Breaking News

Yearly Archives: 2020

ಕರಾಚಿಯಲ್ಲೇ ಇದ್ದಾನೆ ದಾವೂದ್ ಇಬ್ರಾಹಿಂ, ವಿಶ್ವಸಂಸ್ಥೆಗೆ 88 ಉಗ್ರರ ಅಡ್ರಸ್ ಕೊಟ್ಟು ಪಾಕಿಸ್ತಾನ್ ನಾಟಕ

ಭಾರತಕ್ಕೆ ಸದಾ ಹೊರೆಯಾಗಿರೋ ನೆರೆ ರಾಷ್ಟ್ರ ಅಂದ್ರೆ ಅದು ಪಾಕಿಸ್ತಾನ. ಭಾರತಕ್ಕೆ ಕಿರುಕುಳ ನೀಡೋದ್ರಲ್ಲಿ ಸದಾ ಮುಂದಿರೋ ಪಾಪಿ ಪಾಕಿಸ್ತಾನ ಜಗತ್ತಿನ ಮುಂದೆ ಮತ್ತೊಮ್ಮೆ ಬೆತ್ತಲಾಗಿದೆ. ಈ ಮೂಲಕ ತನ್ನ ನರಿಬುದ್ಧಿಯನ್ನ ವಿಶ್ವದ ಎದುರು ಬಯಲಾಗಿದೆ. ಭಾರತಕ್ಕೆ ಬೇಕಿರೋ ಮೋಸ್ಟ್ ವಾಂಟೆಂಡ್ ಕ್ರಿಮಿನಲ್​ಗಳಿಗೆ ಪಾಕಿಸ್ತಾನದ ನೆಲದಲ್ಲಿ ಜಾಗ ನೀಡಿರುವುದನ್ನ ಒಪ್ಪಿಕೊಂಡಿದೆ ಅಂತಾ ಪಾಕಿಸ್ತಾನದಿಂದ್ಲೇ ವರದಿ ಹೊರಬಿದ್ದಿದೆ. ದಾವೂದ್ ತನ್ನ ನೆಲದಲ್ಲಿರೋದಾಗಿ ಒಪ್ಪಿಕೊಂಡಿತಾ ಪಾಕ್? ಪಾಕಿಸ್ತಾನದ ಸ್ಥಳೀಯ ಮಾಧ್ಯಮದ ವರದಿಯನ್ನ ಆಧರಿಸಿ, …

Read More »

ಆರೋಗ್ಯಾಧಿಕಾರಿಗಳ ಚಿಕಿತ್ಸಾ ವೆಚ್ಚ ಸರ್ಕಾರ ಭರಿಸಲಿದೆ: ಸಚಿವ ಸಿ.ಸಿ ಪಾಟೀಲ

ಗದಗ: ಮುಂಡರಗಿ ತಾಲ್ಲೂಕು ವೈದ್ಯಾಧಿಕಾರಿಗೆ ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಬೆಂಗಳೂರಿನ ಸ್ಪರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಚಿಕಿತ್ಸೆಯ ವೆಚ್ಚವನ್ನು ಸರ್ಕಾರವು ಭರಿಸಲಿದೆ ಎಂದು ಗದಗ ಜಿಲ್ಲೆ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ತಿಳಿಸಿದ್ದಾರೆ. ಈ ಕುರಿತು ಸಚಿವರು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಜಾವಿದ್ ಅಕ್ತರ್ ಅವರೊಂದಿಗೆ ಮಾತನಾಡಿದ್ದು, ಅವರು ಸ್ಪರ್ಶ ಆಸ್ಪತ್ರೆಯ ಮುಖ್ಯಸ್ಥರೊಂದಿಗೆ ಈಗಾಗಲೇ ಮಾತನಾಡಿದ್ದು, ಸರ್ಕಾರವು ಚಿಕಿತ್ಸೆ ವೆಚ್ಚ ಪಾವತಿಸಲಿದೆ. ಸರ್ಕಾರವು ಕೊರೊನಾ ವಾರಿಯರ್ಸ್ ಜೊತೆಗೆ ಇರಲಿದೆ ಎಂದು …

Read More »

ಮೈಸೂರಿನಲ್ಲಿ ನಡೆಯುತ್ತಿರುವ ವೈದ್ಯರ ಪ್ರತಿಭಟನೆ ವಿರುದ್ಧ ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ್ ಆಕ್ರೋಶ ಹೊರಹಾಕಿದ್ದಾರೆ

