Breaking News

Yearly Archives: 2020

ಜನತಾ ಕಾಲೋನಿಯಲ್ಲಿ ಚಾಕುವಿನಿಂದ ಚುಚ್ಚಿ ಚುಚ್ಚಿ ವ್ಯಕ್ತಿಯ ಬರ್ಬರ ಕೊಲೆ

ಬೆಂಗಳೂರು ಗ್ರಾಮಾಂತರ: ಚಾಕುವಿನಿಂದ ಇರಿದು ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಕೊಲೆಗೈದಿರುವ ಘಟನೆ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಗ್ರಾಮದ ಜನತಾ ಕಾಲೋನಿಯಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಹರಿಯಾಣ ಮೂಲದ ಸಂಜಯ್ ಕುಮಾರ್ (38) ಎಂದು ಗುರುತಿಸಲಾಗಿದೆ. ಸಂಜಯ್​ ಹರಿಯಾಣದಿಂದ ಆಗಮಿಸಿ ದೊಡ್ಡಬಳ್ಳಾಪುರ ಕೈಗಾರಿಕಾ ಪ್ರದೇಶದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಎಂದು ಹೇಳಲಾಗಿದೆ. ಸಂಜಯ್​ ಕಮಾರ್​ನನ್ನು ಅಪರಿಚಿತ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದು ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಚಾಕುವಿನಿಂದ ಹಲ್ಲೆಯಾದ ಬಳಿಕ ಸಂಜಯ್ ಮೆಟ್ಟಿಲುಗಳನ್ನು ಹತ್ತಿ ತನ್ನ …

Read More »

ಮಹದಾಯಿ ಮತ್ತು ಕೃಷ್ಣಾ ನದಿ ನೀರು ಹಂಚಿಕೆ ವಿವಾದ:ಕೇಂದ್ರ ಸಚಿವರೊಂದಿಗೆ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಚರ್ಚೆ

  ಬೆಂಗಳೂರು,: ನೆರೆಯ ರಾಜ್ಯಗಳಾದ ತೆಲಂಗಾಣ ಮತ್ತು ಗೋವಾ ರಾಜ್ಯಗಳು ಮಹದಾಯಿ ಮತ್ತು ಕೃಷ್ಣಾ ನದಿ ನೀರು ಹಂಚಿಕೆ ಸಂಬಂಧ ಹೊಸ ವಿವಾದ ಸೃಷ್ಟಿಸಲು ಮುಂದಾಗಿದ್ದು, ಈ ವಿವಾದಗಳಿಂದ ರಾಜ್ಯಕ್ಕೆ ಅನ್ಯಾಯ ಆಗಲು ಬಿಡುವುದಿಲ್ಲ ಮತ್ತು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಸಮರ್ಥ ಮತ್ತು ನ್ಯಾಯಬದ್ಧ ವಾದವನ್ನು ಮಂಡಿಸಲಿದೆ ಎಂದು ರಾಜ್ಯದ ಜಲ ಸಂಪನ್ಮೂಲ ಸಚಿವರಾದ *ಶ್ರೀ ರಮೇಶ್ ಜಾರಕಿಹೊಳಿ* ಅವರು ಭರವಸೆ ನೀಡಿದ್ದಾರೆ. ಕೇಂದ್ರ …

Read More »

ಇವತ್ತು ದೇವಸ್ಥಾನಕ್ಕೂ ಹೋಗಿಲ್ಲ, ಪೂಜೆನೂ ಮಾಡ್ಸಿಲ್ಲ’ ಮಗಳ ಹುಟ್ಟುಹಬ್ಬ ಆಚರಿಸಲಾಗದೆ ರೇಷ್ಮಾ ಗಲ್ರಾನಿ ಬೇಸರ

