ನವದೆಹಲಿ: ದೇಶದಲ್ಲಿ ಕೊರೊನಾ ಹಾವಳಿ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ 67,708 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 73,07,098 ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 680 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ 1,11,266ಕ್ಕೆ ಏರಿಕೆಯಾಗಿದೆ. ದೇಶದಲ್ಲಿ 8,12,390 ಕೊವಿಡ್ ಸಕ್ರಿಯ ಪ್ರಕರಣಗಳಿದ್ದು, 63,83,442 ಸೋಂಕಿತರು ಕೊರೊನಾದಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ ಎಂದು ಕೇಂದ್ರ …
Read More »Yearly Archives: 2020
ಮಂಗಳಾರತಿಯಲ್ಲಿದ್ದ ಹಣವನ್ನು ಖತರ್ನಾಕ್ ಭಕ್ತೆಯೊಬ್ಬಳು ಎಗರಿಸಿದ ಘಟನೆ
ಮಡಿಕೇರಿ: ದೇವರಿಗೆ ವಿನಮ್ರವಾಗಿ ಕೈ ಮುಗಿದು, ಸುತ್ತು ಬಂದ ಬಳಿಕ ಮಂಗಳಾರತಿಯಲ್ಲಿದ್ದ ಹಣವನ್ನು ಖತರ್ನಾಕ್ ಭಕ್ತೆಯೊಬ್ಬಳು ಎಗರಿಸಿದ ಘಟನೆ ಮಡಿಕೇರಿಯ ವಿಜಯ ವಿನಾಯಕ ದೇವಸ್ಥಾನದಲ್ಲಿ ನಡೆದಿದೆ. ಅಕ್ಟೋಬರ್ 12 ರಂದು ನಡೆದಿರುವ ಮಹಿಳೆಯ ಖತರ್ನಾಕ್ ಕೆಲಸ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬುಧವಾರ ಸಂಜೆ ಸಿಸಿಟಿವಿ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಸದ್ಯ ಈ ವೀಡಿಯೋ ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವೀಡಿಯೋದಲ್ಲೇನಿದೆ? ಮಹಿಳೆ ಮೊದಲು ದೇವರಿಗೆ ಕೈಮುಗಿದು ಅತ್ತ-ಇತ್ತ ನೋಡುತ್ತಾಳೆ. ನಂತರ …
Read More »ಕೈ-ಕಮಲ-ದಳ ಸಾಥ್: ಕಾಫಿನಾಡಿನ ಎನ್.ಆರ್.ಪುರ ಬಂದ್
ಚಿಕ್ಕಮಗಳೂರು: ಶತಮಾನಗಳ ಬದುಕೇ ಬೀದಿಗೆ ಬೀಳುತ್ತೆ ಅಂದಾಗ ಹೋರಾಟ ಅನಿವಾರ್ಯ. ಅಂತಹ ಹೋರಾಟಕ್ಕೆ ಜಿಲ್ಲೆಯ ಎನ್.ಆರ್.ಪುರ ತಾಲೂಕು ಮುಂದಾಗಿದೆ. ಬದುಕಿಗಿಂತ ರಾಜಕೀಯ-ರಾಜಕಾರಣ ದೊಡ್ಡದ್ದಲ್ಲ. ಹಾಗಾಗಿ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಮರಣ ಶಾಸನವಾಗಿರೋ ಭದ್ರಾ ಹುಲಿ ಯೋಜನೆಯ ಬಫರ್ ಜ್ಹೋನ್, ಪರಿಸರ ಸೂಕ್ಷ್ಮ ವಲಯದ ವಿರುದ್ಧ ಎನ್.