Breaking News

Daily Archives: ಸೆಪ್ಟೆಂಬರ್ 18, 2020

ನಾವು ಏನೂ ಮಾತನಾಡೋ ಹಾಗಿಲ್ಲ -ಐಂದ್ರಿತಾ ರೈ

ನಿನ್ನೆಯಷ್ಟೆ ಸ್ಯಾಂಡಲ್​ವುಡ್​ ಡ್ರಗ್ಸ್​ ಜಾಲದ ಕುರಿತಾಗಿ ದಿಗಂತ್​-ಐಂದ್ರಿತಾ ದಂಪತಿಗೆ ಸಿಸಿಬಿ ವಿಚಾರಣೆ ನಡೆಸಿತ್ತು. ಮತ್ತೆ ಕರೆದರೆ ಹೋಗೋದಾಗಿ ಕೂಡ ತಿಳಿಸಿದ್ದರು. ಇನ್ನು, ಇಂದು ಬೆಳಿಗ್ಗೆ ಮನೆಯ ಬಾಲ್ಕನಿಯಲ್ಲಿ ಕಂಡು ಬಂದ ದಿಗಂತ್​ ತಾಯಿ ಹಾಗೂ ಐಂದ್ರಿತಾ ರೇ, ಮಾಧ್ಯಮದವರ ಜೊತೆ ಮಾತನಾಡಿದ್ರು. ದಂಪತಿಗೆ ಸಿಸಿಬಿ ವಿಚಾರಣೆ ಇನ್ನೂ ಪೂರ್ಣಗೊಳ್ಳದ ಹಿನ್ನೆಲೆ, ‘ನಾವು ಏನೂ ಮಾತನಾಡೋ ಹಾಗಿಲ್ಲ. ಇನ್ನೂ ವಿಚಾರಣೆ ಕಂಪ್ಲೀಟ್​ ಆಗಿಲ್ಲ. ಯಾವುದೇ ವಿಚಾರಗಳ ಬಗ್ಗೆ ಪ್ರತಿಕ್ರಿಯೆ ನೀಡುವಂತಿಲ್ಲ ಅಂತ …

Read More »

ಕೇಂದ್ರದ ಕೃಷಿ ಮಸೂದೆ ವಿರೋಧಿಸಿ ಸಚಿವ ಸ್ಥಾನಕ್ಕೆ ಹರ್‌ಸಿಮ್ರತ್‌ ಕೌರ್ ರಾಜೀನಾಮೆ

ದೆಹಲಿ: ಕೇಂದ್ರದ ಕೃಷಿ ಮಸೂದೆ ವಿರೋಧಿಸಿ ಸಚಿವೆ ಹರ್‌ಸಿಮ್ರತ್‌ ಕೌರ್ ಬಾದಲ್ ಗುರುವಾರ ಮೋದಿ ಸಂಪುಟ ತ್ಯಜಿಸಿದ್ದಾರೆ. ಕೇಂದ್ರದ ರೈತ ವಿರೋಧಿ ಕ್ರಮವನ್ನು ವಿರೋಧಿಸಿ ಸಚಿವೆ ಹರ್‌ಸಿಮ್ರತ್‌ ಕೌರ್‌ ಸಂಪುಟವನ್ನು ತೊರೆಯುವುದಾಗಿ ಶಿರೋಮಣಿ ಅಕಾಲಿ ದಳದ ಅಧ್ಯಕ್ಷ ಸುಖ್ಬೀರ್ ಸಿಂಗ್ ಬಾದಲ್ ಲೋಕಸಭೆಯಲ್ಲಿ ಘೋಷಿಸಿದ ಬೆನ್ನಲ್ಲೇ ಹರ್‌ಸಿಮ್ರತ್‌ ಕೌರ್‌ ತಮ್ಮ ರಾಜೀನಾಮೆಯನ್ನು ಮೋದಿ ಅವರಿಗೆ ಸಲ್ಲಿಸಿದ್ದಾರೆ. ಪಕ್ಷದ ವಕ್ತಾರ ಹರ್‌ಚರಣ್‌ ಬೈನ್ಸ್‌ ಅವರು ಈ ವಿಚಾರವನ್ನೂ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಕೇಂದ್ರವು …

Read More »

