Breaking News

Daily Archives: ಸೆಪ್ಟೆಂಬರ್ 19, 2020

ಬೆಳಗಾವಿ: ಖಾಸಗಿಯಿಂದ ಸರ್ಕಾರಿ ಶಾಲೆಗಳತ್ತ ‘ದಾಖಲೆ’

ಬೆಳಗಾವಿ: ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 2020-21ನೇ ಸಾಲಿನಲ್ಲಿ ಪೋಷಕರು ಮಕ್ಕಳನ್ನು ಖಾಸಗಿ ಶಾಲೆಗಳಿಂದ ಬಿಡಿಸಿ ಸರ್ಕಾರಿ ಶಾಲೆಗಳಿಗೆ ದಾಖಲಿಸಿರುವ ‘ದಾಖಲೆಯ ಬೆಳವಣಿಗೆ’ ನಡೆದಿದೆ. ಈ ಶೈಕ್ಷಣಿಕ ಜಿಲ್ಲೆಯ ಬೈಲಹೊಂಗಲ, ಕಿತ್ತೂರು, ಬೆಳಗಾವಿ ನಗರ, ಬೆಳಗಾವಿ ಗ್ರಾಮೀಣ, ಖಾನಾಪುರ, ಸವದತ್ತಿ ಹಾಗೂ ರಾಮದುರ್ಗ ಕ್ಷೇತ್ರಗಳಲ್ಲಿ 1ರಿಂದ 10ನೇ ತರಗತಿವರೆಗೂ ಮಕ್ಕಳು ಖಾಸಗಿಯಿಂದ ಸರ್ಕಾರಿ ಶಾಲೆಗಳತ್ತ ಬಂದಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಪಡೆದಿರುವ ಅಂಕಿ-ಅಂಶಗಳ ಪ್ರಕಾರ, ಈವರೆಗೆ 954 ಬಾಲಕರು ಮತ್ತು 852 ಬಾಲಕಿಯರು …

Read More »

ಟ್ರ್ಯಾಕ್ಟರ್‌ಗಳ ಚಕ್ರಗಳ ಕಳವು: 7 ಆರೋಪಿಗಳ ಬಂಧನ

ಬೆಳಗಾವಿ: ರಸ್ತೆ ಬದಿ ಹಾಗೂ ತೋಟದ ಮನೆಗಳ ಬಳಿ ನಿಲ್ಲಿಸಿದ್ದ ಟ್ರ್ಯಾಕ್ಟರ್‌ ಟ್ರೇಲರ್‌ಗಳ ಡಿಸ್ಕ್‌ ಸಮೇತ ಚಕ್ರಗಳನ್ನು ಕದಿಯುತ್ತಿದ್ದ ಆರೋಪದ ಮೇಲೆ ಏಳು ಮಂದಿಯನ್ನು ಶುಕ್ರವಾರ ಬಂಧಿಸಿರುವ ಖಡಕಲಾಟ ಠಾಣೆ ಪೊಲೀಸರು, ಅವರಿಂದ ₹ 8.61 ಲಕ್ಷ ಮೌಲ್ಯದ ಸಾಮಗ್ರಿಗಳನ್ನು ವಶಕ್ಕೆ ಪಡೆದಿದ್ದಾರೆ. ನಿಪ್ಪಾಣಿ ತಾಲ್ಲೂಕು ಗಳತಗಾದ ಮಾರುತಿ ಠೊಣ್ಣೆ, ಮಹಾದೇವ ಮಾಕಾಳೆ, ಬಾಬು ಡಾಲೆ, ಶಿವಾನಂದ ಗಜಬರ, ಖಾನಾಪುರ ತಾಲ್ಲೂಕು ಕಕ್ಕೇರಿಯ ಸಂಜು ಅಂಬಡಗಟ್ಟಿ ಶ್ರಾವಣ ಹುಲಮನಿ ಹಾಗೂ ಘಷ್ಟೊಳಿ …

Read More »

