ಶಿವಮೊಗ್ಗ: ಜಿಲ್ಲೆಯ ಸೊರಬ ಕ್ಷೇತ್ರದ ಶಾಸಕ ಕುಮಾರ್ ಬಂಗಾರಪ್ಪ ನಡು ರಸ್ತೆಯಲ್ಲೇ ಮಹಿಳೆಯನ್ನು ಏಕ ವಚನದಲ್ಲಿ ನಿಂದಿಸಿ ಅವಾಜ್ ಹಾಕಿರುವ ವಿಡಿಯೋ ಸಖತ್ ವೈರಲ್ ಆಗಿದೆ. ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೊರಬ ಸಾಗರ ರಸ್ತೆಯಲ್ಲಿರುವ ಸಿಮೆಂಟ್ ಅಂಗಡಿಯೊಂದರ ಮುಂದೆ ರಸ್ತೆಗೆ ವಾಹನವನ್ನು ಅಡ್ಡಲಾಗಿ ನಿಲ್ಲಿಸಲಾಗಿತ್ತು. ಇದೇ ರಸ್ತೆಯಲ್ಲಿ ಶಾಸಕರು ಸಾಗುವಾಗ ರಸ್ತೆಗೆ ವಾಹನ ಅಡ್ಡಲಾಗಿ ನಿಲ್ಲಿಸಿದ್ದಕ್ಕೆ ತಮ್ಮ ಕಾರಿನಿಂದ ಇಳಿದು, ಮೊದಲು …
Read More »Yearly Archives: 2020
ಮಕ್ಕಳ ಅಶ್ಲೀಲ ಫೋಟೋವನ್ನ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡ್ತಿದ್ದ ರೌಡಿಶೀಟರ್ ಬಂಧನ
ಬೆಂಗಳೂರು: ಮಕ್ಕಳ ಅಶ್ಲೀಲ ಚಿತ್ರಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತಿದ್ದ ರೌಡಿಶೀಟರ್‌ನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮಂಜುನಾಥ್ ಅಲಿಯಾಸ್ ಕೋಳಿ ಮಂಜ ಬಂಧಿತ ರೌಡಿಶೀಟರ್. ಆರೋಪಿ ಚಾಮರಾಜಪೇಟೆ ಮೂಲದವನಾಗಿದ್ದು, ಬೆಂಗಳೂರಿನ ಚಾಮರಾಜಪೇಟೆ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದನು. ಬಂಧಿತ ಆರೋಪಿ ಮಕ್ಕಳ ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಿ ಲೈಂಗಿಕ ಅಪರಾಧ ಮಾಡುತ್ತಿದ್ದನು. ಆರೋಪಿ ವಿರುದ್ಧ ಕ್ರಮ ಜರಗಿಸುವಂತೆ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಸಾರ್ವಜನಿಕರು ದೂರು …
Read More »ಆ.15ರಂದು ಕೊರೊನಾ ವಾರಿಯರ್ಸ್‍ಗೆ ವಿಶೇಷ ಗೌರವ………
ನವದೆಹಲಿ: ಮಹಾಮಾರಿ ಕೋವಿಡ್-19 ವಿರುದ್ಧ ಮೊದಲ ಸಾಲಿನಲ್ಲಿ ನಿಂತು ಹೋರಾಟ ನಡೆಸಿದ್ದ ಕೊರೊನಾ ವಾರಿಯರ್ಸ್‍ಗೆ ಈ ಬಾರಿಯ ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಾಚರಣೆ ಭಾಗವಹಿಸಲು ಅಹ್ವಾನ ನೀಡಲಾಗಿದ್ದು, ಆ ಮೂಲಕ ವೈದ್ಯರು, ಪೌರಕಾರ್ಮಿಕರು, ಪೊಲೀಸರು, ಇತರ ಅಧಿಕಾರಿಗಳಿಗೆ ವಿಶೇಷ ಗೌರವ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುತ್ತಿದ್ದು, ಕೋವಿಡ್ ಸಂದರ್ಭದಲ್ಲಿ ವಿಶೇಷ ಸೇವೆ ಮಾಡಿದ್ದ ವಾರಿಯರ್ಸ್‍ಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲು …
