Breaking News

Yearly Archives: 2020

ನಿನ್ನೆ ರಾತ್ರಿ ಬೆಳಗಾವಿ ಮಹಾನಗರದ ಗ್ಯಾಂಗ್ ವಾಡಿ ಪ್ರದೇಶದಲ್ಲಿ ನಡೆದ ಭಯನಾಕ ಮರ್ಡರ್

ಬೆಳಗಾವಿ- ನಿನ್ನೆ ರಾತ್ರಿ ಬೆಳಗಾವಿ ಮಹಾನಗರದ ಗ್ಯಾಂಗ್ ವಾಡಿ ಪ್ರದೇಶದಲ್ಲಿ ನಡೆದ ಭಯನಾಕ ಮರ್ಡರ್ ಹಿಂದೆ,ಹಳೆಯ ವೈಷಮ್ಯ,ಸೇಡು ಎಲ್ಲವೂ ಅಡಗಿದೆ. ನಿನ್ನೆ ಮದ್ಯರಾತ್ರಿ ಬೆಳಗಾವಿಯಲ್ಲಿ ಶಹಬಾಜ್ ಪಠಾಣ್,ಉರ್ಫ ಶಹಬಾಜ್ ರೌಡಿ ಎಂಬಾತನ ಕೊಲೆ ಮಾಡಲಾಗಿತ್ರು,ಈ ಕೊಲೆಗೆ ಹಳೆಯ ವೈಷಮ್ಯವೇ ಕಾರಣ ಎಂಬುದು ಗೊತ್ತಾಗಿದೆ, ಬೈಕ್ ಮೇಲೆ ಸಾಗುವಾಗ ಸಿಡಿದ ರಾಡಿಯಿಂದ ಆರಂಭವಾದ ಈ ಜಗಳ ನಿನ್ನೆ ಮಿಡ್ ನೈಟ್ ಕೊನೆಯಲ್ಲಿ ಅಂತ್ಯವಾಗಿದೆ. ಮುತ್ಯಾನಟ್ಟಿಯ ಯುವಕನೊಬ್ಬ ಬೈಕ್ ಮೇಲೆ ಹೋಗುವಾಗ ಶಹಬಾಜ್ …

Read More »

ಕಂದಾಯ ಸಚಿವ R.ಅಶೋಕ್‌ 25 ಸಾವಿರ ರೂ. ಪರಿಹಾರದ ಚೆಕ್​ ವಿತರಣೆ :ಪರಿಹಾರ ಹಣ ಪಡೆದವರಿಗೆ ಬಿಬಿಎಂಪಿ ಶಾಕ್ ನೀಡಿದೆ

ಬೆಂಗಳೂರು: ಹೊಸಕೆರೆ ಹಳ್ಳಿಯ ದತ್ತಾತ್ರೇಯ ನಗರ ವ್ಯಾಪ್ತಿಯಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿಯಾಗಿತ್ತು. ಹೀಗಾಗಿ ಕಂದಾಯ ಸಚಿವ R.ಅಶೋಕ್‌ 25 ಸಾವಿರ ರೂ. ಪರಿಹಾರದ ಚೆಕ್​ ವಿತರಿಸಿದ್ದರು. ಇದು ಸಂತ್ರಸ್ಥರಿಗೆ ಕೊಂಚ ಖುಷಿ ನೀಡಿತ್ತು. ಆದರೆ ಪರಿಹಾರ ಹಣ ಪಡೆದವರಿಗೆ ಬಿಬಿಎಂಪಿ ಶಾಕ್ ನೀಡಲಿದೆ. ದತ್ತಾತ್ರೇಯನಗರದಲ್ಲಿ ರಾಜಕಾಲುವೆ ಒತ್ತುವರಿಯಾದ ಹಿನ್ನೆಲೆಯಲ್ಲಿ ಒತ್ತುವರಿ ಜಾಗ ಪತ್ತೆಗೆ ಪಾಲಿಕೆಯ ಅಧಿಕಾರಿಗಳು ಮುಂದಾಗಿದ್ದಾರೆ. ಪರಿಹಾರ ಪಡೆದ 344 ಕುಟುಂಬಗಳ ಪೈಕಿ …

Read More »

