ಬೆಳಗಾವಿ: ಕೋವಿಡ್ ನಿರ್ವಹಣೆಯಲ್ಲಿ ವಿಫಲ ಸೇರಿದಂತೆ ರೈತರಿಗೆ ಹಾಗೂ ಕೃಷಿ ಕೂಲಿಕಾರರಿಗೆ ಮಾರಕವಾಗಿರುವ ಭೂ ಸುಧಾರಣಾ, ಎಪಿಎಂಸಿ, ಕಾರ್ಮಿಕ ಕಾಯ್ದೆ ತಿದ್ದುಪಡಿ ವಿರೋಧಿಸಿ ನಗರದಲ್ಲಿ ಗುರುವಾರ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯ, ಕೇಂದ್ರ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಿದರು. ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿದ ಕಾಂಗ್ರೆಸ್ ಕಾರ್ಯಕರ್ತರು ಪ್ರಧಾನಿ ಮೋದಿ, ಅಮಿತ್ ಶಾ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ …
Read More »Daily Archives: ಆಗಷ್ಟ್ 20, 2020
ಸಂಗೊಳ್ಳಿ ರಾಯಣ್ಣ ಸೊಸೈಟಿ ಬಹುಕೋಟಿ ವಂಚನೆಕೋರ್ಟ್ಗೆ ದೋಷಾರೋಪ ಪಟ್ಟಿ ಸಲ್ಲಿಸಿರುವ ತನಿಖಾಧಿಕಾರಿಗಳು
ಬೆಳಗಾವಿ: ಸಂಗೊಳ್ಳಿ ರಾಯಣ್ಣ ಸೊಸೈಟಿ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದಾರೆ. ಸಿಐಡಿ ಡಿವೈಎಸ್ಪಿ ಕೆ.ಪುರುಷೋತ್ತಮ ನೇತೃತ್ವದ ತಂಡ ಸುಮಾರು 2,063 ಪುಟಗಳ ದೋಷಾರೋಪ ಪಟ್ಟಿಯನ್ನು ಬೆಳಗಾವಿ ಪ್ರಧಾನ ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದೆ. ಚಲನಚಿತ್ರ ನಿರ್ದೇಶಕ ಆನಂದ ಅಪ್ಪುಗೋಳ್ ನೇತೃತ್ವದ ಸಂಗೊಳ್ಳಿ ರಾಯಣ್ಣ ಸೊಸೈಟಿ, ಬೆಳಗಾವಿ ಹಾಗೂ ವಿಜಯಪುರ ಜಿಲ್ಲೆಯಲ್ಲಿ 35 ಶಾಖೆಗಳನ್ನು ಹೊಂದಿದ್ದು, 26 ಸಾವಿರ ಗ್ರಾಹಕರಿಂದ ₹281.14 …
Read More »ಒಂದು ವರ್ಷ ವಾದರೂ ಇನ್ನೂ ಸಿಕ್ಕಿಲ್ಲ ಪರಿಹಾರ
ಬೆಳಗಾವಿ: ಕಳೆದ ವರ್ಷದ ನೆರೆಯಿಂದ ಹಾನಿಗೊಳಗಾದ ಕುಟುಂಬಗಳಿಗೆ ಪರಿಹಾರ ವಿತರಿಸುವಂತೆ ಆಗ್ರಹಿಸಿ ಮೂಡಲಗಿ ತಾಲೂಕಿ ಅರಭಾಂವಿ ಮತಕ್ಷೇತ್ರ ವ್ಯಾಪ್ತಿಯ ಅವರಾದಿ ಗ್ರಾಮದ ನೆರೆ ಸಂತ್ರಸ್ತರು ಗುರುವಾರ ಪ್ರತಿಭಟನೆ ನಡೆಸಿದರು. ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು. ಕಳೆದ ವರ್ಷ ಭೀಕರ ಪ್ರವಾಹದಿಂದ ಅವರಾದಿ ಗ್ರಾಮದ ದಂಡಪ್ಪನವರ ತೋಟ, ದೊಂಬರ ತೋಟ, ಉರಬಿ ತೋಟ, ಮಾಡಲಗಿಯವರ ತೋಟ ಸೇರಿ ಸುಮಾರು 75 ಮನೆಗಳು ಹಾನಿಗೊಳಗಾಗಿವೆ. …
Read More »ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟದ ವಿವರ ಇಲ್ಲಿದೆ.
