Breaking News

Monthly Archives: ಅಕ್ಟೋಬರ್ 2020

ಮದ್ಯ ಸೇವಿಸಲು ಹಣ ನೀಡದ್ದಕ್ಕೆ ಪಾಪಿ ಪತಿಯೊಬ್ಬ ಪತ್ನಿಯನ್ನು ಕೊಲೆಗೈದಿರುವ ಘಟನೆ

ವಿಜಯಪುರ: ಮದ್ಯ ಸೇವಿಸಲು ಹಣ ನೀಡದ್ದಕ್ಕೆ ಪಾಪಿ ಪತಿಯೊಬ್ಬ ಪತ್ನಿಯನ್ನು ಕೊಲೆಗೈದಿರುವ ಘಟನೆ ಜಿಲ್ಲೆಯ ಆಲಮೇಲ ತಾಲೂಕಿನ ದೇವನಣಗಾಂವ್ ಗ್ರಾಮದಲ್ಲಿ ನಿನ್ನೆ ತಡರಾತ್ರಿ ನಡೆದಿದೆ. 45 ವರ್ಷದ ಮಲಕವ್ವ ಹರಗೋಲ ಕೊಲೆಯಾದ ದುರ್ದೈವಿ. ಮದ್ಯ ಸೇವಿಸಲು ಹಣ ನೀಡದ ಹಿನ್ನೆಲೆಯಲ್ಲಿ ಸಿಟ್ಟಿಗೆದ್ದ ಪತಿ ಶಿವಪ್ಪ ಹರಗೋಲ ಕೊಡಲಿಯಿಂದ ಕೊಚ್ಚಿ ಕೊಚ್ಚಿ ಪತ್ನಿಯನ್ನು ಹತ್ಯೆ ಮಾಡಿದ್ದಾನೆ. ಬಳಿಕ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಆಲಮೇಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.

Read More »

ಯುವಕನನ್ನು ಕಿಡ್ನ್ಯಾಪ್ ಮಾಡಿ ಕೊನೆಗೆ ಆತನ ಸ್ನೇಹಿತರೇ ಹತ್ಯೆಗೈದಿರುವ ಘಟನೆ

ಬೆಂಗಳೂರು: ಯುವಕನನ್ನು ಕಿಡ್ನ್ಯಾಪ್ ಮಾಡಿ ಕೊನೆಗೆ ಆತನ ಸ್ನೇಹಿತರೇ ಹತ್ಯೆಗೈದಿರುವ ಘಟನೆ ಹೆಸರಘಟ್ಟದ ಬಳಿ ನಡೆದಿದೆ. ಲಗ್ಗೆರೆ ನಿವಾಸಿ ಮಹೇಶ್‌ ಗೌಡ(20) ಕೊಲೆಯಾದ ಯುವಕ ಎಂದು ತಿಳಿದುಬಂದಿದೆ. ಮಹೇಶ್​ನನ್ನು ಕೊಲೆಗೈದ ಕೃಷ್ಣ ಮತ್ತು ರವಿ ಪೊಲೀಸರಿಗೆ ಶರಣಾಗಿದ್ದಾರೆ.   ಕಿಡ್ನ್ಯಾಪ್, ಕಿತ್ತಾಟ ಕೊಲೆಯಲ್ಲಿ ಅಂತ್ಯ ಮೂಲತಃ ಲಗ್ಗೆರೆ ನಿವಾಸಿಯಾಗಿದ್ದ ಮೃತ ಮಹೇಶ್ ಗೌಡ ಲಾಡ್ಜ್ ನಡೆಸುತ್ತಿದ್ದ. ಇದೇ ತಿಂಗಳ 21ನೇ ತಾರೀಖು ಗೆಳೆಯರ ಜೊತೆ ಪಾರ್ಟಿ ಮಾಡೋಕೆ ಅಂತಾ ಹೊರಗಡೆ ಹೋಗಿದ್ದ. ನಂತರ …

Read More »

