ್ತಾ? …

Read More »

ಉಸಿರಾಟದ ತೊಂದರೆಯಿಂದ ನಡುರಸ್ತೆಯಲ್ಲೇ ನರಳಾಡಿದ ಕೊರೊನಾ ಶಂಕಿತ

ಗದಗ: ಕೊರೊನಾ ಶಂಕಿತ ವ್ಯಕ್ತಿಯೋರ್ವ ನಡುರಸ್ತೆಯಲ್ಲಿ ಬಿದ್ದು ನರಳಾಡುತ್ತಿರುವ ದೃಶ್ಯ ಗದಗ ನಗರದ ಬೆಟಗೇರಿ ಭಾಗದಲ್ಲಿ ಕಂಡು ಬಂದಿದೆ. ನಡುರಸ್ತೆಯಲ್ಲಿ ನರಳಾಡಿದ ವ್ಯಕ್ತಿ ನಗರದ ಕುರಹಟ್ಟಿಪೆಟೆ ನಿವಾಸಿ ಎನ್ನಲಾಗಿದೆ. ಗಂಟಲು ನೋವು, ಹೊಟ್ಟೆ ಉರಿ, ಎದೆ ಉರಿ ಎಂದು ಎದೆ ಬಡಿದುಕೊಂಡು ನರಳಾಡುತ್ತಿದ್ದರೂ ಯಾರು ಮುಟ್ಟಿಲ್ಲ. ಕೂಡಲೇ 108 ವಾಹನಕ್ಕೆ ಫೋನ್ ಮಾಡಿದರೂ ವಾಹನ ಬರಲಿಲ್ಲ. ಒಂದು ಗಂಟೆ ತಡವಾಗಿ ಬಂದಿದ್ದಕ್ಕೆ ಸ್ಥಳೀಯರು ಅಂಬುಲೆನ್ಸ್ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. …

Read More »

ಮೂಡಲಗಿ ತಾಲೂಕಿನಲ್ಲಿ ಮೊದಲ ಬಲಿ ಪಡೆದ ಕೊರೋನಾ

ಮೂಡಲಗಿ : ನಿನ್ನೆ ತಾನೇ ಮೂಡಲಗಿಗೆ ಪ್ರವೇಶಿಸಿದ ಕೊರೋನಾ ಇಂದು ಮೊದಲ ಬಲಿ ಪಡೆದು ಮೂಡಲಗಿ ಜನತೆಗೆ ಆತಂಕ ಹೆಚ್ಚಿಸುವಂತೆ ಮಾಡಿದೆ. ಹೌದು ನಿನ್ನೆ ತಾನೆ ಮೊದಲಿಗೆ ಪಟ್ಟಣದ ತಳವಾರ ಓಣಿಯಲ್ಲಿ 38 ವರ್ಷದ ಮಹಿಳೆಗೆ ಕೊರೋನಾ ದೃಢವಾಗಿತ್ತು. ಇಂದು ಆ ಮಹಿಳೆ ಮೃತಪಟ್ಟಿದ್ದು, ಮೂಡಲಗಿಯ ಸಾರ್ವಜನಿಕ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ಮಾಡಲಾಯಿತು. ಈ ಸಂದರ್ಭದಲ್ಲಿ ತಾಲೂಕಾ ದಂಡಾಧಿಕಾರಿ ಡಿ ಜಿ ಮಹಾತ್, ಪೊಲೀಸ್ ಇಲಾಖೆಯ ಸಿಪಿಐ ವೆಂಕಟೇಶ್ ಮುರನಾಳ, ಪಿಎಸ್ಐ …

Read More »

