Breaking News

Yearly Archives: 2020

ಬೆಂಗಳೂರು ವಿರುದ್ಧ 59 ರನ್ ಗಳ ಗೆಲುವು ಪಡೆದ ಡೆಲ್ಲಿ ಕ್ಯಾಪಿಟಲ್ಸ್

ದುಬೈ: ಐಪಿಎಲ್ 2020ರ ಆವೃತ್ತಿಯಲ್ಲಿ ಬೆಂಗಳೂರು ವಿರುದ್ಧ 59 ರನ್ ಗಳ ಗೆಲುವು ಪಡೆದ ಡೆಲ್ಲಿ ಕ್ಯಾಪಿಟಲ್ಸ್ ತಂಡ 8 ಅಂಕಗಳೊಂದಿಗೆ ಪಟ್ಟಿಯಲ್ಲಿ ನಂ.1 ಪಟ್ಟಕ್ಕೇರಿದೆ. ಡೆಲ್ಲಿ ಕ್ಯಾಪಿಟಲ್ಸ್ ನೀಡಿದ್ದ 197 ರನ್ ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ ಆರ್.ಸಿ.ಬಿ ತಂಡದ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಲಷ್ಟೇ ಶಕ್ತವಾಯಿತು. ಐಪಿಎಲ್‍ನಲ್ಲಿ ಟೂರ್ನಿಯ ಪಂದ್ಯದಲ್ಲಿ 190 ಪ್ಲಸ್ ರನ್ ಗಳಿಸಿದ ಯಾವುದೇ ಪಂದ್ಯವನ್ನು …

Read More »

ಅಕ್ಟೋಬರ್ 15ರ ನಂತರ ದೇಶದಲ್ಲಿ ಶಾಲೆಗಳನ್ನು ತೆರೆಯಬಹುದು– ಕೇಂದ್ರದ ಮಾರ್ಗಸೂಚಿಯಲ್ಲಿ ಏನಿದೆ?

ನವದೆಹಲಿ: ಅನ್‌ಲಾಕ್‌ 5ರ ಮಾರ್ಗಸೂಚಿಯಲ್ಲಿ ಅಕ್ಟೋಬರ್ 15ರ ನಂತರ ದೇಶದಲ್ಲಿ ಶಾಲೆಗಳನ್ನು ತೆರೆಯಬಹುದು ಎಂದು ಕೇಂದ್ರ ಸರ್ಕಾರ ಆರು ದಿನಗಳ ಹಿಂದೆಯೇ ಹೇಳಿತ್ತು. ಈಗ ಗೃಹ ಸಚಿವಾಲಯ ಶಾಲೆಗಳನ್ನು ತೆರೆಯಲು ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಪೋಷಕರ ಒಪ್ಪಿಗೆ ಮೇರೆಗೆ ಮಕ್ಕಳು ಶಾಲೆಗೆ ತೆರಳಬಹುದು. ಮಕ್ಕಳಿಗೆ ಹಾಜರಾತಿ ಕಡ್ಡಾಯ ಮಾಡುವಂತಿಲ್ಲ. ಆನ್‍ಲೈನ್ ತರಗತಿಗಳನ್ನು ಆಯ್ಕೆಯಾಗಿ ಇಟ್ಟುಕೊಳ್ಳಬಹುದು ಎಂದು ತಿಳಿಸಿದೆ. ಮಾರ್ಗಸೂಚಿಯಲ್ಲಿ ಏನಿದೆ? ಶಾಲಾ ಕೊಠಡಿಗಳನ್ನು ನಿತ್ಯವೂ ಸ್ಯಾನಿಟೈಸ್ ಮಾಡುವುದು ಕಡ್ಡಾಯ. ಎಲ್ಲಾ ಸಂದರ್ಭಗಳಲ್ಲಿಯೂ …

Read More »

ಬೆಳಗಾವಿ ಮಹಾನಗರದಲ್ಲಿ ಬುಧವಾರದಿಂದ ಮಾಸ್ಕ್ ಧರಿಸದಿದ್ದರೆ ಒಂದು ಸಾವಿರ ರೂ. ದಂಡ ಕಟ್ಟುವುದು ಅನಿವಾರ್ಯ

