ಬಹುಭಾಷಾ ನಟ ಸೋನು ಸೂದ್ ಯಾರಿಗೆ ಗೊತ್ತಿಲ್ಲ ಹೇಳಿ. ತಮ್ಮ ನಟನೆಯಿಂದ ಜನರ ಮನ ಗೆದ್ದರೆ. ತಮ್ಮ ಲೋಕೋಪಕಾರಿ ಕಾರ್ಯಗಳಿಂದ ಜನರ ಮನಸಲ್ಲಿ ಮನೆ ಮಾಡಿದ್ದಾರೆ. ಸದಾ ತಮ್ಮಿಂದಾಗುವ ಸಹಾಯಗಳನ್ನು, ಉಪಕಾರಗಳನ್ನು ಮಾಡುತ್ತ ಸೃಜನಶೀಲ ಹಾಗೂ ಒಳ್ಳೆಯ ವ್ಯಕ್ತಿತ್ಯ ಹೊಂದಿರೋ ಸೋನು ಸೂದ್ ಒಬ್ಬ ರಿಯಲ್ ಹೀರೋ. ಈಗ ಇವರ ಈ ನಿಸ್ವಾರ್ಥ ಸೇವೆ ಗಮನಿಸಿ ವಿಶ್ವಸಂಸ್ಥೆ ಸೋನು ಸೂದ್ಗೆ ಎಸ್ಡಿಜಿ ಪ್ರಶಸ್ತಿ ನೀಡುವ ಮೂಲಕ ಗೌರವಿಸಿದೆ. ಕೊರೊನಾ ಲಾಕ್ಡೌನ್ …
Read More »Yearly Archives: 2020
ಗೋಕಾಕ: ಇಲ್ಲಿನಸ್ಪಂದನಾ ಮೈಕ್ರೋ ಫೈನಾನ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯೊಬ್ಬ 2 ಲಕ್ಷ ಹಣ ದೋಚಿಕೊಂಡುಪರಾರಿ
ಗೋಕಾಕ: ಇಲ್ಲಿನ ಸ್ಪಂದನಾ ಮೈಕ್ರೋ ಫೈನಾನ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯೊಬ್ಬ 2 ಲಕ್ಷ ಹಣ ದೋಚಿಕೊಂಡು ಹೋಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಸ್ಪಂದನಾ ಫೈನಾನ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ರಾಮದುರ್ಗ ಮೂಲದ ಪಕೀರಪ್ಪಾ ಕುರಿ, ಹಣದೊಂದಿಗೆ ಪರಾರಿಯಾದ ಆರೋಪಿ. ಕೊಣ್ಣೂರಲ್ಲಿನ ಇಪ್ಪತೈದು ಗ್ರಾಹಕರಿಂದ ತಿಂಗಳಿಗೊಮ್ಮೆ ತುಂಬುವ ಹಣವನ್ನು ಎಗಿಸಿದ್ದಾನೆ. ಫೈನಾನ್ಸ್ ನಿಂದ ಸಾಲ ಪಡೆದ ಗ್ರಾಹಕರು ಪ್ರತಿ ತಿಂಗಳು ಕಚೇರಿಗೆ ಬಂದು ಹಣ ಪಾವತಿಸುತ್ತಿದ್ದರು. ಕೊರೊನಾ ಭೀತಿ ಹಿನ್ನೆಲೆಯಲ್ಲಿ …
Read More »ಗ್ಯಾಂಗ್‍ರೇಪ್, ಸಾವು ಪ್ರಕರಣ – ಅಪರಾಧಿಗಳನ್ನ ಗಲ್ಲಿಗೇರಿಸಿಯೆಂದ ಅಕ್ಷಯ್‍ಗೆ ರಮ್ಯಾ ತಿರುಗೇಟು
ನವದೆಹಲಿ: ಉತ್ತರಪ್ರದೇಶದ ಹತ್ರಾಸ್ ಗ್ರಾಮದಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯ ಸಾವಿಗೆ ದೇಶದೆಲ್ಲೆಡೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಆರೋಪಿಗಳನ್ನು ನೇಣಿಗೇರಿಸುವಂತೆ ದೇಶದ ಮೂಲೆಮೂಲೆಯಿಂದಲೂ ಕೂಗು ಕೇಳಿ ಬಂದಿದೆ. ಈ ನಡುವೆ ಸಂತ್ರಸ್ತೆಯ ಸಾವಿನ ಬಗ್ಗೆ ಟ್ವೀಟ್ ಮಾಡಿದ್ದ ಬಾಲಿವುಡ್ ನಟ ಅಕ್ಷಯ್ ಕುಮಾರ್ ಗೆ ನಟಿ ರಮ್ಯಾ ತಿರುಗೇಟು ನೀಡಿದ್ದಾರೆ. ನಟ ಅಕ್ಷಯ್ ಕುಮಾರ್ ರೇಪ್ ಸಂತ್ರಸ್ತೆಯ ಸಾವಿನ ನಂತರ ಅಪರಾಧಿಗಳನ್ನು ಗಲ್ಲಿಗೇರಿಸಿ. ಹೆಣ್ಣುಮಕ್ಕಳನ್ನು ಮತ್ತು …
