ಬೆಳಗಾವಿ: ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ದಲಿತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ರಾಜ್ಯ ಪರಿಶಿಷ್ಟ ಪಂಗಡ ವಾಲ್ಮೀಕಿ ನೌಕರರ ಒಕ್ಕೂಟ ಯುವ ಘಟಕದ ಮುಖಂಡರು ಮತ್ತು ಕಾರ್ಯಕರ್ತರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಅವರು, ಆ ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಕೂಡಲೆ ತಪ್ಪಿತಸ್ಥರನ್ನು ಬಂಧಿಸಲು ಕ್ರಮ ಕೈಗೊಳ್ಳಬೇಕು. …
Read More »Yearly Archives: 2020
ರಾಜ್ಯದಲ್ಲಿ ಶಾಲೆ ಆರಂಭ ಕುರಿತು ಅಕ್ಟೋಬರ್ 10ಕ್ಕೆ ಸ್ಪಷ್ಟ ಚಿತ್ರಣ ನೀಡುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಶಾಲೆ ಆರಂಭ ಕುರಿತು ಅಕ್ಟೋಬರ್ 10ಕ್ಕೆ ಸ್ಪಷ್ಟ ಚಿತ್ರಣ ನೀಡುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ. ಶಾಲಾ ಕಾಲೇಜುಗಳನ್ನು ಆರಂಭಿಸುವ ವಿಚಾರ ಕುರಿತು ರಾಜ್ಯ ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆ ಶಿಕ್ಷಕರು ಹಾಗೂ ಪದವಿ ಕಾಲೇಜುಗಳ ಉಪನ್ಯಾಸಕರ ಸಂಘಟನೆಗಳ ಜಿಲ್ಲಾ ಪ್ರತಿನಿಧಿಗಳೊಂದಿಗೆ ಗುರುವಾರ ವೆಬಿನಾರ್ ಸಂವಾದ ನಡೆಸಿ ಮಾತನಾಡಿದ ಅವರು ಈ ವಿಷಯ ತಿಳಿಸಿದರು. ಸರ್ಕಾರಕ್ಕೂ ವಿದ್ಯಾರ್ಥಿಗಳ ಆರೋಗ್ಯ, ಸುರಕ್ಷತೆಯೇ ಮೊದಲ ಆದ್ಯತೆ. …
Read More »ಮಹಾತ್ಮ ಗಾಂಧೀಜಿ ಅವರು ತಾಲ್ಲೂಕಿನ ನವಲಿಹಾಳ ಗ್ರಾಮದಲ್ಲಿ ಎರಡು ದಿನ ವಾಸ್ತವ್ಯ ಹೂಡಿದ್ದಲ್ಲದೇ, ಪಟ್ಟಣಕ್ಕೂ ಭೇಟಿ ನೀಡಿದ್ದರು.
ಚಿಕ್ಕೋಡಿ: ಮಹಾತ್ಮ ಗಾಂಧೀಜಿ ಅವರು ತಾಲ್ಲೂಕಿನ ನವಲಿಹಾಳ ಗ್ರಾಮದಲ್ಲಿ ಎರಡು ದಿನ ವಾಸ್ತವ್ಯ ಹೂಡಿದ್ದಲ್ಲದೇ, ಪಟ್ಟಣಕ್ಕೂ ಭೇಟಿ ನೀಡಿದ್ದರು. 1934ರ ಫೆಬ್ರುವರಿ ಮತ್ತು ಮಾರ್ಚ್‌ನಲ್ಲಿ ಕರ್ನಾಟಕ ವಿವಿಧ ಜಿಲ್ಲೆಗಳಲ್ಲಿ ಸಂಚಿರಿಸಿದ್ದರು. 1934ರ ಮಾರ್ಚ್ 7 ಮತ್ತು 8ರಂದು ತಾಲ್ಲೂಕಿನ ನವಲಿಹಾಳದ ಅಕ್ಕಾಚಂದ್ ಮೆಹತಾ ಎನ್ನುವವರ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಆ ಮನೆ ಇಂದು ಪಾಳು ಬಿದ್ದಿದೆ. ‘ರಾಷ್ಟ್ರಪಿತನ ಪಾದಸ್ಪರ್ಶದಿಂದ ಪಾವನಗೊಂಡಿರುವ ಗ್ರಾಮದಲ್ಲಿ ಗಾಂಧಿ ಸ್ಮಾರಕ ನಿರ್ಮಿಸಬೇಕು’ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ. …
Read More »ಸ್ಮಶಾನದ ಪರಿಸರದಲ್ಲಿ ಬೆಳೆದಿದ್ದ ಮುಳ್ಳು ಮೊದಲಾದ ಕಳೆ ಗಿಡಗಳನ್ನು ತೆರವುಗೊಳಿಸುವ ಕಾಮಗಾರಿಗೆ ಗ್ರಾಮ ಪಂಚಾಯಿತಿಯಿಂದ ಚಾಲನೆ ನೀಡಲಾಗಿದೆ.
