Breaking News

Yearly Archives: 2020

2 ವಾಹನಗಳ ಮಧ್ಯೆ ಡಿಕ್ಕಿಯಾಗಿ 6 ಜನ ಸ್ಥಳದಲ್ಲೇ ಸಾವು

ಪಯಾಗ್‌ಪುರ: ಉತ್ತರ ಪ್ರದೇಶದ ಪಯಾಗ್‌ಪುರ ಬಳಿ ಭೀಕರ ಅಪಘಾತ ಸಂಭವಿಸಿದೆ. 2 ವಾಹನಗಳ ಮಧ್ಯೆ ಡಿಕ್ಕಿಯಾಗಿ 6 ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಾಗೂ 10 ಜನರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹೆಚ್ಚಿನ ಮಾಹಿತಿ ಲಾಭ್ಯವಾಗಿಲ್ಲ.

Read More »

ನನ್ನ ಮಹದಾಯಿ ಹೇಳಿಕೆ ತಿರುಚಲಾಗಿದೆ : ದಿನೇಶ್ ಗುಂಡುರಾವ್

ಬೆಂಗಳೂರು, ನ.1- ಮಹದಾಯಿ ವಿವಾದ ಕುರಿತಂತೆ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿ ವರದಿ ಮಾಡಲಾಗಿದೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡುರಾವ್ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಟ್ವಿಟ್ ಮಾಡಿರುವ ಅವರು, ಮಹದಾಯಿ ವಿಚಾರಕ್ಕೆ ಸಂಬಂಧಪಟ್ಟಂತೆ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡು ಸುದ್ದಿ ಮಾಡಲಾಗಿದೆ. ಮಹಾದಾಯಿ ನದಿ ನೀರಿನ ಹಂಚಿಕೆ ವಿವಾದದ ಪ್ರಕರಣ ಸುಪ್ರೀಂ ಕೋರ್ಟ್‍ನಲ್ಲಿದೆ. ಅಂತಿಮವಾಗಿ ಈ ವಿವಾದವನ್ನು ನ್ಯಾಯಾಲಯವೇ ಇತ್ಯರ್ಥ ಪಡಿಸಬೇಕು ಎಂಬುದು ನನ್ನ ಅಭಿಪ್ರಾಯವಾಗಿತ್ತು …

Read More »

ಬಿಜೆಪಿ ಸರ್ಕಾರ ಕರ್ನಾಟಕ ರಾಜ್ಯವನ್ನು ವ್ಯವಸ್ಥಿತವಾಗಿ ನಾಶ ಮಾಡುವ ಎಲ್ಲ ರೀತಿಯ ಹುನ್ನಾರಗಳನ್ನೂ ಮಾಡುತ್ತಿದೆ:. ಸಿದ್ದರಾಮಯ್ಯ

ಬೆಂಗಳೂರು, ನ.1- ನ್ಯಾಯಯುತವಾಗಿ ನೀಡಬೇಕಾದ ತೆರಿಗೆ ಪಾಲನ್ನು ಕೇಂದ್ರ ನೀಡದೆ ವಂಚಿಸುತ್ತಿರುವುದರಿಂದ ನಮ್ಮಂತಹ ರಾಜ್ಯಗಳು ಅಭಿವೃದ್ಧಿಯಲ್ಲಿ ಹಿಂದೆ ಬೀಳುತ್ತಿವೆ. ಅನುದಾನವಿಲ್ಲದೆ ಮೂಲಸೌಕರ್ಯ ಕಲ್ಪಿಸಲಾಗಿದೆ. ರಾಜ್ಯಕ್ಕೆ ಹರಿದುಬರಬೇಕಾದ ಬಂಡವಾಳ ಹೂಡಿಕೆ ಸಮರ್ಪಕವಾಗಿ ಬರದಿದ್ದರೆ ಉದ್ಯೋಗ ಸೃಷ್ಟಿಯಾಗಲು ಸಾಧ್ಯವಾಗುವುದಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯವು ಅಭಿವೃದ್ಧಿ ಹೊಂದಬೇಕಾದಷ್ಟು ಪ್ರಮಾಣದಲ್ಲಿ ಅಭಿವೃದ್ಧಿಯಾಗುವುದಿಲ್ಲ. ಕರ್ನಾಟಕವು ಮುಂದಿನ ದಿನಗಳಲ್ಲಿ ಹಿಂದುಳಿದ ಅಥವಾ ಬಡ …

