Breaking News

Yearly Archives: 2020

ಕಡತ ವಿಲೇವಾರಿ ಕಾರ್ಯವನ್ನು ಅಕ್ಟೋಬರ್  ನಲ್ಲಿ ಸವಾಲಾಗಿ ಸ್ವೀಕರಿಸಿದ ಅಧಿಕಾರಿಗಳು ಬೆಳಗಾವಿ ಜಿಲ್ಲೆಯನ್ನು 2ನೇ ಸ್ಥಾನಕ್ಕೆ ತರುವಲ್ಲಿ ಯಶಸ್ವಿ

ಬೆಳಗಾವಿ: ಕಳೆದ ಎರಡು ವರ್ಷಗಳಿಂದ ಉಂಟಾದ ಪ್ರವಾಹ ಹಾಗೂ ಕರೋನ ಸಂಕಷ್ಟದಿಂದ ಇಡೀ ಜಿಲ್ಲಾಡಳಿತ ಜನರ ರಕ್ಷಣೆ ಹಾಗೂ ಸ್ಥಳಾಂತರ ಕಾರ್ಯದ ಒತ್ತಡದಲ್ಲಿ ತೊಡಗಿತ್ತು. ಜಿಲ್ಲೆಗೆ ನೂತನ ಜಿಲ್ಲಾಧಿಕಾರಿಯಾಗಿ ಆಗಮಿಸಿದ ಎಂ.ಜಿ.ಹಿರೇಮಠರವರ ನೇತೃತ್ವದಲ್ಲಿ ಜಿಲ್ಲೆಯ ಅಧಿಕಾರಿಗಳ ಅವಿರತ ಶ್ರಮದಿಂದಾಗಿ ಸೆಪ್ಟಂಬರ್ ನಲ್ಲಿ   ಬಿಡುಗಡೆಗೊಳಿಸಿದ್ದ ಜಿಲ್ಲಾಡಳಿತಗಳ ಕಡತ ವಿಲೇವಾರಿ ರ್ಯಾಂಕಿಂಗ್‍ನಲ್ಲಿ 13ನೇ ಸ್ಥಾನದಲ್ಲಿದ್ದ ಬೆಳಗಾವಿ ಜಿಲ್ಲೆಯು 2ನೇ ಸ್ಥಾನವನ್ನು ಪಡೆದುಕೊಂಡಿದೆ. ಈ ಸಂಬಂಧ ಮಾತನಾಡಿದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಕಂದಾಯ ಇಲಾಖೆಯಲ್ಲಿ …

Read More »

ನಮ್ಮ ಮೇಲೆ ನಡೆದಿರುವ ದೌರ್ಜನ್ಯಕ್ಕೆ ನ್ಯಾಯ ಬೇಕಿದೆ : ಚಾಂದಿನಿ ನಾಯ್ಕ್

ಬಾಗಲಕೋಟೆ: ಜಿಲ್ಲೆಯ ಮಹಾಲಿಂಗಪುರ ಪುರಸಭೆ ಸದಸ್ಯೆರನ್ನು ಎಳೆದಾಡಿ, ಗೂಂಡಾ ಪ್ರವೃತ್ತಿ ಪ್ರದರ್ಶಿಸಿದ್ದ ತೇರದಾಳ ಕ್ಷೇತ್ರದ ಬಿಜೆಪಿ ಶಾಸಕ ಸಿದ್ದು ಸವದಿ ವಿರುದ್ಧ ಸದಸ್ಯೆ ಚಾಂದಿನಿ ನಾಯ್ಕ್ ಕಣ್ಣೀರಿಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ಕುರಿತು ಮಾಹಿತಿ ನೀಡಿದ ಸದಸ್ಯೆ ಚಾಂದಿನಿ ನಾಯ್ಕ್, ಮಹಾಲಿಂಗಪುರ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಹಿನ್ನೆಲೆಯಲ್ಲಿ ಮತ ಚಲಾಯಿಸಲು ತೆರಳಿದ್ದೆವು. ಈ ವೇಳೆ ನಮಗೆ ಮತ ಚಲಾಯಿಸಲು ಅವಕಾಶ ನೀಡದೆ ನಮ್ಮ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಘಟನೆ …

Read More »

ತೇರದಾಳದ ಘಟನೆ ಬಿಜೆಪಿಯ ಸಂಸ್ಕೃತಿಯನ್ನ ತೋರಿಸುತ್ತೆ. ಪೊಲೀಸರ ಸಮ್ಮುಖದಲ್ಲಿ ಹೆಣ್ಣುಮಗಳನ್ನು ಎಳೆದಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆಕ್ರೋಶ

ಬೆಂಗಳೂರು: ತೇರದಾಳದ ಘಟನೆ ಬಿಜೆಪಿಯ ಸಂಸ್ಕೃತಿಯನ್ನ ತೋರಿಸುತ್ತೆ. ಪೊಲೀಸರ ಸಮ್ಮುಖದಲ್ಲಿ ಹೆಣ್ಣುಮಗಳನ್ನು ಎಳೆದಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಹೆಣ್ಣು ಮಗಳನ್ನ ಎಳೆದಾಡಿದ್ದಾರೆ. ಈ ಘಟನೆ ಸರಿಯೋ ತಪ್ಪೋ ಅನ್ನೋದನ್ನ ಮುಖ್ಯಮಂತ್ರಿಗಳಿಗೆ ಬಿಟ್ಟು ಬಿಡುತ್ತೇನೆ. ಈ ಪ್ರಕರಣವನ್ನ ಗಂಭೀರವಾಗಿ ನೋಡುತ್ತಿದ್ದೇವೆ ಎಂದು ಹೇಳಿದ್ದಾರೆ. ಬೇರೆ ಪ್ರಕರಣದಲ್ಲಿ ಪೊಲೀಸರು ಕೇಸ್ ಹಾಕ್ತಾರೆ. ಆದರೆ ಈ ಪ್ರಕರಣದಲ್ಲಿ ಇದುವರೆಗೆ ಯಾವುದೇ ಕ್ರಮ …

Read More »

ವಿದ್ಯುತ್ ಬಿಲ್ ಪಾವತಿಸದ ಹಿನ್ನೆಲೆ ಹಳೇಬೀಡು ಹೊಯ್ಸಳೇಶ್ವರ ದೇವಾಲಯದ ವಿದ್ಯುತ್ ಸಂಪರ್ಕ ಕಡಿತ

ಹಾಸನ: ವಿದ್ಯುತ್ ಬಿಲ್ ಪಾವತಿಸದ ಹಿನ್ನೆಲೆಯಲ್ಲಿ ಜಿಲ್ಲೆಯ ಬೇಲೂರು ತಾಲೂಕಿನಲ್ಲಿರುವ ಇತಿಹಾಸ ಪ್ರಸಿದ್ಧ ಹಳೇಬೀಡು ಹೊಯ್ಸಳೇಶ್ವರ ದೇವಾಲಯದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದ್ದು, ಕತ್ತಲಲ್ಲೇ ದೇವರ ದರ್ಶನ ಮಾಡುವಂತಾಗಿದೆ. 6 ತಿಂಗಳಿಂದ ಸುಮಾರು 45,000 ರೂ. ವಿದ್ಯುತ್ ಬಿಲ್‍ಅನ್ನು ಪುರಾತತ್ವ ಇಲಾಖೆ ವಿಭಾಗ ಪಾವತಿಸಬೇಕಿದೆ. ಪ್ರತಿನಿತ್ಯ ದೇಗುಲಕ್ಕೆ ಭೇಟಿ ನೀಡುತ್ತಿರುವ ಪ್ರವಾಸಿಗರು ದೇವಾಲಯದ ಒಳಗೆ ಕತ್ತಲೆಯ ಇರುವ ಕಾರಣ ದೇಗುಲದ ಒಳಭಾಗದ ಶಿಲ್ಪಕಲೆಯನ್ನು ಸವಿಯಲಾಗದೆ ನಿರಾಶರಾಗುತ್ತಿದ್ದಾರೆ. ಸಾವಿರಾರು ಜನ ಭೇಟಿ ನೀಡುವ …