ಬೆಂಗಳೂರು: ರಾಜ್ಯದಲ್ಲಿ ಬಹುತೇಕ ಕಡೆಗಳಲ್ಲಿ ಉತ್ತಮ ಮಳೆಯಾಗಿದೆ. ಆಗಸ್ಟ್ 23 ಹಾಗೂ 24ರಂದು ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇನ್ನೂ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟದ ವಿವರ ಇಲ್ಲಿದೆ. – ಘಟಪ್ರಭಾ ಜಲಾಶಯ ಗರಿಷ್ಠ ಮಟ್ಟ- 662.94 ಮೀಟರ್ ಇಂದಿನ ಮಟ್ಟ- 662.51 ಮೀಟರ್ ಗರಿಷ್ಠ ಸಾಮರ್ಥ್ಯ- 51 ಟಿಎಂಸಿ ಇಂದಿನ ನೀರು ಸಂಗ್ರಹ- 49.53 ಟಿಎಂಸಿ ಇಂದಿನ ಒಳಹರಿವು- 34,308 ಕ್ಯೂಸೆಕ್ಸ್ ಇಂದಿನ ಹೊರ …
Read More »ನೀರಿನ ರಬಸಕ್ಕೆ ಕಸ ಕಡ್ಡಿಗಳು ಸೇತುವೆ ಮೇಲೆ ಬಂದಿವೆ. ಸೇತುವೆಗೆ ಸ್ವಲ್ಪ ಮಟ್ಟಿಗೆ ಹಾನಿ
ಗೋಕಾಕ: ಕಳೆದ ಎರಡು ದಿನಗಳಿಂದ ಮಳೆ ಪ್ರಮಾಣದಲ್ಲಿ ಕಡಿತವಾಗಿರುವದರಿಂದ ಘಟಪ್ರಭಾ ನದಿಯ ನೀರಿನ ಮಟ್ಟ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಸೋಮವಾರದಿಂದ ಬಂದ್ ಆಗಿದ್ದ ಲೋಳಸುರ ಸೇತುವೆ ಈಗ ಮುಕ್ತವಾಗಿದೆ. ಆದ್ರೆ ನೀರಿನ ರಬಸಕ್ಕೆ ಕಸ ಕಡ್ಡಿಗಳು ಸೇತುವೆ ಮೇಲೆ ಬಂದಿವೆ. ಸೇತುವೆಗೆ ಸ್ವಲ್ಪ ಮಟ್ಟಿಗೆ ಹಾನಿಯಾಗಿದ್ದು ಜನರು ಸಂಚರಿಸುತ್ತಿದ್ದಾರೆ. ಗೋಕಾಕ ನಗರಕ್ಕೆ ಮಹಾರಾಷ್ಟ್ರ ಮತ್ತು ವಿಜಯಪುರಕ್ಕೆ ರಸ್ತೆ ಕಲ್ಪಿಸುವ ಲೋಳಸುರ ಸೇತುವೆ ಬಂದ್ ಆಗಿದ್ದರಿಂದ ನಿತ್ಯ ಸಂಚರಿಸುವ ಜನರು ಪರದಾಡುವಂತಾಗಿತ್ತು. …
Read More »ಮಾಜಿ ಪ್ರಧಾನಿ ರಾಜೀವ್ ಗಾಂಧಿ ಜಯಂತಿ- ತಂದೆಯ ಬಗ್ಗೆ ರಾಹುಲ್ ಗಾಂಧಿ ಭಾವನಾತ್ಮಕ ಮಾತು
ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 75ನೇ ಜಯಂತಿ. ಈ ದಿನದಂದು ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ತಂದೆಯ ಬಗ್ಗೆ ಭಾವನಾತ್ಮಕವಾಗಿ ಕೆಲ ಸಾಲುಗಳನ್ನು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.