Read More »

ವಿಂಡೋ ಸೀಟ್ ಈ ಪರಿಯಾಗಿ ಪ್ರೇಕ್ಷಕರನ್ನು ಆವರಿಸಿಕೊಳ್ಳಲು, ಅದ್ಯಾವತ್ತು ರಿಲೀಸಾಗುತ್ತೆ

ಶೀತಲ್ ಶೆಟ್ಟಿ ನಿರ್ದೇಶನದ ವಿಂಡೋ ಸೀಟ್ ಚಿತ್ರ ಬಿಡುಗಡೆಯ ಹೊಸ್ತಿಲಲ್ಲಿದೆ. ಈಗಾಗಲೇ ಮೋಷನ್ ಪೋಸ್ಟರ್ ಮತ್ತು ಫಸ್ಟ್ ಲುಕ್‍ನಿಂದ ವಿಂಡೋ ಸೀಟ್ ಹಂಗಾಮಾ ಶುರುವಾಗಿದೆ. ವಿಂಡೋ ಸೀಟ್‍ನಲ್ಲಿ ಚೇತೋಹಾರಿಯಾದದ್ದೇನೋ ಇದೆ ಎಂಬ ಭರವಸೆಯನ್ನು ಶೀತಲ್ ಪ್ರೇಕ್ಷಕರ ಮನಸಲ್ಲಿ ಭದ್ರವಾಗಿಯೇ ನೆಲೆಯೂರಿಸಿದ್ದಾರೆ. ಈ ಸಿನಿಮಾದ ಮುಂದಿನ ಅಪ್‍ಡೇಟ್ಸ್ ಗಾಗಿ ಕಾದು ಕೂತಿದ್ದವರಿಗೀಗ ಚಿತ್ರತಂಡ ಡಬಲ್ ಧಮಾಕಾವನ್ನೇ ಕೊಡಮಾಡಿದೆ. ಈ ಮೂಲಕ ಮತ್ತೆ ವಿಂಡೋ ಸೀಟ್ ದೀಪಾವಳಿಯ ಪ್ರಭಾವಳಿಗೆ ಹೊಸ ಮೆರುಗು ನೀಡಲು …

Read More »

ರಾಷ್ಟ್ರ ಧ್ವಜ ಸುಟ್ಟ ಟಿಪ್ಪರ್ ಚಾಲಕ – ಹಿಡಿದು ಥಳಿಸಿದ ಸಾರ್ವಜನಿಕರು

ಕೋಲಾರ: ಕನ್ನಡ ರಾಜ್ಯೋತ್ಸವದೊಂದೆ ರಾಷ್ಟ್ರ ಧ್ವಜ ಸುಟ್ಟು ಅಪಮಾನವೆಸಿಗಿದ್ದ ಟಿಪ್ಪರ್ ಚಾಲಕನಿಗೆ ಸಾರ್ವಜನಿಕರು ಥಳಿಸಿದ ಘಟನೆ ಕೋಲಾರದಲ್ಲಿ ನಡೆದಿದೆಕೋಲಾರ ಜಿಲ್ಲೆಯ ಮಾಲೂರು ತಾಲೂಕು ಮಾಸ್ತಿ ಗ್ರಾಮದ ತಿಮ್ಮಸಂದ್ರ ಬಳಿ ಉತ್ತರ ಭಾರತ ಮೂಲದ ಟಿಪ್ಪರ್ ಲಾರಿ ಡ್ರೈವರ್ ಸತ್ಯೇಂದ್ರ ಕುಮಾರ್ ಯಾದವ್ ರಾಷ್ಟ್ರ ಧ್ವಜಕ್ಕೆ ಅಪಮಾನವೆಸಿಗಿದ್ದ ಕಿಡಿಗೇಡಿ. ರಾಷ್ಟ್ರಧ್ವಜಕ್ಕೆ ಅಪಮಾನವೆಸಗಿದ್ದ ಸುದ್ದಿ ತಿಳಿಯುತ್ತಿದ್ದಂತೆ ಸಾರ್ವಜನಿಕರು ಚಾಲಕನಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ಅಪಮಾನವೆಸಗಿದ್ದ ಕಿಡಿಗೇಡಿ ಕೈಗೆ ರಾಷ್ಟ್ರ ಧ್ವಜ ಮತ್ತು ಕನ್ನಡ ಧ್ವಜವನ್ನು …