ಕಂಟೈನ್ಮೆಂಟ್ ಪ್ರದೇಶದಲ್ಲೇ ವೈನ್‍ಶಾಪ್ ಓಪನ್- ಪಾನಮತ್ತರಿಂದ ಬೇಸತ್ತ ಸ್ಥಳೀಯರು

ಗದಗ: ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಕಂಟೈನ್ಮೆಂಟ್ ಪ್ರದೇಶದಲ್ಲಿ ಎಲ್ಲವೂ ಬಂದ್ ಇದ್ದು, ವೈನ್‍ಶಾಪ್ ಮಾತ್ರ ಓಪನ್ ಮಾಡಲಾಗಿದೆ. ಗ್ರಾಮದಲ್ಲಿ ಪಾಸಿಟಿವ್ ಕೇಸ್ ಕಂಡುಬಂದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಆರೋಗ್ಯ ಇಲಾಖೆಯಿಂದ ಅನೇಕ ಏರಿಯಾಗಳನ್ನಿ ಸೀಲ್ ಡೌನ್ ಮಾಡಲಾಗಿದೆ. ಕಂಟೈನ್ಮೆಂಟ್ ಪ್ರದೇಶದಲ್ಲಿರುವ ಎಲ್ಲಾ ಅಂಗಡಿ ಮುಗ್ಗಟ್ಟುಗಳು, ಜನ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿದೆ. ಆದರೆ ಕಂಟೈನ್ಮೆಂಟ್ ಪ್ರದೇಶದಲ್ಲಿ ಪ್ರಭಾವಿಯೊಬ್ಬರ ವೈನ್‍ಶಾಪ್ ಮಾತ್ರ ಓಪನ್ ಮಾಡಿದ್ದಾರೆ. ಪಾನಮತ್ತರ ಹಾವಳಿಯಿಂದ ಸ್ಥಳೀಯರು ಬೆಸತ್ತಿದ್ದಾರೆ. …

Read More »

ಚಿಕಿತ್ಸೆ ಸಿಗದೆ ಸಾವನ್ನಪ್ಪಿದ ಮಗುವಿನ ತಂದೆ ಮುಖ್ಯಮಂತ್ರಿ ಮನೆಯ ಮುಂದೆ ಪ್ರತಿಭಟನೆ

ಬೆಂಗಳೂರು: ಕೊರೊನಾ ನಡುವೆ ಸುಮಾರು 10 ಆಸ್ಪತ್ರೆಯನ್ನು ಸುತ್ತಿದರೂ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ ಮಗುವಿನ ತಂದೆ ಮುಖ್ಯಮಂತ್ರಿ ಮನೆಯ ಮುಂದೆ ಪ್ರತಿಭಟನೆ ಮಾಡುತ್ತಿದ್ದರು. ಇದೀಗ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸಿಎಂ ಯಡಿಯೂರಪ್ಪ ಅವರ ಬೆಂಗಳೂರಿನ ಧವಳಗಿರಿ ನಿವಾಸದ ಮುಂದೆ ಮಗುವಿನ ತಂದೆ ಧರಣಿ ಕುಳಿತು ಪ್ರತಿಭಟನೆ ಮಾಡುತ್ತಿದ್ದರು. ತನಗಾದ ಅನ್ಯಾಯ ಬೇರೆಯವರಿಗೆ ಆಗದಿರಲಿ ಎಂದು ಖಾಸಗಿ ಆಸ್ಪತ್ರೆಗಳ ಮೇಲೆ ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ ಮಾಡುತ್ತಿದ್ದರು. ಜುಲೈ 11 ರಂದು …

Read More »

ಪಟ್ಟಣದ ಲಕ್ಷ್ಮಿ ನಗರದಲ್ಲಿ ಆಶಾ ಕಾರ್ಯಕರ್ತೆಯೊಬ್ಬರಿಗೆ ಕೊರೊನಾ ಸೋಂಕು ತಗಲಿದ್ದು, ಆ ಮೂಲಕ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 2 ಕ್ಕೆ ಏರಿಕೆಯಾಗಿದೆ.

