Breaking News

Yearly Archives: 2020

ಸಂಕಷ್ಟದ ತೀವ್ರತೆ ಕಂಡು ಬಂದರೆ ನಾನು ವೈಯಕ್ತಿಕವಾಗಿ ಮತ್ತು ಇಡೀ ಚಿತ್ರ ತಂಡ, ಸಂತ್ರಸ್ತರ ನೆರವಿಗೆ ನಿಲ್ಲುತ್ತದೆ : ಪುನೀತ್

ಕೊಪ್ಪಳ, ಅ.18- ಕೊರೊನಾದಿಂದಾಗಿ ಈಗಾಗಲೇ ಸಿನಿಮಾ ರಂಗ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದು, ಲಾಕ್‍ಡೌನ್ ಬಳಿಕ ಈಗಷ್ಟೇ ಸಿನಿಮಾ ರಂಗದ ಚಟುವಟಿಕೆಗಳು ನಡೆಯುತ್ತಿವೆ. ಕಲಾವಿದರನ್ನು ಪ್ರೋತ್ಸಾಹಿಸಲು ಸಿನಿಮಾ ಮಂದಿರಗಳಿಗೆ ಬಂದು ಸಿನಿಮಾ ನೋಡಿ ನಮ್ಮ ನೆರವಿಗೆ ನಿಲ್ಲಬೇಕು ಎಂದು ನಟ ಪುನೀತ್ ರಾಜïಕುಮಾರ್ ರಾಜ್ಯದ ಜನತೆಯಲ್ಲಿ ಮನವಿ ಮಾಡಿದರು. ಜಿಲ್ಲಾಯ ಗಂಗಾವತಿ ತಾಲೂಕಿನ ಮಲ್ಲಾಪುರದ ಬಳಿ ನಡೆಯುತ್ತಿರುವ ಜೇಮ್ಸ್ ಚಿತ್ರದ ಶೂಟಿಂಗ್‍ನಲ್ಲಿ ಪಾಲ್ಗೊಂಡು ಬಳಿಕ ಮಾತನಾಡಿದ ಅವರು, ಲಾಕ್‍ಡೌನ್‍ನಿಂದಾಗಿ ಸುದೀರ್ಘ 7 …

Read More »

ನಾಳೆಸಿದ್ದರಾಮಯ್ಯ ಬೆಳಗಾವಿ ಗೆ

ಬೆಂಗಳೂರು, ಅ.18- ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನಾಳೆಯಿಂದ ಪ್ರವಾಹ ಪೀಡಿತ ಬಾದಾಮಿ ಕ್ಷೇತ್ರದಲ್ಲಿ ಎರಡು ದಿನ ಪ್ರವಾಸ ಕೈಗೊಳ್ಳಲಿದ್ದಾರೆ. ನಾಳೆ ಬೆಳಗ್ಗೆ 8 ಗಂಟೆಗೆ ಬೆಂಗಳೂರಿನಿಂದ ವಿಮಾನದಲ್ಲಿ ತೆರಳುವ ಸಿದ್ದರಾಮಯ್ಯ ಅವರು, ಬೆಳಗಾವಿ ವಿಮಾನ ನಿಲ್ದಾಣಕ್ಕೆ ತಲುಪಿ ನಂತರ ತಮ್ಮ ಸ್ವಕ್ಷೇತ್ರವಾದ ಬಾಗಲಕೋಟೆ ಜಿಲ್ಲೆಯ ಬಾದಾಮಿಗೆ 12.30ಕ್ಕೆ ತಲುಪಲಿದ್ದಾರೆ. ಬಾದಾಮಿಯಲ್ಲಿ ಕೆಡಿಪಿ ಸಭೆ ನಡೆಸಿ ಅಂದು ಅಲ್ಲೆ ವಾಸ್ತವ್ಯ ಹೂಡಲಿದ್ದಾರೆ. ಮಾರನೇ ದಿನ ಕ್ಷೇತ್ರದಲ್ಲಿ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ …

Read More »

