ಬೆಂಗಳೂರು : ಕುಟುಂಬ ರಾಜಕಾರಣವೇ ಮೇಳೈಸುತ್ತಿರುವ ದಿನಗಳಲ್ಲಿ ತಮ್ಮ ತಂದೆ-ತಾಯಿಯ ಗೆಲುವಿಗಾಗಿ ಮಕ್ಕಳು ಬೆವರು ಹರಿಸುತ್ತಿರುವುದು ಈ ಉಪಚುನಾವಣೆಯ ವಿಶೇಷವಾಗಿದೆ. ಅಪ್ಪನ ಹೆಸರು ಹೇಳಿಕೊಂಡು ರಾಜಕಾರಣ ಮಾಡುವ ಈ ದಿನಗಳಲ್ಲಿ ತಮ್ಮ ತಂದೆಯ ಕುರ್ಚಿ ಭದ್ರಪಡಿಸಲು, ಅಪ್ಪನ ಗೆಲುವಿಗಾಗಿ ಮಗ, ತಾಯಿಯ ಗೆಲುವಿಗೆ ಮತ್ತೊಬ್ಬ ಪುತ್ರ ಮತಬೇಟೆ ಮಾಡುತ್ತಿರುವುದು ಶಿರಾದಲ್ಲಿ ಕಂಡುಬರುತ್ತಿದೆ. ಉಪಚುನಾವಣೆಯಲ್ಲಿ ಸೋತರೆ, ತಮ್ಮ ತಂದೆಯ ಕುರ್ಚಿಗೆ ಕಂಟಕ ಎಂಬುದು ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ಬಿ.ವೈ ವಿಜೇಯೇಂದ್ರಗೆ …
Read More »Yearly Archives: 2020
ಕನ್ನಡಾಂಬೆಯ ತೇರಿಗೆ ಸಾರಥಿಯಾಗಲು ಘಟಾನುಘಟಿಗಳ ಪ್ರಚಾರ ಶುರು
# ಕೆ.ಎಸ್.ಜನಾರ್ದನ್, ಕನ್ನಡ ನಾಡು-ನುಡಿ, ನೆಲ-ಜಲ, ಸಂಸ್ಕøತಿಯ ಉಳಿವು ಹಾಗೂ ಕನ್ನಡತನದ ಸಾಕಾರದ ಮೂಲಧ್ಯೇಯದೊಂದಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಇಚ್ಛಾಶಕ್ತಿಯೊಂದಿಗೆ ಉದಯಿಸಿದ್ದೇ ಕನ್ನಡ ಸಾಹಿತ್ಯ ಪರಿಷತ್. ಪರಿಷತ್ತಿನ ಆರಂಭ ಕಾಲದಿಂದಲೂ 1940ರವರೆಗೂ ಅಧ್ಯಕ್ಷರನ್ನು ಅವರ ಸಾಹಿತ್ಯ, ಕನ್ನಡ ನಾಡು-ನುಡಿಯ ಬಗೆಗಿನ ಸೇವೆ, ಬದ್ಧತೆ ಯನ್ನು ಪರಿಗಣಿಸಿ ಸರ್ವಾನುಮತದಿಂದ ಆಯ್ಕೆ ಮಾಡಲಾಗುತ್ತಿತ್ತು. ಆ ನಂತರವೇ ಪರಿಷತ್ತಿಗೂ ಚುನಾವಣೆಯ ಪದ್ಧತಿ ಜಾರಿಗೊಂಡಿತು. ತಿರುಮಲೆ ತಾತಾಚಾರ್ಯ ಶರ್ಮ, ಡಾ.ಮಾಸ್ತಿ ವೆಂಕಟೇಶ ಅಯ್ಯಂಗಾರ್, …
Read More »ಕೊರೊನಾ ಕಂಟ್ರೋಲ್‍ಗೆ ದೊಣ್ಣೆ ಅಸ್ತ್ರ ಪ್ರಯೋಗ
ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಇದೀಗ ಕೊರೊನಾ ಟೆಸ್ಟ್ ಮಾಡಿಸುವಂತೆ ‘ದೊಣ್ಣೆ ನಾಯಕರು’ ಎಂಟ್ರಿ ಕೊಟ್ಟಿದ್ದಾರೆ.ಹೌದು. ಬೆಂಗಳೂರಿನಲ್ಲಿ ಟಾರ್ಗೆಟ್ ಟಾರ್ಚರ್ ಗೆ ಫೀಲ್ಡ್ ವಾರಿಯರ್ಸ್ ನಯಾ ಐಡಿಯಾವೊಂದನ್ನು ಹುಡುಕಿಕೊಂಡಿದ್ದಾರೆ. ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಲು ಬಾರದ ಜನರ ಮೇಲೆ ಬಿಬಿಎಂಪಿ ದೊಣ್ಣೆ ಅಸ್ತ್ರ ಪ್ರಯೋಗ ಮಾಡಲು ಮುಂದಾಗಿದೆ. ಬಸ್ ಸ್ಟ್ಯಾಂಡ್ ಗಳಲ್ಲಿ ಟೆಂಟ್ ಹಾಕಿಕೊಂಡು, ದೊಣ್ಣೆ ಇಟ್ಕೊಂಡೇ ಸಿಬ್ಬಂದಿ ಜನಸಾಮಾನ್ಯರನ್ನು ಗುಡ್ಡೆ ಹಾಕಿ ಟೆಸ್ಟಿಂಗ್ …