ಮೋಳೆ: ಇಲ್ಲಿನ ಸ್ಮಶಾನದ ಪರಿಸರದಲ್ಲಿ ಬೆಳೆದಿದ್ದ ಮುಳ್ಳು ಮೊದಲಾದ ಕಳೆ ಗಿಡಗಳನ್ನು ತೆರವುಗೊಳಿಸುವ ಕಾಮಗಾರಿಗೆ ಗ್ರಾಮ ಪಂಚಾಯಿತಿಯಿಂದ ಚಾಲನೆ ನೀಡಲಾಗಿದೆ. ಅಲ್ಲಿನ ಅವ್ಯವವ್ಥೆ ಕುರಿತು ‘ಪ್ರಜಾವಾಣಿ’ಯಲ್ಲಿ ‘ಸ್ಮಶಾನಕ್ಕೆ ದಾರಿ ಇಲ್ಲದೆ ತೊಂದರೆ’ ಶೀರ್ಷಿಕೆಯಲ್ಲಿ ಗುರುವಾರ ವರದಿ ಪ್ರಕಟವಾಗಿತ್ತು. ಇದರಿಂದ ಪರಿಣಾಮ ಪಿಡಿಒ ದಾನಮ್ಮ ಸಜ್ಜನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪಂಚಾಯಿತಿ ಸಿಬ್ಬಂದಿಗೆ ಸೂಚನೆ ನೀಡಿ, ಜೆಸಿಬಿ ಯಂತ್ರದ ಸಹಾಯದಿಂದ ಮುಳ್ಳಿನ ಗಿಡ ಹಾಗೂ ಕಳೆ ಗಿಡಗಳನ್ನು ತೆರವುಗೊಳಿಸಿದ್ದಾರೆ. ರಾತ್ರಿ ವೇಳೆ …
Read More »‘ಸೋಂಕಿತ ವ್ಯಕ್ತಿ ಸೀನಿದಾಗ ಅಥವಾ ಕೆಮ್ಮಿದಾಗ ಹೊರ ಹೊಮ್ಮುವ ತುಂತುರು ಹನಿಗಳ ಗಾತ್ರವು 5 ಮೈಕ್ರಾನ್‌ಗಳಿಗಿಂತ ಕಡಿಮೆ ಇದ್ದಲ್ಲಿ ವೈರಾಣು ಗಾಳಿಯಲ್ಲಿ ತೇಲಿ,
ಬೆಂಗಳೂರು: ‘ಸೋಂಕಿತ ವ್ಯಕ್ತಿ ಸೀನಿದಾಗ ಅಥವಾ ಕೆಮ್ಮಿದಾಗ ಹೊರ ಹೊಮ್ಮುವ ತುಂತುರು ಹನಿಗಳ ಗಾತ್ರವು 5 ಮೈಕ್ರಾನ್‌ಗಳಿಗಿಂತ ಕಡಿಮೆ ಇದ್ದಲ್ಲಿ ವೈರಾಣು ಗಾಳಿಯಲ್ಲಿ ತೇಲಿ, ಆರು ಅಡಿಗಿಂತಲೂ ದೂರ ವ್ಯಾಪಿಸಿಕೊಳ್ಳುವ ಸಾಧ್ಯತೆ ಇರುತ್ತದೆ’ ಎಂದು ಆರೋಗ್ಯ ಕ್ಷೇತ್ರದ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಪ್ರೆಸ್ ಇನ್ಫರ್ಮೇಷನ್ ಬ್ಯುರೊದ (ಪಿಐಬಿ) ಬೆಂಗಳೂರು ಕೇಂದ್ರವು ಗುರುವಾರ ಆಯೋಜಿಸಿದ ‘ಕೊರೊನಾ ಸೋಂಕು: ಮುನ್ನೆಚ್ಚರಿಕೆಯೇ ಚಿಕಿತ್ಸೆ’ ವೆಬಿನಾರ್‌ನಲ್ಲಿ ತಜ್ಞರು ಮಾತನಾಡಿದರು. ರಾಜ್ಯ ಸರ್ಕಾರದ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ …
Read More »ಪ್ರಧಾನಿ ಮೋದಿಗಾಗಿಯೇ ಸಿದ್ಧವಾಯ್ತು ಸ್ಪೆಷಲ್ ವಿಮಾನ, ‘ಬೋಯಿಂಗ್ 777’ ಸ್ಪೆಷಾಲಿಟಿ ಏ