ತಿರುಪತಿ ದೇವಸ್ಥಾನದಲ್ಲಿ ಅವಘಡ

ಆಂಧ್ರಪ್ರದೇಶ : ತಿರುಪತಿ ತಿರುಮಲ ದೇವಾಲಯದಲ್ಲಿನ ಬಾಯ್ಲರ್ ನಿಂದ ಬಿಸಿನೀರು ಸೋರಿಕೆಯಾಗಿ, ಕಾರ್ಮಿಕರಿಗೆ ಸಿಡಿದಿದ್ದರಿಂದಾಗಿ, ಐವರು ಕಾರ್ಮಿಕರು ಗಾಯಗೊಂಡಿದ್ದಾರೆ. ಇವರಲ್ಲಿ ಇಬ್ಬರು ಕಾರ್ಮಿಕರ ಸ್ಥಿತಿ ಗಂಭೀರವಾಗಿರುವುದಾಗಿ ತಿಳಿದು ಬಂದಿದೆ. ಈ ಕುರಿತಂತೆ ಪ್ರಕಟಣೆ ಹೊರಡಿಸಿರುವಂತ ಟಿಟಿಡಿ, ಅಡುಗೆ ಮನೆಯಲ್ಲಿ ಬಾಯ್ಲರ್ ನಿಂದ ನೀರು ಸೋರಿಕೆಯಾಗಿ, ಕಾರ್ಮಿಕರ ಮೇಲೆ ಬಿದ್ದಿರುವ ಪರಿಣಾಮ, ಐವರು ಕೆಲಸಗಾರರು ಗಾಯಗೊಂಡಿದ್ದಾರೆ. ಇಂತಹ ಕಾರ್ಮಿಕರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡುತ್ತಿರುವುದಾಗಿ ತಿಳಿಸಿದೆ.

Read More »

ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ನಾಲ್ವರನ್ನು ಬಂಧಿಸಿದ್ದಾರೆ

ಚೆನ್ನೈ: ತಮಿಳುನಾಡಿನ ಚೆನ್ನೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ನಾಲ್ವರನ್ನು ಬಂಧಿಸಿ ಗುದನಾಳಗಳಲ್ಲಿ ಇಟ್ಟುಕೊಂಡು ಸಾಗಿಸುತ್ತಿದ್ದ ಪೇಸ್ಟ್ ರೂಪದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ದುಬೈನಿಂದ ಚೆನ್ನೈಗೆ ಆಗಮಿಸಿದ ನಾಲ್ವರು ಪ್ರಯಾಣಿಕರು ಚಿನ್ನದ ಪೇಸ್ಟ್ ಇಟ್ಟುಕೊಂಡು ಸಾಗಿಸುತ್ತಿದ್ದರು. ಇದರ ಮೌಲ್ಯ 45.5 ಲಕ್ಷ ರೂಪಾಯಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 864 ಗ್ರಾಂ ಚಿನ್ನವನ್ನು ಪೇಸ್ಟ್ ರೂಪದಲ್ಲಿ ಸಾಗಿಸಲಾಗುತ್ತಿತ್ತು. ಪರಿಶೀಲನೆ ವೇಳೆ ಚಿನ್ನ ಕಂಡುಬಂದ ಹಿನ್ನೆಲೆಯಲ್ಲಿ ವೈದ್ಯಕೀಯ ವಿಧಾನಗಳ ಮೂಲಕ ಹೊರತೆಗೆಯಲಾಗಿದೆ.

Read More »

ಅಕ್ರಮ ಗಾಂಜಾ ವಶ

ಗದಗ : ಗದಗ ಜಿಲ್ಲೆಯ ಹುಲಕೋಟಿ ಗ್ರಾಮದಲ್ಲಿ ಅಕ್ರಮವಾಗಿ ಗಾಂಜಾ ಮಾರುತ್ತಿದ್ದ ಮಹಿಳೆಯ ಮನೆಯ ಮೇಲೆ ಗದಗ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ದೇವಕ್ಕ ನಾರಾಯಣ ಬೆಳ್ಳಿಕೊಪ್ಪ ಗಾಂಜಾ ಮಾರಾಟ ಮಾಡುತ್ತಿದ್ದ ಮಹಿಳೆಯಾಗಿದ್ದಾಳೆ. ಮನೆಯಲ್ಲಿ 80 ಸಾವಿರ ಮೌಲ್ಯದ ಸುಮಾರು ೪ ಕೆಜಿ ಒಣ ಗಾಂಜಾವನ್ನು ಅಬಕಾರಿ ನಿರೀಕ್ಷಕ ಮಲ್ಲಿಕಾರ್ಜುನ ರೆಡ್ಡಿ ವಶಪಡಿಸಿಕೊಂಡಿದ್ದಾರೆ ಆರೋಪಿ ದೇವಕ್ಕ ಬೆಳ್ಳಿಕೊಪ್ಪ ಪರಾರಿಯಾಗಿದ್ದಾರೆ. ಗದಗ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಭಾರತದಲ್ಲಿ ಅಪಘಾತದಲ್ಲಿ ಹೆಚ್ಚು ಸಾವನ್ನಪ್ಪಿರುವ ನಗರಗಳಲ್ಲಿ ಬೆಂಗಳೂರು ಮೊದಲ ಸ್ಥಾನ

