ಬೆಂಗಳೂರು: ಜಿಲ್ಲೆಯ ಆನೇಕಲ್ ತಾಲೂಕಿನ ಶೆಟ್ಟಿಹಳ್ಳಿಯ ವೇರ್‌ಹೌಸ್ ಬಳಿ ಯುವಕನ ಬರ್ಬರ ಕೊಲೆಯಾಗಿರುವ ಘಟನೆ ನಡೆದಿದೆ. ಮಾರಕಾಸ್ತ್ರಗಳಿಂದ ಕೊಚ್ಚಿ 25 ವರ್ಷದ V.Y. ವಿನುತ್ ಎಂಬಾತನನ್ನು ಹತ್ಯೆ ಮಾಡಲಾಗಿದೆ. ಕೆಲಸಕ್ಕೆ ತೆರಳುತ್ತಿದ್ದ ವೇಳೆ ನಾಲ್ವರು ದುಷ್ಕರ್ಮಿಗಳಿಂದ ಕೃತ್ಯ ಎಸಗಲಾಗಿದ್ದು ಹಳೇ ದ್ವೇಷದ ಹಿನ್ನೆಲೆಯಲ್ಲಿ ವಿನುತ್ ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಅತ್ತಿಬೆಲೆ ಠಾಣೆ ಪೊಲೀಸರ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು. ವಿನುತ್ ಬೆಸ್ತಮಾನಹಳ್ಳಿ ನಿವಾಸಿ ಎಂದು …
Read More »Yearly Archives: 2020
IPL ಕ್ರಿಕೆಟ್ ಬೆಟ್ಟಿಂಗ್ನಲ್ಲಿ ಹಣ ಕಳೆದುಕೊಂಡಿರುವ ಶಂಕೆಯಡಿ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ
ಬೆಂಗಳೂರು: IPL ಕ್ರಿಕೆಟ್ ಬೆಟ್ಟಿಂಗ್ನಲ್ಲಿ ಹಣ ಕಳೆದುಕೊಂಡಿರುವ ಶಂಕೆಯಡಿ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. 20 ವರ್ಷದ ಮಂಜುನಾಥ್ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಯುವಕ. ಕಳೆದ ಒಂದು ವಾರದ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದ ಮಂಜುನಾಥ್ ಇಂದು ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ವಿದ್ಯಾಭ್ಯಾಸಕ್ಕೆಂದು ಅಜ್ಜಿ ಮನೆಗೆ ಬಂದಿದ್ದ ಮಂಜುನಾಥ್ ಕಳೆದ ವಾರ ಇದ್ದಕ್ಕಿದ್ದಂತೆ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ. ಆಗ, ಕಾರಣ ತಿಳಿದಯದೇ ಇದ್ದ ಕುಟುಂಬಸ್ಥರಿಗೆ …
Read More »ಬ್ಯಾಂಕಿಂಗ್ ಸೇವೆಗಳಿಗೆ ಸಂಬಂಧಿಸಿದ ಎಲ್ಲ ನೇಮಕಾತಿ ಪರೀಕ್ಷೆಗಳನ್ನು ರಾಜ್ಯ ಭಾಷೆಗಳಲ್ಲಿ ನಡೆಸುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ನಿರಂತರವಾಗಿ ಒತ್ತಾಯಿಸುತ್ತಾ ಬಂದಿದೆ.