ಬೆಂಗಳೂರು: ಮೈಸೂರಿನಲ್ಲಿ ನಡೆಯುತ್ತಿರುವ ವೈದ್ಯರ ಪ್ರತಿಭಟನೆ ವಿರುದ್ಧ ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ್ ಆಕ್ರೋಶ ಹೊರಹಾಕಿ, ಪ್ರತಿಭಟನೆ ಮಾಡುವವರು ಇಷ್ಟವಿದ್ದರೆ ಕೆಲಸ ಮಾಡಲಿ, ಇಲ್ಲದಿದ್ದರೆ ಅವರ ದಾರಿ ನೋಡಿಕೊಳ್ಳಲಿ ಎಂದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾರ್ಯದ ಒತ್ತಡ ಸ್ವೀಕಾರ ಮಾಡಿ ಕೆಲಸ ಮಾಡುವವರು ಸರ್ಕಾರದಲ್ಲಿರಬೇಕು. ಇಲ್ಲದಿದ್ದರೆ ಖಾಸಗಿ ಆಸ್ಪತ್ರೆಯಲ್ಲಿ ಕೆಲಸಮಾಡಲಿ ಎಂದರು ಗರಂ ಆದರು ಪ್ರತಿಭಟನೆ ಕರೆ ಕೊಟ್ಟವರಿಗೆ ಗಣೇಶ ಹಬ್ಬದ ದಿನ ಆ ದೇವರು ಸದ್ಬುದ್ಧಿ ಕೊಡಲೆಂದು …

Read More »

ರಾಜ್ಯದ ಇಬ್ಬರು ಕೈ ನಾಯಕರಿಗೆ `AICC’ಯಲ್ಲಿ ಉನ್ನತ ಹುದ್ದೆ?

ನವದೆಹಲಿ : ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕದ ಇಬ್ಬರು ಕಾಂಗ್ರೆಸ್ ನಾಯಕರಿಗೆ ಎಐಸಿಸಿಯಲ್ಲಿ ಉನ್ನತ ಹುದ್ದೆ ನೀಡಲು ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ. ರಾಜ್ಯ ಕಾಂಗ್ರೆಸ್ ನಾಯಕರಾದ ಕೆ.ಹೆಚ್. ಮುನಿಯಪ್ಪ ಹಾಗೂ ಹೆಚ್.ಕೆ.ಪಾಟೀಲ್ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಎಐಸಿಸಿಯಲ್ಲಿ ಉನ್ನತ ಹುದ್ದೆ ನೀಡಲು ಮುಂದಾಗಿದೆ ಎನ್ನಲಾಗಿದ್ದು, ಹೆಚ್.ಕೆ.ಪಾಟೀಲ್ ಅವರಿಗೆ ಸಿಡಬ್ಲ್ಯೂಸಿಯಲ್ಲಿ ಸ್ಥಾನ ನೀಡುವ ಸಾಧ್ಯತೆ ಇದ್ದು, ಕೆ.ಹೆಚ್. ಮುನಿಯಪ್ಪ ಅವರಿಗೆ ಎಸ್ಸಿ ವಿಭಾಗದ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ಸಿಗುವ ಸಾಧ್ಯತೆ ಇದೆ …

Read More »

ಸಿಲಿಕಾನ್ ಸಿಟಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಇದೀಗ ಮತ್ತೊಬ್ಬ ಮುಸ್ಲಿಂ ಮುಖಂಡ ಮೃತಪಟ್ಟವರ ಬೆನ್ನಿಗೆ ನಿಂತಿದ್ದಾರೆ.

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಇದೀಗ ಮತ್ತೊಬ್ಬ ಮುಸ್ಲಿಂ ಮುಖಂಡ ಮೃತಪಟ್ಟವರ ಬೆನ್ನಿಗೆ ನಿಂತಿದ್ದಾರೆ. ಹೌದು. ಪಾದರಾಯನಪುರ ಪಾಲಿಕೆ ಸದಸ್ಯ ಇಮ್ರಾನ್ ಪಾಷಾ ಗೋಲಿಬಾರ್ ನಲ್ಲಿ ಸತ್ತವರಿಗೆ ಎರಡು ಲಕ್ಷ ಘೋಷಣೆ ಮಾಡಿದ್ದಾರೆ. ಈ ಕುರಿತು ಫೇಸ್ ಬುಕ್‍ನಲ್ಲಿ ಬರೆದುಕೊಂಡಿರುವ ಇಮ್ರಾನ್ ಪಾಷಾ, ಮೃತರಿಗೆ 2 ಲಕ್ಷ ಸಹಾಯ ಮಾಡುವುದಾಗಿ ಹೇಳಿದ್ದಾರೆ. ಈ ಹಿಂದೆ ಶಾಸಕ ಜಮೀರ್ ಗೋಲಿಬಾರ್ ನಲ್ಲಿ ಸತ್ತವರಿಗೆ 5 ಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ …

Read More »

ಮೂರು ಗಂಡು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ……….