ಬೆಂಗಳೂರು : ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯೂರೋ (NCRB) ವರದಿಯ ಪ್ರಕಾರ, ಭಾರತದಲ್ಲಿ ಅಪಘಾತದಲ್ಲಿ ಹೆಚ್ಚು ಸಾವನ್ನಪ್ಪಿರುವ ನಗರಗಳಲ್ಲಿ ಬೆಂಗಳೂರು ಮೊದಲ ಸ್ಥಾನ ಪಡೆದುಕೊಂಡಿದ್ದು, 2018 ರಲ್ಲಿ 4,611 ಅಪಘಾತ ಪ್ರಕರಣಗಳು ದಾಖಲಾಗಿದ್ದರೆ, 2019 ರಲ್ಲಿ 4,684 ಪ್ರಕರಣಗಳು ದಾಖಲಾಗಿವೆ. 2018 ರಲ್ಲಿ ಅಪಘಾತಗಳಿಂದ 686 ಸಾವಾಗಿದ್ರೆ, 2019 ರಲ್ಲಿ 768 ಮಂದಿ ಅಪಘಾತದಿಂದ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಇನ್ನು ಚೆನ್ನೈನಲ್ಲಿ 2018 ರಲ್ಲಿ 7,580 ಅಪಘಾತ ಪ್ರಕರಣಗಳು ದಾಖಲಾಗಿದ್ದು, …

Read More »

ಮಾದಕವಸ್ತುಗಳ ಖರೀದಿಸುವ ವೇಳೆ ನಟಿಯನ್ನು ರೆಡ್ ಹ್ಯಾಂಡ್ ಎಸಿಬಿ ತಂಡ ಬಂಧಿಸಿದೆ

ಮುಂಬೈ : ಮಾದಕವಸ್ತುಗಳ ಮಾರಾಟ ಮತ್ತು ಖರೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿವಿ ಆಂಕರ್ ಪ್ರೀತಿಕಾ ಚೌವ್ಹಾಣ್ ರನ್ನು ಮುಂಬೈನ ಮಾದಕವಸ್ತು ನಿಯಂತ್ರಣ ತಂಡದ ಅಧಿಕಾರಿಗಳು ಬಂಧಿಸಿದ್ದು, ವಿಚಾರಣೆಗೊಳಪಡಿಸಿದ್ದಾರೆ. ಮಾದಕವಸ್ತುವನ್ನು ಖರೀದಿಸುತ್ತಿದ್ದ ಸಂದರ್ಭದಲ್ಲೇ ಅಧಿಕಾರಿಗಳು ಪ್ರೀತಿಕಾ ಚೌವ್ಹಾಣ್ ರನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ. ಇನ್ನು, ಬಂಧಿತ ಆರೋಪಿಯನ್ನು ಅಧಿಕಾರಿಗಳು ಕಿಲ್ಲೋ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನಟಿಯು ಸಾವಧಾನ್ ಇಂಡಿಯಾ, ದೇವೋ ಕಿ ದೇವ್ ಮಹಾದೇವ್ ಸೇರಿದಂತೆ ಕೆಲವು ಹಿಂದಿ ಧಾರಾವಾಹಿಗಳನ್ನಿ ನಟಿಸುತ್ತಿದ್ದರು …

Read More »

ನಿಮ್ಮ ಆಡಳಿತವು ರೈತರಿಗೆ ಟಿಪ್ಪು ಆಡಳಿತದಂತಿತ್ತು ಎಂದು ರಾಜ್ಯ ಬಿಜೆಪಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದೆ.