Read More »ಡಿಕೆ ಶಿವಕುಮಾರ್ ಆರ್‍ಸಿಬಿ ಛತ್ರಿ ಹಿಡಿದ ಮೇಲೆ ಗೆಲುವಿನ ಲಕ್ಷ್ಮೀ ಆರ್‌ಸಿಬಿಗೆ ಒಲಿಯಿತು ಎಂದು ಬರೆದುಕೊಂಡಿದ್ದಾರೆ
ತುಮಕೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ತುಂತುರು ಮಳೆಯಿಂದ ರಕ್ಷಣೆ ಪಡೆಯಲು ಹಿಡಿದಿದ್ದ ಆರ್‌ಸಿಬಿ ಛತ್ರಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ಶಿರಾ ಉಪ ಚುನಾವಣೆಯ ಪ್ರಚಾರದಲ್ಲಿ ಡಿಕೆ ಶಿವಕುಮಾರ್ ಅವರು ಬ್ಯುಸಿಯಾಗಿದ್ದು, ಈ ವೇಳೆ ಶಿರಾದ ದೊಡ್ಡ ಆಲದ ಮರ ಬಳಿ ಪ್ರಚಾರ ಕಾರ್ಯದಲ್ಲಿದ್ದ ಸಂದರ್ಭದಲ್ಲಿ ದಿಢೀರ್ ಎಂದು ತುಂತುರು ಮಳೆ ಆರಂಭವಾಗಿತ್ತು. ಮಳೆ ಆರಂಭವಾಗುತ್ತಿದಂತೆ ಪ್ರಚಾರ ವಾಹನದಲ್ಲಿದ್ದ ಕಾರ್ಯಕರ್ತರು …
Read More »ನಿಮ್ಮ ಪಕ್ಷದಲ್ಲಿ ನಿಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಿ ಸಿಟಿ ರವಿಯವರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯಗೆ ಟಾಂಗ್
ಬೆಂಗಳೂರು: ನಿಮ್ಮ ಪಕ್ಷದಲ್ಲಿ ನಿಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಿ ಎಂದು ಟ್ವೀಟ್ ಮಾಡುವ ಮೂಲಕ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿಯವರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯಗೆ ಟಾಂಗ್ ನೀಡಿದ್ದಾರೆ. ಸದ್ಯ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಸಿದ್ದರಾಮಯ್ಯ ಅವರ ನಡುವೆ ಟ್ವಿಟ್ಟರ್ ವಾರ್ ನಡೆಯುತ್ತಿದೆ. ಇಂದು ನಳಿನ್ ಅವರನ್ನು ಸಿದ್ದರಾಮಯ್ಯ ಕಾಡುಮನುಷ್ಯನಿಗೆ ಹೊಲಿಕೆ ಮಾಡಿದಕ್ಕೆ ಬಿಜೆಪಿ ನಾಯಕರು ಸಿದ್ದರಾಮಯ್ಯನ ಮೇಲೆ ಮುಗಿಬಿದ್ದಿದ್ದಾರೆ. ಈಗ ಸಿಟಿ ರವಿಯವರೂ …