ಆರ್.ಪುರ ತಾಲೂಕಿನ ಜನ ಪಕ್ಷಾತೀತವಾಗಿ ಹೋರಾಟಕ್ಕಿಳಿದಿದ್ದಾರೆ. ಇಂದು ಬೆಳಗ್ಗೆ ಏಳು ಗಂಟೆಯಿಂದ ಇಡೀ ದಿನ ಎನ್.ಆರ್.ಪುರ ತಾಲೂಕು ಸಂಪೂರ್ಣ ಸ್ತಬ್ಧಗೊಂಡಿದೆ. ಮೈಸೂರಿನ ಅರಸರಾದ ನರಸಿಂಹರಾಜ …
Read More »ಜೆಸಿಬಿಯನ್ನು ಮಣ್ಣು ಅಗೆಯಲು ಬಳಸುತ್ತಾರೆಇದೇ ಜೆಸಿಬಿಯಲ್ಲಿ ತನ್ಬೆನ್ನು ಉಜ್ಜಿಕೊಳ್ಳುವ ಮೂಲಕ ವ್ಯಕ್ತಿಯೊಬ್ಬರು ಭಾರೀ ಸುದ್ದಿ
ಸಾಮಾನ್ಯವಾಗಿ ಜೆಸಿಬಿಯನ್ನು ಮಣ್ಣು ಅಗೆಯಲು ಬಳಸುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಇದೇ ಜೆಸಿಬಿಯಲ್ಲಿ ತನ್ನ ಬೆನ್ನು ಉಜ್ಜಿಕೊಳ್ಳುವ ಮೂಲಕ ವ್ಯಕ್ತಿಯೊಬ್ಬರು ಭಾರೀ ಸುದ್ದಿಯಾಗಿದ್ದಾರೆ. ಹೌದು. ಈ ವಿಚಾರ ನಿಮಗೆ ಅಚ್ಚರಿ ಎನಿಸಿದರೂ ಸತ್ಯ. ಯಾಕಂದ್ರೆ ಇದಕ್ಕೆ ಸಾಕ್ಷಿ ಎಂಬಂತೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಕೂಡ ವೈರಲ್ ಆಗುತ್ತಿದೆ. 41 ಸೆಕೆಂಡಿನ ವೀಡಿಯೋವನನ್ನು ಅಬ್ದುಲ್ ನಝಾರ್ ಎಂಬವರು ತಮ್ಮ ಫೇಸ್‍ಬುಕ್ ಖಾತೆಯಿಂದ ಶೇರ್ ಮಾಡಿಕೊಂಡಿದ್ದಾರೆ. ಈ ವೀಡಿಯೋ …
Read More »ಬೇಲ್ ಪಡೆಯಲ್ಲ, ಸ್ಟೇಷನ್‍ಗೆ ಹೋಗಲ್ಲ – ಕುಸುಮಾ ವಿರುದ್ಧದ ಎಫ್ಐಆರ್‌ಗೆ ಡಿಕೆಶಿ ಕಿಡಿ
ಬೆಂಗಳೂರು: ನಮ್ಮ ಅಭ್ಯರ್ಥಿ ಹೆಣ್ಣು ಮಗಳ ಮೇಲೆ ಹಾಗೂ ಸಿದ್ದರಾಮಯ್ಯ ಎಸ್ಕಾರ್ಟ್ ಡ್ರೈವರ್ ಮೇಲೆ ಎಫ್‍ಐಆರ್ ಆಗಿದೆ. ಈ ಎಫ್ಐಆರ್‌ಗೆ ನಾವು ಬೇಲ್ ಪಡೆಯಲ್ಲ, ಸ್ಟೇಷನ್‍ಗೂ ಹೋಗಲ್ಲ. ಇದಕ್ಕೆ ನಾವು ಹೆದರೋ ಪ್ರಶ್ನೆಯೇ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿಕೆಶಿ, ಪ್ರಜಾಪ್ರಭುತ್ವದಲ್ಲಿ ಇಷ್ಟು ನೀಚವಾದ ರಾಜಕಾರಣ ನಾನು ಯಾವತ್ತೂ ನೋಡಿಲ್ಲ. ಕಾಂಗ್ರೆಸ್ ಪಕ್ಷದ ವಿದ್ಯಾವಂತ ಹೆಣ್ಣುಮಗಳು ಕಾನೂನು ಅರಿವಿರುವ …
Read More »ಮಹಾಮಳೆಗೆ ಉತ್ತರ ಕರ್ನಾಟಕ ನಲುಗಿದ್ದು, ಜನರು ಜೀವ ಉಳಿಸಿಕೊಳ್ಳಲು ಹರಸಾಹಸಪಡುತ್ತಿದ್ದಾರೆ.