ರಾಜೀವ್ ಗಾಂಧಿ ಅವರು ಓರ್ವ ದೂರ ದೃಷ್ಟಿಯುಳ್ಳ ನಾಯಕಾರಗಿದ್ದರು. ಭವಿಷ್ಯದ ದೃಷ್ಟಿಕೋನದಲ್ಲಿ ಕೆಲಸ ಮಾಡುವ ವ್ಯಕ್ತಿಯಾಗಿದ್ದರು. ಇದೆಲ್ಲಕ್ಕಿಂತ ಮಿಗಿಲಾಗಿ ಉದಾರ ಮತ್ತು ಪ್ರೀತಿಯ ಸ್ನೇಹ ಜೀವಿಯಾಗಿದ್ದರು. ಅವರನ್ನ ತಂದೆಯಾಗಿ ಪಡೆದ ನಾನಯ ಅದೃಷ್ಟವಂತ ಹಾಗೂ ಹೆಮ್ಮೆ ಪಡುತ್ತೇನೆ. ಪ್ರತಿದಿನ …
Read More »ಕೆ.ಎಲ್.ರಾಹುಲ್ ಮಾಡಿರುವ ಕಮೆಂಟ್ ಗೆ ಅಭಿಮಾನಿಗಳು ಫುಲ್ ಕನ್ಫ್ಯೂಸ್
ಬೆಂಗಳೂರು: ಗೆಳತಿ, ಬಾಲಿವುಡ್ ನಟಿ ಆಥಿಯಾ ಶೆಟ್ಟಿ ಫೋಟೋಗೆ ಕ್ರಿಕೆಟಿಗ ಕೆ.ಎಲ್.ರಾಹುಲ್ ಮಾಡಿರುವ ಕಮೆಂಟ್ ಗೆ ಅಭಿಮಾನಿಗಳು ಫುಲ್ ಕನ್ಫ್ಯೂಸ್ ಆಗಿದ್ದಾರೆ. ರಾಹುಲ್ ಕಮೆಂಟ್‍ಗೆ ಪ್ರತಿಕ್ರಿಯೆ ನೀಡಿರುವ ಫ್ಯಾನ್ಸ್, ಅಣ್ಣ ಈ ಪದದ ಅರ್ಥ ಏನು ಎಂದು ಪ್ರಶ್ನೆ ಮಾಡಿದ್ದಾರೆ.ಬುಧವಾರ ಆಥಿಯಾ ಶೆಟ್ಟಿ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಮಿರರ್ ಸೆಲ್ಫಿ ಹಾಕಿಕೊಂಡಿದ್ದರು. ಇತ್ತ ನಟಿ ಫೋಟೋ ಅಪ್ಲೋಡ್ ಮಾಡುತ್ತಿದ್ದಂತೆ ಕೆ.ಎಲ್.ರಾಹುಲ್, ಜೆಫಾ ಎಂದು ಕಮೆಂಟ್ ಮಾಡಿದ್ದಾರೆ. ಬಹುತೇಕರು ಜೆಫಾ ಅರ್ಥ ಹುಡುಕಲು …
Read More »ಶ್ರೀರಾಮನ ಬಗ್ಗೆ ಅವಹೇಳನಕಾರಿ ಪೋಸ್ಟ್ – ಆರೋಪಿ ಬಂಧನದಿಂದ ಶಾಂತವಾದ ದೇವದುರ್ಗ
ರಾಯಚೂರು: ಶ್ರೀ ರಾಮಚಂದ್ರನ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಿನ್ನೆಲೆ ಜಿಲ್ಲೆಯ ದೇವದುರ್ಗ ಪಟ್ಟಣದಲ್ಲಿ ಉಂಟಾಗಿದ್ದ ಬಿಗುವಿನ ವಾತಾವರಣ ಆರೋಪಿಯ ಬಂಧನ ಹಿನ್ನೆಲೆ ಸದ್ಯ ಶಾಂತವಾಗಿದೆ. ಜಹೀರ್ ಎಂಬ ಯುವಕ ಶ್ರೀರಾಮನ ಬಗ್ಗೆ ಅವಹೇಳನಕಾರಿ ವಾಟ್ಸಪ್ ಸ್ಟೇಟಸ್ ಹಾಕಿದ್ದ. ಇದರಿಂದ ಆಕ್ರೋಶಗೊಂಡ ನೂರಾರು ಜನ ಹಿಂದೂ ಪರ ಸಂಘಟನೆ ಕಾರ್ಯಕರ್ತರು ರಾತ್ರೋ ರಾತ್ರಿ ದೇವದುರ್ಗ ಪೊಲೀಸ್ ಠಾಣೆ ಮುಂದೆ ಜಮಾಯಿಸಿದ್ದರು. ಆರೋಪಿಯನ್ನ ಕೂಡಲೇ ಬಂಧಿಸುವಂತೆ ಆಗ್ರಹಿಸಿ ಹೆಚ್ಚು ಜನ ಸೇರಿದ್ದರಿಂದ ಬಿಗುವಿನ …
