Breaking News

Daily Archives: ಅಕ್ಟೋಬರ್ 11, 2020

ಬೆಳಗಾವಿಯಲ್ಲಿ ಏನೇ ವಿಚಾರ ಬಂದರೂ ನನ್ನ ಹೆಸರು ಕೇಳಿಬರುತ್ತದೆ’.

ಬೆಳಗಾವಿ: ‘ಬೆಳಗಾವಿಯಲ್ಲಿ ಏನೇ ವಿಚಾರ ಬಂದರೂ ನನ್ನ ಹೆಸರು ಕೇಳಿಬರುತ್ತದೆ’. – ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದೀರಾ ಎಂಬ ಪ್ರಶ್ನೆಗೆ ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಉತ್ತರಿಸಿದ್ದು ಹೀಗೆ. ಶನಿವಾರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್ ಅವರನ್ನು ಭೇಟಿಯಾಗಲು ಬಂದಿದ್ದ ಅವರು ಪತ್ರಕರ್ತರೊಂದಿಗೆ ಮಾತನಾಡಿದರು. ‘ಈ ಬಾರಿ ಯುವಕರಿಗೆ ಕೊಟ್ಟರೂ ಸಂತೋಷ. ಯಾರಿಗೆ ಕೊಟ್ಟರೂ ಸಂತೋಷ. ನಾನಿನ್ನೂ ರಾಜಕೀಯದಿಂದ ನಿವೃತ್ತಿಯಾಗಿಲ್ಲ’ ಎಂದರು. …

Read More »

ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ತಯಾರಿ ಆರಂಭಿಸಿದೆ.

ಬೆಳಗಾವಿ: ಸುರೇಶ ಅಂಗಡಿ ಅವರ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ನಡೆಯುವ ಉಪ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ತಯಾರಿ ಆರಂಭಿಸಿದೆ. ಅಂಗಡಿ ಕುಟುಂಬದವರಿಗೆ ಟಿಕೆಟ್‌ ನೀಡಬೇಕು ಎಂದು ಅವರ ಬಂಧುಗಳು, ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ. ಇದಲ್ಲದೇ, ಮತ್ತಷ್ಟು ಆಕಾಂಕ್ಷಿಗಳ ಪಟ್ಟಿಯೂ ದೊಡ್ಡದಿದೆ. ಹೀಗಾಗಿ, ಮುಖಂಡರ ಅಭಿಪ್ರಾಯ ಆಲಿಸುವ ಕಸರತ್ತನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಪ್ರಾರಂಭಿಸಿದ್ದಾರೆ. ಶನಿವಾರ ಇಲ್ಲಿಗೆ ಬಂದು ವಾಸ್ತವ್ಯ ಹೂಡಿರುವ ಅವರು, ‘ಯಾರಿಗೆ ಟಿಕೆಟ್ ನೀಡಿದರೆ ಪಕ್ಷಕ್ಕೆ …

Read More »

ಸಚಿವರು ರಮೇಶ್‌ ಜಾರಕಿಹೊಳಿ ಹೇಳಿದ್ದೇನು.

ಬೆಂಗಳೂರು : ನೆರೆಯ ತೆಲಂಗಾಣ ಹಾಗೂ ಗೋವಾ ರಾಜ್ಯಗಳು ಮಹದಾಯಿ ಮತ್ತು ಕೃಷ್ಣಾ ನದಿ ನೀರು ಹಂಚಿಕೆ ಸಂಬಂಧ ಹೊಸ ವಿವಾದ ಸೃಷ್ಟಿಸಲು ಮುಂದಾಗಿದ್ದು, ಇದರಿಂದ ರಾಜ್ಯಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ. ಕೇಂದ್ರ ಸರ್ಕಾರ ಹಾಗೂ ಸುಪ್ರೀಂ ಕೋರ್ಟ್‌ ಮುಂದೆ ರಾಜ್ಯ ಸಮರ್ಥ ವಾದ ಮಂಡನೆ ಮಾಡಲಿದೆ ಎಂದು ಜಲ ಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ಹೇಳಿದ್ದಾರೆ. ಈ ಎರಡು ಹೊಸ ವಿವಾದಗಳ ಬಗ್ಗೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ …

Read More »

ಕೊರೊನಾ ಸೋಂಕು ಕಾಣಿಸಿಕೊಂಡರೇ ನರಗಳಲ್ಲಿ ರಕ್ತ ಹೆಪ್ಪುಗಟ್ಟುತ್ತಾ?

