ಬೆಂಗಳೂರು: ಮಹಾ ಮಳೆ ಕಡಿಮೆ ಆಗಿದ್ರೂ ಉತ್ತರ ಕರ್ನಾಟಕವನ್ನು ಪ್ರವಾಹ ಬಿಟ್ಟುಬಿಡದಂತೆ ಕಾಡುತ್ತಿದೆ. ಬೆಳಗಾವಿ, ಬಾಗಲಕೋಟೆ, ರಾಯಚೂರು, ಯಾದಗಿರಿ, ಗದಗ, ಧಾರವಾಡ, ಕೊಪ್ಪಳ ಸೇರಿ ಹಲವು ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತ ಆಗ್ತಿದೆ. ಸರ್ಕಾರ ಈ ಕಡೆ ಕಿಂಚಿತ್ತೂ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಬೇರೆಯದ್ದೇ ರಾಜಕಾರಣದಲ್ಲಿ ಮುಳುಗಿಬಿಟ್ಟಿದೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಆರು ಹಳ್ಳಿಗಳು ಜಲಾವೃತವಾಗಿವೆ. 20ಕ್ಕೂ ಹೆಚ್ಚು ಹಳ್ಳಿಗಳಿಗೆ ಪ್ರವಾಹ ಆತಂಕ ಶುರುವಾಗಿದೆ. ಹೊಳೆ ಬಸವೇಶ್ವರ ದೇವಸ್ಥಾನ ಜಲಾವೃತಗೊಂಡಿದೆ. …
Read More »