Read More »ಸಿಲಿಕಾನ್ ಸಿಟಿಯಲ್ಲಿ ರಾತ್ರಿ ಸುರಿದ ಭಾರೀ ಮಳೆಗೆ ಜನ ಕಂಗಾಲಾ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರಾತ್ರಿ ಸುರಿದ ಭಾರೀ ಮಳೆಗೆ ಜನ ಕಂಗಾಲಾಗಿದ್ದು, ಕೋರಮಂಗಲ ಸೇರಿದಂತೆ ಹಲವೆಡೆಗಳಲ್ಲಿ ರಸ್ತೆ ಜಲಾವೃತವಾಗಿದ್ದು, ಅಂಡರ್ ಪಾಸ್‍ಗಳು ತುಂಬಿ ತುಳುಕುತ್ತಿದ್ದವು. ರಾತ್ರಿ ಬಿಟ್ಟು ಬಿಡದೆ ಮಳೆ ಸುರಿದಿದ್ದು, ಮೆಜೆಸ್ಟಿಕ್, ಕೋರಮಂಗಲ, ಯಶವಂತಪುರ, ನಂದಿನಿ ಲೇಔಟ್, ಬಸವನಗುಡಿ, ಕೆ.ಆರ್. ಮಾರ್ಕೆಟ್ ಸೇರಿದಂತೆ ವಿವಿಧ ಭಾಗಗಳಲ್ಲಿ ವರುಣ ಅಬ್ಬರಿಸಿದ್ದಾನೆ. ರಾತ್ರಿ ಒಂದೇ ಸಮ ಸುರಿದ ಮಳೆಗೆ ಕೊರಮಂಗಲ ರಸ್ತೆ ಜಲಾವೃತವಾಗಿತ್ತು. ಗುರುವಾರ ಸಂಜೆಯಿಂದಲೇ ಆರಂಭವಾದ ತುಂತುರು ಮಳೆ …
Read More »ಧಾರವಾಡದ ನಾರಾಯಣ ಹೃದಾಯಲಯ ನವಜಾತ ಶಿಶುವಿಗೆ ಪುನರ್ಜನ್ಮ ನೀಡಿದೆ.
ಧಾರವಾಡ: ಗಂಭೀರ ಹೃದಯ ರೋಗದಿಂದ ಬಳಲುತ್ತಿದ್ದ 20 ದಿನದ ಮಗುವಿಗೆ ಯಶಸ್ವಿ ಹೃದಯ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಧಾರವಾಡದ ನಾರಾಯಣ ಹೃದಾಯಲಯ ನವಜಾತ ಶಿಶುವಿಗೆ ಪುನರ್ಜನ್ಮ ನೀಡಿದೆ. ಹುಬ್ಬಳ್ಳಿ ಮೂಲದ ಫಾರುಕ್ ಮತ್ತು ಮುಬಿನ್ ದಂಪತಿಯ 20 ದಿನದ ಮಗು ಹುಟ್ಟಿದಾಗ 2.3 ಕೆಜೆ ತೂಕವಿತ್ತು. ಮಗುವಿನ ಹೃದಯದಲ್ಲಿ ರಕ್ತ ಪರಿಚಲನೆ ಸಮಸ್ಯೆ ಕಾರಣದಿಂದ ಕುಟುಂಬದವರು ಮಗುವಿನ ಚಿಂತೆಯಲ್ಲೇ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮಾಡಿಸಿದರೂ ಅದು ಸರಿಯಾಗಿರಲಿಲ್ಲ. ನಂತರ …
Read More »ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ- ವಾಯುವ್ಯ ಸಾರಿಗೆ ಸಂಸ್ಥೆಯ ಆದಾಯದಲ್ಲಿ ಚೇತರಿಕೆ
ಹುಬ್ಬಳ್ಳಿ: ಲಾಕ್‍ಡೌನ್ ಬಹುತೇಕ ಸಡಿಲಿಗೊಳಿಸಿದ ಹಿನ್ನೆಲೆಯಲ್ಲಿ ಜನರ ಕೋವಿಡ್ ಪೂರ್ವ ಸ್ಥಿತಿಗೆ ಮರಳುತ್ತಿದ್ದು, ಇದರೊಂದಿಗೆ ಬಸ್ ಪ್ರಯಾಣಿಕರ ಸಂಖ್ಯೆಯೂ ಏರಿಕೆಯಾಗಿದೆ. ಕಳೆದ ತಿಂಗಳಿಗಿಂತ ಅಕ್ಟೋಬರ್ ನಲ್ಲಿ ವಾಕರಸಾ ಸಂಸ್ಥೆಯ ಹುಬ್ಬಳ್ಳಿ ವಿಭಾಗದ ಸಾರಿಗೆ ಆದಾಯ ಹೆಚ್ಚಾಗಿದ್ದು, ಮತ್ತಷ್ಟು ಮಾರ್ಗಗಳಲ್ಲಿ ಬಸ್ಸುಗಳನ್ನು ಹೆಚ್ಚಿಸಲಾಗಿದೆ. ಲಾಕ್‍ಡೌನ್ ಪೂರ್ವದಲ್ಲಿ ಹುಬ್ಬಳ್ಳಿ ವಿಭಾಗದಲ್ಲಿ 419 ಬಸ್ಸುಗಳು ಪ್ರತಿದಿನ 1.63 ಲಕ್ಷ ಕಿ.