ಬೆಂಗಳೂರು: ಕಳೆದ 8ತಿಂಗಳಿಂದ ತಿಗಣೆಯಂತೆ ರಕ್ತ ಹೀರಿ ಹಿಂಸಿಸುತ್ತಿರೋ ಕೊರೊನಾ ವೈರಸ್ ಅಟ್ಟಹಾಸ ಹೆಚ್ಚುತ್ತಲೇ ಸಾಗಿದೆ. ಅದರಲ್ಲೂ ಈ ಮಹಾಮಾರಿ ಬಗ್ಗೆ ಮತ್ತಷ್ಟು ಬೆಚ್ಚಿ ಬೀಳಿಸುವ ಮಾಹಿತಿಗಳು ಹೊರ ಬೀಳುತ್ತಿವೆ. ಈ ಬರುತ್ತಿರುವ ವರದಿಗಳು ಜನರಲ್ಲಿ ನಡುಕ ಹುಟ್ಟಿಸುವಂತಿದೆ. ಕೊರೊನಾ ಸೋಂಕಿಗಿಂತ ಮುಂಚೆ ಆರೋಗ್ಯ ಸಮಸ್ಯೆಗಳಿದ್ರೆ ಶಾಶ್ವತವಾಗಿ ಅನಾರೋಗ್ಯವಾಗೋದು ಗ್ಯಾರೆಂಟಿಯಂತೆ. ಹೃದಯ ಸಂಬಂಧಿ, ಶ್ವಾಸಕೋಶದಲ್ಲಿ ಸಮಸ್ಯೆ ಇದ್ದವರಿಗೆ‌ ಕೋವಿಡ್ ಪಾಸಿಟಿವ್ ಬಂದ್ರೆ ಕೊರೊನಾ ಚಿಕಿತ್ಸೆ ನೀಡುವ ವೇಳೆ ವೈದ್ಯರಿಗೆ ತಪ್ಪದೆ …

Read More »

ವರದಕ್ಷಿಣೆ ಕಿರುಕುಳ: ತಾಯಿಯ ಜೊತೆ 2 ವರ್ಷದ ಮಗುವನ್ನೂ ಹೊರದಬ್ಬಿದ ಕಿರಾತಕರು..

ಬೆಂಗಳೂರು: 2 ವರ್ಷದ ಮಗುವಿನ ಜೊತೆ ಮಹಿಳೆಯನ್ನು ಹೊರಹಾಕಿ ಪತಿ ವರದಕ್ಷಿಣೆ ಕಿರುಕುಳ ನೀಡಿರುವ ಅಮಾನವೀಯ ಘಟನೆ ರಾಮಮೂರ್ತಿನಗರದಲ್ಲಿ ನಡೆದಿದೆ. ಪತಿಯ ಕುಟುಂಬಸ್ಥರ ವಿರುದ್ಧ ಪತ್ನಿ ವಾದಿಕಾ ಜತ್ಲಾ ದೂರು ನೀಡಿದ್ದಾರೆ. ನಿನ್ನೆ ಇದೇ ರೀತಿ ವರದಕ್ಷಿಣೆಗಾಗಿ ಪತ್ನಿಯನ್ನೇ ಸುಡಲು ಯತ್ನಿಸಿದ್ದ ಪತಿ ಬಗ್ಗೆ ಕೇಳಿದ್ವಿ. ಈಗ ಇಂತಹದ್ದೇ ಮತ್ತೊಂದು ಘಟನೆ ಮರುಕಳಿಸಿದೆ. ಪತಿರಾಯ ಚಳಿ, ಮಳೆಯನ್ನು ಲೆಕ್ಕಿಸದೆ ತನ್ನ 2 ವರ್ಷದ ಪುಟ್ಟ ಕಂದಮ್ಮನ ಜೊತೆ ತಾಯಿಯನ್ನೂ ಮನೆಯಿಂದ …

Read More »

ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 7 ಲಕ್ಷ ದಾಟಿತು!

ಕರ್ನಾಟಕದಲ್ಲಿ ಕೊವಿಡ್ -19 ಸೋಂಕಿತರ ಸಂಖ್ಯೆ ಇಂದು 7 ಲಕ್ಷ ದಾಟಿದೆ . ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶನಿವಾರ ಸಾಯಂಕಾಲ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ಕಳೆದ 24 ಗಂಟೆಗಳಲ್ಲಿ 102 ಜನ ಸೋಂಕಿಗೆ ಬಲಿಯಾಗಿದ್ದಾರೆ ಮತ್ತು ಹೊಸದಾಗಿ 10,517 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ . ರಾಜ್ಯದಲ್ಲಿ ಇದುವರೆಗೆ ಕೊರೊನಾದಿಂದ 9,891 ಜನರ ಸಾವನ್ನಪ್ಪಿದ್ದಾರೆ , ಒಟ್ಟು ಸೋಂಕಿತರ ಸಂಖ್ಯೆ 7,00,786 ಕ್ಕೇರಿದೆ . ಸೋಂಕಿತರಲ್ಲಿ 5,69,947 …

Read More »