Read More »ಪೊಲೀಸರಿಂದ್ಲೇ ರೇಪ್ ಸಂತ್ರಸ್ತೆಯ ಅಂತ್ಯಕ್ರಿಯೆ – ಸಿದ್ದರಾಮಯ್ಯ, ದಿನೇಶ್ ಕಿಡಿ
ಬೆಂಗಳೂರು: ಉತ್ತರಪ್ರದೇಶದ ಹತ್ರಾಸ್ ಗ್ರಾಮದಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯ ಅಂತ್ಯಕ್ರಿಯೆಯನ್ನು ಪೊಲೀಸರೇ ನೆರವೇರಿಸಿದ್ದಕ್ಕೆ ಇದೀಗ ದೇಶದ ಎಲ್ಲೆಡೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಅಂತೆಯೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ಕೂಡ ಯೋಗಿ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಮಾಜಿ ಸಿಎಂ, ಉತ್ತರಪ್ರದೇಶದಲ್ಲಿ ನಡೆದ ದಲಿತ ಯುವತಿಯ ಅತ್ಯಾಚಾರ ಮತ್ತು ಕೊಲೆಯ ಹೊಣೆಯನ್ನು ಯೋಗಿ ಆದಿತ್ಯನಾಥ್ ಮಾತ್ರವಲ್ಲ, ಅವರನ್ನು ಬೆಂಬಲಿಸುತ್ತಿರುವ ನರೇಂದ್ರ ಮೋದಿ …
Read More »ಬಾಬ್ರಿ ಮಸೀದಿ ಧ್ವಂಸ ಆಕಸ್ಮಿಕ ಘಟನೆ – ಎಲ್ಲ ಆರೋಪಿಗಳು ಖುಲಾಸೆ
ಲಕ್ನೋ: ಬಾಬ್ರಿ ಮಸೀದಿ ಧ್ವಂಸ ಪೂರ್ವ ನಿಯೋಜಿತ ಅಲ್ಲ. ಇದೊಂದು ಆಕಸ್ಮಿಕ ಘಟನೆ ಎಂದು ಸಿಬಿಐ ವಿಶೇಷ ನ್ಯಾಯಾಲಯ ಮಹತ್ವದ ತೀರ್ಪು ಪ್ರಕಟಿಸಿದೆಕೋರ್ಟ್ ಈ ತೀರ್ಪು ಪ್ರಕಟಿಸುವ ಮೂಲಕ 28ವರ್ಷಗಳ ಹಳೆಯ ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಮಾಜಿ ಉಪಪ್ರಧಾನಿ ಎಲ್ ಕೆ ಅಡ್ವಾಣಿ, ಬಿಜೆಪಿ ಹಿರಿಯ ಮುಖಂಡ ಮುರಳಿ ಮನೋಹರ್ ಜೋಶಿ ಸೇರಿದಂತೆ ಎಲ್ಲ ಆರೋಪಿಗಳನ್ನು ಕೋರ್ಟ್ ಖುಲಾಸೆಗೊಳಿಸಿದೆ. ತೀರ್ಪು ನೀಡುವ ದಿನದಂದು ಎಲ್ಲ 32 ಆರೋಪಿಗಳು ನ್ಯಾಯಾಲಯದಲ್ಲಿ …
Read More »ತೋಟದಲ್ಲಿ ಭಾರಿ ಗಾತ್ರದ ಹೆಬ್ಬಾವು ಕಾಣಿಸಿಕೊಂಡಿದ್ದು ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದು ಮೀಸಲು ಅರಣ್ಯದಲ್ಲಿ ಬಿಡಲಾಯಿತು.
