ಮೈಸೂರು: ಜಗತ್ತಿನಾದ್ಯಂತ ಕೋವಿಡ್-19 ತನ್ನ ಕಬಂಧಬಾಹು ವಿಸ್ತರಿಸಿರುವ ಹಿನ್ನೆಲೆ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಸರಳವಾಗಿ ನಡೆಯುತ್ತಿದ್ದು, ದಸರೆಯ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ ಅರಮನೆ ಆವರಣಕ್ಕಷ್ಟೇ ಸೀಮಿತವಾಗಿದೆ. ಕೋವಿಡ್-19 ಸೋಂಕು ಸಂಕಷ್ಟ ಹಾಗೂ ನೆರೆ ಹಾವಳಿಯಿಂದ ತತ್ತರಿಸಿರುವ ರಾಜ್ಯ ಸರ್ಕಾರ ಈ ಬಾರಿಯ ದಸರಾ ಉತ್ಸವವನ್ನು ಸರಳವಾಗಿ ಆಚರಿಸಲು ತೀರ್ಮಾನಿಸಿದ್ದು, ಸಾಂಪ್ರದಾಯಿಕ ಆಚರಣೆ ಕೈಬಿಡದೆ, ವೈಭವಕ್ಕೆ ಕಡಿವಾಣ ಹಾಕುವ ಮೂಲಕ ಜನಸಂದಣಿ ಉಂಟಾಗದಂತೆ ಸರಳ ಹಾಗೂ ಸಂಕೇತಿಕವಾಗಿ ಆಚರಿಸಲಾಗುತ್ತಿದೆ. …
Read More »Yearly Archives: 2020
ಸುರೇಶ್ ಅಂಗಡಿ ಸಿಎಂ ಆಗುತ್ತಿದ್ರು ಅಂತಾ ರಮೇಶ್ ಜಾರಕಿಹೊಳಿ ಪರೋಕ್ಷವಾಗಿ ಹೇಳಿಕೆ ಕೊಟ್ರಾ ಅನ್ನೋ ಮಾತು ಕೇಳಿಬಂದಿದೆ.
ಬೆಳಗಾವಿ: ಸುರೇಶ್ ಅಂಗಡಿ ಬದುಕಿದ್ದರೆ 2-3 ತಿಂಗಳಲ್ಲಿ ದೊಡ್ಡ ಹುದ್ದೆ ಸಿಗುತ್ತಿತ್ತು ಎಂದು ಗೋಕಾಕ್‌ನಲ್ಲಿ ಸಚಿವ ರಮೇಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ. ಸುರೇಶ್ ಅಂಗಡಿಗೆ ಒಳ್ಳೆಯ ಭವಿಷ್ಯವಿರುತ್ತಿತ್ತು. ಅವರಿಗೆ ವಿಚಿತ್ರ ಹುದ್ದೆ ಸಿಗುತ್ತಿತ್ತು ಎಂದು ರಮೇಶ್ ಹೇಳಿದ್ದಾರೆ. ಈ ಮೂಲಕ ಸುರೇಶ್ ಅಂಗಡಿ ಸಿಎಂ ಆಗುತ್ತಿದ್ರು ಅಂತಾ ರಮೇಶ್ ಜಾರಕಿಹೊಳಿ ಪರೋಕ್ಷವಾಗಿ ಹೇಳಿಕೆ ಕೊಟ್ರಾ ಅನ್ನೋ ಮಾತು ಕೇಳಿಬಂದಿದೆ. ಆದರೆ ಸುರೇಶ್ ಅಂಗಡಿ ನಮ್ಮನ್ನಗಲಿದ್ದು ದುರ್ದೈವ. ಒಳ್ಳೆಯವರನ್ನು ಆ ದೇವರು …
Read More »ನವರಾತ್ರಿಯ ಕೊನೆಯ ದಿನ, ಆಯುಧ ಪೂಜೆಯ ಹಿನ್ನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹುತಾತ್ಮರಿಗೆ ನಮನ ಸಲ್ಲಿಸಿ, ಶಸ್ತ್ರಾಸ್ತ್ರ ಪೂಜೆ ಸಲ್ಲಿಸಿದ್ದಾರೆ.