ಪುಲ್ವಾಮಾ ರೀತಿಯ ಉಗ್ರ ದಾಳಿ ಸಂಚು ವಿಫಲಗೊಳಿಸಿದ ಸೇನೆ; 52 ಕೆಜಿ ಸ್ಫೋಟಕ ಪತ್ತೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಹೆದ್ದಾರಿ ಬಳಿ 52 ಕೆ.ಜಿ ಸ್ಫೋಟಕ ವಸ್ತುಗಳನ್ನು ಭಾರತೀಯ ಸೇನೆ ಪತ್ತೆ ಮಾಡಿದೆ. ಗುರುವಾರ ಬೆಳಗ್ಗೆ 8 ಗಂಟೆಗೆ ಶೋಧ ಕಾರ್ಯ ಆರಂಭಿಸಿದ್ದೆವು. ಹಣ್ಣಿನ ತೋಟವೊಂದರಲ್ಲಿ ಹೂತು ಹಾಕಿದ್ದ ಸಿಂಟೆಕ್ಸ್ ಟ್ಯಾಂಕ್ ಒಳಗಡೆ 52 ಕೆಜಿ ಸ್ಫೋಟಕ ವಸ್ತು ಪತ್ತೆಯಾಗಿದೆ. ಈ ಸ್ಫೋಟಕಗಳನ್ನು 416 ಪೊಟ್ಟಣಗಳಾಗಿ ವಿಂಗಡಿಸಲಾಗಿದ್ದು ಪ್ರತಿಯೊಂದು ಪೊಟ್ಟಣವೂ 125 ಗ್ರಾಂ ತೂಕ ಹೊಂದಿದೆ ಎಂದು ಸೇನಾಪಡೆ ಹೇಳಿಕೆ ನೀಡಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ. …

Read More »

ಸಂಪುಟ ಪುನಾರಚನೆಯತ್ತ ಚಿತ್ತ | ವರಿಷ್ಠರ ತೀರ್ಮಾನಕ್ಕೆ ಬದ್ಧ: ಬಿ.ಎಸ್. ಯಡಿಯೂರಪ್ಪ

ಬೆಂಗಳೂರು: ಸಚಿವ ಸಂಪುಟದಿಂದ ಕೆಲವರನ್ನು ಕೈ ಬಿಟ್ಟು ಎಂಟು ಮಂದಿಯನ್ನು ಸೇರಿಸಿಕೊಳ್ಳುವ ಮೂಲಕ ಸಂಪುಟ ಪುನಾರಚನೆಯ ಪ್ರಸ್ತಾವ ಮುಂದಿಟ್ಟುಕೊಂಡು ದೆಹಲಿಗೆ ಹೋಗಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಗೃಹ ಸಚಿವ ಅಮಿತ್ ಶಾ ಒಪ್ಪಿಗೆ ಪಡೆಯಲು ನಿರ್ಧರಿಸಿದ್ದಾರೆ. ಪುನಾರಚನೆಗೆ ಒಪ್ಪದೇ ಇದ್ದರೆ ಮೂವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ಆಲೋಚನೆ ಅವರದ್ದಾಗಿದೆ ಎಂದು ಮುಖ್ಯಮಂತ್ರಿ ಆಪ್ತ ಮೂಲಗಳು ತಿಳಿಸಿವೆ. ಎಲ್ಲವೂ ಯಡಿಯೂರಪ್ಪ ಅಂದುಕೊಂಡಂತೆ ನಡೆದರೆ ಇದೇ ಭಾನುವಾರ(ಸೆ.20) ಸಂಪುಟ …

Read More »

ನಾಳೆ ರಾಜ್ಯಾದ್ಯಂತ ಮೆಗಾ ಇ-ಲೋಕ ಅದಾಲತ್‌

ಬೆಂಗಳೂರು: ರಾಜ್ಯದ ನ್ಯಾಯಾಂಗದ ಇತಿಹಾಸದಲ್ಲಿ ಪ್ರಥಮ ಪ್ರಯೋಗವಾಗಿ ಸೆ. 19ರಂದು ರಾಜ್ಯಾದ್ಯಂತ “ಮೆಗಾ ಇ-ಲೋಕ ಅದಾಲತ್‌’ ನಡೆಯಲಿದೆ. ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ರಾಜ್ಯ ಕಾನೂನು ಸೇವೆ ಗಳ ಪ್ರಾಧಿಕಾರವು “ಡಿಜಿಟಲ್‌ ವೇದಿಕೆ’ ಕಲ್ಪಿಸಿದೆ. ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರೂ ಆಗಿರುವ ಕರ್ನಾಟಕ ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿಗಳಾದ ಅರವಿಂದ ಕುಮಾರ್‌ ಅವರು ಈ ಕುರಿತು “ಉದಯವಾಣಿ’ಯೊಂದಿಗೆ ಮಾತನಾಡಿದ್ದಾರೆ. ಮೊದಲ ಪ್ರಯತ್ನ ಮೆಗಾ ಇ-ಲೋಕ …

Read More »

ರಾಜ್ಯ ಸರ್ಕಾರದಿಂದ ‘ರೈತರಿಗೆ ಸಿಹಿ ಸುದ್ದಿ’: ಇನ್ಮುಂದೆ ಮನೆ ಬಾಗಿಲಿಗೆ ಬರಲಿದೆ ‘ಈ ಸೇವೆ’