ಯಾದಗಿರಿ: ಎಷ್ಟೋ ಜನ ಒಂದು ಮಗು ಆಗಲಿ ಅಂತ ಹತ್ತಾರು ದೇವರಿಗೆ ವರ ಬೇಡಿಕೊಳ್ಳತಾರೆ. ಇದರಲ್ಲಿ ಕೆಲವರಿಗೆ ದೇವರು ವರ ಕೊಟ್ಟ್ರೆ, ಇನ್ನೂ ಕೆಲವರಿಗೆ ಕೊನೆಯವರೆಗೂ ಮಕ್ಕಳ ಭಾಗ್ಯ ಕರುಣಿಸುವುದಿಲ್ಲ. ಆದರೆ ಇಲ್ಲೊಬ್ಬಳು ಮಹಾ ತಾಯಿ ಏಕಕಾಲದಲ್ಲಿ ಮೂರು ಗಂಡು ಮಕ್ಕಳಿಗೆ ಜನ್ಮ ನೀಡಿ ಸುದ್ದಿಯಲ್ಲಿದ್ದಾಳೆ ಅದು ಮೊದಲನೆಯ ಹೆರಿಗೆಯಾಗಿ ಬರೊಬ್ಬರಿ 8 ವರ್ಷದ ಬಳಿಕ ಮೂರು ಗಂಡು ಮಕ್ಕಳಿಗೆ ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ಜನ್ಮ ನೀಡಿದ್ದಾರೆ. ಜಿಲ್ಲೆಯ ರಾಮಸಮುದ್ರದ ನಿವಾಸಿಯಾಗಿರುವ …

Read More »

ಚತುರ್ಥಿ ಹಬ್ಬದಂದುಉಡುಪಿ ಡಿಸಿಐಬಿ ಪೊಲೀಸರು ಭರ್ಜರಿ ಬೇಟೆ

ಉಡುಪಿ: ಗಣೇಶ ಚತುರ್ಥಿ ಹಬ್ಬದಂದು ಕಡುಬು ತಿಂದು ವಿರಮಿಸದೆ, ಉಡುಪಿ ಡಿಸಿಐಬಿ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ.ಉತ್ತರಪ್ರದೇಶ ರೆಜಿಸ್ಟ್ರೇಷನ್ ಲಾರಿಯಲ್ಲಿ ಕರಾವಳಿಗೆ ಬರುತ್ತಿದ್ದ ಅಪಾರ ಪ್ರಮಾಣದ ಗಾಂಜಾ ವಶಪಡಿಸಿದ್ದಾರೆ. ಬ್ರಹ್ಮಾವರ ತಾಲೂಕು ಹೇರೂರು ಗ್ರಾಮದ ಬಳಿ ಡಿಸಿಐಬಿ ಪೊಲೀಸರು ವಾಹನಗಳ ತಪಾಸಣೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಉತ್ತರಪ್ರದೇಶ ರಿಜಿಸ್ಟ್ರೇಷನ್ ಲಾರಿ ಬಂದಿದೆ. ಕಂಟೇನರ್ ಲಾರಿ ತಪಾಸಣೆ ನಡೆಸಿದ ಸಂದರ್ಭದಲ್ಲಿ ಬಿದಿರಿನ ಕೋಲುಗಳು ಸಿಕ್ಕಿದೆ. ಕಂಟೇನರ್ ನಲ್ಲಿ ಬಿದಿರಾ ಅಂತ ಸಂಶಯಗೊಂಡ ಪೊಲೀಸರು …

Read More »