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಜಾಲದ ನಂಟಿದೆ ಎಂಬ ಪ್ರಕರಣ ಸಂಬಂಧಿಸಿ ನಟಿ ಸಂಜನಾ ಗಲ್ರಾನಿ ಪರಪ್ಪನ ಅಗ್ರಹಾರದಲ್ಲಿ ಕಂಬಿ ಎಣಿಸುತ್ತಿದ್ದಾರೆ. ಇಂದು ಅವರ ಜನುಮದಿನವಾಗಿದ್ದು ಅಬ್ಬರದ ಪಾರ್ಟಿಗಳಿಂದ ದೂರ ಇದ್ದಾರೆ. ಈ ಬಗ್ಗೆ ಸಂಜನಾ ತಾಯಿ ದುಃಖ ವ್ಯಕ್ತಪಡಿಸಿದ್ದಾರೆ. ಅಬ್ಬರದ ಪಾರ್ಟಿಗಳಿಲ್ಲ, ಕೇಕ್ ಕಟಿಂಗ್​ಗಳಿಲ್ಲ.. ವಿಷ್ ಗಳಿಲ್ಲ.. ಸ್ಟಾರ್ ನಟಿ ಸಂಜನಾ ತನ್ನ ಬರ್ತ್ ಡೇಯನ್ನು ಸ್ಟಾರ್ ಹೋಟೆಲ್​ಗಳಲ್ಲಿ, ನಗರದ ಹೊರವಲಯದ ರೆಸಾರ್ಟ್​ನಲ್ಲಿ ಸೆಲೆಬ್ರೇಟ್ ಮಾಡಿಕೊಳ್ಳುತ್ತಿದ್ದರು. ಆದರೆ ಈ ಬಾರಿ …

Read More »

ಇಂದು ಬೆಳಗಾವಿಯಲ್ಲಿ ಬಿಜೆಪಿ ಮೀಟೀಂಗ್….ಆಕಾಂಕ್ಷಿಗಳ……

ಬೆಳಗಾವಿ- ಬಿಜೆಪಿ ರಾಜ್ಯಾದ್ಯಕ್ಷ ನಳೀನ್ ಕುಮಾರ್ ಕಟೀಲು ಇಂದು ಸಂಜೆ ನಾಲ್ಕು ಗಂಟೆಗೆ ಬೆಳಗಾವಿಗೆ ಆಗಮಿಸಲಿದ್ದಾರೆ. ಬೆಳಗಾವಿಯ ಸಂಕಮ ಹೊಟೇಲ್ ನಲ್ಲಿ ಇಂದು ಬೆಳಗಾವಿ ಜಿಲ್ಲಾ ಬಿಜೆಪಿ ಪದಾಧಿಕಾರಿಗಳ ಸಭೆ ನಡೆಯಲಿದೆ ಈ ಸಭೆಯಲ್ಲಿ ನಳೀನಕುಮಾರ್ ಮತ್ತು ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣಕುಮಾರ್ ಅವರು ಭಾಗವಹಿಸಲಿದ್ದಾರೆ. ಸಭೆಯಲ್ಲಿ ಬೆಳಗಾವಿ ಲೋಕಸಭಾ ಉಪ ಚುನಾವಣೆಯ ಅಭ್ಯರ್ಥಿ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಚರ್ಚೆ ನಡೆಯದಿದ್ದರೂ …

Read More »

ಶಾಲೆ ಆರಂಭಿಸುವ ಬಗ್ಗೆ ವಿಧಾನಪರಿಷತ್​ ವಿಪಕ್ಷ ನಾಯಕ ಎಸ್​ ಆರ್ ಪಾಟೀಲ್​​ ಏನಂತಾರೆ ?