ಪಶ್ಚಿಮ ಬಂಗಾಳ: ನವರಾತ್ರಿಯ ಕೊನೆಯ ದಿನ, ಆಯುಧ ಪೂಜೆಯ ಹಿನ್ನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹುತಾತ್ಮರಿಗೆ ನಮನ ಸಲ್ಲಿಸಿ, ಶಸ್ತ್ರಾಸ್ತ್ರ ಪೂಜೆ ಸಲ್ಲಿಸಿದ್ದಾರೆ. ಡಾರ್ಜಿಲಿಂಗ್ನಲ್ಲಿರುವ ಸುಕ್ನಾ ಯುದ್ಧ ಸ್ಮಾರಕ ಬಳಿ ತೆರಳಿ ರಾಜನಾಥ್ಸಿಂಗ್ ಹುತಾತ್ಮರಿಗೆ ಗೌರವ ಸಲ್ಲಿಸಿದ್ದಾರೆ. ಜೊತೆಗೆ ರಕ್ಷಣಾ ಸಚಿವರು ಯುದ್ಧ ಟ್ಯಾಂಕರ್, ಸೇನಾ ವಾಹನ ಸೇರಿದಂತೆ ಯುದ್ಧಕ್ಕೆ ಬಳಸುವ ಶಸ್ತ್ರಾಸ್ತ್ರಗಳಿಗೆ ಪೂಜೆ ಸಲ್ಲಿಸಿದ್ರು. ಈ ವೇಳೆ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನಾರವಾಣೆ ಉಪಸ್ಥಿತರಿದ್ದರು. ಸದ್ಯ …
Read More »ಮದ್ಯ ಸೇವಿಸಲು ಹಣ ನೀಡದ್ದಕ್ಕೆ ಪಾಪಿ ಪತಿಯೊಬ್ಬ ಪತ್ನಿಯನ್ನು ಕೊಲೆಗೈದಿರುವ ಘಟನೆ
ವಿಜಯಪುರ: ಮದ್ಯ ಸೇವಿಸಲು ಹಣ ನೀಡದ್ದಕ್ಕೆ ಪಾಪಿ ಪತಿಯೊಬ್ಬ ಪತ್ನಿಯನ್ನು ಕೊಲೆಗೈದಿರುವ ಘಟನೆ ಜಿಲ್ಲೆಯ ಆಲಮೇಲ ತಾಲೂಕಿನ ದೇವನಣಗಾಂವ್ ಗ್ರಾಮದಲ್ಲಿ ನಿನ್ನೆ ತಡರಾತ್ರಿ ನಡೆದಿದೆ. 45 ವರ್ಷದ ಮಲಕವ್ವ ಹರಗೋಲ ಕೊಲೆಯಾದ ದುರ್ದೈವಿ. ಮದ್ಯ ಸೇವಿಸಲು ಹಣ ನೀಡದ ಹಿನ್ನೆಲೆಯಲ್ಲಿ ಸಿಟ್ಟಿಗೆದ್ದ ಪತಿ ಶಿವಪ್ಪ ಹರಗೋಲ ಕೊಡಲಿಯಿಂದ ಕೊಚ್ಚಿ ಕೊಚ್ಚಿ ಪತ್ನಿಯನ್ನು ಹತ್ಯೆ ಮಾಡಿದ್ದಾನೆ. ಬಳಿಕ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಆಲಮೇಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.
Read More »ಯುವಕನನ್ನು ಕಿಡ್ನ್ಯಾಪ್ ಮಾಡಿ ಕೊನೆಗೆ ಆತನ ಸ್ನೇಹಿತರೇ ಹತ್ಯೆಗೈದಿರುವ ಘಟನೆ
ಬೆಂಗಳೂರು: ಯುವಕನನ್ನು ಕಿಡ್ನ್ಯಾಪ್ ಮಾಡಿ ಕೊನೆಗೆ ಆತನ ಸ್ನೇಹಿತರೇ ಹತ್ಯೆಗೈದಿರುವ ಘಟನೆ ಹೆಸರಘಟ್ಟದ ಬಳಿ ನಡೆದಿದೆ. ಲಗ್ಗೆರೆ ನಿವಾಸಿ ಮಹೇಶ್ ಗೌಡ(20) ಕೊಲೆಯಾದ ಯುವಕ ಎಂದು ತಿಳಿದುಬಂದಿದೆ. ಮಹೇಶ್ನನ್ನು ಕೊಲೆಗೈದ ಕೃಷ್ಣ ಮತ್ತು ರವಿ ಪೊಲೀಸರಿಗೆ ಶರಣಾಗಿದ್ದಾರೆ. ಕಿಡ್ನ್ಯಾಪ್, ಕಿತ್ತಾಟ ಕೊಲೆಯಲ್ಲಿ ಅಂತ್ಯ ಮೂಲತಃ ಲಗ್ಗೆರೆ ನಿವಾಸಿಯಾಗಿದ್ದ ಮೃತ ಮಹೇಶ್ ಗೌಡ ಲಾಡ್ಜ್ ನಡೆಸುತ್ತಿದ್ದ. ಇದೇ ತಿಂಗಳ 21ನೇ ತಾರೀಖು ಗೆಳೆಯರ ಜೊತೆ ಪಾರ್ಟಿ ಮಾಡೋಕೆ ಅಂತಾ ಹೊರಗಡೆ ಹೋಗಿದ್ದ. ನಂತರ …