Read More »ಸಿಲಿಕಾನ್ ಸಿಟಿಯಲ್ಲಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿ ಪ್ರಾಣಬಿಟ್ಟ ಸರ್ಕಾರಿ ವೈದ್ಯ ಸಾವು
ಬೆಂಗಳೂರು: ಕೋವಿಡ್ 19 ವರದಿ ಇಲ್ಲದೆ ಮೂರು ಖಾಸಗಿ ಆಸ್ಪತ್ರೆಗಳು ದಾಖಲಿಸಿಕೊಳ್ಳಲು ನಿರಾಕರಿಸಿದ ಪರಿಣಾಮ ಸರ್ಕಾರಿ ವೈದರೊಬ್ಬರು ಮೃತಪಟ್ಟ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಹೌದು. ಮೃತ ದುರ್ದೈವಿಯನ್ನು ಡಾ. ಮಂಜುನಾಥ್ ಎಂದು ಗುರುತಿಸಲಾಗಿದೆ. ಇವರು ಕೋವಿಡ್ 19 ವಾರಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ಅನಾರೋಗ್ಯ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಇವರನ್ನು ದಾಖಲಿಸಿಕೊಳ್ಳಲು ಆಸ್ಪತ್ರೆಗಳು ನಿರಾಕರಿಸಿದವು. ಮಂಜುನಾಥ್ ಅವರು ರಾಮನಗರ ಜಿಲ್ಲೆಯಲ್ಲಿರುವ ರಾಜ್ಯ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ …
Read More »ವರುಣನ ಆರ್ಭಟಕ್ಕೆ ಹತ್ತಿ ಬೆಳೆ ನಾಶ
ವಡಗೇರಾ ತಾಲೂಕಿನ ಹಾಲಗೇರಾ ಗ್ರಾಮದ ಮಲ್ಲಪ್ಪ ಕಲ್ಮನಿ 7ಎಕರೆ ಜಮೀನು ಮಳೆಯಿಂದ ಜಲಾವೃತಗೊಂಡಿದೆ ವಡಗೇರಾ : ತಾಲೂಕಾದ್ಯಂತ ಗುರುವಾರ ಬೆಳಗಿನ ಜಾವ ಸುರಿದ ಅತಿಹೆಚ್ಚು 73.ಮಿ.ಮೀ.ಪುಷ್ಯ ಮಳೆಯಾಗಿದ್ದು ಮಳೆಯಿಂದಾಗಿ ರಸ್ತೆಗಳು ಕೆಸರು ಗದ್ದೆಯಂತಾಗಿವೆ ವಾಹನ ಸವಾರರ ಪರದಾಟ ಹೇಳತೀರದು ಕಳೆದ ಎರಡು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ರೈತರ ಬದುಕು ಅಕ್ಷರಶಃ ಕಣ್ಣಿರಲ್ಲಿ ಕೈ ತೊಳೆಯುವಂತಾಗಿದೆ ಕೊರೋನಾ ವೈರಸ್ ಸಾಂಕ್ರಾಮಿಕ ರೋಗ ರಾಜ್ಯದಲ್ಲಿ ಮುಂದುವರಿದಿದ್ದು ಇನ್ನೊಂದೆಡೆ ಮಳೆಯ ಅಬ್ಬರ ನಡುವೆ …
Read More »2019ರಲ್ಲಿ ನೀವು ಮಂಗಳ ಗ್ರಹದಲ್ಲಿ ಇದ್ರಾ: ಅಶೋಕ್‍ಗೆ ಸಿದ್ದು ಪ್ರಶ್ನೆ…..