ಹೋಮ್‍ಕ್ವಾರಂಟೈನ್ ನಲ್ಲಿ ಸಚಿವ ಸುರೇಶ್‍ಕುಮಾರ್

ಬೆಂಗಳೂರು, ಅ.18- ಕಳೆದ 13 ದಿನಗಳಿಂದ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್‍ಕುಮಾರ್ ಅವರ ಆರೋಗ್ಯ ಸುಧಾರಿಸಿದ್ದು, ಹೋಮ್‍ಕ್ವಾರಂಟೈನ್ ನಿಗಾ ವ್ಯವಸ್ಥೆಯಲ್ಲಿದ್ದಾರೆ. ಈ ಬಗ್ಗೆ ಖುದ್ದಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು, ಅ.5ರಂದು ನನಗೆ ಕೊರೋನಾ ಸೋಂಕು ತಗುಲಿದೆ ಎಂದು ತಿಳಿದ ನಂತರ ಬಿಬಿಎಂಪಿ ವೈದ್ಯರ ತಂಡದ ಸಲಹೆಯಂತೆ ನಾನು ಮನೆಯಲ್ಲಿಯೇ ಹೋಂ ಐಸೋಲೇಷನ್ ನಲ್ಲಿದ್ದು. ವೈದ್ಯರು ಸೂಚಿಸಿದ ಔಷಧಗಳನ್ನು ತೆಗೆದುಕೊಳ್ಳುತ್ತಿದ್ದು. ಆದರೆ, ಅ.10 …

Read More »

ಬಿಜೆಪಿ ಸರ್ಕಾರಕ್ಕೆ ಮಹಿಳಾ ಧ್ವನಿಯನ್ನು ಅಡಿಗಿಸಲು ಸಾಧ್ಯವಿಲ್ಲ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಟಾಂಗ್ ನೀಡಿದ್ದಾರೆ.

ಬೆಳಗಾವಿ: ಬಿಜೆಪಿ ಸರ್ಕಾರಕ್ಕೆ ಮಹಿಳಾ ಧ್ವನಿಯನ್ನು ಅಡಿಗಿಸಲು ಸಾಧ್ಯವಿಲ್ಲ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಟಾಂಗ್ ನೀಡಿದ್ದಾರೆ. ನಗರದ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಕ್ಯಾಂಟಿನ್ ಉದ್ಘಾಟನಾ ಕಾರ್ಯಕ್ರಮದ ವೇಳೆ ಮಾತನಾಡಿದರು. ಮಹಿಳೆ ಎಂಬ ಕಾರಣಕ್ಕೆ ಬಿಜೆಪಿ ಸರ್ಕಾರ ಅಧಿಕಾರ ದುರುಪಯೋಗ ಪಡಿಸಿಕೊಂಡು, ಆರ್.ಆರ್. ನಗರ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಮೇಲಿನ ದೂರು ದಾಖಲಿಸಿದ್ದಾರೆ. ಇದಕ್ಕೆಲ್ಲಾ ನಾವು ಬಗ್ಗುವವರಲ್ಲ ಎಂದು ವಾಗ್ದಾಳಿ ನಡೆಸಿದರು. ಆರ್.ಆರ್. ಶಿರಾ ಮತಕ್ಷೇತ್ರದಲ್ಲಿ …

Read More »

ಕಾಂಗ್ರೆಸ್ ಭವನ ಕ್ಯಾಂಟಿನ್ ನನ್ನು ಶಾಸಕ ಸತೀಶ ಜಾರಕಿಹೊಳಿ ಇಂದು ಉದ್ಘಾಟಿಸಿದರು.

ಬೆಳಗಾವಿ: ಇಲ್ಲಿನ ಕಾಂಗ್ರೆಸ್ ಕಚೇರಿ ಆವರಣದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಕಾಂಗ್ರೆಸ್ ಭವನ ಕ್ಯಾಂಟಿನ್ ನನ್ನು ಶಾಸಕ ಸತೀಶ ಜಾರಕಿಹೊಳಿ ಇಂದು ಉದ್ಘಾಟಿಸಿದರು. ಇದೇ ವೇಳೆ ಮಾತನಾಡಿದ ಅವರು, ಮೂರು ಉದ್ದೇಶದಿಂದ ಕಾಂಗ್ರೆಸ್ ಕಚೇರಿಯಲ್ಲಿ ಕ್ಯಾಂಟಿನ್ ತೆರೆ ಯಲಾಗಿದೆ. ಸಾಮಾನ್ಯ ಜನರು, ಕಾರ್ಯಕರ್ತರಿಗೆ ಕಡಿಮೆ ಬೆಲೆಯಲ್ಲಿ ಆಹಾರ ನೀಡುವ ಹಾಗೂ ಕಾಂಗ್ರೆಸ್ ಮಹಾನ್ ನಾಯಕರ ಇತಿಹಾಸ ತಿಳಿಸಿಕೊಡುವ ಉದ್ದೇಶದಿಂದ ಕ್ಯಾಂಟಿನ್ ತೆರೆಯಲಾಗಿದೆ ಎಂದರು. ಈ ಸಂದರ್ಭದಲ್ಲಿ ಶಾಸಕಿಯರಾದ ಲಕ್ಷ್ಮಿ ಹೆಬ್ಬಾಳ್ಕರ್, ಅಂಜಲಿ …