Read More »

ಡರಾತ್ರಿ ಎರಡು ಕಾರುಗಳ ನಡುವೆ ಮುಖಾಮುಖಿ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ  ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ರಾಯಚೂರು: ನಗರದ ಹೊರವಲಯದ ಮಂಜರ್ಲಾ ಕ್ರಾಸ್ ಬಳಿ ತಡರಾತ್ರಿ ಎರಡು ಕಾರುಗಳ ನಡುವೆ ಮುಖಾಮುಖಿ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ  ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಮೃತರನ್ನ ಬಸವರಾಜ, ಗಣೇಶ ಹಾಗೂ ಅಭಿಷೇಕ ಎಂದು ಗುರುತಿಸಲಾಗಿದೆ. ಉಳಿದಂತೆ ಸಿದ್ದಾರ್ಥ ಹಾಗೂ ಭೀಮಾರೆಡ್ಡಿ ಗಂಭೀರ ಗಾಯಗೊಂಡಿದ್ದಾರೆ. ಎಲ್ಲರೂ ರಾಯಚೂರು ನವೋದಯ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಾಗಿದ್ದಾರೆ. ಗಾಯಾಳುಗಳನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೊಂದು ಕಾರಿನಲ್ಲಿದ್ದವರ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ. ರಾತ್ರಿ …

Read More »

ಅರಣ್ಯ ಸಚಿವ ಆನಂದ್ ಸಿಂಗ್ ನಿವಾಸದ ಬಳಿ ಮೊಸಳೆ ಪ್ರತ್ಯಕ್ಷ

ಬಳ್ಳಾರಿ: ಅರಣ್ಯ ಸಚಿವ ಆನಂದ್ ಸಿಂಗ್ ನಿವಾಸದ ಬಳಿ ಮೊಸಳೆಯೊಂದು ಪ್ರತ್ಯಕ್ಷವಾಗಿದ್ದು, ಕೆಲಕಾಲ ಆತಂಕ ಸೃಷ್ಟಿಸಿತ್ತು. ಬಳ್ಳಾರಿ ಜಿಲ್ಲೆ ಹೊಸಪೇಟೆ ನಗರದ ಬೈಪಾಸ್ ಬಳಿ ಎಲ್‍ಎಲ್‍ಸಿ ಕಾಲುವೆ ಇದೆ. ನಿನ್ನೆ ರಾತ್ರಿ ಕಾಲುವೆಯಿಂದ ಮೊಸಳೆಯು ಸಚಿವರ ನಿವಾಸದ ಮುಂಭಾಗದ ರಸ್ತೆಗೆ ಬಂದಿತ್ತು.ಮೊಸಳೆ ಇರುವ ಮಾಹಿತಿ ಅರಿತ ಕಮಲಾಪುರದ ಅಟಲ್ ವಾಜಪೇಯಿ ಝೂಲಾಜಿಕಲ್ ಪಾರ್ಕ್ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ದೌಡಾಯಿಸಿದ್ದಾರೆ. ಅಲ್ಲದೆ ಮೊಸಳೆಯನ್ನು ಸೆರೆ ಹಿಡಿದಿದ್ದಾರೆ. ನಂತರ ಮೊಸಳೆ ಝೂಲಾಜಿಕಲ್ ಪಾರ್ಕ್‍ಗೆ …

Read More »

ಸಚಿವ ಸಂಪುಟ ವಿಸ್ತರಣೆಗೆ ಶಶಿಕಲಾ ಜೊಲ್ಲೆ, ಪ್ರಭು ಚವ್ಹಾಣ್, ಸಿ.ಸಿ.ಪಾಟೀಲ್, ಕೋಟಾ ಶ್ರೀನಿವಾಸ ಪೂಜಾರಿ ಸೇರಿದಂತೆ ನಾಲ್ವರು ಸಚಿವರಿಗೆ ಕೋಕ್