ಕೊರೊನಾ ಚಿಕಿತ್ಸೆಗೆ 19 ದಿನಕ್ಕೆ 11 ಲಕ್ಷ ಬಿಲ್- 1 ರೂ.ಡಿಸ್ಕೌಂಟ್

ಚಿಕ್ಕಮಗಳೂರು: ಕೊರೊನಾ ಹೆಸರಲ್ಲಿ ಖಾಸಗಿ ಆಸ್ಪತ್ರೆಗಳು ಬೇಕಾಬಿಟ್ಟಿ ಹಣ ವಸೂಲಿ ಮಾಡುತ್ತಿದ್ದು, ಚಿಕಿತ್ಸೆ ದಾಖಲಾದ ವ್ಯಕ್ತಿಗೆ ಕೇವಲ 19 ದಿನಕ್ಕೆ 11 ಲಕ್ಷ ರೂ.ಬಿಲ್ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣ ಹೋಬಳಿಯ ಪಿಳ್ಳೇನಹಳ್ಳಿ ಗ್ರಾಮದ 70 ವರ್ಷದ ನಂಜುಡಪ್ಪ ಅವರಿಗೆ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಆಗಸ್ಟ್ 24ರಂದು ನಗರದ ಆಶ್ರಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೊರೊನಾ ಚಿಕಿತ್ಸೆಗೆಂದು ದಾಖಲಾದ ವ್ಯಕ್ತಿಗೆ ಖಾಸಗಿ ಆಸ್ಪತ್ರೆ 19 ದಿನಕ್ಕೆ …

Read More »

ನರೇಂದ್ರ ಮೋದಿಯವರ ಭೇಟಿ ಬಳಿಕ ಸಿಎಂ ಯಡಿಯೂರಪ್ಪ ಅವರು ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಭೇಟಿ ಬಳಿಕ ಸಿಎಂ ಯಡಿಯೂರಪ್ಪ ಅವರು ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ ಎರಡು ದಿನಗಳಿಂದ ನವದೆಹಲಿಯಲ್ಲಿ ವಾಸ್ತವ್ಯ ಹೂಡಿರುವ ಯಡಿಯೂರಪ್ಪನವರು, ಇಂದು ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಈ ನಡುವೆ ನಿನ್ನೆ ಪ್ರಧಾನಿ ಮೋದಿಯವರನ್ನು ಸಂಸತ್‍ನಲ್ಲಿ ಭೇಟಿ ಮಾಡಿದ್ದ ಯಡಿಯೂರಪ್ಪ ಭಾವುಕರಾಗಿ ಕಣ್ಣಿರಿಟ್ಟಿದ್ದಾರೆ ಎಂಬ ಸುದ್ದಿ ಲಭ್ಯವಾಗಿದೆ. ಸಿಎಂ ಭೇಟಿ ವೇಳೆ ಪ್ರಧಾನಿ ಮೋದಿಯವರು ಬಿಎಸ್‍ವೈ ಆರೋಗ್ಯದ ಬಗ್ಗೆ ಅತೀವ ಕಾಳಜಿ ತೋರಿದ್ದು, …

Read More »

ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಚೇರಿಯನ್ನು ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ್ ಕತ್ತಿ  ಅವರು, ಚಾಲನೆ ನೀಡಿದರು.

ಹುಕ್ಕೇರಿ: ತಾಲೂಕಿನ ಯರಗಟ್ಟಿ ಗ್ರಾಮದಲ್ಲಿ  ನೂತನ ಪ್ರಾಥಮಿಕ  ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಚೇರಿಯನ್ನು ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ್ ಕತ್ತಿ  ಅವರು, ಚಾಲನೆ ನೀಡಿದರು. ಬಳಿಕ ಮಾತನಾಡಿ,  ಜಿಲ್ಲೆಯ ಸಹಕಾರಿ ಸಂಘ    ರಾಜ್ಯ ದಲ್ಲಿ ಪ್ರಥಮ ಸ್ಥಾನದಲ್ಲಿದೆ. ರೆೃತರು ಅಭಿವೃದ್ಧಿಗೆ ಸಹಕಾರಿ ಕೊಡುಗೆ ಅಪಾರ ಎಂದು ಬಣ್ಣಿಸಿದರು. ಈ ಸಂದರ್ಭದಲ್ಲಿ  ಪಿಕೆಪಿಎಸ್ ಅಧ್ಯಕ್ಷ ವೀರುಪಾಕ್ಷಿ ಬಾ ಚೌಗಲಾ,  ಶ್ರೀಶೈಲಪ್ಪಾ  ಬ. ಮಗದುಮ್ಮ, ರಾಜೇಂದ್ರ ಪಾಟೀಲ,  ಬಿ. ಎಲ್. …

Read More »