ಡಿಜಿಟಲ್‌ಡೆಸ್ಕ್‌: ಯಾವುದೇ ತರಹದ ರೋಗ ಮತ್ತು ಕೀಟಬಾಧೆ ಕಂಡುಬಂದಲ್ಲಿ ರೈತರ ಹೊಲಗಳಿಗೆ ಹೋಗಿ ಪ್ರಾತ್ಯಕ್ಷಿಕೆ ಮೂಲಕ ಅಗತ್ಯ ಸಲಹೆ, ನೆರವು ನೀಡಲು 108 ವಾಹನ ಮಾದರಿಯಲ್ಲಿ ಕೃಷಿ ಸಂಚಾರಿ ಲ್ಯಾಬ್ ಸಿದ್ಧಪಡಿಸಲಾಗುತ್ತಿದೆ. ಕೃಷಿಕರು ಕರೆ ಮಾಡಿದ ಕೂಡಲೆ ಕೃಷಿ ಪದವೀಧರರು ಸೇರಿದಂತೆ ಅಗತ್ಯ ಸಿಬ್ಬಂದಿಗಳನ್ನೊಳಗೊಂಡ ಈ ವಾಹನ ಹೊಲಗಳಿಗೆ ಹೋಗಿ ಸೂಕ್ತ ಸಲಹೆ ನೀಡಲಿದ್ದಾರೆ. ಈ ಯೋಜನೆಯನ್ನು ಪ್ರಾಯೋಗಿಕವಾಗಿ ತಮ್ಮ ಉಸ್ತುವಾರಿಯ ಕೊಪ್ಪಳ ಜಿಲ್ಲೆಯಲ್ಲಿ ಜಾರಿಗೆ ತರಲು ಸಿದ್ಧತೆ ನಡೆದಿದೆ. …

Read More »

ರೈಲು ಪ್ರಯಾಣಿಕರಿಗೆ ಮತ್ತೊಂದು ಶಾಕ್

ನವದೆಹಲಿ: ವಿಮಾನ ನಿಲ್ದಾಣಗಳಲ್ಲಿ ಇರುವಂತೆ ರೈಲು ನಿಲ್ದಾಣದಲ್ಲಿಯೂ ಬಳಕೆದಾರರ ಶುಲ್ಕ ಜಾರಿಗೆ ತರಲು ರೈಲ್ವೆ ಮಂತ್ರಾಲಯ ತೀರ್ಮಾನಿಸಿದೆ. ಅತಿ ಹೆಚ್ಚು ಜನಸಂದಣಿಯಿರುವ ಮತ್ತು ನವೀಕರಣಗೊಂಡಿರುವ ಶೇಕಡ 15 ರಷ್ಟು ನಿಲ್ದಾಣಗಳಲ್ಲಿ ಬಳಕೆದಾರರ ಶುಲ್ಕವನ್ನು ವಸೂಲಿ ಮಾಡಲಾಗುವುದು ಎಂದು ಹೇಳಲಾಗಿದೆ. ಕೇಂದ್ರ ರೈಲ್ವೆ ಮಂಡಳಿ ಮುಖ್ಯಸ್ಥ ವಿ.ಕೆ. ಯಾದವ್ ಈ ಕುರಿತು ಮಾತನಾಡಿ, ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಸೌಲಭ್ಯ ಹೆಚ್ಚಿಸುವ ಉದ್ದೇಶಕ್ಕಾಗಿ ಆದಾಯ ಅಗತ್ಯವಿದೆ. ಹಾಗಾಗಿ ಬಳಕೆದಾರರ ಶುಲ್ಕ ವಿಧಿಸಲಾಗುವುದು. ಅತಿ ಹೆಚ್ಚು …

Read More »

ಬಿಜೆಪಿ ರಾಜ್ಯಸಭೆ ಸದಸ್ಯ ಅಶೋಕ ಗಸ್ತಿ ನಿಧನ

ಬೆಂಗಳೂರು: ಬಿಜೆಪಿಯ ರಾಜ್ಯಸಭಾ ಸದಸ್ಯ ಅಶೋಕ್‌ ಗಸ್ತಿ (55) ಕೋವಿಡ್‌-19 ಮತ್ತು ಬಹು ಅಂಗಾಂಗಳ ವೈಫಲ್ಯದಿಂದ ನಗರದ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇದೇ 2 ರಂದು ಕೊರೊನಾ ಸೋಂಕಿನಿಂದ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ ಕೆಲವು ದಿನಗಳಿಂದ ಅವರನ್ನು ಜೀವ ರಕ್ಷಕ ವ್ಯವಸ್ಥೆಯಲ್ಲಿಡಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ರಾತ್ರಿ 10.31ರ ವೇಳೆಗೆ ಕೊನೆಯುಸಿರೆಳೆದರು ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ. ಅಶೋಕ ಗಸ್ತಿ ರಾಯಚೂರು ಜಿಲ್ಲೆಯವರು. ವಕೀಲರಾಗಿದ್ದ ಇವರು 1989ರಲ್ಲಿ ಬಿಜೆಪಿ ಸೇರ್ಪಡೆಯಾಗಿ, ಯುವ …

Read More »