ಮೀ ಸಂಚರಿಸುತ್ತಿದ್ದವು. 1.25 ಲಕ್ಷ ಜನರಿಂದ 1.35 ಲಕ್ಷ ಜನರು ಪ್ರತಿದಿನ ಪ್ರಯಾಣ ಮಾಡುತ್ತಿದ್ದರು. …
Read More »ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಜೀವದ ಹಂಗು ತೊರೆದು ಕಾರ್ಯನಿರ್ವಹಿಸುತ್ತಿರುವ ವೈದ್ಯರಿಗೆ ಸೋಂಕು,ಕೋವಿಡ್ ವಾರ್ಡಿಗೆ ಹೋಗೋಕೆ ಸಿಬ್ಬಂದಿಗೆ ಭಯ
ಹುಬ್ಬಳ್ಳಿ: ರಾಜ್ಯದಲ್ಲಿ ಕಿಲ್ಲರ್ ಕೊರೊನಾ ರಣಕೇಕೆ ಹಾಕುತ್ತಿದೆ. ಚಿಕ್ಕವರಿಂದ ಹಿಡಿದು ವಯೋವೃದ್ಧರವರೆಗೂ ಸೋಂಕು ಇನ್ನಿಲ್ಲದಂತೆ ಹರಡುತ್ತಿದೆ. ಈ ಮಧ್ಯೆ ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರಿಗೂ ಸಹ ಕೊರೊನಾ ಬೆನ್ನು ಬಿಡದೇ ಕಾಡ್ತಾ ಇದೆ. ಹೀಗಾಗಿ ನೂರಾರು ವೈದ್ಯರು, ವೈದ್ಯಕೀಯ ಸಿಬ್ಬಂದಿಗೆ ಸೋಂಕು ಹರಡುತ್ತಿರುವ ಪರಿಣಾಮ ವೈದ್ಯರು ಸಹ ಚಿಕಿತ್ಸೆ ನೀಡಲು ಹಿಂದೆ ಮುಂದೆ ನೋಡುವಂತಾಗಿದೆ. ರಾಜ್ಯದಲ್ಲಿ ಕಿಲ್ಲರ್ ಕೊರೊನಾ ದಿನೇ ದಿನೇ ಹೆಚ್ಚಾಗುತ್ತಲೇ ಸಾಗಿದೆ. ಅದರಲ್ಲೂ ಧಾರವಾಡ ಜಿಲ್ಲೆಯಲ್ಲೂ ಸಹ …
Read More »ಮಂಡ್ಯದ ಮಿಮ್ಸ್ ಆಸ್ಪತ್ರೆಯ ಬೆಡ್‍ಗಳಲ್ಲಿ ಬೆಚ್ಚಗೆ ಮಲಗುತ್ತಿವೆ ನಾಯಿಗಳು!
ಮಂಡ್ಯ: ಕೊರೊನಾ ಅಟ್ಟಹಾಸದಿಂದ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಬೆಡ್ ಇಲ್ಲ ಅನ್ನೋ ಸಂಖ್ಯೆಯೇ ಹೆಚ್ಚು. ಆದರೆ ಇಲ್ಲೊಂದು ಆಸ್ಪತ್ರೆ ರೋಗಿಗಳಿಗೆ ಯಾಕೆ ನಾವು ಶ್ವಾನಗಳಿಗೂ ಬೆಡ್ ಕೊಡುತ್ತೀವಿ ಬನ್ನಿ ಅನ್ನುತ್ತಿದೆ. ಹೌದು. ಡಾಕ್ಟರೇ ನಾವು ಬೆಡ್ ಮೇಲೆ ಮಲಗಿದ್ದೇವೆ, ನೀವು ಎಲ್ಲಿ ಹೋಗಿದ್ದೀರಾ ಬಂದು ಟ್ರೀಟ್‍ಮೆಂಟ್ ಕೊಡಿ ಅನ್ನೋ ದೃಶ್ಯ ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಕಂಡು ಬಂದಿದೆ. ಮಂಡ್ಯ ಜಿಲ್ಲೆಯ ಮಿಮ್ಸ್ ಆಸ್ಪತ್ರೆಯ ಬೆಡ್‍ಗಳ ಮೇಲೆ ಸಾಲು ಸಾಲಾಗಿ ನಾಯಿಗಳು ಬೆಚ್ಚಗೆ …
Read More »