ತೆರಿಗೆ ಹೆಚ್ಚಿಸಿ ಬೆಂಗಳೂರಿಗರಿಗೆ B.B.M.P. ಶಾಕ್

ಬೆಂಗಳೂರು: ಕೊರೊನಾ ಮಧ್ಯೆ ಬೆಂಗಳೂರು ಜನರಿಗೆ ತೆರಿಗೆ ಶಾಕ್ ಕಾದಿದೆ. ಬಿಬಿಎಂಪಿ ಆದಾಯ ಹೆಚ್ಚಿಸಲು ಮುಂದಾಗಿರುವ ಪಾಲಿಕೆ ಜನಸಾಮಾನ್ಯರಿಗೆ ಹೊರೆಮಾಡಲಿದೆ. ಆಸ್ತಿ ತೆರಿಗೆ, ಪ್ಲಾನ್ ಅಪ್ರೂವಲ್, ಖಾತಾ ಹಂಚಿಕೆ ದರ ಏರಿಕೆ ಜೊತೆಗೆ ಭೂ ಸಾರಿಗೆ ಸೆಸ್ ಜಾರಿಗೆ ತರಲು ಬಿಬಿಎಂಪಿ ತೀರ್ಮಾನ ಮಾಡಿದೆ. ಆಸ್ತಿ ತೆರಿಗೆ ಶೇ.15 ರಿಂದ 25ರಷ್ಟು ಹೆಚ್ಚಳ, ಖಾತಾ ಚಾರ್ಜ್ ಶೇ.2 ರಿಂದ 5 ರಷ್ಟು ಏರಿಕೆ ಸಾಧ್ಯತೆ ಇದೆ. ಆಸ್ತಿ ನೋಂದಣಿ ಮಾಡುವಾಗ …

Read More »

ಮಳೆ ನೀರಲ್ಲಿ ಕೊಚ್ಚಿ ಹೋದ ಯುವಕ……

ಬೆಂಗಳೂರು: ರಾಜ್ಯದ ಹಲವೆಡೆ ಇಂದು ವರುಣ ಅಬ್ಬರಿಸಿದ್ದು, ಬೀದರ್ ಕಲಬುರಗಿ, ರಾಯಚೂರು, ಯಾದಗಿರಿ, ಕೊಡಗು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಯಾಗಿದೆ. ಕಲಬುರಗಿಯಲ್ಲಿ ಮಳೆ ನೀರಿನ ರಭಸಕ್ಕೆ ಯುವಕ ಕೊಚ್ಚಿಹೋಗಿದ್ದು, ಮೃತಪಟ್ಟಿದ್ದಾನೆ.ಕಲಬುರಗಿ ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರಿದ್ದಿದ್ದು, ಅಫಜಲಪುರ್, ಆಳಂದ, ಚಿಂಚೋಳಿಯ ಹಲವು ಗ್ರಾಮಗಳು ಜಲಾವೃತವಾಗಿವೆ. ಅಲ್ಲದೆ ಜಿಲ್ಲೆ ಆಳಂದ ತಾಲೂಕಿನ ಬೊಮ್ಮನಹಳ್ಳಿ ಬಳಿ ನೀರಿನಲ್ಲಿ ಕೊಚ್ಚಿ ಹೋಗಿದ್ದ ಯುವಕ ಶವವಾಗಿ ಪತ್ತೆಯಾಗಿದ್ದು, ಮೃತ ಯುವಕ ಸಿದ್ದರಾಜು ಅಫಜಲಪುರ ಜೆಸ್ಕಾಂನಲ್ಲಿ ಎಇಇ …

Read More »