Read More »ತಂದೆಯ ಅಂತ್ಯ ಸಂಸ್ಕಾರ ನಡೆಯುತ್ತಿದ್ದರೆ, ಇತ್ತ ಮಂದೀಪ್ ಬ್ಯಾಟ್ ಬೀಸುತ್ತಿದ್ದಾರೆ
ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ನ ರೋಚಕ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 12 ರನ್ಗಳ ಜಯ ಸಾಧಿಸಿದೆ. ಆರಂಭದಲ್ಲಿ ಹೈದರಾಬಾದ್ ಕಡೆ ಗೆಲುವನ್ನು ಪಂಜಾಬ್ ತನ್ನೆಡೆ ಸೆಳೆದುಕೊಂಡಿತ್ತು. ಈ ಮಧ್ಯೆ ಪಂಜಾಬ್ ತಂಡದಲ್ಲಿ ಓಪನರ್ ಆಗಿ ಇಳಿದಿದ್ದ ಮಂದೀಪ್ ನೋವಿನ ನಡುವೆಯೂ ಬ್ಯಾಟ್ ಬೀಸಿದ್ದಾರೆ! ಅತ್ತ ಮನೆಯಲ್ಲಿ ಅವರ ತಂದೆಯ ಅಂತ್ಯ ಸಂಸ್ಕಾರ ನಡೆಯುತ್ತಿದ್ದರೆ, ಇತ್ತ ಮಂದೀಪ್ ಬ್ಯಾಟ್ ಬೀಸುತ್ತಿದ್ದರು! ಹೌದು, …
Read More »ಆಸ್ಪತ್ರೆಗೆ ಬಿಟ್ಟು ಯುವಕ ನಾಪತ್ತೆಯಾದ ಘಟನೆ ಉಡುಪಿಯಲ್ಲಿ ನಡೆದಿದೆ.
ಉಡುಪಿ: ಚಿಂತಾಜನಕ ಸ್ಥಿತಿಯಲ್ಲಿದ್ದ ಯುವತಿಯನ್ನು ಆಸ್ಪತ್ರೆಗೆ ಬಿಟ್ಟು ಯುವಕ ನಾಪತ್ತೆಯಾದ ಘಟನೆ ಉಡುಪಿಯಲ್ಲಿ ನಡೆದಿದೆ. ಆದರೆ ವಿಪರ್ಯಾಸ ಅಂದ್ರೆ ಆಸ್ಪತ್ರೆಗೆ ದಾಖಲಾದ ಕೆಲವೇ ಕ್ಷಣಗಳಲ್ಲಿ ಯುವತಿ ಮೃತಪಟ್ಟಿದ್ದಾಳೆ. ನಿನ್ನೆ 6:30ರ ಹೊತ್ತಿಗೆ ರಿಕ್ಷಾದಲ್ಲಿ ಯುವತಿಯನ್ನು ಆಸ್ಪತ್ರೆಗೆ ಕರೆದು ತಂದಿದ್ದ ಯುವಕ, ಆಕೆಯ ಮನೆಯವರಿಗೆ ಕರೆಮಾಡಿ ವಿಷಯ ತಿಳಿಸಿ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾನೆ. ರಕ್ಷಿತಾ ನಾಯಕ್ ನಿಗೂಢವಾಗಿ ಸಾವನ್ನಪ್ಪಿರುವ ಯುವತಿ. ಹಿರಿಯಡ್ಕ ಠಾಣಾ ವ್ಯಾಪ್ತಿಯ ಕುಕ್ಕೆಹಳ್ಳಿ ನಿವಾಸಿಯಾಗಿರುವ …
Read More »ಎಂಟಿಬಿ ನಾಗರಾಜ್ ಮನೆಯಲ್ಲಿ ಆಯುಧ ಪೂಜೆ ನಡೆಸಿರುವ ಪೋಟೋಗಳು ವೈರಲ್