ಬೆಳಗಾವಿ – ಮಾಸ್ಕ್ ಧರಿಸದಿದ್ದರೆ ನಗರ ಪ್ರದೇಶದಲ್ಲಿ 1000 ರೂ. ಹಾಗೂ ಗ್ರಾಮೀಣ ಪ್ರದೇಶದಲ್ಲಿ 500 ರೂ. ದಂಡ ವಿಧಿಸುವ ನೂತನ ನಿಯಮವನ್ನು ರಾಜ್ಯ ಸರಕಾರಿ ಅಕ್ಟೋಬರ್ 1ರಿಂದ ಜಾರಿಗೊಳಿಸಿದೆ. ಈ ನಿಯಮವನ್ನು ಬೆಳಗಾವಿ ಮಹಾನಗರದಲ್ಲಿ ಬುಧವಾರ (7-10-2020) ದಿಂದ ಜಾರಿಗೊಳಿಸಲು ಪೊಲೀಸ್ ಆಯುಕ್ತಾಲಯ ನಿರ್ಧರಿಸಿದೆ. ಈ ಕುರಿತು ಪೊಲೀಸ್ ಆಯುಕ್ತರು ಪ್ರಕಟಣೆ ಹೊರಡಿಸಿದ್ದಾರೆ. ಬುಧವಾರದಿಂದ ಮಾಸ್ಕ್ ಧರಿಸದೆ ಹೊರಗೆ ಹೋದಲ್ಲಿ ಒಂದು ಸಾವಿರ ರೂ. ದಂಡ ಕಟ್ಟುವುದು ಅನಿವಾರ್ಯವಾಗಲಿದೆ. …

Read More »

ಈ ರಾಜಕಾರಣಕ್ಕೆ ಡಿಕೆ ಶಿವಕುಮಾರ್‌ ಹೆದರುವ ಮಗ ಅಲ್ಲ.ಯಾವುದಕ್ಕೂ ಜಗ್ಗಲ್ಲ: ಡಿಕೆಶಿ

ಬೆಂಗಳೂರು: ಈ ರಾಜಕಾರಣಕ್ಕೆ ಡಿಕೆ ಶಿವಕುಮಾರ್‌ ಹೆದರುವ ಮಗ ಅಲ್ಲ. ಇದು ಸದ್ಯಕ್ಕೆ ಮುಗಿಯುವುದಿಲ್ಲ. ಚುನಾವಣೆ ನಡೆಯುವವರೆಗೂ ಇರುತ್ತದೆ ಎಂದು ಡಿಕೆಶಿ ಹೇಳಿದ್ದಾರೆ ಸಿಬಿಐ ದಾಳಿ ಬಳಿಕ ನಿವಾಸದಿಂದ ಹೊರಬಂದು ಕಾರ್ಯರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, 30 ವರ್ಷಗಳಿಂದ ಇರುವ ಎಲ್ಲ ಮಂತ್ರಿಗಳು ಹರಿಶ್ಚಂದ್ರನ ಮೊಮ್ಮಕ್ಕಳು. ಈಗ ನನಗೆ ರಾಜಕೀಯವಾಗಿ ತೊಂದರೆ ನೀಡುತ್ತಿದ್ದರಲ್ಲ ಅವರೆಲ್ಲ ಚೆನ್ನಾಗಿರಲಿ ಎಂದರು.ನಾನು ನನ್ನ ಸಹೋದರ, ಕುಟುಂಬ ಮತ್ತು ಕಾಂಗ್ರೆಸ್ ಪಕ್ಷ ನಿಮ್ಮ ಅಭಿಮಾನಕ್ಕೆ ತಲೆ …

Read More »