ಬೆಂಗಳೂರು: ಮಹಾಮಳೆಗೆ ಉತ್ತರ ಕರ್ನಾಟಕ ನಲುಗಿದ್ದು, ಜನರು ಜೀವ ಉಳಿಸಿಕೊಳ್ಳಲು ಹರಸಾಹಸಪಡುತ್ತಿದ್ದಾರೆ. ಜಲಾಸುರನ ದಾಳಿಗೆ ಕಲಬುರಗಿ, ಯಾದಗಿರಿ, ವಿಜಯಪುರ, ಬೀದರ್, ರಾಯಚೂರು ಜಿಲ್ಲೆಗಳು ತತ್ತರಿಸಿದ್ದು, ಗಾಯದ ಮೇಲೆ ಬರೆ ಎಳೆದಂತೆ ಕೊಯ್ನಾ ಜಲಾಶಯದಿಂದ ನೀರು ಹೊರ ಬಿಡಲಾಗುತ್ತಿದೆ. ಕೊಯ್ನಾದಿಂದ ಅತಿ ಹೆಚ್ಚು ನೀರು ಹೊರ ಬಂದಲ್ಲಿ ಬೆಳಗಾವಿ, ಚಿಕ್ಕೋಡಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಲಿದೆ. ಕಲಬುರಗಿ ಜಿಲ್ಲೆಯಲ್ಲಿ ಇಂದು ಮತ್ತು ನಾಳೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. …
Read More »ಚಾಲಕ ಕಾರ್ ನಿಲ್ಲಿಸಿದೇ ಪೊಲೀಸ್ ಅಧಿಕಾರಿಯನ್ನೇ ಕಾರ್ ಬಾನೆಟ್ ಮೇಲೆ ಕೆಲ ಮೀಟರ್ ಗಳ ದೂರ ಕೊಂಡೊಯ್ದು
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಭಯಾನಕ ಘಟನೆ ನಡೆದಿದ್ದು, ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕೆ ಪೊಲೀಸರು ಕಾರ್ ತಡೆದಿದ್ದಾರೆ. ಚಾಲಕ ಕಾರ್ ನಿಲ್ಲಿಸಿದೇ ಪೊಲೀಸ್ ಅಧಿಕಾರಿಯನ್ನೇ ಕಾರ್ ಬಾನೆಟ್ ಮೇಲೆ ಕೆಲ ಮೀಟರ್ ಗಳ ದೂರ ಕೊಂಡೊಯ್ದು ಕೆಳಗೆ ಕೆಡವಿದ್ದಾನೆ. ಈ ಭಯಾನಕ ವಿಡಿಯೋ ಇದೀಗ ವೈರಲ್ ಆಗಿದೆ. ದೆಹಲಿಯ ಧೌಲಾ ಕುವಾನ್ ಬಳಿ ಈ ಭಯಾನಕ ಘಟನೆ ನಡೆದಿದ್ದು, ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕೆ ಪೊಲೀಸರು ಕಾರ್ …
Read More »ಸಿಪಿಐ ಕಲ್ಯಾಣಶೆಟ್ಟಿ ಸಹಜ ತಾಳ್ಮೆ-ದೊಡ್ಡತನ ಕಾಯ್ದುಕೊಳ್ಳದೇ ಸಾರ್ವಜನಿಕರಿಗೆ ಹಲ್ಲೆನಡೆಸಿ ತಡರಾತ್ರಿ
ಬೆಳಗಾವಿ: ಹುಕ್ಕೇರಿ ಸಿಪಿಐ ಕಲ್ಯಾಣಶೆಟ್ಟಿ ಸಹಜ ತಾಳ್ಮೆ-ದೊಡ್ಡತನ ಕಾಯ್ದುಕೊಳ್ಳದೇ ಸಾರ್ವಜನಿಕರಿಗೆ ಹಲ್ಲೆನಡೆಸಿ ತಡರಾತ್ರಿ ಗನ್ ತೋರಿಸಿ ಬೆದರಿಸಿದ ಬಗ್ಗೆ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಮೊದಲ ಆರೋಪಿಯಾಗಿ ಪ್ರಕರಣ ದಾಖಲಾಗಿದೆ. ಹಲ್ಲೆಗೊಳಗಾದವರು ಕೊಟ್ಟ ದೂರು ಮತ್ತು ದಾಖಲಾದ FIR ಅಂಶಗಳ ಅನ್ವಯ ಖಾನಾಪುರ ತಾಲೂಕಿನ ಕಸಮಳ್ಳಿ ಗ್ರಾಮದಿಂದ ಬರುತ್ತಿದ್ದ ಬೆಳಗಾವಿ ಶಹಾಪುರದ ಇನ್ನೋವಾ ಕಾರು ರಸ್ತೆ ತಗ್ಗಿನ ಬಳಿ ಮುಂದಿನ ಸ್ವಿಫ್ಟ್ ಗೆ ತಾಗಿದ್ದೇ ಈ ಅವಾಂತರಕ್ಕೆ ಕಾರಣ ಎನ್ನಲಾಗಿದೆ. …
Read More »ಈಗಲೂ ಪರಿಸ್ಥಿತಿ ಸಂಪೂರ್ಣ ಚೇತಕರಿಸಿಕೊಂಡಿಲ್ಲ’ ಎಂದು ಸಾರಿಗೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದರು.