ಬೆಂಗಳೂರು: 2019ರಲ್ಲಿ ಅಕ್ರಮವಾಗಿದ್ದರೆ ಆಗ ನೀವು ಮಂಗಳ ಗ್ರಹದಲ್ಲಿ ಇದ್ರಾ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಆರ್ ಅಶೋಕ್‍ಗೆ ಮರು ಪ್ರಶ್ನೆ ಹಾಕಿದ್ದಾರೆ. ಬಿಜೆಪಿ ಸರ್ಕಾರ 2 ಸಾವಿರ ಕೋಟಿ ರೂ. ಅಕ್ರಮ ಎಸಗಿದೆ ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಪ ಭಾರೀ ಚರ್ಚೆಗೀಡಾಗಿದೆ. ಮಾಜಿ ಸಿಎಂ ಆರೋಪಕ್ಕೆ ಸಚಿವ ಆರ್ ಅಶೋಕ್ ಪ್ರತಿಕ್ರಿಯಿಸಿ, 2019ರಲ್ಲಿ ಚಂದ್ರಲೋಕದಿಂದ ವೆಂಟಿಲೇಟರ್ ಬಂದಿತ್ತಾ ಎಂದು ಕಾಂಗ್ರೆಸ್ ಆರೋಪಕ್ಕೆ ತಿರುಗೇಟು …
Read More »ಇಂದು ಮುಂದುವರೆದ ಕೊರೋನಾ ದಾಳಿ ಮತ್ತೆ 214 ಸೊಂಕಿತರ ಪತ್ತೆ.
ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಮಹಾಮಾರಿಯ ಭೀತಿಗೆ ಸಾರ್ವಜನಿಕರು ಬೆಚ್ಚಿ ಬಿದ್ದಿದ್ದಾರೆ.ಇಂದು ಗುರುವಾರವೂ ಮಹಾಮಾರಿಯ ದಾಳಿ ಮುಂದುವರೆದಿದ್ದು, ಇಂದಿನ ರಾಜ್ಯ ಹೆಲ್ತ್ ಬುಲಿಟೀನ್ ನಲ್ಲಿ ಬೆಳಗಾವಿ ಜಿಲ್ಲೆಯ ವಿವಿಧ ತಾಲ್ಲೂಕುಗಳ 214 ಜನರಿಗೆ ಸೊಂಕು ದೃಡವಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಇಂದು 214 ಜನರಿಗೆ ಸೊಂಕು ತಗಲಿದ್ದು ಇಂದು ಒಂದೇ ದಿನ,ಕಿಲ್ಲರ್ ಕೊರೋನಾ ವೈರಸ್ ಗೆ 4 ಜನ ಬಲಿಯಾಗಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಇವತ್ತಿನವರೆಗೆ ಸೊಂಕಿತರ ಸಂಖ್ಯೆ 1529 ಕ್ಕೇರಿದೆ ಬೆಳಗಾವಿ ಜಿಲ್ಲೆಯಲ್ಲಿ …
Read More »ಬಸವ ಭೀಮ ಸೇನೆಯಿಂದ ಹಿರಿಯ ಪತ್ರಕರ್ತ ಮುನ್ನಾ ಬಾಗವಾನ್ ರಿಗೆ ಸನ್ಮಾನ
ಬೆಳಗಾವಿ: ಬಸವ ಪಂಚಮಿ ಹಿನ್ನೆಲೆಯಲ್ಲಿ ಬಸವ ಭೀಮ ಸೇನೆ ಸಂಸ್ಥಾಪಕ ಆರ್.ಎಸ್.ದರ್ಗೆಅವರು ಹಿರಿಯ ಪತ್ರಕರ್ತ ಮುನ್ನಾ ಬಾಗವಾನ್ ರಿಗೆ ಮಾನವ ಬಂಧುತ್ವ ವೇದಿಕೆ ಕೇಂದ್ರ ಕಚೇರಿಯಲ್ಲಿ ಗುರುವಾರ ಸನ್ಮಾನಿಸಿದರು. ಬಸವ ಪಂಚಮಿಯ ಅಂಗವಾಗಿ ಬಸವ ಭೀಮ ಸೇನೆಯ ಜುಲೈ 27 ರವರೆಗೆ ಹಮ್ಮಿಕೊಂಡಿರುವ ನಮ್ಮ ನಡೆ ನಮ್ಮ ಸಮುದಾಯಗಳ ಕಡೆ ಎಂಬ ಅಭಿಯಾನದ ಅಂಗವಾಗಿ ಗೌರವಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಹಿರಿಯ ಪತ್ರಕರ್ತ ಮುನ್ನಾ ಬಾಗವಾನ್ , ಕಳೆದ …