ಮೂಡಲಗಿ: ಪಟ್ಟಣದ ಲಕ್ಷ್ಮಿ ನಗರದಲ್ಲಿ ಆಶಾ ಕಾರ್ಯಕರ್ತೆಯೊಬ್ಬರಿಗೆ ಕೊರೊನಾ ಸೋಂಕು ತಗಲಿದ್ದು, ಆ ಮೂಲಕ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 2 ಕ್ಕೆ ಏರಿಕೆಯಾಗಿದೆ. ಲಕ್ಷ್ಮಿ ನಗರ ನಿವಾಸಿಯಾಗಿದ್ದ ಅಂಗನವಾಡಿ ಕಾರ್ಯಕರ್ತೆಗೆ ಸೋಂಕು ಅಂಟಿದ್ದು, ಆರೋಗ್ಯ ಇಲಾಖೆಯ ಈ ಬಗ್ಗೆ ಇಂದು ಸಂಜೆ ಅಧಿಕೃತ ಪ್ರಕಟಣೆ ನೀಡಬೇಕಿದೆ. ಸೋಂಕಿತೆ ವಾಸವಿದ್ದ ನಗರವನ್ನು ಸೀಲ್ ಡೌನ್ ಮಾಡಲಾಗಿದೆ. ಪೊಲೀಸರು, ಅಂಗನವಾಡಿ ಕಾರ್ಯಕರ್ತೆಯರು, ಪುರಸಭೆ ಅಧಿಕಾರಿಗಳು ಹಾಗೂ ಆರೋಗ್ಯ ಕಾರ್ಯಕರ್ತರು ಪರಿಶ್ರಮಪಟ್ಟು ಕೊರೊನಾ ಸೋಂಕು …

Read More »

ಕರದಂಟು ನಾಡಿನಲ್ಲಿ ಕೊರೋನಾದ ಕಹಿ

  ಕರದಂಟು ನಾಡು ಗೋಕಾಕ ಮತ್ತು ಮೂಡಲಗಿ ತಾಲೂಕಿನಲ್ಲಿ ಇವತ್ತು ಒಂದೆ ದಿನ 41 ಕೊರಾನಾ ಪ್ರಕರಣಗಳು ದೃಡಪಟ್ಟಿದ್ದು ಕರದಂಟು ನಾಡಿಗೆ ಕೊರಾನಾ ಕಹಿ ನೀಡಿ ತನ್ನ ಅಟ್ಟಹಾಸ ಮೆರೆದಿದೆ ಇಂದು ಒಂದೇ ದಿನ ನಲವತ್ತು ಒಂದು ಸೋಂಕಿತರು ದೃಢಪಟ್ಟಿದ್ದಾರೆ. ನಾಲ್ವರು ವೈದ್ಯರಿಗೆ ಪಾಸಿಟಿವ್ ಕಂಡು ಬಂದಿದ್ದು, ಗೋಕಾಕ ಪಟ್ಟಣ -18, ತವಗ-9 ಕುಲಗೋಡ-1, ಬೇಡಕಿಹಾಳ-8, ಬೆಟಗೇರಿ- 1, ಮೂಡಲಗಿ- 1ತುಕ್ಕಾನಟ್ಟಿ- 1, ದೊಡವಾಡ 2 ಪ್ರಕರಣಗಳು ಪ್ರಕರಣಗಳು ದಾಖಲಾಗಿವೆ …

Read More »

ಕೊರೊನಾಇದ್ರು ಅವಳ ಮೇಲೆ ಅತ್ಯಾಚಾರ ಎಸಗಿದ ಕಾಮುಕ..

ಮುಂಬೈ: ವೈದ್ಯ ಎಂದು ಸುಳ್ಳು ಹೇಳಿ ಕ್ವಾರಂಟೈನ್ ಕೇಂದ್ರದಲ್ಲಿಯೇ ಕೊರೊನಾ ಸೋಂಕಿತೆಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ನವೀ ಮುಂಬೈನ ಪನ್ವೆಲ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, 40 ವರ್ಷದ ಮಹಿಳೆಯ ಮೇಲೆ 25 ವರ್ಷದ ಯುವಕ ಅತ್ಯಾಚಾರ ಎಸಗಿದ್ದಾನೆ. ಆರೋಪಿಯನ್ನು ಶುಬಾಮ್ ಖತು ಎಂದು ಗುರುತಿಸಲಾಗಿದೆ. ಸದ್ಯಕ್ಕೆ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.ಸಂತ್ರಸ್ತೆಗೆ ಕೊರೊನಾ ಸೋಂಕು ದೃಢವಾದ ನಂತರ ಪನ್ವೆಲ್‍ನಲ್ಲಿರುವ …