ತಂದೆಯ ಅಂತ್ಯ ಸಂಸ್ಕಾರ ನಡೆಯುತ್ತಿದ್ದರೆ, ಇತ್ತ ಮಂದೀಪ್ ಬ್ಯಾಟ್ ಬೀಸುತ್ತಿದ್ದಾರೆ

ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್​ನ ರೋಚಕ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧ ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡ 12 ರನ್​ಗಳ ಜಯ ಸಾಧಿಸಿದೆ. ಆರಂಭದಲ್ಲಿ ಹೈದರಾಬಾದ್ ಕಡೆ ಗೆಲುವನ್ನು ಪಂಜಾಬ್ ತನ್ನೆಡೆ ಸೆಳೆದುಕೊಂಡಿತ್ತು. ಈ ಮಧ್ಯೆ ಪಂಜಾಬ್ ತಂಡದಲ್ಲಿ ಓಪನರ್ ಆಗಿ ಇಳಿದಿದ್ದ ಮಂದೀಪ್ ನೋವಿನ ನಡುವೆಯೂ ಬ್ಯಾಟ್ ಬೀಸಿದ್ದಾರೆ! ಅತ್ತ ಮನೆಯಲ್ಲಿ ಅವರ ತಂದೆಯ ಅಂತ್ಯ ಸಂಸ್ಕಾರ ನಡೆಯುತ್ತಿದ್ದರೆ, ಇತ್ತ ಮಂದೀಪ್ ಬ್ಯಾಟ್ ಬೀಸುತ್ತಿದ್ದರು! ಹೌದು, …

Read More »

ಆಸ್ಪತ್ರೆಗೆ ಬಿಟ್ಟು ಯುವಕ ನಾಪತ್ತೆಯಾದ ಘಟನೆ ಉಡುಪಿಯಲ್ಲಿ ನಡೆದಿದೆ.

ಉಡುಪಿ: ಚಿಂತಾಜನಕ ಸ್ಥಿತಿಯಲ್ಲಿದ್ದ ಯುವತಿಯನ್ನು ಆಸ್ಪತ್ರೆಗೆ ಬಿಟ್ಟು ಯುವಕ ನಾಪತ್ತೆಯಾದ ಘಟನೆ ಉಡುಪಿಯಲ್ಲಿ ನಡೆದಿದೆ. ಆದರೆ ವಿಪರ್ಯಾಸ ಅಂದ್ರೆ ಆಸ್ಪತ್ರೆಗೆ ದಾಖಲಾದ ಕೆಲವೇ ಕ್ಷಣಗಳಲ್ಲಿ ಯುವತಿ ಮೃತಪಟ್ಟಿದ್ದಾಳೆ. ನಿನ್ನೆ 6:30ರ ಹೊತ್ತಿಗೆ ರಿಕ್ಷಾದಲ್ಲಿ ಯುವತಿಯನ್ನು ಆಸ್ಪತ್ರೆಗೆ ಕರೆದು ತಂದಿದ್ದ ಯುವಕ, ಆಕೆಯ ಮನೆಯವರಿಗೆ ಕರೆಮಾಡಿ ವಿಷಯ ತಿಳಿಸಿ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾನೆ. ರಕ್ಷಿತಾ ನಾಯಕ್ ನಿಗೂಢವಾಗಿ ಸಾವನ್ನಪ್ಪಿರುವ ಯುವತಿ. ಹಿರಿಯಡ್ಕ ಠಾಣಾ ವ್ಯಾಪ್ತಿಯ ಕುಕ್ಕೆಹಳ್ಳಿ ನಿವಾಸಿಯಾಗಿರುವ …

Read More »

ಎಂಟಿಬಿ ನಾಗರಾಜ್‌ ಮನೆಯಲ್ಲಿ ಆಯುಧ ಪೂಜೆ ನಡೆಸಿರುವ ಪೋಟೋಗಳು ವೈರಲ್

ಬೆಂಗಳೂರು : ಬಿಜೆಪಿ ನಾಯಕ, ವಿಧಾನ ಪರಿಷತ್ ಸದಸ್ಯಎಂಟಿಬಿ ನಾಗರಾಜ್‌ ಮನೆಯಲ್ಲಿ ಆಯುಧ ಪೂಜೆ ನಡೆಸಿರುವ ಪೋಟೋಗಳು ವೈರಲ್ ಆಗಿವೆ. ರೋಲ್ಸ್ ರಾಯ್ಸ್ ಸೇರಿದಂತೆ ಐಷಾರಾಮಿ ಕಾರುಗಳನ್ನು ಅವರು ಹೊಂದಿದ್ದಾರೆ. ಭಾನುವಾರ ಮಹದೇವಪುರ ಬಳಿ ಇರುವ ಎಂಟಿಬಿ ನಾಗರಾಜ್‌ರ ‘ಆಚಂದ್ರಾರ್ಕ ನಿಲಯ’ದಲ್ಲಿ ಆಯುಧ ಪೂಜೆಯನ್ನು ಮಾಡಲಾಯಿತು. ರೋಲ್ಸ್ ರಾಯ್ಸ್, ಫೆರಾರಿ ಕಾರುಗಳಿಗೆ ಪೂಜೆಯನ್ನು ಸಲ್ಲಿಸಲಾಯಿತು. ಈ ಫೋಟೋಗಳು ಈಗ ವೈರಲ್ ಆಗಿವೆ. ಎಂಟಿಬಿ ನಾಗರಾಜ್ ಕುಟುಂಬ ಸದಸ್ಯರ ಜೊತೆ ಆಯುಧ …