Read More »ಕೊರೋನಾ ಸೋಂಕಿನಿಂದ ಹೊರಬಂದ 109 ಪೊಲೀಸ್ ಸಿಬ್ಬಂದಿ ಕರ್ತವ್ಯಕ್ಕೆ ಹಾಜರು
ಬೆಂಗಳೂರು,ಜು.23- ಕೊರೊನಾ ಸೋಂಕಿಗೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿರುವ ಬೆಂಗಳೂರು ನಗರದ 109 ಪೊಲೀಸ್ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ ಎಂದು ಆಡಳಿತ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ತಿಳಿಸಿದ್ದಾರೆ. ಕೊರೊನಾ ವಾರಿಯರ್ಸ್‍ಗಳಾಗಿ ವಿವಿಧ ಸ್ಥಳಗಳಲ್ಲಿ ಇವರು ಕರ್ತವ್ಯ ನಿರ್ವಹಿಸುತ್ತಿದ್ದಾಗ ಸೋಂಕು ತಗುಲಿತ್ತು. ತಕ್ಷಣ ಇವರು ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ತೆರಳಿದ್ದರು. ಇದೀಗ ಗುಣಮುಖರಾದ 109 ಪೊಲೀಸ್ ಸಿಬ್ಬಂದಿ ಮಾಸ್ಕ್ ಧರಿಸಿ, ಸಾಮಾಜಿಕ …
Read More »ಟ್ರ್ಯಾಕ್‌ಗೆ ಇಳಿಯಲಿರುವ ಭಾರತದ ಮೊದಲ ಅಥ್ಲೀಟ್ ಶ್ರಬನಿ
ಕಿಂಗ್ಸ್‌ಟನ್: ಭಾರತದ ಅಗ್ರಶ್ರೇಯಾಂಕದ ಓಟಗಾರ್ತಿ ಶ್ರಬನಿ ನಂದಾ ಅವರು ಜಮೈಕಾದಲ್ಲಿ ನಡೆದ ಕ್ರೀಡಾಕೂಟದಲ್ಲಿ ಸ್ಪರ್ಧಿಸಿದ್ದಾರೆ. ಆ ಮೂಲಕ ಕೊರೊನಾ ಕಾಲದಲ್ಲಿ ಟ್ರ್ಯಾಕ್ ಮತ್ತು ಫೀಲ್ಡ್‌ಗೆ ಇಳಿದ ಭಾರತದ ಮೊದಲ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹೋದ ಭಾನುವಾರ ಜಮೈಕಾದಲ್ಲಿ ನಡೆದಿದ್ದ ವೆಲಾಸಿಟಿ ಉತ್ಸವದ 100 ಮೀಟರ್ ಓಟದಲ್ಲಿ ನಂದಾ ಸ್ಪರ್ಧಿಸಿದ್ದರು. ಅವರು ಆ ಕೂಟದಲ್ಲಿ ಎಂವಿಪಿ ಟ್ರ್ಯಾಕ್ ಕ್ಲಬ್ ಅನ್ನು ಪ್ರತಿನಿಧಿಸಿದ್ದರು. ಎರಡು ಹೀಟ್ಸ್‌ಗಳಲ್ಲಿ 11.78 ಸೆಕೆಂಡುಗಳಲ್ಲಿ ಗುರಿ ಮುಟ್ಟಿ, ಮೂರನೇ …
Read More »