ಶಾಲೆ ಆರಂಭಿಸುವ ಬಗ್ಗೆ ವಿಧಾನಪರಿಷತ್​ ವಿಪಕ್ಷ ನಾಯಕ ಎಸ್​ ಆರ್ ಪಾಟೀಲ್​​ ಏನಂತಾರೆ ? #laxminews https://youtu.be/YbVu7tmiprE

Read More »

ಪಂಚಾಂಗ : ಶನಿವಾರ, 10.10.2020

ನಿನ್ನೊಳಗೆ ಅಹಂ ಇರುವವರೆಗೆ ದೈವದ ಸ್ಮರಣೆಯೂ ಆಗದು ನಿನ್ನೊಳಗೇ ಇರುವ ದೈವದ ಅರಿವೂ ಆಗದು. -ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ # ಪಂಚಾಂಗ : ಶನಿವಾರ, 10.10.2020 ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.03 ಚಂದ್ರ ಉದಯ ರಾ.01.35 / ಚಂದ್ರ ಅಸ್ತ ಮ.01.50 ಶಾರ್ವರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಅಕ ಆಶ್ವಯುಜ ಮಾಸ / ಕೃಷ್ಣ ಪಕ್ಷ / ತಿಥಿ: ಅಷ್ಟಮಿ …

Read More »

2020 ಜೀವ ಉಳಿಸುವ ವರ್ಷವಾಗಿದೆ, ಇದನ್ನು ಪರೀಕ್ಷೆ ಇಲ್ಲದ ವರ್ಷವೆಂದು ಘೋಷಿಸಿ: ಶೋಭಾ

ಚಿಕ್ಕಮಗಳೂರು: 2020 ಜೀವ ಉಳಿಸುವ ವರ್ಷವಾಗಿದೆ, ಈ ವರ್ಷವನ್ನು ಪರೀಕ್ಷೆ ಇಲ್ಲದ ವರ್ಷವೆಂದು ಘೋಷಿಸಿ ಎಂದು ಸಂಸದೆ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟಿದ್ದಾರೆ.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲು ಜೀವ ಉಳಿಸೋಣ, ನಂತರ ಜೀವನ ಮಾಡೋಣ ಎಂದು ಪ್ರಧಾನಿ ಮೋದಿ ಹೇಳಿದ್ದರು. ಹೀಗಾಗಿ ಮೊದಲು ಜೀವ ಉಳಿಸೋಣ, ನಂತರ ಜೀವನ ಮಾಡೋಣ. ಸದ್ಯಕ್ಕೆ ಯಾವುದೇ ಕಾರಣಕ್ಕೂ ಶಾಲೆ ಆರಂಭ ಬೇಡ. ಆನ್‍ಲೈನ್ ತರಗತಿಗಳನ್ನು ಮುಂದುವರಿಸಲು ಅಭ್ಯಂತರವಿಲ್ಲ ಎಂದು ಅವರು ಸರ್ಕಾಕ್ಕೆ ಸಲಹೆ …

Read More »

ಡಿಕೆಶಿಗೆ ಮತ್ತೆ ಶಾಕ್ – ಸಿಬಿಐ ಬೆನ್ನಲ್ಲೇ ಫೀಲ್ಡಿಗೆ ಇಳಿದ ಇಡಿ

ನವದೆಹಲಿ: ಅಕ್ರಮ ಆಸ್ತಿ ಗಳಿಕೆ ಮತ್ತು ಮನಿ ಲಾಂಡ್ರಿಂಗ್ ಪ್ರಕರಣ ಸಂಬಂಧ ಡಿಕೆ ಶಿವಕುಮಾರ್ ಅವರನ್ನು ತನಿಖಾ ಸಂಸ್ಥೆಗಳು ಬಿಡುವಂತೆ ಕಾಣ್ತಿಲ್ಲ. ಸಿಬಿಐ ಬೆನ್ನಲ್ಲೇ ಜಾರಿ ನಿರ್ದೇಶನಾಲಯ(ಇಡಿ) ಕೂಡ ಫೀಲ್ಡಿಗೆ ಇಳಿದಿದೆ.ಡಿಕೆಶಿ ಆಪ್ತರು ಮತ್ತು ಬಂಧುಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಒಳಪಡಿಸಬೇಕು ಎಂದು ದೆಹಲಿ ಹೈಕೋರ್ಟ್ ಜಾರಿ ನಿರ್ದೇಶನಾಲಯಕ್ಕೆ ಆದೇಶ ನೀಡಿದೆ. ಡಿಕೆಶಿ ಕುಟುಂಬಸ್ಥರನ್ನು ವಿಚಾರಣೆಗೆ ಒಳಪಡಿಸುವ ಸಂಬಂಧ ದಿನಾಂಕ ಮತ್ತು ಸಮಯವನ್ನು ನಿಗದಿ ಮಾಡುವಂತೆ ಜಾರಿ ನಿರ್ದೇಶನಾಲಯದ …