Read More »

ನಮಗೆ ಮಾಡಲು ಬೇರೆ ಕೆಲಸ ಇದೆ ಹೀಗಾಗಿ ಸಹೋದರ ಚನ್ನರಾಜ್ ಹಟ್ಟಿಹೊಳಿ ಡಿಸಿಸಿ ಬ್ಯಾಂಕ್ ಇಲೆಕ್ಷನ್ ಗೆ ನಿಲ್ಲುವದಿಲ್ಲ: ಲಕ್ಷ್ಮೀ ಹೆಬ್ಬಾಳಕರ

ಬೆಳಗಾವಿ- ನಮಗೆ ಮಾಡಲು ಬೇರೆ ಕೆಲಸ ಇದೆ ಹೀಗಾಗಿ ಸಹೋದರ ಚನ್ನರಾಜ್ ಹಟ್ಟಿಹೊಳಿ ಡಿಸಿಸಿ ಬ್ಯಾಂಕ್ ಇಲೆಕ್ಷನ್ ಗೆ ನಿಲ್ಲುವದಿಲ್ಲ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದ್ದಾರೆ ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಹಸಿದವರಿಗೆ ಊಟ ಕೊಡುವುದು ಕಾಂಗ್ರೆಸ್ ಕಾನ್ಸೆಪ್ಟ್ಕಾ ರ್ಯಕರ್ತರಿಗೆ ಮಾತ್ರ ಕ್ಯಾಂಟೀನ್ ಅಲ್ಲ, ಎಲ್ಲಾ ಸಾರ್ವಜನಿಕರಿಗೂ ಅನುಕೂಲ ಆಗುತ್ತೆ,ಬೆಳಗಾವಿ ಕಾಂಗ್ರೆಸ್ ಕಚೇರಿಯಲ್ಲಿ ಸುಸಜ್ಜಿತ, ಹೈಜೆನಿಕ್ ಕ್ಯಾಂಟೀನ್ ಉದ್ಘಾಟನೆ ಮಾಡ್ತಿದೀವಿಬೆಳಗಾವಿಯಲ್ಲಿ ಕೆಪಿಸಿಸಿ ವಕ್ತಾರೆ ಲಕ್ಷ್ಮೀ …

Read More »

ಬೆಂಗ್ಳೂರು ವಿಮಾನ ನಿಲ್ದಾಣದ ಗೋದಾಮಿನಿಂದಲೇ 2.5 ಕೆಜಿ ಚಿನ್ನ ನಾಪತ್ತೆ

ಬೆಂಗಳೂರು: ಕೇರಳ ಚಿನ್ನ ಸ್ಮಗ್ಲಿಂಗ್‌ಗೆ ದಾವೂದ್‌ ಲಿಂಕ್‌ ಇದೆ ಎಂಬ ಸ್ಫೋಟಕ ವಿಚಾರ ತನಿಖೆಯ ವೇಳೆ ಬಯಲಾಗುತ್ತಿದ್ದಂತೆ ಇತ್ತ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಂಡ ಚಿನ್ನವೇ ನಾಪತ್ತೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜಪ್ತಿ ಮಾಡಲಾಗಿದ್ದ 2.5 ಕೆಜಿ ಚಿನ್ನ ನಾಪತ್ತೆಯಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿ ವಿರುದ್ಧ ಸಿಬಿಐ ಅಧಿಕಾರಿಗಳು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. ಸ್ಟಮ್ಸ್‌ ಇಲಾಖೆಯ ಜಂಟಿ ಆಯ್ತುಕ ಎಂ. ಜೆ. ಚೇತನ್‌ …

Read More »