ಬೆಳಗಾವಿ: ‘ಕೊರೊನಾ ಹಾಗೂ ಲಾಕ್‌ಡೌನ್ ಕಾರಣದಿಂದ ಬಸ್‌ಗಳ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದರಿಂದ ಸಾರಿಗೆ ಇಲಾಖೆಯು ₹ 3ಸಾವಿರ ಕೋಟಿಗೂ ಅಧಿಕ ನಷ್ಟ ಅನುಭವಿಸಿದೆ. ಈಗಲೂ ಪರಿಸ್ಥಿತಿ ಸಂಪೂರ್ಣ ಚೇತಕರಿಸಿಕೊಂಡಿಲ್ಲ’ ಎಂದು ಸಾರಿಗೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದರು. ಇಲ್ಲಿ ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಇಲಾಖೆಯಲ್ಲಿ 1.30 ಲಕಷ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗ ಬರುತ್ತಿರುವ ಆದಾಯ ಬಸ್‌ಗಳ ಡಿಸೇಲ್‌ಗೆ ಮಾತ್ರವೇ ಸಾಕಾಗುತ್ತಿದೆ. ಆದಾಯ ಇಲ್ಲವೆಂದು ಬಸ್‌ಗಳ ಕಾರ್ಯಾಚರಣೆ …
Read More »‘ಖಾತೆ ಬದಲಾವಣೆ ಆದಾಕ್ಷಣ ಸಚಿವ ಬಿ.ಶ್ರೀರಾಮುಲು ಅಸಮರ್ಥರು ಎಂದರ್ಥವಲ್ಲ.
ಬೆಳಗಾವಿ: ‘ಖಾತೆ ಬದಲಾವಣೆ ಆದಾಕ್ಷಣ ಸಚಿವ ಬಿ.ಶ್ರೀರಾಮುಲು ಅಸಮರ್ಥರು ಎಂದರ್ಥವಲ್ಲ. ಒಳ್ಳೆಯ ಕೆಲಸ ಆಗಬೇಕೆಂದು ಈ ತೀರ್ಮಾನ ಮಾಡಲಾಗಿದೆ’ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು. ಇಲ್ಲಿನ ಸಾಂಬ್ರಾ ವಿಮಾನನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಬುಧವಾರ ಮಾತನಾಡಿದ ಅವರು, ‘ವರಿಷ್ಠರ ಸಲಹೆ ಪಡೆದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಂಪುಟದ ಕೆಲವು ಸಹೋದ್ಯೋಗಿಗಳ ಖಾತೆ ಬದಲಿಸಿದ್ದಾರೆ. ಖಾತೆಗಳನ್ನು ಅದಲು-ಬದಲು ಮಾಡುವ ಅಧಿಕಾರ ಅವರಿಗಿದೆ. ಈ ಬಗ್ಗೆ ಕಾಂಗ್ರೆಸ್‌ನವರೇಕೆ ತಲೆಕೆಡಿಸಿಕೊಳ್ಳಬೇಕು?’ ಎಂದು ಕೇಳಿದರು. …
Read More »