ಕಿಮ್ಸ್ ಆಸ್ಪತ್ರೆಯಲ್ಲಿ ಮತ್ತೊಂದು ಎಡವಟ್ಟು- ಬೀದಿಯಲ್ಲಿ ಶವ ಇಟ್ಟ ಸಿಬ್ಬಂದಿ

ಹುಬ್ಬಳ್ಳಿ: ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಶತಾಯು ಗತಾಯು ಹೋರಾಟ ನಡೆಸಿರುವ ಕಿಮ್ಸ್ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದು, ಕೋವಿಡ್‍ನಿಂದ ಮೃತಪಟ್ಟಿರುವ ವ್ಯಕ್ತಿ ಶವವನ್ನು ಪ್ಯಾಕ್ ಮಾಡಿ ಆಸ್ಪತ್ರೆಯ ಅಂಗಳದ ಬೀದಿಯಲ್ಲೆ ಬಿಟ್ಟು ಅಮಾನವೀಯತೆ ಪ್ರದರ್ಶನ ಮಾಡಿದ್ದಾರೆ. ಹೌದು ಕೊರೊನಾ ವೈರಸ್ ಎಲ್ಲೆಡೆಯೂ ಆತಂಕದ ವಾತಾವರಣ ಸೃಷ್ಟಿಸಿದ್ದು, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಕಿಮ್ಸ್ ಸಿಬ್ಬಂದಿ ಕೊವೀಡ್‍ನಿಂದ ಮೃತಪಟ್ಟಿರುವ ವ್ಯಕ್ತಿ ಶವವನ್ನು ಕಿಮ್ಸ್ ಮಲ್ಟಿಸ್ಪೆಷಾಲಿಟಿ ಕಟ್ಟಡ ಎದುರು ಪ್ಯಾಕ್ ಮಾಡಿ ಸ್ಟ್ರೆಚರ್ ಮೇಲೆ …

Read More »

ಹಬ್ಬದ ಸಂಭ್ರಮದ ಮಧ್ಯೆ ಊರಿನ ಹೊರಭಾಗದಲ್ಲಿ ಪತ್ತೆಯಾದ ಬ್ಯಾಗ್​ ತೆರೆದ ಗ್ರಾಮಸ್ಥರಿಗೆ ಶಾಕ್​!​

ಕಲಬುರಗಿ: ಮಹಾಮಾರಿ ಕರೊನಾ ವೈರಸ್​ ಭೀತಿಯ ನಡುವೆಯೂ ರಾಜ್ಯದೆಲ್ಲಡೆ ಗೌರಿ-ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿರುವ ಸಮಯದಲ್ಲೇ ಕಲಬುರಗಿಯಲ್ಲಿ ನಡೆದಿರುವ ಅಮಾನವೀಯ ಘಟನೆಯೊಂದು ಕೋವಿಡ್​ಗಿಂತಲೂ ಕ್ರೂರಿ ಎಂಬುದನ್ನು ನಿರೂಪಿಸಿದೆ. ಬಹುತೇಕರು ನಮಗೆ ಮಕ್ಕಳಾಗಿಲ್ಲವಲ್ಲ ಎಂದು ದಿನನಿತ್ಯ ಕೊರಗುತ್ತಿರುತ್ತಾರೆ. ಗಂಡಾಗಲಿ ಅಥವಾ ಹೆಣ್ಣಾಗಲಿ ನಮಗೊಂದು ಮಗು ಕರುಣಿಸಪ್ಪಾ ಎಂದು ದೇವರಲ್ಲಿ ಪ್ರಾರ್ಥಿಕೊಳ್ಳುವವರಿಗೇನು ಕಡಿಮೆಯಿಲ್ಲ. ಆದರೆ, ಇವೆಲ್ಲದರ ನಡುವೆ ಮಗು ಜನಿಸಿದರು ಅದು ಬೇಡವೆಂದು ರಸ್ತೆಯಲ್ಲಿ ಅನಾಥವಾಗಿ ಎಸೆದು ಹೋಗುವವರನ್ನು ಎಷ್ಟು ಬೈದರು ಕಡಿಮೆಯೇ. …

Read More »

ಕೊರೊನಾ ಬುಲೆಟಿನ್ : ‘ಗಣೇಶ ಚತುರ್ಥಿ’ ದಿನದಂದೇ ರಾಜ್ಯದಲ್ಲಿ 7330 ಮಂದಿಗೆ ಸೋಂಕು ಧೃಡ, 93 ಬಲಿ

ಬೆಂಗಳೂರು : ಗೌರಿ ಗಣೇಶ ಹಬ್ಬದ ದಿನ ಕೂಡ ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮೆರೆದಿದೆ.ರಾಜ್ಯದಲ್ಲಿ ಇಂದು 7330 ಜನರಿಗೆ ಕೊರೊನಾ ಸೋಂಕು ತಗುಲಿದೆ. ಹೌದು, ರಾಜ್ಯದಲ್ಲಿ ಇಂದು 7330 ಜನರಿಗೆ ಕೋವಿಡ್ ಸೋಂಕು ತಗುಲಿದ್ದು, ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2,71,876 ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 93 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದು. ಒಟ್ಟಾರೆ ಸಾವಿನ ಸಂಖ್ಯೆ 4615 ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಕಳೆದ 24 …

Read More »