ಬೈಂದೂರು 28 ಸಪ್ಟಂಬರ್: ಗೋಳಿಹೊಳೆ ಗ್ರಾಮದ ಅರೆಶಿರೂರು ರವಿ ಶೆಟ್ಟಿ ಬೈಂದೂರು ಅವರ ಮನೆಯ ತೋಟದಲ್ಲಿ ಭಾರಿ ಗಾತ್ರದ ಹೆಬ್ಬಾವು ಕಾಣಿಸಿಕೊಂಡಿದ್ದು ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದು ಮೀಸಲು ಅರಣ್ಯದಲ್ಲಿ ಬಿಡಲಾಯಿತು. ಕರ್ನಾಟಕ ಕಾರ್ಮಿಕ ವೇದಿಕೆಯ ರಾಜ್ಯಾಧ್ಯಕ್ಷ ಕಾರ್ಮಿಕ ಮುಖಂಡ ಡಾ.ರವಿ ಶೆಟ್ಟಿ ಬೈಂದೂರು ಅವರ ಮನೆಯ ಅಡಿಕೆ ತೋಟದಲ್ಲಿ ಅವರು ಸಾಕಿದ ನಾಯಿಯನ್ನು ಹಿಡಿದು ನುಂಗುತ್ತಿದ್ದ ಸಂದರ್ಭದಲ್ಲಿ ರವಿ ಶೆಟ್ಟಿಯವರು ಹಾವಿನ ಬಾಯಿಂದ ನಾಯಿಯನ್ನು ಬಿಡಿಸಿದ್ದಲ್ಲದೆ ಸುಮಾರು 20 ಅಡಿ …
Read More »ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ RSS ಮುಖಂಡರು ಸಮ್ಮತಿಸಿದ ಅಭ್ಯರ್ಥಿ ಹೆಸರೇ ಬಹುತೇಕ ಅಂತಿಮ
ಬೆಳಗಾವಿ: ಕೊರೊನಾ ಮಹಾಮಾರಿಯಿಂದ ಅಕಾಲಿಕ ಸಾವು ಕಂಡ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ನಿಧನ ಹಿನ್ನೆಲೆ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಅದಾಗಲೇ ರಾಜಕೀಯ ಗರಿಗೆದರಿದೆ. ಬೆಳಗಾವಿ ಕ್ಷೇತ್ರದ ಬಿಜೆಪಿ ಸಂಸದರಾಗಿದ್ದ ಸುರೇಶ್ ಅಂಗಡಿ ಕ್ಷೇತ್ರದ ಟಿಕೆಟ್‌ಗೆ ಸೈಲೆಂಟ್ ಆಗಿ ಲಾಬಿ ಆರಂಭಗೊಂಡಿದೆ. ಅಂಗಡಿ ಪತ್ನಿ ಮಂಗಲಾ ಪರ ಕಾರ್ಯಕರ್ತರ ಒಲವು ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮಂಗಲಾ ಪರ ಒಲವು ಹೆಚ್ಚಾಗಿದ್ದು, ಮತ್ತೊಂದೆಡೆ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಿಂದಲೂ ಲಾಬಿ …
Read More »ಶಿರಾ ಕ್ಷೇತ್ರ ಉಪಚುನಾವಣೆ ನವೆಂಬರ್ 3 ರಂದು
ತುಮಕೂರು: ಶಿರಾ ಕ್ಷೇತ್ರ ಉಪಚುನಾವಣೆ ಘೋಷಣೆ ಮಾಡಲಾಗಿದೆ. ನವೆಂಬರ್ 3 ರಂದು ಚುನಾವಣೆ ನಡೆಯಲಿದ್ದು, ಅಕ್ಟೋಬರ್ 9 ಅಧಿಸೂಚನೆ ಹೊರಡಿಸಲಾಗುವುದು ಎಂದು ತಿಳಿದುಬಂದಿದೆ. ಹೀಗಾಗಿ ಬಿಜೆಪಿಯಲ್ಲಿ 4, ಜೆಡಿಎಸ್ನಲ್ಲಿ ಇಬ್ಬರು ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಸಿದ್ಧವಾಗಿದೆ. ಬಿಜೆಪಿ ಟಿಕೆಟ್ಗಾಗಿ ಎಸ್.