      ಬೆಂಗಳೂರು : ನಿಮ್ಮ ಆಡಳಿತವು ರೈತರಿಗೆ ಟಿಪ್ಪು ಆಡಳಿತದಂತಿತ್ತು ಎಂದು ರಾಜ್ಯ ಬಿಜೆಪಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದೆ. ಸರಣಿ ಟ್ವೀಟ್ ಮೂಲಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ, ಸಿದ್ದರಾಮಯ್ಯನವರೇ ನಿಮ್ಮ ಆಡಳಿತವು ರೈತರಿಗೆ ಟಿಪ್ಪು ಆಡಳಿತದಂತಿತ್ತು. ರೈತರ ಪಾಲಿಗೆ ಮರಣಕೂಪದಂತಿದ್ದ ನಿಮ್ಮ ಅವಧಿಯಲ್ಲಿ 3000 ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡದ್ದು ದುರ್ದೈವ. ಅನ್ನದಾತರು ಸಾವಿಗೆ ಶರಣಾಗುತ್ತಿದ್ದರೆ ನೀವು ಮಾತ್ರ …

Read More »

ದಿವಂಗತ ಶಾಸಕ ಬಿ. ನಾರಾಯಣರಾವ್ ಅವರ ಸಮಾಧಿ ಸ್ಥಳದಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡುವಾಗ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಪಂಜೆ ಜಾರಿದ ಪ್ರಸಂಗ ನಡೆದಿದೆ.

    ಬಸವಕಲ್ಯಾಣ : ದಿವಂಗತ ಶಾಸಕ ಬಿ. ನಾರಾಯಣರಾವ್ ಅವರ ಸಮಾಧಿ ಸ್ಥಳದಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡುವಾಗ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಪಂಜೆ ಜಾರಿದ ಪ್ರಸಂಗ ನಡೆದಿದೆ. ಸಿದ್ದರಾಮಯ್ಯ ಅವರು ಕಾರ್ಯಕ್ರಮದಲ್ಲಿ ನಿಂತು ಮಾತನಾಡುವಾಗ ಪಂಜೆ ಸಡಿಲಗೊಂಡು ಬೀಳುವ ಹಂತದಲ್ಲಿತ್ತು. ಅದನ್ನು ಗಮನಿಸಿದ ನಗರ ಠಾಣೆ ಪಿಎಸ್ ಐ ಗುರುಪಾಟೀಲ್ ಅವರು ವೇದಿಕೆಗೆ ಆಗಮಿಸಿ ಕೆಪಿಸಿಸಿ ಕಾರ್ಯಾಧ್ಯಕ್ಷ ಖಂಡ್ರೆ ಮತ್ತು ಹಮನಾಬಾದ ಶಾಸಕ ರಾಜಶೇಖರ್ ಪಾಟೀಲ್ …

Read More »

ನೀಟಾಗಿ ಡ್ರೆಸ್ ಮಾಡಿಕೊಂಡು ಮದುವೆ ನಡೆಯುತ್ತಿದ್ದ ಕಲ್ಯಾಣ ಮಂಟಪಗಳಿಗೆ ಒಬ್ಬ ಗೃಹಿಣಿಯಂತೆ ನುಗ್ಗಿ ಮಹಿಳೆಯರ ಆಭರಣಗಳನ್ನು ಕಳವು ಮಾಡುತ್ತಿದ್ದ ಕಳ್ಳಿಯನ್ನು

      ನೀಟಾಗಿ ಡ್ರೆಸ್ ಮಾಡಿಕೊಂಡು ಮದುವೆ ನಡೆಯುತ್ತಿದ್ದ ಕಲ್ಯಾಣ ಮಂಟಪಗಳಿಗೆ ಒಬ್ಬ ಗೃಹಿಣಿಯಂತೆ ನುಗ್ಗಿ ಮಹಿಳೆಯರ ಆಭರಣಗಳನ್ನು ಕಳವು ಮಾಡುತ್ತಿದ್ದ ಕಳ್ಳಿಯನ್ನು  ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣೆಯ ಪೊಲೀಸರು ಬಂಧಿಸಿದ್ದಾರೆ . ಬಂಧಿತ ಮಹಿಳೆಯನ್ನು ಕಮಲಮ್ಮ (26) ಎಂದು ಗುರುತಿಸಲಾಗಿದ್ದು ಆಕೆ ನಾಗರಹೊಳೆಯ ನಿವಾಸಿಯೆಂದು ತಿಳಿದುಬಂದಿದೆ . ಪೊಲೀಸರ ಪ್ರಕಾರ ಕಮಲಮ್ಮನ ಕಳುವು ಮಾಡುವ ರೀತಿ ಸುಲಭವಾಗಿತ್ತು . ಮದುವೆ ನಡೆಯುತ್ತಿದ್ದ ಛತ್ರಗಳಿಗೆ ಆಕೆ ಸದ್ಗೃಹಿಣಿಯಂತೆ ಡ್ರೆಸ್ ಮಾಡಿಕೊಂಡು ಮದುವೆಮನೆಗಳ …

Read More »