ಬೆಂಗಳೂರು: ಬ್ಯಾಂಕಿಂಗ್ ಸೇವೆಗಳಿಗೆ ಸಂಬಂಧಿಸಿದ ಎಲ್ಲ ನೇಮಕಾತಿ ಪರೀಕ್ಷೆಗಳನ್ನು ರಾಜ್ಯ ಭಾಷೆಗಳಲ್ಲಿ ನಡೆಸುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ನಿರಂತರವಾಗಿ ಒತ್ತಾಯಿಸುತ್ತಾ ಬಂದಿದೆ. ಈ ಸಂಬಂಧ ಹಲವು ಭಾರಿ ಕೇಂದ್ರ ವಿತ್ತ ಸಚಿವರನ್ನು ಖುದ್ದು ಭೇಟಿ ಮಾಡಿ ಮನವಿ, ಮೊರೆಗಳನ್ನು ಸಲ್ಲಿಸಿದ್ದಾರೆ. ಆದರೂ ಸಹ ಹಳೆಯ ಮಾರ್ಗಸೂಚಿಗಳನ್ವಯ ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿರುವ ಐಬಿಪಿಎಸ್ ಕ್ರಮ ಖಂಡನಾರ್ಹವಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಕನ್ನಡ …
Read More »ಅಕ್ರಮವಾಗಿ ಮಣ್ಣುಮುಕ್ಕ ಹಾವು ಸಾಗಿಸುತ್ತಿದ್ದ ಐವರನ್ನು ಬಂಧಿಸಿ ಅರಣ್ಯಾಧಿಕಾರಿಗಳು ಅವರಿಂದ ಮೂರು ಅಡಿ ಉದ್ದದ ಎರಡು ತಲೆಯ
ಮೈಸೂರು: ಅಕ್ರಮವಾಗಿ ಮಣ್ಣುಮುಕ್ಕ ಹಾವು ಸಾಗಿಸುತ್ತಿದ್ದ ಐವರನ್ನು ಬಂಧಿಸಿ ಅರಣ್ಯಾಧಿಕಾರಿಗಳು ಅವರಿಂದ ಮೂರು ಅಡಿ ಉದ್ದದ ಎರಡು ತಲೆಯ ಹಾವನ್ನು ರಕ್ಷಿಸಿದ್ದಾರೆ. ದೊಡ್ಡಯ್ಯ (45), ಹೇಮಂತ್(19), ಯೋಗೇಶ್(24), ರವಿ(35), ಭರಮೇಗೌಡ(23) ಬಂಧಿತರು. ಆರ್‌ಎಫ್‌ಒ ವಿವೇಕ್ ನೇತ್ರತ್ವದಲ್ಲಿ ಕಾರ್ಯಾಚರಣೆ ನಡೆಸಿ ಬೆಂಗಳೂರಿನಿಂದ ಮೈಸೂರಿಗೆ ಅಕ್ರಮವಾಗಿ ಮಣ್ಣುಮುಕ್ಕ ಹಾವನ್ನು ಮಾರಾಟ ಮಾಡಲು ಕಾರಿನಲ್ಲಿ ಬರುತ್ತಿದ್ದವರನ್ನು ಮೈಸೂರಿನ ಸಿದ್ದಲಿಂಗಪುರ ಬಳಿ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಹಾಗೂ ಹಾವನ್ನು ರಕ್ಷಣೆ ಮಾಡಿದ್ದಾರೆ.
Read More »ಅಕ್ಷಯ ಪಾತ್ರ ಫೌಂಡೇಷನ್ ಜತೆ ಅಮೆರಿಕನ್ ಟವರ್ ಫೌಂಡೇಷನ್ ಪಾಲುದಾರಿಕೆ
ಬೆಂಗಳೂರು, ಅ.29- ಕೋವಿಡ್-19 ಪರಿಹಾರ ಕ್ರಮಗಳಿಗಾಗಿ ದಿನಸಿ ಕಿಟ್‍ಗಳನ್ನು ವಿತರಿಸಲು ಪ್ರಮುಖ ಸಂಘಟನೆಯಾದ ಅಕ್ಷಯ ಪಾತ್ರ ಫೌಂಡೇಷನ್ ಜತೆಗೆ ಅಮೆರಿಕನ್ ಟವರ್ ಕಾಪೆರ್ರೇಷನ್ (ಎಟಿಸಿ)ಜಾಗತಿಕ ದತ್ತಿ ಉಪಕ್ರಮವಾದ ಅಮೆರಿಕನ್ ಟವರ್ ಫೌಂಡೇಷನ್ ಜತೆಗೆ ಸಹಭಾಗಿತ್ವ ಸಾಧಿಸಿದೆ. ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದ ಬಳಲಿದವರಿಗೆ 31 ಸ್ಥಳಗಳಲ್ಲಿ 19 ಲಕ್ಷ ಊಟವನ್ನು ಒದಗಿಸಲಾಗುತ್ತದೆ.ದಿನಗೂಲಿ ಕೆಲಸಗಾರರು, ಗುತ್ತಿಗೆ ಕೆಲಸಗಾರರು ಮತ್ತು ಒಂದು ಕಡೆಯಿಂದ ಇನ್ನೊಂದು ಕಡೆಗೆ ವಲಸೆ ಹೋದವರಿಗೆ ಮತ್ತು ಲಾಕ್‍ಡೌನ್‍ನಿಂದ ಕೆಲಸ …
Read More »ಕೊರೊನಾ ಸೋಂಕು ತಗುಲಿದ ಬಳಿಕ ಕೇಂದ್ರ ಸಚಿವೆ ಸ್ಮೃತಿ ಇರಾನಿ ಇನ್‍ಸ್ಟಾಗ್ರಾಂನಲ್ಲಿ ಫನ್ನಿ ಮೀಮ್ ಹಂಚಿಕೊಂಡಿದ್ದು, ವೈರಲ್ ಆಗಿದೆ.