Read More »

ಗ್ರಾಮದ ಕೋಡಿಬಸವೇಶ್ವರ ದೇಗುಲದಲ್ಲಿ ಕಳ್ಳತನ ನಡೆದಿದೆ. ತಡ ರಾತ್ರಿ ಖದೀಮರು ದೇವಸ್ಥಾನದ ಬೀಗ ಒಡೆದು ಕೃತ್ಯ ಎಸಗಿದ್ದಾರೆ.

ಹಾವೇರಿ: ಜಿಲ್ಲೆಯ ಹಾನಗಲ್ ತಾಲೂಕಿನ ವರ್ದಿ ಗ್ರಾಮದ ಕೋಡಿಬಸವೇಶ್ವರ ದೇಗುಲದಲ್ಲಿ ಕಳ್ಳತನ ನಡೆದಿದೆ. ತಡ ರಾತ್ರಿ ಖದೀಮರು ದೇವಸ್ಥಾನದ ಬೀಗ ಒಡೆದು ಕೃತ್ಯ ಎಸಗಿದ್ದಾರೆ. ದೇವಸ್ಥಾನ ಹುಂಡಿಯಲ್ಲಿದ್ದ ಕಾಣಿಕೆ, ಬೆಳ್ಳಿ ಅಭರಣಗಳು ಮತ್ತು ಮೈಕನ್ನು ಎಗರಿಸಿ ಹಣವನ್ನು ತೆಗೆದುಕೊಂಡು ಹುಂಡಿಯನ್ನು ಕೆರೆಯಲ್ಲಿ ಎಸೆದು ಪರಾರಿಯಾಗಿದ್ದಾರೆ. ಹುಂಡಿಯಲ್ಲಿ ಸುಮಾರು ಐದು ಸಾವಿರಕ್ಕೂ ಅಧಿಕ ಹಣ ಇತ್ತು ಎಂದು ಅಂದಾಜಿಸಲಾಗಿದೆ. ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ …

Read More »

ಸೇತುವೆ ಮೇಲಿಂದ ಭೀಮಾ ನದಿಗೆ ಹಾರಿ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ

ವಿಜಯಪುರ: ಸೇತುವೆ ಮೇಲಿಂದ ಭೀಮಾ ನದಿಗೆ ಹಾರಿ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಆಲಮೇಲ ತಾಲೂಕಿನ ದೇವಣಗಾಂವ್ ಸೇತುವೆ ಬಳಿ ನಡೆದಿದೆ. ಧಾರವಾಡ ಜಿಲ್ಲೆಯ ನವಲಗುಂದದ ನಿವಾಸಿ ಐಶ್ವರ್ಯ ಶ್ರೀಪಾಲ್ ಕಬ್ಬಿನ(20) ಆತ್ಮಹತ್ಯೆ ಮಾಡಿಕೊಂಡ ಯುವತಿ ಎಂದು ತಿಳಿದುಬಂದಿದೆ.      ಕಲಬುರಗಿ ಜಿಲ್ಲೆಯ ಗಾಣಗಾಪುರದಲ್ಲಿರುವ ದತ್ತಾತ್ರೇಯ ದೇಗುಲಕ್ಕೆ ಹೋಗುವಾಗ ದಾರಿ ಮಧ್ಯೆ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

Read More »

ಮುಂದಿನ ಸಿಎಂ ಅನ್ನೋದು ಕಾಂಗ್ರೆಸ್‌ನ ಸಂಸ್ಕೃತಿಯಲ್ಲ. ಮೊದಲು ಪಕ್ಷಕ್ಕೆ ಬಹುಮತ ಬರುವಂತಹ ಕೆಲಸ ಮಾಡಿ.