Read More »ನಮ್ಮದೇನಿದ್ದರೂ ಏಕ್ ಮಾರ್ ದೋ ತುಕ್ಡಾ ಕ್ರಮ:ಸಿಟಿ ರವಿ
ಬೆಂಗಳೂರು: ಎಸ್‍ಡಿಪಿಐ ನಿಷೇಧ ವಿಚಾರ ಇಂದಿನ ಕ್ಯಾಬಿನೆಟ್ ಸಭೆಯಲ್ಲಿ ಚರ್ಚೆ ಮಾಡಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಿಟಿ ರವಿ ಹೇಳಿದರು.ವಿಧಾನಸೌಧದ ಬಳಿ ಮಾತನಾಡಿದ ಸಿಟಿ ರವಿ ಅವರು, ಯಾವುದೇ ಒಂದು ಘಟನೆ ಮೇಲೆ ನಿಷೇಧದಂತಹ ನಿರ್ಧಾರ ಮಾಡಲು ಸಾಧ್ಯವಿಲ್ಲ. ಆದರೆ ಈ ಹಿಂದೆ ನಡೆದಿರುವ ಹಲವಾರು ಸಮಾಜ ಘಾತುಕ ಘಟನೆಗಳ ಬಗ್ಗೆ ಕೂಡ ಸಾಕ್ಷಾಧಾರ ಕಲೆ ಹಾಕುವ ಕೆಲಸ ಆಗುತ್ತಿದೆ. ಯಾವುದೇ ಸಮಾಜ ಘಾತುಕ ಶಕ್ತಿಗಳನ್ನು ಸಹಿಸಿಕೊಳ್ಳುವ ಪ್ರಶ್ನೆ ಇಲ್ಲ. ನಾಳೆ …
Read More »ದೇಶದಲ್ಲಿ ಕೊರೊನಾ ದಾಖಲೆ- ಒಂದೇ ದಿನ 69,652 ಮಂದಿಗೆ ಸೋಂಕು
-ಗುಣಮುಖ ಪ್ರಮಾಣ ಶೇ.73.90ಕ್ಕೆ ಏರಿಕೆ ನವದೆಹಲಿ: ದೇಶದಲ್ಲಿಂದು ಮಹಾಮಾರಿ ಕೊರೊನಾ ವೈರಸ್ ದಾಖಲೆ ಬರೆದಿದೆ. ಕಳೆದ 24 ಗಂಟೆಯಲ್ಲಿ 69,952 ಹೊಸ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 28,36,926ಕ್ಕೆ ಏರಿಕೆಯಾಗಿದೆ. ಜೊತೆ ಕೊರೊನಾದಿಂದ ಗುಣಮುಖರಾಗುತ್ತಿರುವ ಪ್ರಮಾಣ ಶೇ.73.90ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.ಇದುವರೆಗೂ 20.96 ಲಕ್ಷ ಜನರು ಕೊರೊನಾದಿಂದ ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಯಲ್ಲಿ ಕೊರೊನಾಗೆ 977 ಸಾವಾಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 53,866ಕ್ಕೆ ಏರಿಕೆ ಕಂಡಿದೆ.ಮಹಾರಾಷ್ಟ್ರ, ಆಂಧ್ರ …
Read More »