ಪ್ರಧಾನಿ ಮೋದಿಗಾಗಿಯೇ ಸಿದ್ಧವಾಯ್ತು ಸ್ಪೆಷಲ್ ವಿಮಾನ, ‘ಬೋಯಿಂಗ್ 777’ ಸ್ಪೆಷಾಲಿಟಿ ಏ ದೆಹಲಿ : ರಫೇಲ್ ನಂತರ ಭಾರತದ ಆಗಸದಲ್ಲಿ ಗುಡುಗಲು ಮತ್ತೊಂದು ಲೋಹದ ಹಕ್ಕಿ ಭಾರತಕ್ಕೆ ಎಂಟ್ರಿ ಕೊಟ್ಟಿದೆ. ಆದರೆ ಈ ಬಾರಿ ಲೋಹದ ಹಕ್ಕಿ ಭಾರತೀಯ ವಾಯುಪಡೆ ಪರ ಘರ್ಜಿಸುವುದಿಲ್ಲ, ಬದಲಾಗಿ ಪಿಎಂ ಮೋದಿ ಅವರಿಗಾಗಿ ಎಂಟ್ರಿ ಕೊಟ್ಟಿದೆ. ಈವರೆಗೂ ಕಾಣದ ಅತ್ಯಾಧುನಿಕ ಭದ್ರತೆಯನ್ನು ಈ ಹೊಸ ವಿಮಾನ ಹೊಂದಿದೆ. ಭಾರತ ಬದಲಾಗುತ್ತಿದೆ, ದೇಶದ ಶಕ್ತಿಶಾಲಿ ರಾಷ್ಟ್ರವಾಗುತ್ತಿರುವ ಭಾರತದ …
Read More »ಡಿಜೆ ಹಳ್ಳಿ ಗಲಭೆ: ಸರ್ಕಾರದ ಕೈ ಸೇರಿದ ಘಟನೆಯ ಸತ್ಯಶೋಧನಾ ವರದಿ
ಬೆಂಗಳೂರು: ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣದ NIA ತನಿಖೆಗೆ ಬಿಜೆಪಿಯಲ್ಲಿ ಆಗ್ರಹ ವ್ಯಕ್ತವಾಗಿದೆ. ಈ ಸಂಬಂಧ ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಲಾಗಿದ್ದು, SDPI ನಿಷೇಧಕ್ಕೂ ಪಕ್ಷ ಒತ್ತಾಯಿಸಿದೆ. ಡಿಜೆ ಹಳ್ಳಿಯಲ್ಲಿ ಪೊಲೀಸರನ್ನೇ ಟಾರ್ಗೆಟ್ ಮಾಡಿದ್ದ ಕಿರಾತಕರು, ರಸ್ತೆಯಲ್ಲಿ ನಿಂತಿದ್ದ ಪೊಲೀಸ್ ವಾಹನವನ್ನ ಪಲ್ಟಿ ಮಾಡಿ ಬೆಂಕಿ ಹಚ್ಚಿದ್ರು. ಪೊಲೀಸ್ ಠಾಣೆ ಆವರಣದಲ್ಲಿ ನಿಂತಿದ್ದ ವಾಹನಗಳಿಗೆ ಬೆಂಕಿ ಇಟ್ಟು, ವಾಹನವನ್ನ ಜಖಂ ಮಾಡಿದ್ರು. ಎರಡು ಪ್ರದೇಶಗಳನ್ನ ಕಟುಕರಪ …
Read More »ಅನುಶ್ರೀ ಜೊತೆ ಬಿಗ್ ಬಾಸ್ ಸ್ಪರ್ಧಿಗಳಿಗೂ ಇದೆಯಂತೆ ನಶೆ ನಂಟು, ಸ್ಯಾಮ್ ಬಿಚ್ಚಿಟ್ಟ ಸ್ಫೋಟಕ ಸತ್ಯ
ಬೆಂಗಳೂರು: ತನ್ನ ಮಾತು, ನಿರೂಪಣೆಯ ಮೂಲಕ ಕನ್ನಡಿಗರ ಮನ ಗೆದ್ದು ಮನೆ ಮಾತಾಗಿರುವ ಅನುಶ್ರೀ ಹೆಸರು ಡ್ರಗ್ಸ್ ಜಾಲದಲ್ಲಿ ಹೇಳಿ ಬಂದಿದೆ. ಈ ಬಗ್ಗೆ ತನಿಖೆ ನಡೆಸುತ್ತಿರುವ ಸಿಸಿಬಿ ಸ್ಫೋಟಕ ಮಾಹಿತಿಗಳನ್ನು ಹೊರ ಹಾಕುತ್ತಿದೆ. ಈಗ ಸ್ಯಾಂಡಲ್ ವುಡ್ ಬೆಚ್ಚಿ ಬೀಳಿಸುವ ಮತ್ತೊಂದು ಭಯಾನಕ ಸುದ್ದಿ ಸಿಸಿಬಿಗೆ ಗೊತ್ತಾಗಿದೆಯಂತೆ. ಬಗೆದಷ್ಟು ಬಯಲಾಗುತ್ತಿರುವ ಡ್ರಗ್ಸ್ ನಂಟಿನ ಬೃಹತ್ ಜಾಲದಲ್ಲಿ ಮತ್ತಿಬ್ಬರು ರಿಯಾಲಿಟಿ ಶೋ ಸ್ಪರ್ಧಿಗಳು ಭಾಗಿಯಾಗಿದ್ದಾರೆ ಎಂಬ ಸ್ಫೋಟಕ ಮಾಹಿತಿ ಸಿಕ್ಕಿದೆ. …