ನವದೆಹಲಿ: ಕೊರೊನಾ ಸೋಂಕು ತಗುಲಿದ ಬಳಿಕ ಕೇಂದ್ರ ಸಚಿವೆ ಸ್ಮೃತಿ ಇರಾನಿ ಇನ್‍ಸ್ಟಾಗ್ರಾಂನಲ್ಲಿ ಫನ್ನಿ ಮೀಮ್ ಹಂಚಿಕೊಂಡಿದ್ದು, ವೈರಲ್ ಆಗಿದೆ. ಕೊರೊನಾ ಸೋಂಕು ತಗುಲಿರುವ ಮಾಹಿತಿಯನ್ನ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ಸ್ಮೃತಿ ಇರಾನಿ, ತಮ್ಮ ಸಂಪರ್ಕದಲ್ಲಿದ್ದವರು ದಯವಿಟ್ಟು ಕೊರೊನಾ ಪರೀಕ್ಷೆಗೆ ಒಳಗಾಗಿ ಎಂದು ಮನವಿ ಮಾಡಿಕೊಂಡಿದ್ದಾರೆ. ಸ್ಮೃತಿ ಇರಾನಿ ಟ್ವೀಟ್: ಈ ವಿಷಯವನ್ನ ಘೋಷಣೆ ಮಾಡುವಾಗ ಪದಗಳ ಹುಡುಕೋದು ನನಗೆ ಸಾಧ್ಯವಾಗಲಿಲ್ಲ. ಹಾಗಾಗಿ ಸರಳವಾಗಿ ಈ ವಿಷಯ ನಿಮಗೆ ತಿಳಿಸುತ್ತಿದ್ದೇನೆ. …
Read More »ಪುಲ್ವಾಮಾ ದಾಳಿ ನಮ್ಮ ಸಮುದಾಯದ ಯಶಸ್ಸು ಎಂದ ಪಾಕ್ ಸಚಿವ
ಇಸ್ಲಾಮಾಬಾದ್: ನೆರೆಯ ದುಷ್ಟ ಪಾಕಿಸ್ತಾನ 20 ತಿಂಗಳ ತಾನು ಎಸಗಿದ ಘೋರಕೃತ್ಯವನ್ನ ಒಪ್ಪಿಕೊಂಡಿದೆ. ಪುಲ್ವಾಮಾ ದಾಳಿಯ ತಮ್ಮ ಸಮುದಾಯ ಯಶಸ್ಸು ಎಂದು ಪಾಕಿಸ್ತಾನ ಸಚಿವ ಫವಾದ್ ಖಾನ್ ಸಂಸತ್ ನಲ್ಲಿಯೇ ಹೇಳಿಕೆ ನೀಡಿದ್ದಾರೆ. ಇಂದು ಮುಸ್ಲಿಂ ಲೀಗ್ ಎನ್ ಪಕ್ಷದ ನೇತಾರ ಅಯಾಜ್ ಸಾದಿಕ್ ಪ್ರಶ್ನೆಗೆ ಫವಾದ್ ಖಾನ್ ಉತ್ತರಿಸುತ್ತಿದ್ದರು. ಭಾರತ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವಶಕ್ಕೆ ಪಡೆದ ವೇಳೆ ವಿದೇಶಾಂಗ ಸಚಿವ ಖುರೇಷಿ ಭಯಗೊಂಡಿದ್ದರು. ಆರ್ಮಿ ಚೀಫ್ …
Read More »ಕುರಿ ಕಾಪಾಡಲು ಹೋದ ಇಬ್ಬರೂ ನೀರು ಪಾಲು- ಕುರಿ ಮಾತ್ರ ಸುರಕ್ಷಿತ
ಕೋಲಾರ: ಕುರಿ ಕಾಪಾಡಲು ಹೋಗಿ ನೀರಿನಲ್ಲಿ ಮುಳುಗಿ ಇಬ್ಬರು ಕುರಿಗಾಹಿಗಳು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಕೋಲಾರದಲ್ಲಿ ನಡೆದಿದೆ. ಮುಳಬಾಗಲು ತಾಲ್ಲೂಕಿನ ಕೀಲು ಹೋಳಲಿ ಗ್ರಾಮದ ಕೆರೆಯಲ್ಲಿ ಇಂದು ಸಂಜೆ ಈ ಘಟನೆ ನಡೆದಿದ್ದು, ಮೊದಲಿಗೆ ಕುರಿ ಮೇಯಿಸುತ್ತಿದ್ದ 