ಹುಬ್ಬಳ್ಳಿಯಲ್ಲಿ ವರುಣನ ಅಬ್ಬರ- ರಾಷ್ಟ್ರೀಯ ಹೆದ್ದಾರಿ ಬಂದ್, ಟ್ರಾಫಿಕ್ ಜಾಮ್

ಹುಬ್ಬಳ್ಳಿ/ಮೈಸೂರು: ನಗರದಲ್ಲಿಂದು ಧಾರಾಕಾರವಾಗಿ ಮಳೆ ಸುರಿದಿದ್ದು, ಮಧ್ಯಾಹ್ನ ಒಂದು ಗಂಟೆಗೂ ಅಧಿಕ ಕಾಲ ಸುರಿದ ಭಾರೀ ಮಳೆಗೆ ಹುಬ್ಬಳ್ಳಿಯ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿ ವಾಹನ ಸವಾರರು ಪರದಾಡಿದ ಘಟನೆ ನಡೆದಿದೆ. ಭಾರೀ ಮಳೆಯಿಂದಾಗಿ ಹುಬ್ಬಳ್ಳಿಯ ಕುಂದಗೋಳ ಕ್ರಾಸ್ ಬಳಿ ನಡೆಯುತ್ತಿದ್ದ ಸೇತುವೆ ಕಾಮಗಾರಿಯಿಂದಾಗಿ ರಸ್ತೆ ಸಂಚಾರ ಸ್ಥಗಿತಗೊಂಡಿತು. ಮಳೆಯ ನೀರು ಹೆಚ್ಚು ಬಂದ ಪರಿಣಾಮ ಕೆಲಕಾಲ ರಸ್ತೆ ಸಂಚಾರ ಬಂದ್ ಆಗಿತ್ತು. ಹೀಗಾಗಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸಾಕಷ್ಟು …

Read More »

ಸಿಬಿಐ ದಾಳಿಯನ್ನು ಕಾಂಗ್ರೆಸ್ ನಾಯಕರು ವಿನಾಕಾರಣ ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ

ಬೆಳಗಾವಿ: ‘ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮನೆ ಮೇಲೆ ನಡೆದಿರುವ ಸಿಬಿಐ ದಾಳಿಯನ್ನು ಕಾಂಗ್ರೆಸ್ ನಾಯಕರು ವಿನಾಕಾರಣ ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ’ ಎಂದು ರಾಜ್ಯಸಭಾ ಸದಸ್ಯ, ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಆಧ್ಯಕ್ಷ ಈರಣ್ಣ ಕಡಾಡಿ ಆರೋಪಿಸಿದರು. ಇಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು. ‘ಹಣಕಾಸಿನ ವ್ಯವಹಾರ, ಲೆಕ್ಕಪತ್ರದಲ್ಲಿ ಸರಿಯಾದ ಮಾಹಿತಿ ಒದಗಿಸದ ಕಾರಣ ಡಿ.ಕೆ. ಶಿವಕುಮಾರ್‌ ಮನೆ ಮೇಲೆ ಈ ಹಿಂದೆಯೂ ಇಡಿ ಮತ್ತು ಐಟಿ ದಾಳಿಯಾಗಿತ್ತು. ಆಗ …

Read More »

ಕೆ ಕಲ್ಯಾಣ ಪತ್ನಿ ಖಾತೆಯಿಂದ ಸುಮಾರು 19 ಲಕ್ಷ 80 ಸಾವಿರ ವರ್ಗಾವಣೆ

ಬೆಳಗಾವಿ: ಕನ್ನಡ ಚಿತ್ರರಂಗದ ಗಣ್ಯರಿಗೆ ಒಂದಾದ ಮೇಲೊಂದು ಸಂಕಷ್ಟ ಎದುರಾಗುತ್ತಿದೆ. ಖ್ಯಾತ ಕನ್ನಡ ಸಾಹಿತಿ ಕೆ.ಕಲ್ಯಾಣ್ ಅವರ 14 ವರ್ಷದ ಮಧುರ ದಾಂಪತ್ಯವೀಗ ಬೀದಿಗೆ ಬಂದು ನಿಂತಿದೆ. ಇದಕ್ಕೆ ಕಾರಣವೇ ಮಾಟ-ಮಂತ್ರ ಹಾಗೂ ಮನೆ ಕೆಲಸದವಳು ಗಂಗಾ ಹಾಗೂ ಬೆಳಗಾವಿ ಗುರೂಜಿ ಶಿವಾನಂದ ವಾಲಿ ಎಂದು ಖುದ್ದು ಕನ್ನಡ ಚಿತ್ರರಂಗದ ಖ್ಯಾತ ಸಾಹಿತಿ ಕಲ್ಯಾಣ್ ಆರೋಪಿಸಿದ್ದಾರೆ. ಎಸ್‌ಪಿಬಿ ಬೆಂಗಳೂರಿಗೆ ಬಂದರೆ ತಪ್ಪದೇ ಇವರ ಮನೆಗೆ ಹೋಗುತ್ತಾರಂತೆ! ಬೆಳಗಾವಿ ಮಾಳಮಾರುತಿ ಪೊಲೀಸ್ …