Read More »

ತಳ್ಳೋ ಗಾಡಿಯಲ್ಲಿ ಪತಿಯ ಶವವನ್ನು ಪತ್ನಿ ಸಾಗಿಸಿದ ಅಮಾನವೀಯ ಘಟನೆ

ಚಿಕ್ಕೋಡಿ: ತಳ್ಳೋ ಗಾಡಿಯಲ್ಲಿ ಪತಿಯ ಶವವನ್ನು ಪತ್ನಿ ಸಾಗಿಸಿದ ಅಮಾನವೀಯ ಘಟನೆ ಬೆಳಗಾವಿಯ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದಿದೆ. ಸದಾಶಿವ ಹಿರಟ್ಟಿ (55) ಅನಾರೋಗ್ಯದಿಂದ ಗುರುವಾರ ರಾತ್ರಿ ಸಾವನ್ನಪ್ಪಿದ್ದರು. ಅನಾರೋಗ್ಯದಿಂದ ಬಳಲಿ ತೀರಿಹೋದ ಪತಿಯ ಅಂತ್ಯ ಸಂಸ್ಕಾರಕ್ಕೆ ಕೊರೊನಾ ಭಯದಿಂದ ಯಾರು ಬರದ ಕಾರಣ ಪತ್ನಿಯೇ ತಳ್ಳೋ ಗಾಡಿಯಲ್ಲಿ ಪರಿಚಯಸ್ಥರೊಬ್ಬರ ಸಹಾಯದಿಂದ ಶವ ಸಾಗಿಸಿದ್ದಾರೆ. ಅಥಣಿ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಮುಂದೆ ಚಪ್ಪಲಿ ಹೊಲಿದುಕೊಂಡಿದ್ದ ಸದಾಶಿವ ನಿನ್ನೆ ತಡರಾತ್ರಿ ಮನೆಗೆ …

Read More »

ನಾಲ್ಕು ಬಾರಿ ಕೋವಿಡ್ ಟೆಸ್ಟ್- ಯಡಿಯೂರಪ್ಪಗೆ ಕೊರೊನಾ ನೆಗೆಟಿವ್

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮತ್ತೊಮ್ಮೆ ಕೋವಿಡ್ ಟೆಸ್ಟ್‌ಗೆ ಒಳಗಾಗಿದ್ದು, ಈ ಬಾರಿಯೂ ವರದಿಯಲ್ಲಿ ಕೊರೊನಾ ನೆಗೆಟಿವ್ ಬಂದಿದೆ. ಸಿಎಂ ನಿವಾಸ ಮತ್ತು ಕೃಷ್ಣಾದಲ್ಲಿ ಕೆಲಸ ಮಾಡುತ್ತಿದ್ದವರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಅವರು ಕೋವಿಡ್ ಟೆಸ್ಟ್ ಮಾಡಿಸಿದ್ದರು. ವರದಿಯಲ್ಲಿ ನೆಗೆಟಿವ್ ಬಂದಿದೆ. ಇದುವರೆಗೆ ಸುಮಾರು ನಾಲ್ಕು ಬಾರಿ ಸಿಎಂ ಯಡಿಯೂರಪ್ಪ ಕೋವಿಡ್ ಪರೀಕ್ಷೆ ಮಾಡಿಸಿದ್ದಾರೆ. ಈ ಎಲ್ಲಾ ಟೆಸ್ಟ್‌ಗಳಲ್ಲಿ ಸಿಎಂಗೆ ಕೊರೊನಾ ನೆಗೆಟಿವ್ ಬಂದಿದೆ. …

Read More »