Read More »ಡ್ರಗ್ಸ್ ಪ್ರಕರಣದಲ್ಲಿ ಡ್ಯಾನ್ಸ್ ಕೊರಿಯೋಗ್ರಾಫರ್ ಒಬ್ಬರನ್ನು ಸಿಸಿಬಿ ಪೊಲೀಸರು ಮಂಗಳೂರಿನಲ್ಲಿ ಬಂಧಿಸಿದ್ದಾರೆ
ಮಂಗಳೂರು : ಡ್ರಗ್ಸ್ ಪ್ರಕರಣದಲ್ಲಿ ಈಗಾಗಲೇ ಅನೇಕರನ್ನು ಬಂಧಿಸಿ, ಜೈಲಿಗಟ್ಟಿರುವ ಸಿಸಿಬಿ ಪೊಲೀಸರು, ತಮ್ಮ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಇಂದು ಡ್ರಗ್ಸ್ ಪ್ರಕರಣದಲ್ಲಿ ಡ್ಯಾನ್ಸ್ ಕೊರಿಯೋಗ್ರಾಫರ್ ಒಬ್ಬರನ್ನು ಸಿಸಿಬಿ ಪೊಲೀಸರು ಮಂಗಳೂರಿನಲ್ಲಿ ಬಂಧಿಸಿದ್ದಾರೆ.ಹೀಗೆ ಬಂಧಿಸಲ್ಪಟ್ಟ ಆರೋಪಿಯೇ ಕಿಶೋರ್ ನ ಹಳೆಯ ದೋಸ್ತ್ ಆದಂತ ಸ್ಯಾಂ ಫರ್ನಾಂಡಿಸ್ ಆಗಿದ್ದಾನೆ. ಬಂದಿತ ಆರೋಪಿಯಿಂದ ನಿರೂಪಕಿ ಅನುಶ್ರೀ ಬಗ್ಗೆ ಮತ್ತಷ್ಟು ಸ್ಪೋಟಕ ಮಾಹಿತಿಯನ್ನು ಬಾಯ್ ಬಿಟ್ಟಿದ್ದಾನೆ ಎಂಬುದಾಗಿ ತಿಳಿದು ಬಂದಿದೆ.ಬಂಧಿತ ಆರೋಪಿ ಸ್ಯಾಂ ಫರ್ನಾಂಡಿಸ್ ಅನ್ನು …
Read More »ಮೈಸೂರು ದಸರಾ ಕಾರ್ಯಕ್ರಮದಲ್ಲಿ ಭಾಗಿಯಾಗುವವರಿಗೆ ಕೊರೊನಾ ಪರೀಕ್ಷೆ ಕಡ್ಡಾಯ
ಮೈಸೂರು : ಮೈಸೂರು ದಸರಾ ಕಾರ್ಯಕ್ರಮದಲ್ಲಿ ಭಾಗಿಯಾಗುವವರಿಗೆ ಕೊರೊನಾ ಪರೀಕ್ಷೆ ಕಡ್ಡಾಯ ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮಾಹಿತಿ ನೀಡಿದ್ದಾರೆ. ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಈ ಬಾರಿ ವಿಜೃಂಬಣೆ ದಸತಾ ನಡೆಯೋಲ್ಲ, ಆದರೆ ಸಂಪ್ರದಾಯಿಕ ದಸರಾಗೆ ಧಕ್ಕೆ ಆಗಲ್ಲ, ಕೇವಲ ನೂರು ಮಂದಿಗಷ್ಟೇ ಅರಮನೆಯೊಳಗೆ ಪ್ರವೇಶಿಸಲು ಕ್ರಮ ಕೈಗೊಳ್ಳಲಾಗಿದೆ, ದಸರಾದಲ್ಲಿ ಭಾಗಿಯಾಗುವ ಎಲ್ಲರಿಗೂ ಕೊರೊನಾ ಪರೀಕ್ಷೆ ಕಡ್ಡಾಯವಾಗಿದೆ ಎಂದರು. ದಸರಾ ಆಚರಣೆಯನ್ನು ಬಹಳ ಎಚ್ಚರಿಕೆಯಿಂದ ಸುರಕ್ಷಿತವಾಗಿ …
Read More »