46 ವರ್ಷದ ತಿಮ್ಮಪ್ಪ ತನ್ನ ಕುರಿಯನ್ನ ರಕ್ಷಣೆ ಮಾಡಲು ಕೆರೆಗೆ ಇಳಿದಿದ್ದಾನೆ. ಕುರಿ ಬಚಾವ್ ಆಗಿ ಬಂದಿದೆ. ಕುರಿಯನ್ನು ಕಾಪಾಡಲು ಹೋಗಿದ್ದ ತಿಮ್ಮಪ್ಪ ನೀರಿನಲ್ಲಿ ಮುಳುಗಿ ಸಾವನ್ನಪ್ಪುತ್ತಾನೆ. ಈ ವಿಚಾರ ತಿಳಿದು …
Read More »ರಾಜ್ಯದಲ್ಲಿ ಮುಂದಿನ ಐದು ದಿನ ಮತ್ತೆ ಮಳೆಯ ಅಬ್ಬರ
ಬೆಂಗಳೂರು: ಒಂದು ವಾರ ಬಿಡುವು ನೀಡಿದ್ದ ವರುಣ ದೇವ ಮುಂದಿನ ಐದು ದಿನ ಮತ್ತೆ ಅಬ್ಬರಿಸಲಿದ್ದಾನೆ. ಈಶಾನ್ಯ ಮಾರುತಗಳು ದಕ್ಷಿಣ ಭಾರತವನ್ನ ಬುಧವಾರ ಪ್ರವೇಶಿಸಿದ್ದು, ತಮಿಳುನಾಡಿನ ಚೆನ್ನೈ ಸೇರಿದಂತೆ ವಿವಿಧ ಭಾಗಗಳಲ್ಲಿ ಭಾರೀ ಮಳೆಯಾಗಲಿದೆ. ಇತ್ತ ಕರ್ನಾಟಕದ ಉತ್ತರ ಒಳನಾಡು, ದಕ್ಷಿಣ ಒಳನಾಡಿನಲ್ಲಿ ನವೆಂಬರ್ 2 ರವರೆಗೆ ಮಳೆಯಾಗುವ ಸಾಧ್ಯತೆಗಳಿವೆ. ಅಕ್ಟೋಬರ್ 31, ನವೆಂಬರ್ 1 ಮತ್ತು 2 ರಂದು ರಾಜ್ಯದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಲಿದೆ. ಕರಾವಳಿ ಭಾಗ, ಬೆಳಗಾವಿ, …
Read More »ಬ್ರಿಟಿಷ್ ರಾಯಲ್ ಫ್ಯಾಮಿಲಿಯಿಂದ ಮನೆ ಕೆಲಸದವರ ಹುಡುಕಾಟ- 18.5 ಲಕ್ಷ ರೂ. ಸಂಬಳ
ಲಂಡನ್: ಬ್ರಿಟಿಷ್ ರಾಯಲ್ ಫ್ಯಾಮಿಲಿ ಮನೆ ಕೆಲಸದವರಿಗಾಗಿ ಹುಡುಕಾಟ ನಡೆಸುತ್ತಿದ್ದು, ಬರೋಬ್ಬರಿ 18.5 ಲಕ್ಷ ರೂ. ಆರಂಭಿಕ ಸಂಬಳ ನೀಡುವುದಾಗಿ ಘೋಷಿಸಿದೆ. ರಾಜ ಮನೆತನದ ಅಧಿಕೃತ ವೆಬ್‍ಸೈಟ್ ರಾಯಲ್ ಹೌಸ್‍ಹೋಲ್ಡ್‍ನಲ್ಲಿ ಈ ಕುರಿತು ಪ್ರಕಟಿಸಿದ್ದು, ಇದು 2ನೇ ಹಂತದ ಅಪ್ರಂಟಿಸ್‍ಶಿಪ್(ತರಬೇತಿ ಅವಧಿ) ಕೆಲಸವಾಗಿದೆ. ಆಯ್ದ ಅಭ್ಯರ್ಥಿಗಳು ಮಾತ್ರ ವಿಂಡ್ಸರ್ ಕ್ಯಾಸ್ಟಲ್‍ನಲ್ಲಿ ವಾಸಿಸಬೇಕಾಗಿರುತ್ತದೆ ಎಂದು ತಿಳಿಸಲಾಗಿದೆ. ಈಗಾಗಲೇ ಹೇಳಿದ ಹಾಗೆ ಇದೊಂದು ಎರಡನೇ ಹಂತದ ಅಪ್ರೆಂಟಿಸ್‍ಶಿಪ್ ಕೆಲಸವಾಗಿದೆ. ಆಯ್ಕೆಯಾದ ಅಭ್ಯರ್ಥಿಗಳು ಇಂಗ್ಲೆಂಡ್‍ನ …
Read More »