Read More »

ಸಾಕಷ್ಟು ಜಿದ್ದಾಜಿದ್ದಿನ ಮತ್ತು ಪ್ರತಿಷ್ಠೆಗೆ ಸಾಕ್ಷಿ ಆಗಿರುವ ಉಪ ಚುನಾವಣೆ ಮತದಾನಕ್ಕೆ ಇನ್ನೊಂದೇ ದಿನ

ಬೆಂಗಳೂರು: ಸಾಕಷ್ಟು ಜಿದ್ದಾಜಿದ್ದಿನ ಮತ್ತು ಪ್ರತಿಷ್ಠೆಗೆ ಸಾಕ್ಷಿ ಆಗಿರುವ ಉಪ ಚುನಾವಣೆ ಮತದಾನಕ್ಕೆ ಇನ್ನೊಂದೇ ದಿನ ಬಾಕಿ. ನಿನ್ನೆ ಬಹಿರಂಗ ಪ್ರಚಾರ ಅಂತ್ಯ ಆಗಿದ್ದು, ಇವತ್ತು ಮನೆ ಮನೆಗೆ ತೆರಳಿ ಮತಯಾಚಿಸುವುದಕ್ಕೆ ಅವಕಾಶ ಇದೆ. 21 ದಿನಗಳಿಂದ ನಡೆದಿದ್ದ ಪ್ರಚಾರ ಈಗ ನಿರ್ಣಾಯಕ ಹಂತ ತಲುಪಿದೆ. ಬಹಿರಂಗ ಪ್ರಚಾರದ ಅವಧಿ ಮುಗಿದಂತೆ ಕ್ಷೇತ್ರದ ಮತದಾರರಲ್ಲದವರೂ ಕೂಡಾ ಕ್ಷೇತ್ರವನ್ನು ಖಾಲಿ ಮಾಡಿ ತೆರಳಬೇಕಾಗುತ್ತದೆ. ನಾಳೆ ಮತದಾನ ನಡೆಯಲಿದೆ. ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಬಿಜೆಪಿ …

Read More »

ಕೃಷಿ, A.P.M.C.ಕಾಯ್ದೆ ತಿದ್ದುಪಡಿ- ಮುಚ್ಚುವ ಹಂತ ತಲುಪಿದ A.P.M.C.ಗಳು

ಕೋಲಾರ: ಪ್ರಧಾನಿ ಮೋದಿ ಸರ್ಕಾರ ಮತ್ತು ರಾಜ್ಯದ ಬಿಜೆಪಿ ಸರ್ಕಾರ ಎಪಿಎಂಸಿ ತಿದ್ದುಪಡಿ ತಂದ ಬಳಿಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಸ್ಥೆಯೇ ಬುಡಮೇಲಾಗಿದೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ವ್ಯಾಪಾರ ವ್ಯವಹಾರ ನಡೀತಿದೆ. ಆದರೆ ಹೊಸ ಕಾನೂನಿನಿಂದ ಬಂಗಾರಪೇಟೆ, ಮಾಲೂರು, ಶ್ರೀನಿವಾಸಪುರ ಎಪಿಎಂಸಿಗಳು ಖಾಲಿ ಹೊಡೆಯುತ್ತಿವೆ. ಹೊಸ ಕಾನೂನಿನಿಂದ ಎಪಿಎಂಸಿಗಳ ಆದಾಯ ಬಹುತೇಕ ನಿಂತು ಹೋಗಿದೆ. ಹೀಗಾಗಿ ಎಪಿಎಂಸಿಗಳ ನಿರ್ವಹಣೆ ಕಷ್ಟ ಆಗುತ್ತಿದೆ. ಹೊಸ ಕಾಯ್ದೆಯಿಂದಾಗಿ ಎಪಿಎಂಸಿಗಳ ಆದಾಯ ಶೇ.75 ರಷ್ಟು …

Read More »