Read More »

ಇಂದು ಸಂಜನಾ 31ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಜೈಲಿನಲ್ಲೇ ಹುಟ್ಟುಹಬ್ಬ

ಬೆಂಗಳೂರು: ಇಂದು ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ಸ್ ದಂಧೆ ಪ್ರಕರಣದಲ್ಲಿ ಜೈಲು ಸೇರಿರುವ ನಟಿ ಸಂಜನಾ ಹುಟ್ಟುಹಬ್ಬ. ಆದರೆ ಈ ಬಾರಿ ಸಂಜನಾ ಪರಪ್ಪನ ಅಗ್ರಹಾರ ಜೈಲಿನಲ್ಲೇ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳಬೇಕಾಗಿದೆ.‘ ಗಂಡ ಹೆಂಡತಿ’ ಬೆಡಗಿಯ ವಿಶೇಷ ದಿನಕ್ಕೆ ಡ್ರಗ್ಸ್ ಮಾಫಿಯಾ ಕಾವು ತಟ್ಟಿದೆ. ಜೈಲಿನಲ್ಲಿರುವ ಸಂಜನಾಗೆ ಈ ಬಾರಿಯ ಹುಟ್ಟುಹಬ್ಬದ ಸಂಭ್ರಮವಿಲ್ಲ. ಇಂದು ಸಂಜನಾ 31ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಆದರೆ ಈ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲು ಸಂಜನಾ ಮನೆಯವರ ಜೊತೆಗಿಲ್ಲ.ಸಾಮಾನ್ಯವಾಗಿ ಸಂಜನಾ …

Read More »

ಪಾಕ್‍ಗೆ ಯುದ್ಧ ವಿಮಾನಗಳ ವಿವರ ಕಳುಹಿಸುತ್ತಿದ್ದ ಹೆಚ್‍ಎಎಲ್ ಉದ್ಯೋಗಿ ಅರೆಸ್ಟ್

ಮುಂಬೈ: ಪಾಕಿಸ್ತಾನ ಗುಪ್ತಚರ ಇಲಾಖೆ (ಐಎಸ್‍ಐ)ಗೆ ಯುದ್ಧ ವಿಮಾನಗಳ ವಿವರಗಳನ್ನು ಕದ್ದು ಕಳುಹಿಸುತ್ತಿದ್ದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‍ಎಎಲ್)ನ ಉದ್ಯೋಗಿಯನ್ನು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ ಇಂದು ಬಂಧಿಸಿದೆ. ಬಂಧಿತ ಹೆಚ್‍ಎಎಲ್ ಉದ್ಯೋಗಿಯನ್ನು 41 ವರ್ಷದ ದೀಪಕ್ ಶಿರ್ಸತ್ ಎಂದು ಗುರುತಿಸಲಾಗಿದೆ. ಈತ ಮುಂಬೈ ನಾಸಿಕ್ ಬಳಿಯ ಓಜರ್ ವಿಮಾನ ಘಟಕದಲ್ಲಿ ಕೆಲಸ ಮಾಡುತ್ತಿದ್ದ. ಬಂಧಿತನಿಂದ ಮೂರು ಮೊಬೈಲ್ ಫೋನುಗಳು ಮತ್ತು ಐದು ಸಿಮ್‍ಗಳು ಮತ್ತು ಎರಡು ಮೆಮೊರಿ ಕಾರ್ಡ್ …

Read More »