ಮಲೆ ಮಹದೇಶ್ವರ ಬೆಟ್ಟ ದೇವಸ್ಥಾನದ ಹುಂಡಿ ಏಣಿಕೆ1.47 ಕೋಟಿ ನಗದು, 17 ಗ್ರಾಂ ಚಿನ್ನ ಸಂಗ್ರಹ

ಚಾಮರಾಜನಗರ: ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟ ದೇವಸ್ಥಾನದ ಹುಂಡಿ ಏಣಿಕೆ ಮಾಡಲಾಗಿದ್ದು, ಒಂದು ಕೋಟಿಗೂ ಅಧಿಕ ಹಣ ಸಂಗ್ರಹವಾಗಿದೆ. ಮಲೆ ಮಹದೇಶ್ವರ ಬೆಟ್ಟ ದೇವಸ್ಥಾನದಲ್ಲಿ ಪ್ರತಿ ತಿಂಗಳಿಗೊಮ್ಮೆ ಹುಂಡಿ ಏಣಿಕೆ ನಡೆಯುತ್ತಿತ್ತು. ಆದರೆ ಕೊರೊನಾ ಹಿನ್ನೆಲೆಯಲ್ಲಿ ಲಾಕ್‍ಡೌನ್ ಘೋಷಣೆ ಮಾಡಿದ್ದರಿಂದ ಹುಂಡಿ ಏಣಿಕೆ ಮಾಡಲು ಸಾಧ್ಯವಾಗಿರಲಿಲ್ಲ. ಇದೀಗ 82 ದಿನಗಳ ಬಳಿಕ ಹುಂಡಿ ಎಣಿಕೆ ಕಾರ್ಯ ನಡೆದಿದೆ. ಆದರೆ ಈ ಬಾರಿ ಮಹದೇಶ್ವರನ ಆದಾಯದಲ್ಲಿ ಕುಸಿತ ಕಂಡು ಬಂದಿದೆ. ಹುಂಡಿಯಲ್ಲಿ …

Read More »

ಬೆಳಗಾವಿ ಜಿಲ್ಲಾ ಮಧ್ಯವರ್ತಿ ಬ್ಯಾಂಕ್D.C.C. ಚುನಾವಣೆ ಮುಹೂರ್ತ ಫಿಕ್ಸ್

ಬೆಳಗಾವಿ:  ರಾಜ್ಯ ರಾಜಕಾರಣವನ್ನೇ ಅಲ್ಲಾಡಿಸಿರುವ ಬೆಳಗಾವಿ ಪಿಎಲ್ ಡಿ ಬ್ಯಾಂಕ್ ಚುನಾವಣೆಯ ನೆನಪು ಮಾಸುವ ಮುನ್ನವೇ ಕರ್ನಾಟಕ ರಾಜ್ಯ ರಾಜಕಾರಣವನ್ನೇ ಅಲ್ಲಾಡಿಸುವಷ್ಟು ಪ್ರಬಲವಾಗಿರುವ ಬೆಳಗಾವಿ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ (ಡಿಸಿಸಿ) ಚುನಾವಣೆ ಮುಹೂರ್ತ ಫಿಕ್ಸ್ ಆಗಿದೆ.ನವೆಂಬರ್ 6ರಂದು ಬೆಳಗಾವಿ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಚುನಾವಣೆ ನಡೆಯಲಿದೆ. ಆಗಸ್ಟ್ ತಿಂಗಳಲ್ಲಿ ನಡೆಯಬೇಕಿದ್ದ ಚುನಾವಣೆಯನ್ನು ಕೊರೋನಾ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು.  ಮಾಜಿ ಸಂಸದ ರಮೇಶ ಕತ್ತಿ ಹಾಲಿ ಅಧ್ಯಕ್ಷರು. ಅವರು ಮತ್ತೊಮ್ಮೆ ಬ್ಯಾಂಕ್ ಮೇಲೆ ಹಿಡಿತ …

Read More »

ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಹೈಕಮಾಂಡ್ ಸಿದ್ಧವಾದಂತೆ ಕಾಣುತ್ತಿದೆ.,,,,,,?

ಬೆಂಗಳೂರು/ನವದೆಹಲಿ: ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ವದಂತಿಗಳ ಮಧ್ಯೆಯೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೈಗೊಂಡ ದೆಹಲಿ ಪ್ರವಾಸದಲ್ಲಿ ಬಿಗ್ ಶಾಕ್ ಎದುರಾಗಿದೆ. ಇಂದು ಬೆಳಗ್ಗೆ ಸಂಸತ್ ಆವರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಂಜೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾರನ್ನು ಭೇಟಿಯಾದ ಯಡಿಯೂರಪ್ಪಗೆ ಸ್ಪಷ್ಟ ಸಂದೇಶವೊಂದು ರವಾನೆಯಾಗಿದೆ ಅಂತ ತಿಳಿದುಬಂದಿದೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಹೈಕಮಾಂಡ್ ಸಿದ್ಧವಾದಂತೆ ಕಾಣುತ್ತಿದೆ. 77 ವರ್ಷದ ಸಿಎಂ ಯಡಿಯೂರಪ್ಪ ಬದಲಿಗೆ ಉತ್ತರಾಧಿಕಾರಿ ಆಯ್ಕೆಗೆ ಆಲೋಚಿಸಿದೆ. ಮುಂಬರುವ …

Read More »