ಬೆಂಗಳೂರು: ಎರಡು ಕ್ಷೇತ್ರದ ಉಪ ಚುನಾವಣೆಯಲ್ಲಿ  ಬಿಜೆಪಿ ಭರ್ಜರಿ  ಜಯಗಳಿದ ಬೆನ್ನಲ್ಲೇ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಸಿಎಂ ಬಿ.ಎಸ್. ಯಡಿಯೂರಪ್ಪ ಸಿದ್ಧತೆ ನಡೆಸಿದ್ದಾರೆ.   ದೀಪಾವಳಿ ಹಬ್ಬದ ಬಳಿಕ ಸಚಿವ ಸಂಪುಟದಲ್ಲಿ ಭಾರೀ ಬದಲಾವಣೆಯಾಗುವ ಸಾಧ್ಯತೆ ಇದ್ದು, ಕೆಲವು ಸಚಿವರಿಗೆ ಕೋಕ್ ನೀಡಿ, ಹೊಸಬರಿಗೆ ಅವಕಾಶ ನೀಡಲು ರಾಜ್ಯ ಬಿಜೆಪಿ ಚಿಂತನೆ ನಡೆಸಿದೆ ಎನ್ನಲಾಗಿದೆ. ಹಾಲಿ ಸಚಿವರಾದ ಶಶಿಕಲಾ ಜೊಲ್ಲೆ, ಪ್ರಭು ಚವ್ಹಾಣ್, ಸಿ.ಸಿ.ಪಾಟೀಲ್, ಕೋಟಾ ಶ್ರೀನಿವಾಸ ಪೂಜಾರಿ …

Read More »

ಸವಿತಾ ಹುರಕಡ್ಲಿ ಎಂಬ ಮಹಿಳೆಯೊಂದಿಗೆ ಶಾಸಕ ಸವದಿ ಅನುಚಿತವಾಗಿ ವರ್ತಿಸಿದ್ದಾರೆ.

ಬಾಗಲಕೋಟೆ: ರಬಕವಿ-ಬನಹಟ್ಟಿಯ ಮಹಾಲಿಂಗಪುರ ಪುರಸಭೆ ಚುನಾವಣೆ ನಡೆಯುತ್ತಿದ್ದು, ಅಧ್ಯಕ್ಷೆ ಆಕಾಂಕ್ಷಿಯಾಗಿ ಮಹಿಳೆಯನ್ನು ಶಾಸಕ ಸಿದ್ದು ಸವದಿ ಎಳೆದಾಡಿರುವ ಘಟನೆ ನಡೆದಿದೆ. ಶಾಸಕರ ಅಸಭ್ಯ ವರ್ತನೆ ವಿಡಿಯೋ ವೈರಲ್ ಆಗಿದೆ. ಮಹಲಿಂಗಪುರ ಪುರಸಭೆ ಅಧ್ಯಕ್ಷೆ ಗಾದಿ ವಿಚಾರವಾಗಿ ಗಲಾಟೆ ನಡೆದಿದ್ದು, ಅಧ್ಯಕ್ಷೆ ಸ್ಥಾನದ ಆಕಾಂಕ್ಷಿಯಾಗಿರುವ ಸವಿತಾ ಹುರಕಡ್ಲಿ ಎಂಬ ಮಹಿಳೆಯೊಂದಿಗೆ ಶಾಸಕ ಸವದಿ ಅನುಚಿತವಾಗಿ ವರ್ತಿಸಿದ್ದಾರೆ. ಅಲ್ಲದೇ ನೆಲಕ್ಕೆ ನೂಕಿರುವ ವಿಡಿಯೋ ವೈರಲ್ ಆಗಿದೆ. ಮಹಾಲಿಂಗಪುರ ಪುರಸಭೆಯ ಒಟ್ಟು 23 ಸದಸ್ಯರಲ್ಲಿ …

Read More »

ಬಿಹಾರದಲ್ಲಿ ಎನ್‍ಡಿಎ ಗೆಲುವಿಗೆ ಕಾರಣವೇನು..?- ಮಹಾಘಟ್‍ಬಂಧನ್ ಎಡವಿದ್ದೆಲ್ಲಿ..?