Read More »

57 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಸಿಬಿಐ ಪ್ರಕಟಣೆ/ಡಿಕೆಶಿ ಬೆನ್ನಿಗೆ ನಿಲ್ಲದ ಎಚ್ ಡಿಕೆ

ಬೆಂಗಳೂರು – ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮನೆಯ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ 57 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಸಿಬಿಐ ಪ್ರಕಟಣೆ ನೀಡಿದೆ. ತಮ್ಮ ಮನೆಯಲ್ಲಿ ಯಾವುದೇ ನಗದು ಸಿಕ್ಕಿಲ್ಲ ಎಂದು ಡಿ.ಕೆ.ಶಿವಕುಮಾರ ಪತ್ರಿಕಾಗೋಷ್ಠಿಯಲ್ಲಿ ಹೇಳುತ್ತಿರುವ ಸಂದರ್ಭದಲ್ಲೇ ಸಿಬಿಐ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದೆ. 14 ಕಡೆಗಳಲ್ಲಿ ದಾಳಿ ಮಾಡಲಾಗಿದೆ. 74.93 ಕೋಟಿ ರೂ. ಅಕ್ರಮ ಆಸ್ತಿ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದಬ ಸಿಬಿಐ ತಿಳಿಸಿದೆ.

Read More »

ಧೈರ್ಯ ದಿಂದಲೇ ಪಕ್ಷ ಸಂಘಟನೆ ಮಾಡಿ ನಿಮ್ಮೊಂದಿಗೆ ನಾನಿದ್ದೇನೆ :ಸತೀಶ್ ಜಾರಕಿಹೊಳಿ

  ಧೈರ್ಯ ದಿಂದಲೇ ಪಕ್ಷ ಸಂಘಟನೆ ಮಾಡಿ ನಿಮ್ಮೊಂದಿಗೆ ನಾನಿದ್ದೇನೆ ಯಾರಿಗೂ ತೊಂದರೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನದು ಗೋಕಾಕ: ಯಾವುದೇ ಒತ್ತಡಕ್ಕೆ ಮಣಿಯದೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಧೈರ್ಯದಿಂದ ಪಕ್ಷದ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಗೋಕಾಕ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರಿಗೆ ಸೂಚಿಸಿದರು. ಸೋಮವಾರದಂದು ಗೋಕಾಕ ಮತಕ್ಷೇತ್ರದ ಅಂಕಲಗಿ-ಅಕ್ಕತಂಗೇರಹಾಳ ಮತ್ತು ಖನಗಾಂವ್ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಸಿ ಮಾತನಾಡಿದ …

Read More »

ಬೆಳಗಾವಿಯಲ್ಲಿ MBV ಸೇರಿ ದಲಿತ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ

ಬೆಳಗಾವಿ: ಹತ್ರಸ್ ದಲಿತ ಬಾಲಕಿ ಮೇಲೆ ನಡೆದ ಅತ್ಯಾಚಾರ-ಕೊಲೆ ಪ್ರಕರಣ ಖಂಡಿಸಿ ನಗರದಲ್ಲಿ  ಸೋಮವಾರ ಮಾನವ ಬಂಧುತ್ವ ವೇದಿಕೆ  ಹಾಗೂ ದಲಿತ ಸೇನೆ ಸೇರಿ ವಿವಿಧ  ಸಂಘಟನೆಯ ಪದಾಧಿಕಾರಿಗಳು  ಬೃಹತ್ ಪ್ರತಿಭಟನಾ ರ್ಯಾಲಿ  ನಡೆಸಿದರು. ಇಲ್ಲಿನ  ಡಾ. ಬಿ.ಆರ್.  ಅಂಬೇಡ್ಕರ್  ಉದ್ಯಾನವನದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ  ಪದಾಧಿಕಾರಿಗಳು ಚನ್ನಮ್ಮ ವೃತ್ತ ಮೂಲಕ  ಜಿಲ್ಲಾಧಿಕಾರಿ ಕಚೇರಿಗೆ ತೆರಳಿದರು. ಕೇಂದ್ರ ಹಾಗೂ ಉತ್ತರ ಪ್ರದೇಶ ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. …

Read More »