ಅಜ್ಜಿ ಅಸ್ಥಿ ವಿಸರ್ಜನೆಗೆ ನದಿಗಿಳಿದಿದ್ದ ಮೊಮ್ಮಗ ನೀರುಪಾಲಾಗಿರುವ

ಮಂಡ್ಯ: ಅಜ್ಜಿ ಅಸ್ಥಿ ವಿಸರ್ಜನೆಗೆ ನದಿಗಿಳಿದಿದ್ದ ಮೊಮ್ಮಗ ನೀರುಪಾಲಾಗಿರುವ ಘಟನೆ ಶ್ರೀರಂಗಪಟ್ಟಣದ ಗೋಸಾಯ್ ಘಾಟ್ ಬಳಿ ನಡೆದಿದೆ. ಶ್ರೀಪ್ರಸಾದ್(32) ಕಾವೇರಿ ನದಿಯಲ್ಲಿ ಕೊಚ್ಚಿಹೋದ ವ್ಯಕ್ತಿ. 3 ದಿನದ ಹಿಂದೆ ನಿಧನರಾಗಿದ್ದ ಅಜ್ಜಿಯ ಅಸ್ಥಿ ವಿಸರ್ಜನೆಗಾಗಿ ಶ್ರೀಪ್ರಸಾದ್ ಮತ್ತು ಕುಟುಂಬಸ್ಥರು ಬೆಂಗಳೂರಿನಿಂದ ಶ್ರೀರಂಗಪಟ್ಟಣಕ್ಕೆ ಬಂದಿದ್ದರು. ಹೀಗಾಗಿ ಗೋಸಾಯ್ ಘಾಟ್ ಬಳಿ ವಿಧಿ ವಿಧಾನ ಮುಗಿಸಿ ಕುಟುಂಬದ ಮೂವರು ಅಸ್ಥಿ ವಿಸರ್ಜನೆಗೆ ಕಾವೇರಿ ನದಿಗೆ ಇಳಿದಿದ್ದರು. ಈ ವೇಳೆ ಶ್ರೀಪ್ರಸಾದ್ ನೀರಿನಲ್ಲಿ ಕೊಚ್ಚಿಹೋಗಿದ್ದಾರೆ. ಹಾಗೂ …

Read More »

ನಾಯಂಡಹಳ್ಳಿ ಬಳಿ ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಘಟನೆ

ಬೆಂಗಳೂರು: ನಾಯಂಡಹಳ್ಳಿ ಬಳಿ ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ. ನಾಯಂಡಹಳ್ಳಿಯ ವಿಶ್ವಪ್ರಿಯಾ ಅಪಾರ್ಟ್ಮೆಂಟ್ ಮುಂಭಾಗದಲ್ಲಿ ಇಂದು ಬೆಳಗ್ಗೆ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.   ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕಾರಿನಲ್ಲಿದ್ದ ಚಾಲಕ ಹಾಗೂ ಇತರರು ವಾಹನದ ಗಾಜು ಒಡೆದು ಹೊರಬಂದಿದ್ದಾರೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಮುಂದಾದರು. ಸದ್ಯ ಯಾರಿಗೂ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಅನ್ನೋ ಮಾಹಿತಿ ಲಾಭ್ಯವಾಗಿದೆ. ಕಾರಿನಲ್ಲಿ …

Read More »

ಜೇಮ್ಸ್ ಚಿತ್ರೀಕರಣ – ಶೂಟಿಂಗ್ ನೋಡಲು ಸೇರಿದ ಅಪಾರ ಅಭಿಮಾನಿಗಳು

ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಮಲ್ಲಾಪೂರ ಗ್ರಾಮ ಸೀಮಾ ವ್ಯಾಪ್ತಿಯ ವಾಣೀಭದ್ರೇಶ್ವರ ದೇವಸ್ಥಾನ ಬಳಿಯ ನಟ ಪುನೀತ ರಾಜಕುಮಾರ ನಟಿಸುತ್ತಿರುವ ಜೇಮ್ಸ್ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಕಳೆದ ನಾಲ್ಕೈದು ದಿನಗಳಿಂದ ಚಿತ್ರ ತಂಡ ಹೊಸಪೇಟೆ ಸೇರಿದಂತೆ ನಾನಾ ಭಾಗಗಳಲ್ಲಿ ಚಿತ್ರೀಕರಣದಲ್ಲಿ ತೊಡಗಿಕೊಂಡಿದೆ. ಇಂದು ಗಂಗಾವತಿ ಭಾಗದಲ್ಲಿ ನಡೆಯುತ್ತಿರುವ ಶೂಟಿಂಗ್‍ಗೆ ಪುನೀತ್ ಆಗಮನದ ಸುದ್ದಿ ತಿಳಿದ ಅಭಿಮಾನಿಗಳು ಚಿತ್ರೀಕರಣ ಸ್ಥಳಕ್ಕೆ ಆಗಮಿಸಿದ್ದರು. ನೆಚ್ಚಿನ ನಟನ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದರು. ಅಭಿಮಾನಿಗಳನ್ನ …

Read More »