ಪಾಟ್ನಾ: ಭಾರೀ ಕುತೂಹಲ ಮೂಡಿಸಿದ್ದ ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಹೊರಬಿದ್ದಿದೆ. ಕೊನೆಗೂ ಎನ್‍ಡಿಎ ಮೈತ್ರಿಕೂಟ ಭರ್ಜರಿಯಾಗಿ ಗೆಲುವು ಕಂಡಿತು. ಎನ್‍ಡಿಎ ಗೆಲುವಿಗೆ ಕಾರಣ…? ಪ್ರಧಾನಿ ಮೋದಿ ಮತ್ತು ಸಿಎಂ ನಿತೀಶ್ ಕುಮಾರ್ ಜೋಡಿಗೆ ಜನ ಮನ್ನಣೆ ನೀಡಿದ್ದಾರೆ. ಮೋದಿ ರ್ಯಾಲಿಗಳು ದೊಡ್ಡ ಪ್ರಮಾಣದಲ್ಲಿ ಸಕ್ಸಸ್ ಕಂಡಿವೆ. ಕೊರೊನಾ ವ್ಯಾಕ್ಸಿನ್ ಫ್ರೀ ಹಂಚುವ ಭರವಸೆಗೆ ಜನ ಬೆಂಬಲ ಸೂಚಿಸಿದ್ದಾರೆ. ಆರ್‍ಜೆಡಿಗೆ ಅಧಿಕಾರ ಕೊಟ್ಟರೆ ಜಂಗಲ್ …

Read More »

ಬೆಂಕಿ ದುರಂತಕ್ಕೆ ಸಂಬಂಧಪಟ್ಟಂತೆ 1 ಬ್ಯಾರಲ್ ಸ್ಯಾನಿಟೈಸರ್ ಬಿದ್ದು ಅನಾಹುತ ಸಂಭವಿಸಿದೆ

ಬೆಂಗಳೂರು: ಸಿಲಿಕಾನ್ ಸಿಟಿಯ ಹೊಸಗುಡ್ಡದಹಳ್ಳಿಯಲ್ಲಿ ಬೆಂಕಿ ದುರಂತಕ್ಕೆ ಸಂಬಂಧಪಟ್ಟಂತೆ 1 ಬ್ಯಾರಲ್ ಸ್ಯಾನಿಟೈಸರ್ ಬಿದ್ದು ಅನಾಹುತ ಸಂಭವಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಘಟನೆ ನಡೆದು 20 ಗಂಟೆ ಕಳೆದರೂ ಇನ್ನೂ ಬೆಂಕಿ ಜ್ವಾಲೆ ಆರಿಲ್ಲ. ಕೆಮಿಕಲ್ ಫ್ಯಾಕ್ಟರಿಯಿಂದ ಬೆಂಕಿಯ ಜ್ವಾಲೆ ಬಾನೆತ್ತರಕ್ಕೆ ಚಿಮ್ಮುತ್ತಿದೆ. ಅಕ್ಕ-ಪಕ್ಕದ ಕಟ್ಟಡಗಳಿಗೆ ಬೆಂಕಿ ಆವರಿಸುವ ಆತಂಕ ಸ್ಥಳೀಯರಿಗೆ ಉಂಟಾಗಿದೆ. ಗೋಡೌನ್ ಅಕ್ಕಪಕ್ಕದ ಹತ್ತಾರು ಮನೆಗಳ ನಿವಾಸಿಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಶಿಫ್ಟ್ ಮಾಡಲಾಗಿದೆ. ನಿನ್ನೆ ಮಧ್ಯಾಹ್ನ ಅವಘಡ …

Read More »