ಹೊಸ ವಂಟಮುರಿಯಲ್ಲಿ ಇಂದು ಕರವೇ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಹುಲ್ ಜಾರಕಿಹೊಳಿ

ಬೆಳಗಾವಿ: ಕರ್ನಾಟಕ ರಕ್ಷಣಾ ವೇದಿಕೆ ಕಳೆದ ಹಲವು ವರ್ಷಗಳಿಂದ ಬಡವರ ದನಿಯಾಗಿ, ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತಲೆ ಬಂದಿದೆ. ಮುಂದೆನೂ ಸಹ ಇದೇ ರೀತಿ ಹೋರಾಟ ನಡೆಯುತ್ತಿರಬೇಕು ಎಂದು ರಾಹುಲ್ ಜಾರಕಿಹೊಳಿ ಹೇಳಿದರು. ಅವರು ಹೊಸ ವಂಟಮುರಿಯಲ್ಲಿ ಇಂದು ಕರವೇ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಲವು ವರ್ಷಗಳಿಂದ ರಕ್ಷಣಾ ವೇದಿಕೆ ರಾಜ್ಯದಲ್ಲಿ ಬಡವರ ದನಿಯಾಗಿ ಕೆಲಸ ಮಾಡುತ್ತಿದೆ. ಅನ್ಯಾಯ ವಿರುದ್ಧ ಸಮರಕ್ಕೆ ಸಿದ್ದ ಎಂಬಂತೆ ಕಾರ್ಯ ಮಾಡುತ್ತಿದೆ …

Read More »

ಬ್ಯಾಟ್ಸ್​ಮನ್ ಆಗಿ ಗೆದ್ದರೂ ನಾಯಕನಾಗಿ ಸೋತ ರಾಹುಲ್,ಹೊರಕ್ಕೆ ಬಿದ್ದ ಪಂಜಾಬ್, ಚೆನ್ನೈ

ಅಬುಧಾಬಿ: ಇಂದು ನಡೆದ ಬೊಂಬಾಟ್ ಭಾನುವಾರದ ಮೊದಲನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 9 ವಿಕೆಟ್‍ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ತನ್ನ ಜೊತೆ ಪಂಜಾಬ್ ತಂಡವನ್ನು ಕೂಡ ಐಪಿಎಲ್-2020ಯಿಂದ ಹೊರಕ್ಕೆ ಕರೆದುಕೊಂಡು ಹೊರಟಿದೆ. ಇಂದು ಅಬುಧಾಬಿ ಮೈದಾನದಲ್ಲಿ ನಡೆದ 53ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಂಜಾಬ್ ತಂಡ ಉತ್ತಮ ಆರಂಭ ಪಡೆದು ಮಧ್ಯಮ ಕ್ರಮಾಂಕದಲ್ಲಿ ಕುಸಿದಿತು. ಆದರೆ ಕೊನೆಯಲ್ಲಿ ದೀಪಕ್ ಹೂಡಾ …

Read More »

ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಟ್ಟಣದ ಏಳ್ಗೆಗಾಗಿ ಶ್ರಮಿಸಿ ಮಾದರಿ ಪಟ್ಟಣವನ್ನಾಗಿ ಪರಿವರ್ತಿಸುವಂತೆ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಸಲಹೆ

ಗೋಕಾಕ : ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಟ್ಟಣದ ಏಳ್ಗೆಗಾಗಿ ಶ್ರಮಿಸಿ ಮಾದರಿ ಪಟ್ಟಣವನ್ನಾಗಿ ಪರಿವರ್ತಿಸುವಂತೆ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಸಲಹೆ ಮಾಡಿದರು. ಸಮೀಪದ ಅರಭಾವಿ ಪಟ್ಟಣ ಪಂಚಾಯತಿ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ನೀಡಿದ ಸನ್ಮಾನವನ್ನು ಸ್ವೀಕರಿಸಿ ಬೆಳಗಾವಿಯಲ್ಲಿ ಮಾತನಾಡಿದ ಅವರು, ಎಲ್ಲರ ಸಹಕಾರದಿಂದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳಿಗೆ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು. ಅರಭಾವಿ ಪಟ್ಟಣದ ಪ್ರಗತಿಗಾಗಿ ಸರ್ಕಾರದಿಂದ ಇನ್ನೂ …

Read More »