ಆರ್.ಗೌಡ, ಬಿ.ಕೆ.ಮಂಜುನಾಥ, ಡಾ.ರಾಜೇಶ್ ಗೌಡ, ಡಾ.ಶಿವಕುಮಾರ್ ನಡುವೆ ಪೈಪೋಟಿ ಇದ್ರೆ. ಜೆಡಿಎಸ್ನಲ್ಲಿ ದಿವಂಗತ ಸತ್ಯನಾರಾಯಣ ಪುತ್ರ ಸತ್ಯಪ್ರಕಾಶ್, ಕಲ್ಕೆರೆ ರವಿಕುಮಾರ್ ನಡುವೆ ಟಿಕೆಟ್ಗಾಗಿ ಪೈಪೋಟಿ ಇದೆ. ಹಾಗೂ ಕಾಂಗ್ರೆಸ್ ಪಕ್ಷದಿಂದ …
Read More »ಆಕಾಶ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಪ್ರಕಾಶ ಬಾಗೇವಾಡಿ ಅವರು ಅಕಾಲಿಕ ನಿಧನ: ಬಾಲಚಂದ್ರ ಜಾರಕಿಹೊಳಿಯವರು ಕಂಬನಿ ಮಿಡಿದರು
ಗೋಕಾಕ: ಆಕಾಶ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಪ್ರಕಾಶ ಬಾಗೇವಾಡಿ ಅವರು ಅಕಾಲಿಕ ನಿಧನ ಹೊಂದಿದ್ದಾರೆ.ಕೆ ಎಮ್ ಎಫ್ ಅಧ್ಯಕ್ಷರು ಬಾಲಚಂದ್ರ ಜಾರಕಿಹೊಳಿ ಅವರ ಮತ್ತು ಕುಟುಂಬಕ್ಕೂ ಆಪ್ತರಾದ ಪ್ರಕಾಶ ಬಾಗೇವಾಡಿ ಅವರು ಬೆಳಗಾವಿ ಖಾಸಗಿ ಆಸ್ಪತ್ರೆಯಲ್ಲಿ ಅನಾರೋಗ್ಯದ ಕಾರಣ ದಾಖಲಾಗಿದ್ದು ಕೊನೆಗೆ ಚಿಕಿತ್ಸೆ ಫಲಕಾರಿಯಾಗದೇ ಮಧ್ಯರಾತ್ರಿ 3.30 ಗಂಟೆಗೆ ಅಕಾಲಿಕ ನಿಧನ ಹೊಂದಿದ್ದಾರೆ. ಸದರಿಯವರ ನಿಧನಕ್ಕೆ ಶ್ರೀ ಬಾಲಚಂದ್ರ ಜಾರಕಿಹೊಳಿ ಮತ್ತು ಎನ್ ಎಸ್ ಎಫ್ ಕಚೇರಿಯವರು ತೀವ್ರ …
Read More »ಸನ್‍ರೈಸರ್ಸ್ ಹೈದರಾಬಾದ್ ತಂಡ ತನ್ನ ಮೊದಲ ಗೆಲುವನ್ನು ದಾಖಲಿಸಿದೆ.
ಅಬುಧಾಬಿ: ಮ್ಯಾಜಿಕಲ್ ಸ್ಪಿನ್ ಬೌಲರ್ ರಶೀದ್ ಖಾನ್ ಅವರ ಮಾರಕ ದಾಳಿಗೆ ನಲುಗಿದ ಡೆಲ್ಲಿ ಐಪಿಎಲ್-2020ಯ 11ನೇ ಪಂದ್ಯದಲ್ಲಿ ಸೋಲುಂಡಿದೆ. ಈ ಮೂಲಕ ಸನ್‍ರೈಸರ್ಸ್ ಹೈದರಾಬಾದ್ ತಂಡ ತನ್ನ ಮೊದಲ ಗೆಲುವನ್ನು ದಾಖಲಿಸಿದೆ. ಇಂದು ಅಬುಧಾಬಿಯಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲ ಬ್ಯಾಟ್ ಮಾಡಿದ ಹೈದರಾಬಾದ್ ತಂಡ ಕೇನ್ ವಿಲಿಯಮ್ಸನ್ ಜಾನಿ ಬೈರ್‌ಸ್ಟೋವ್ ಅವರ ಉತ್ತಮ ಬ್ಯಾಟಿಂಗ್‍ನಿಂದ ನಿಗದಿತ 20 ಓವರಿನಲ್ಲಿ 162 ರನ್ ಗಳಿಸಿತ್ತು. ಈ ಗುರಿಯನ್ನು …
Read More »