ಬೆಂಗಳೂರು : ಬಿಜೆಪಿ ನಾಯಕ, ವಿಧಾನ ಪರಿಷತ್ ಸದಸ್ಯಎಂಟಿಬಿ ನಾಗರಾಜ್ ಮನೆಯಲ್ಲಿ ಆಯುಧ ಪೂಜೆ ನಡೆಸಿರುವ ಪೋಟೋಗಳು ವೈರಲ್ ಆಗಿವೆ. ರೋಲ್ಸ್ ರಾಯ್ಸ್ ಸೇರಿದಂತೆ ಐಷಾರಾಮಿ ಕಾರುಗಳನ್ನು ಅವರು ಹೊಂದಿದ್ದಾರೆ. ಭಾನುವಾರ ಮಹದೇವಪುರ ಬಳಿ ಇರುವ ಎಂಟಿಬಿ ನಾಗರಾಜ್‌ರ ‘ಆಚಂದ್ರಾರ್ಕ ನಿಲಯ’ದಲ್ಲಿ ಆಯುಧ ಪೂಜೆಯನ್ನು ಮಾಡಲಾಯಿತು. ರೋಲ್ಸ್ ರಾಯ್ಸ್, ಫೆರಾರಿ ಕಾರುಗಳಿಗೆ ಪೂಜೆಯನ್ನು ಸಲ್ಲಿಸಲಾಯಿತು. ಈ ಫೋಟೋಗಳು ಈಗ ವೈರಲ್ ಆಗಿವೆ. ಎಂಟಿಬಿ ನಾಗರಾಜ್ ಕುಟುಂಬ ಸದಸ್ಯರ ಜೊತೆ ಆಯುಧ …
Read More »ಗ್ರಾಮದ ಕೋಡಿಬಸವೇಶ್ವರ ದೇಗುಲದಲ್ಲಿ ಕಳ್ಳತನ ನಡೆದಿದೆ. ತಡ ರಾತ್ರಿ ಖದೀಮರು ದೇವಸ್ಥಾನದ ಬೀಗ ಒಡೆದು ಕೃತ್ಯ ಎಸಗಿದ್ದಾರೆ.
ಹಾವೇರಿ: ಜಿಲ್ಲೆಯ ಹಾನಗಲ್ ತಾಲೂಕಿನ ವರ್ದಿ ಗ್ರಾಮದ ಕೋಡಿಬಸವೇಶ್ವರ ದೇಗುಲದಲ್ಲಿ ಕಳ್ಳತನ ನಡೆದಿದೆ. ತಡ ರಾತ್ರಿ ಖದೀಮರು ದೇವಸ್ಥಾನದ ಬೀಗ ಒಡೆದು ಕೃತ್ಯ ಎಸಗಿದ್ದಾರೆ. ದೇವಸ್ಥಾನ ಹುಂಡಿಯಲ್ಲಿದ್ದ ಕಾಣಿಕೆ, ಬೆಳ್ಳಿ ಅಭರಣಗಳು ಮತ್ತು ಮೈಕನ್ನು ಎಗರಿಸಿ ಹಣವನ್ನು ತೆಗೆದುಕೊಂಡು ಹುಂಡಿಯನ್ನು ಕೆರೆಯಲ್ಲಿ ಎಸೆದು ಪರಾರಿಯಾಗಿದ್ದಾರೆ. ಹುಂಡಿಯಲ್ಲಿ ಸುಮಾರು ಐದು ಸಾವಿರಕ್ಕೂ ಅಧಿಕ ಹಣ ಇತ್ತು ಎಂದು ಅಂದಾಜಿಸಲಾಗಿದೆ. ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ …
Read More »ಸೇತುವೆ ಮೇಲಿಂದ ಭೀಮಾ ನದಿಗೆ ಹಾರಿ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ
ವಿಜಯಪುರ: ಸೇತುವೆ ಮೇಲಿಂದ ಭೀಮಾ ನದಿಗೆ ಹಾರಿ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಆಲಮೇಲ ತಾಲೂಕಿನ ದೇವಣಗಾಂವ್ ಸೇತುವೆ ಬಳಿ ನಡೆದಿದೆ. ಧಾರವಾಡ ಜಿಲ್ಲೆಯ ನವಲಗುಂದದ ನಿವಾಸಿ ಐಶ್ವರ್ಯ ಶ್ರೀಪಾಲ್ ಕಬ್ಬಿನ(20) ಆತ್ಮಹತ್ಯೆ ಮಾಡಿಕೊಂಡ ಯುವತಿ ಎಂದು ತಿಳಿದುಬಂದಿದೆ. ಕಲಬುರಗಿ ಜಿಲ್ಲೆಯ ಗಾಣಗಾಪುರದಲ್ಲಿರುವ ದತ್ತಾತ್ರೇಯ ದೇಗುಲಕ್ಕೆ ಹೋಗುವಾಗ ದಾರಿ ಮಧ್ಯೆ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
Read More »