ಬೆಂಗಳೂರು: ಮುಂದಿನ ಸಿಎಂ ಅನ್ನೋದು ಕಾಂಗ್ರೆಸ್‌ನ ಸಂಸ್ಕೃತಿಯಲ್ಲ. ಮೊದಲು ಪಕ್ಷಕ್ಕೆ ಬಹುಮತ ಬರುವಂತಹ ಕೆಲಸ ಮಾಡಿ. ಆನಂತರ ಮುಖ್ಯಮಂತ್ರಿ ವಿಚಾರ ಎಂದು ಬೆಂಗಳೂರಿನಲ್ಲಿ ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಕೆಲ ಕಾಂಗ್ರೆಸ್‌ ನಾಯಕರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಮೊದಲು ಪಕ್ಷಕ್ಕೆ ಬಹುಮತ ಬರುವಂತಹ ಕೆಲಸ ಮಾಡಿ. ಆನಂತರ ಮುಖ್ಯಮಂತ್ರಿ ವಿಚಾರ ಮಾಡಿ. ಒಂದು ಕಡೆ ಸಿದ್ದರಾಮಯ್ಯ ಮುಂದಿನ ಸಿಎಂ ಎಂದು ಜಮೀರ್ ಹೇಳ್ತಾರೆ. ಮತ್ತೊಂದು ಕಡೆ ಡಿಕೆಶಿ ಮುಂದಿನ ಸಿಎಂ ಎಂದು ‘ಕೈ’ …

Read More »

ಎಂದು ಡಿ.ಕೆ. ಸಹೋದರರಿಗೆ R.R.ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಟಾಂಗ್ ಕೊಟ್ಟಿದ್ದಾರೆ.

ಬೆಂಗಳೂರು: ನಾನು 10 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿ ಇದ್ದೆ. ಆಗ ಡಿ.ಕೆ. ಸಹೋದರರಿಗೆ ಈ ಮುನಿರತ್ನ ಒಳ್ಳೆಯವನಾಗಿದ್ದ. ಈಗ ಮುನಿರತ್ನ ಇವರಿಗೆ ಅಷ್ಟೊಂದು ಕಹಿಯಾಗಿ ಬಿಟ್ನಾ? ಎಂದು ಡಿ.ಕೆ. ಸಹೋದರರಿಗೆ R.R.ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಟಾಂಗ್ ಕೊಟ್ಟಿದ್ದಾರೆ. ಡಿ.ಕೆ. ಶಿವಕುಮಾರ್​ ಕೆಂಪೇಗೌಡ ಅಧ್ಯಯನ ಪೀಠದ ಉದ್ಘಾಟನೆ ದಿನ ನನ್ನನ್ನೂ ಹೊಗಳಿದ್ರು. ಎಲ್ಲರನ್ನೂ ಒಟ್ಟಿಗೆ ಇಟ್ಕೊಂಡು ಹೋಗಿ. ನಾಡಪ್ರಭು ಕೆಂಪೇಗೌಡರ ಇತಿಹಾಸ ಓದಿ. ಕೆಂಪೇಗೌಡರ ಇತಿಹಾಸ ಓದದೆ ನೀವು …

Read More »

ತಾಂತ್ರಿಕ ದೋಷದಿಂದ ಚಲಿಸುತ್ತಿದ್ದ ವಾಹನ ಧಗಧಗನೆ ಹೊತ್ತಿ ಉರಿದ‌ ಘಟನೆ

ಹಾವೇರಿ: ತಾಂತ್ರಿಕ ದೋಷದಿಂದ ಚಲಿಸುತ್ತಿದ್ದ ವಾಹನ ಧಗಧಗನೆ ಹೊತ್ತಿ ಉರಿದ‌ ಘಟನೆ ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿನ ಸಣ್ಣಗುಬ್ಬಿ ಕ್ರಾಸ್​ನಲ್ಲಿ ನಡೆದಿದೆ. ರೇವಣಪ್ಪ ಹುಗ್ಗೇರ ಎಂಬುವರಿಗೆ ಸೇರಿದ ಓಮ್ನಿ ನೋಡ ನೋಡ್ತಿದ್ದಂತೆ ಧಗಧಗನೆ ಉರಿದು ಕರಕಲಾಗಿದೆ. ದಾವಣಗೆರೆ ಜಿಲ್ಲೆಯ ಮಲೇಬೆನ್ನೂರಿನಿಂದ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಸಾತೇನಹಳ್ಳಿ ದೇವಸ್ಥಾನಕ್ಕೆ ಹೊರಟಿದ್ದ ವೇಳೆ ಈ ಘಟನೆ ನಡೆದಿದೆ. ವಾಹನದಲ್ಲಿ ನಾಲ್ಕು ಜನರು ಪ್ರಯಾಣಿಸುತ್ತಿದ್ದರು. ಹೊಗೆ ಕಾಣಿಸಿಕೊಳ್ತಿದ್ದಂತೆ ನಾಲ್ವರು ವ್ಯಾನ್​ನಿಂದ​ ಕೆಳಗಿಳಿದಿದ್ದಾರೆ. ಅದೃಷ್ಟವಶಾತ್ ಪ್ರಾಣ …

Read More »